
ಸೂರತ್ [ಮಾ.02]: ಮಕ್ಕಳ ಮದುವೆ ಇನ್ನೇನು ಕೆಲ ದಿನಗಳಿದೆ ಎನ್ನುವಾಗ ವರನ ತಂದೆಯ ಜೊತೆ ವಧುವಿನ ತಾಯಿ ಓಡಿಹೋದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಮಕ್ಕಳ ಮದುವೆ ಕೆಲ ದಿನ ಇದೆ ಎನ್ನುವಾದ ಹಳೆ ಪ್ರೀತಿ ಮತ್ತೆ ಅಂಕುರಿಸಿ ಓಡಿ ಹೋಗಿ ಕೆಲ ದಿನಗಳಲ್ಲಿ ವಾಪಸಾಗಿ ತಪ್ಪೊಪ್ಪಿಕೊಂಡಿದ್ದ ಜೋಡಿ ಇದೀಗ ಮತ್ತೆ ಮನೆಯಿಂದ ಪರಾರಿಯಾಗಿದೆ. ಸೂರತ್ನ ಕತಾರ್ ಗಾಮ್ ನ ನಿವಾಸಿಯಾದ 48 ವರ್ಷದ ಹಿಮ್ಮತ್ ಪಟೇಲ್ ಇದೇ ಊರಿನ ಶೋಭನಾ ರಾವಲ್ [46] ಮತ್ತೆ ಓಡಿ ಹೋಗಿದ್ದಾರೆ.
ಓಡಿ ಹೋಗಿದ್ದ ವರನ ತಂದೆ, ವಧು ತಾಯಿ ವಾಪಸ್: ತಿರಸ್ಕಾರದ ವೆಲ್‌ಕಮ್!...
ಹಿಮ್ಮತ್ ಪಟೇಲ್ ಮಗನ ಜೊತೆ ಶೋಭನಾ ಅವರ ಪುತ್ರಿ ವಿವಾಹ ನಿಶ್ಚಯವಾಗಿದ್ದು, ಆದರೆ ಮದುವೆ ಕೆಲ ಇದೆ ಎನ್ನುವಾಗ ಇಬ್ಬರು ಪರಾರಿಯಾಗಿದ್ದರು. ಇಬ್ಬರು ತಮ್ಮ ವಿವಾಹಕ್ಕೂ ಮೊದಲು ಪ್ರೀತಿ ಮಾಡಿದ್ದು, ಆದರೆ ಬೇರೆಯವರೊಂದಿಗೆ ವಿವಾಹ ಮಾಡಲಾಗಿತ್ತು. ಬಳಿಕ ಇವರಿಬ್ಬರ ಮಕ್ಕಳಿಗೆ ಮದುವೆ ನಿಶ್ಚಯವಾಗುತ್ತಿದ್ದಂತೆ ಹಳೆಯ ಪ್ರೀತಿ ಮರುಕಳಿಸಿ ಇಬ್ಬರು ಓಡಿಹೋಗಿದ್ದರು. ಈ ಸಂಬಂಧ ಜನವರಿ 20 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ ಮಕ್ಕಳ ಮದುವೆಯೂ ಕೂಡ ಮುರಿದು ಬಿದ್ದಿತ್ತು.
ವರನ ಅಪ್ಪ, ವಧುವಿನ ಅಮ್ಮ ಪರಾರಿ: ನವಜೋಡಿ ಕುಳಿತಿದೆ ಹೌಹಾರಿ!...
ಇದಾದ ಬಳಿಕ ಇಬ್ಬರು ಜನವರಿ 26 ರಂದು ಮನೆಗೆ ಮರಳಿದ್ದರು. ಇಬ್ಬರು ಮಧ್ಯಪ್ರದೇಶ ಉಜ್ಜಯಿನಿಗೆ ತೆರಳಿ ಅಲ್ಲಿ ಕೆಲದಿನ ನೆಲೆಸಿದ್ದು, ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಮನೆಯಲ್ಲಿ ಅವರಿಗೆ ಮೊದಲಿನಂತೆ ಸ್ವಾಗತ ಸಿಗಲಿಲ್ಲ.
ವಧುವಿನ ತಾಯಿ ಶೋಭನಾ ವಾರಲ್ ಅವರನ್ನು ಅವರ ಪತಿ ಮನೆಗೆ ಸೇರಿಸಿಕೋಳ್ಳದ ಕಾರಣ ಆಕೆ ತನ್ನ ತವರು ಮನೆಗೆ ಹೋಗಿ ನೆಲೆಸಿದ್ದರು . ಇದೀಗ ಮತ್ತೆ ವರನ ತಂದೆ ಹಿಮ್ಮತ್ ಪಟೇಲ್ ಜೊತೆ ಶೋಭನಾ ಓಡಿಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ