ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಬೆನ್ನಲ್ಲೇ, ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 50 ರು.ನಷ್ಟುಇಳಿಕೆ ಮಾಡಿವೆ. ಭಾನುವಾರದಿಂದಲೇ ಈ ಇಳಿಕೆ ಜಾರಿಯಾಗಿದೆ.
ನವದೆಹಲಿ (ಮಾ. 02): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಬೆನ್ನಲ್ಲೇ, ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 50 ರು.ನಷ್ಟುಇಳಿಕೆ ಮಾಡಿವೆ. ಭಾನುವಾರದಿಂದಲೇ ಈ ಇಳಿಕೆ ಜಾರಿಯಾಗಿದೆ.
ದರ ಇಳಿಕೆಯಿಂದಾಗಿ ಬೆಂಗಳೂರಿನಲ್ಲಿ 14.2 ಕೆ.ಜಿ ಸಿಲಿಂಡರ್ ಬೆಲೆ 862.5 ರು. ನಿಂದ 812.5ಗೆ ಇಳಿದಿದೆ. ದೆಹಲಿಯಲ್ಲಿ 858 ರು. ನಿಂದ 805 ರು.ಗೆ ಹಾಗೂ ಚೆನ್ನೈನಲ್ಲಿ 826.5ರು. ನಿಂದ 776.5ಕ್ಕೆ ಇಳಿದಿದೆ. ಕೆಲ ದಿನಗಳ ಹಿಂದಷ್ಟೇ ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯಲ್ಲಿ 150 ರು.ನಷ್ಟುಭರ್ಜರಿ ಏರಿಕೆ ಮಾಡಲಾಗಿತ್ತು.
ಆದರೆ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಮತ್ತು ಎಲ್‌ಪಿಜಿ ಬೇಡಿಕೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪರಿಣಾಮ ಇವುಗಳ ಬೆಲೆಯಲ್ಲೂ ಭಾರೀ ಇಳಿಕೆ ಕಂಡುಬಂದಿದೆ.