
ಚೆನ್ನೈ (ಮಾ. 02): ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಆದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ’ ಎಂದು ನಟ ರಜನೀಕಾಂತ್ ಹೇಳಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡು ಜಮಾತ್ ಉಲ್ ಉಲ್ಮಾ ಸಬೈ ನಿಯೋಗ ರಜನೀಕಾಂತ್ ಅವರನ್ನು ಅವರ ಚೆನ್ನೈನ ನಿವಾಸದಲ್ಲಿ ಭೇಟಿ ಆಗಿದೆ.
ಸಿಎಎ, ಎನ್‌ಸಿಆರ್ ಮತ್ತು ಎನ್‌ಪಿಆರ್ ಮುಸ್ಲಿಮರ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ನಿಯೋಗದ ಸದಸ್ಯರು ರಜನೀಕಾಂತ್ ಜೊತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಏನು ಪರಮಾತ್ಮನ ಸ್ವರೂಪನೇ?
ಈ ವೇಳೆ ಮುಸ್ಲಿಮರಲ್ಲಿ ಭಯ ನಿವಾರಿಸಲು ತಮ್ಮಿಂದ ಸಾಧ್ಯವಾದ ಸಹಾಯ ನೆರವು ನೀಡುವುದಾಗಿ ನಿಯೋಗದ ಸದಸ್ಯರಿಗೆ ರಜನೀಕಾಂತ್ ಭರವಸೆ ನೀಡಿದ್ದಾರೆ. ದೆಹಲಿ ಹಿಂಸಾಚಾರವನ್ನು ತಡೆಯಲು ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ರಜನೀಕಾಂತ್ ಇತ್ತೀಚೆಗೆ ಕಿಡಿಕಾರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ