Published : Dec 08, 2022, 08:08 AM ISTUpdated : Dec 08, 2022, 08:09 PM IST

Election Results 2022:ಮೋದಿ ತವರಲ್ಲಿ ಬಿಜೆಪಿ ಕೈಹಿಡಿದ ಮತದಾರ, ಹಿಮಾಚಲದಲ್ಲಿ ಕೈಜಾರಿತು ಅಧಿಕಾರ

ಸಾರಾಂಶ

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಹೊಸ ದಾಖಲೆಯ ಗೆಲುವು ಕಂಡಿದೆ.  ಈ ಹಿಂದಿನ ಎಲ್ಲಾ ದಾಖಲೆ ಮುರಿದು ಬರೋಬ್ಬರಿ 156 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೇರಿದೆ. ಕಳೆದ 27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಆದರೆ ಕಾಂಗ್ರೆಸ್ ಹೀನಾಯ ಸ್ಛಿತಿಗೆ ತಲುಪಿದೆ. ಕಾಂಗ್ರೆಸ್ 17 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಗುತರಾತ್ ವಿರೋಧ ಪಕ್ಷ ಸ್ಥಾನ ಪಡೆಯಲು ಕನಿಷ್ಠ 18 ಸ್ಥಾನ ಗೆಲ್ಲಬೇಕು. ಆದರೆ ಕಾಂಗ್ರೆಸ್ ಕಳಪೆ ನಿರ್ವಹಣೆ ತೋರಿದೆ. ಇತ್ತ ಆಮ್ ಆದ್ಮಿ ಪಾರ್ಟಿ ಗುಜರಾತ್‌ನಲ್ಲಿ ಖಾತೆ ತೆರೆದಿದೆ. 5 ಸ್ಥಾನ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ. ಇತ್ತ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ 5 ವರ್ಷಗಳ ಬಳಿಕ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 25 ಸ್ಥಾನ ಗೆದ್ದುಕೊಂಡಿದೆ. ಆದರೆ ಕಾಂಗ್ರೆಸ್ 40 ಸ್ಥಾನ ಗೆಲ್ಲುವ ಮೂಲಕ ಬಹುಮತದೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಆಮ್ ಆದ್ಮಿ ಪಾರ್ಟಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಎರಡುರಾಜ್ಯಗಳ ಚುನಾವಣೆಯ ಇಂಚಿಂತು ಮಾಹಿತಿ, ಗೆಲುವು ಸೋಲಿನ ವಿವರ, ಮತಗಳ ಅಂತರ, ಕ್ಷೇತ್ರಗಳ ವಿವರ, ರಾಜಕೀಯ ನಾಯಕರ ಹೇಳಿಕೆ ಸೇರಿದಂತೆ ಚುನಾವಣಾ ಅಖಾಡದ ಸಂಪೂರ್ಣ ವಿವರ ಇಲ್ಲಿದೆ.

Election Results 2022:ಮೋದಿ ತವರಲ್ಲಿ ಬಿಜೆಪಿ ಕೈಹಿಡಿದ ಮತದಾರ, ಹಿಮಾಚಲದಲ್ಲಿ ಕೈಜಾರಿತು ಅಧಿಕಾರ

07:54 PM (IST) Dec 08

ನರೇಂದ್ರನ ದಾಖಲೆ ಭೂಪೇಂದ್ರ ಮುರಿಯಲಿ, ಜನರ ಆಶೀರ್ವಾದಿಂದ ಹೊಸ ರೆಕಾರ್ಡ್ ಸೃಷ್ಟಿ

ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ  ಪ್ರಧಾನಿ ನರೇಂದ್ರ ಮೋದಿ ಜರನ್ನುದ್ದೇಶಿ ಭಾಷಣ ಮಾಡಿದ್ದಾರೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಜನತೆಗೆ ಧನ್ಯವಾದ ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅತೀ ಕಡಿಮೆ ಅಂತರದಿಂದ ಸೋತಿದೆ. ಆದರೆ ಗುಜರಾತ್‌ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ ಎಂದಿದ್ದಾರೆ.

 

 

06:50 PM (IST) Dec 08

ಬಿಜೆಪಿ ಪ್ರಧಾನ ಕಚೇರಿಗೆ ಮೋದಿ ಆಗಮನ, ಬಿಜೆಪಿ ಸರ್ಕಾರ ರಚನೆ ಕುರಿತು ಸಭೆ

ದೆಹಲಿ ಬಿಜೆಪಿ ಪ್ರಧಾನ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಈ ಸಭೆಗೆ ಆಗಮಿಸಿದ್ದಾರೆ. ಗುಜರಾತ್‌ನಲ್ಲಿ ಹೊಸ ಸರ್ಕಾರ ರಚನೆ ಹಾಗೂ ಹಿಮಾಚಲ ಪ್ರದೇಶದ ಸೋಲಿನ ಕುರಿತು ಚರ್ಚೆ ನಡೆಯಲಿದೆ.

 

 

06:45 PM (IST) Dec 08

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆದಿಂದ ಹಿಮಾಚಲದಲ್ಲಿ ಗೆಲುವು, ಖರ್ಗೆ!

ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಇದು ಗೆಲುವಿಗೆ ಕಾರಣವಾಗಿದೆ ಎಂದು ಖರ್ಗೆ

05:12 PM (IST) Dec 08

ಗುಜರಾತ್: ಮೋದಿ ಮಾಡಿದ್ದು 36 ರೋಡ್ ಶೋ, ರಾಹುಲ್ ಗಾಂಧಿ ಮಾಡಿದ್ದು 2!

ಮೋದಿ ರೋಡ್ ಶೋ ಮಾಡಿಯೇ ಗೆದ್ದರು, ಎಂಬುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಒಪ್ಪಿಕೊಂಡಿದ್ದಾರೆ. ಇದೇ ಕಾಂಗ್ರೆಸ್ ಸೋಲಿಗೆ ಕಾರಣವೆಂದೂ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಮೋದಿ 36 ರೋಡ್ ಶೋ ಮಾಡಿ, ಪ್ರತಿಯೊಬ್ಬ ಗುಜರಾತಿಯ ಮನ ಮುಟ್ಟಲು ಯಶಸ್ವಿಯಾದರೆ, ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಜ್‌ಕೋಟ್ ಮತ್ತು ಸೂರತ್‌ನಲ್ಲಿ ಮಾತ್ರ ರೋಡ್ ಶೋ ಮಾಡಿದ್ದರು. 

ಅಷ್ಟಕ್ಕೂ ಕಾಂಗ್ರೆಸ್ ಸೋಲಿಗೆ ಮತ್ತೇನಿವೆ ಕಾರಣಗಳು?

 

 

05:06 PM (IST) Dec 08

ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು, ಪ್ರಿಯಾಂಕಾ ಶ್ರಮ ಎಂದ ಖರ್ಗೆ

ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಆ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ನಮಗೆ ಅಲ್ಲಿನ ಜನ ಒಗ್ಗೂಡಿಸಿ ಗೆಲ್ಲಿಸಿದ್ದಾರೆ. ಇದರಲ್ಲಿ ಹೆಚ್ಚಿನ ಪಾತ್ರ ಪ್ರಿಯಾಂಕಾ ವಾದ್ರಾ ಅವರದ್ದು ಇದೆ.  ಸಾಕಷ್ಟು rally, ಸಮಾವೇಶ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಭಾರತ್ ಜೋಡೋ ಯಾತ್ರೆ ಬಗ್ಗೆ ಹಿಮಾಚಲ ಜನ ಬಗ್ಗೆ ಮೆಚ್ವುಗೆ ವ್ಯಕ್ತ ಪಡಿಸಿದ್ರು. ನಾನು ಹೋದಾಗ ಕೂಡ ಉತ್ತಮ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಉತ್ತಮ ಬಹುಮತದಿಂದ ಪಕ್ಷಕ್ಕೆ ಗೆಲುವು ಬಂದಿದೆ, ಎಂದಿದ್ದಾರೆ. 

ಗುಜರಾತ್ ಸೋಲು ಕಾರಣ ಸಾಕಷ್ಟು ಇವೆ. ಪಕ್ಷ ಇಷ್ಟು ಕೆಳ ಮಟ್ಟಕ್ಕೆ ಬರಲು ಕ್ಯಾಂಪೇನ್ ಮಾಡಿಲ್ಲ. ಕಳೆದ ಬಾರಿ ಅತೀ ಹೆಚ್ವು ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೆವು. ಆದ್ರೆ ಹಲವು ಕಡೆ ಕಡಿಮೆ ಅಂತರದಲ್ಲಿ ಸೋತಿದ್ದೇವು. ಈ ಸಲ ಕೆಲವು ಪಕ್ಷ ಹೊಸದಾಗಿ ಬಂದು ನಮ್ಮ ಮತ ಕೆಡಿಸಿವೆ. ವೈಚಾರಿಕವಾಗಿ, ಸೈಂದಾಂತಿಕ ಕಾರಣಗಳೂ ಇವೆ. ಒಂದು ವರ್ಷದಿಂದ ಮೋದಿ ಪ್ರಚಾರ ಮಾಡಿದ್ದಾರೆ. ಮಣ್ಣಿನ ಮಗ ಅಂತಾ ಹೇಳಿದ್ದು, ದಾಖಲೆಯ ರೋಡ್ ಶೋ, ಮತದಾನದ ದಿನ ನಡೆದುಕೊಂಡು ಬಂದು ಮತದಾನ ಮಾಡಿದ  ಗಿಮಿಕ್‌ಗಳು ನಮ್ಮ ಸೋಲಿಗೆ ಕಾರಣ. ಅವರ ಪ್ರಚಾರದ ಹಕ್ಕು ಅವರು ಮಾಡಿದ್ದಾರೆ. ಅಸ್ತಿತ್ವದಲ್ಲಿ ಇಲ್ಲದ ಪಕ್ಷ ಬಂದು ಮತಗಳ ವಿಭಜನೆ ಮಾಡಿದೆ, ಎಂದಿದ್ದಾರೆ. 

 

 

04:59 PM (IST) Dec 08

ಗುಜರಾತ್ ಕೇಸರಿಮಯ, ಆಪ್ ಸಾಧನೆ ಏನೂ ಕಡಿಮೆ ಇಲ್ಲ

ನಿರೀಕ್ಷೆಯಂತೆ ಬಿಜೆಪಿ ಗುಜರಾತಿನಲ್ಲಿ ಗೆಲುವಿನ ನಗೆ ಬೀರಿದೆ. ಆಪ್ ನಿರೀಕ್ಷೆಯಷ್ಟು ಕ್ಷೇತ್ರಗಳನ್ನು ಗೆಲ್ಲುವಲ್ಲಿ ವಿಫಲವಾಗಿದ್ದರೂ, 5 ಕ್ಷೇತ್ರಗಳನ್ನು ಗೆದ್ದು, ಜಯದ ನಗೆ ಬೀರಿದೆ. ಆದರೆ, ಕಾಂಗ್ರೆಸ್ ಮಾತ್ರ 61 ಸ್ಥಾನಗಳನ್ನು ಕಳೆದು ಕೊಳ್ಳುವ ಮೂಲಕ ನೆಲ ಕಚ್ಚಿದೆ. ಆಪ್‌ ಬಂದು ಪಕ್ಷದ ಸ್ಥಾನಗಳನ್ನು ಕಸಿದುಕೊಂಡಿದೆ ಎಂದು ಗೋಳಿಡುತ್ತಿದೆ ಕೈ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನೆಪದಲ್ಲಿ ಕೇವಲ ಎರಡು ರೋಡ್ ಶೋ ಹಮ್ಮಿಕೊಂಡಿದ್ದರೆ, ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ 30ಕ್ಕೂ ಹೆಚ್ಚು ರೋಡ್ ಶೋ ಮಾಡಿದ್ದು, ಹಳ್ಳಿ ಹಳ್ಳಿಗೂ ಕಾಲಿಟ್ಟಿದ್ದು ಕಮಲದ ಗೆಲುವಿಗೆ ಮುಖ್ಯ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. 

 

 

04:46 PM (IST) Dec 08

ಗುಜರಾತ್‌ನಲ್ಲಿ ಬಿಜೆಪಿ ಗಳಿಸಿದ್ದು 58 ಸೀಟ್ಸ್, ಕೈ ಕಳೆದುಕೊಂಡಿದ್ದು 61 ಕ್ಷೇತ್ರಗಳು

1985ರಲ್ಲಿ ಕಾಂಗ್ರೆಸ್ ಗಳಿಸಿದ ಐತಿಹಾಸಿಕ ಜಯದ ಪುನಾರವರ್ತನೆಯನ್ನು 2022ರಲ್ಲಿ ಬಿಜೆಪಿ ಸಾಧಿಸಿದೆ. ಆಗ 148 ಕ್ಷೇತ್ರಗಳನ್ನು ಗೆದ್ದು ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್ ಇದೀಗ ವಿರೋಧ ಪಕ್ಷದಲ್ಲಿ ಕೂರುವಷ್ಟು ಸ್ಥಾನಗಳನ್ನು ಗಳಿಸುವಲ್ಲಿಯೂ ವಿಫಲವಾಗುವಂತೆ ಕಾಣಿಸುತ್ತಿದೆ. 

 

 

04:42 PM (IST) Dec 08

ಕಾಂಗ್ರೆಸ್‌ನ ಜಿಗ್ನೇಶ್ ಮೆವಾನಿಗೆ ಗೆಲವು

ವದ್ಗಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿಗ್ನೇಶ್ ಮೆವಾನಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಣಿಬಾಯ್ ವಾಘೇಲ್ ವಿರುದ್ಧ 1500 ಮತಗಳ ಅಂತರದಲ್ಲಿ ಜಯದ ನಗೆ ಬೀರಿದ್ದಾರೆ.  

 

04:34 PM (IST) Dec 08

Gujarat Election Result 2022: ಮೋದಿ-ಅಮಿತ್‌ ಶಾ ತವರಲ್ಲಿ ಅರಳಿದ ಕಮಲ, ಆರೆಸ್ಸೆಸ್‌ ತಂತ್ರಗಾರಿಕೆಗೆ ಸಿಕ್ಕ ಫಲ!

ದೇಶವನ್ನೆಲ್ಲಾ ಗೆದ್ದು ತನ್ನ ನೆಲದಲ್ಲಿ ರಾಜ ಸೋತಂತ ಪರಿಸ್ಥಿತಿ 2017ರ ಗುಜರಾತ್‌ ವಿಧಾನಸಭೆ ಚುನಾವಣೆಯ ವೇಳೆ ನಡೆದಿತ್ತು. ಇಡೀ ದೇಶದಲ್ಲಿ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, 2017ರ ಗುಜರಾತ್‌ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ತವರು ವಿಧಾನಸಭಾ ಕ್ಷೇತ್ರದಲ್ಲಿಯೇ ಬಿಜೆಪಿ ನೆಲಕಚ್ಚಿತ್ತು. ಆದರೆ, ಈ ಬಾರಿ ಆರೆಸ್ಸೆಸ್ ತಂತ್ರಗಾರಿಕೆಯೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಾಧಿಸಿದೆ.

RSS ತಂತ್ರಗಾರಿಕೆ ಏನಿತ್ತು?

04:30 PM (IST) Dec 08

ಕಾಂಗ್ರೆಸ್ ಪರಿವರ್ತನಾ ಕ್ಲಾಕ್ ಬಂದ್, ಗುಜರಾತಿಗಳು ಬದಲಾಗಬೇಕೋ, ಕಾಂಗ್ರೆಸ್ ಬದಲಾಗಬೇಕೋ?

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ಮುಖಭಂಗವಾದ ಬಳಿಕ ಇದೀಗ ಗುಜರಾತ್‌ನಲ್ಲಾದ ಹಿನ್ನಡೆ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲುಗಾಡಿಸಿದೆ. ಈ ಫಲಿತಾಂಶ ಪ್ರಕಟವಾಗುತ್ತಿದ್ದ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಪರಿವರ್ತನ್ ಕ್ಲಾಕ್ ಬಂದ್ ಮಾಡಲಾಗಿದೆ.

ಏನಿದು ಪರವರ್ತನಾ ಕ್ಲಾಕ್?

04:23 PM (IST) Dec 08

ಆಡಳಿತ ವಿರೋಧಿ ಅಲೆಯೇ ಹಿಮಾಚಲ ಪ್ರದೇಶದಲ್ಲಿ ಸೋಲಿಗೆ ಕಾರಣ

ಈ ಬಾರಿಯೂ ಆಡಳಿತ ವಿರೋಧಿ ಅಲೆ ವರ್ಕೌಟ್‌ ಆದಂತಿದೆ. ಕಳೆದ ಕೆಲ ಚುನಾವಣೆಗಳಿಂದಲೂ ಹಿಮಾಚಲ ಪ್ರದೇಶ ಮತದಾರರು ಒಂದೇ ಪಕ್ಷದ ಪರ ವಾಲುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸುತ್ತಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

04:21 PM (IST) Dec 08

ಡಿ.12ಕ್ಕೆ ಭೂಪೇಂದ್ರ ಪಟೇಲ್‌ ಗುಜರಾತ್ ಸಿಎಂ ಆಗಿ ಪ್ರಮಾಣವಚನ

ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಖಚಿತವಾಗುತ್ತಿದ್ದ ಬೆನ್ನಲ್ಲಿಯೇ ಪಕ್ಷದಲ್ಲಿ ಮುಂದಿನ ಪ್ರಕ್ರಿಯೆಗಳು ಆರಂಭವಾಗಿದೆ. ಗುಜರಾತ್‌ನ ಒಟ್ಟು 182 ಸ್ಥಾನಗಳ ಪೈಕಿ 152ರಲ್ಲಿ ಬಿಜೆಪಿ ಶೇ.54ರಷ್ಟು ಮತ ಹಂಚಿಕೆಯೊಂದಿಗೆ ಮುಂದಿರುವ ಕಾರಣ ಗೆಲುವು ಕೂಡ ಸರಳ ಎನ್ನಲಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

04:01 PM (IST) Dec 08

ಕ್ರಿಕೆಟಿಗ ರವಿಂದ್ರ ಜಡೇಜಾ ಪತ್ನಿಯೊಂದಿಗೆ ರೋಡ್ ಶೋ

ಗುಜರಾತ್‌ನಲ್ಲಿ ಸತತ ಏಳನೇ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದ್ದು, ದಾಖಲೆ ಕ್ಷೇತ್ರಗಳನ್ನು ಗೆಲ್ಲುತ್ತಿದೆ. 1985ರಲ್ಲಿ ಕಾಂಗ್ರೆಸ್ 149 ಕ್ಷೇತ್ರಗಳನ್ನು ಗೆದ್ದು ಸರಕಾರ ರಚಿಸಿದ ನಂತರ, ಇಷ್ಟು ಅದ್ಭುತ ಸಾಧಿಸುವಲ್ಲಿ ಕೇಸರಿ ಪಕ್ಷ ಇದೀಗ ಅದಕ್ಕಿಂತಲೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೆ. ಜಾಮ್‌ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕ್ರಿಕೆಟಿಗ ರವೀಂದ್ರ ಜಡೇಜ ಪತ್ನಿ ರಿವಾಬಾ ಗೆಲುವಿನ ನಗೆ ಬೀರಿದ್ದಾರೆ. ಪತ್ನಿಯೊಂದಿಗೆ ಜಡೇಜಾ ರೋಡ್ ಶೋ ಮಾಡಿದ್ದಾರೆ. 

 

03:53 PM (IST) Dec 08

Gujarat election results: ಸೋಲಿಗೆ ಹೆದರಿ ಸಾಯಲು ಯತ್ನಿಸಿದ ಕಾಂಗ್ರೆಸ್ ಅಭ್ಯರ್ಥಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳಯ ಭರ್ಜರಿ ಗೆಲುವಿನೊಂದಿಗೆ ಹೊಸ ದಾಖಲೆ ನಿರ್ಮಿಸಿದೆ.  ಆದರೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಸೋಲಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

 

03:13 PM (IST) Dec 08

ಶೀಘ್ರವೇ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತೇನೆ: ಹಿಮಾಚಲ ಪ್ರದೇಶ ಸಿಎಂ

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಬಹುಮತ ಸಾಧಿಸುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್‌ಗೆ ಮಣೆ ಹಾಕಿದ್ದಾರೆ ಮತದಾರರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನು ಸ್ವಲ್ಪ ಹೊತ್ತಲ್ಲೇ ರಾಜೀನಾಮೆ ನೀಡಲಿದ್ದಾರೆ.

 

02:59 PM (IST) Dec 08

ಗುಜರಾತ್ ಚುನಾವಣೆ: ಏಷ್ಯಾನೆಟ್ ನ್ಯೂಸ್ ಪ್ರೆಡಿಕ್ಷನ್ ಸರಿಯಾಯ್ತು!

ಗುಜರಾತ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಈ ಗೆಲುವು ಹಾಗೂ ಬಿಜೆಪಿ ಕೈಹಿಡಿಯುವ ಮತಗಳು, ಜಾತಿಗಳ ಕುರಿತು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ವರದಿ ನೀಡಿತ್ತು. ಇದೀಗ ಏಷ್ಯಾನೆಟ್ ಸಮೀಕ್ಷೆ ನಿಜವಾಗಿದೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

02:52 PM (IST) Dec 08

'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ: ಪ್ರಹ್ಲಾದ್ ಜೋಶಿ

ನವದೆಹಲಿ: ಗುಜರಾತ್‌ನಲ್ಲಿ ಪಕ್ಷದ ಜಯ ಖಚಿತವಾಗುತ್ತಿದ್ದಂತೆ, ಬಿಜೆಪಿ ನಾಯಕರು ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಲಾರಂಭಿಸಿದ್ದಾರೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು 'ಗುಜರಾತ್‌ ಮಾಡೆಲ್‌'ಗೆ ಸಂದ ಜಯ ಎಂದು ಬಣ್ಣಿಸಿದ್ಧಾರೆ.

ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, 'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ ದೊರೆತಿದೆ. ಈ ಐತಿಹಾಸಿಕ ಗೆಲುವನ್ನು ನಮಗೆ ವರದಾನವಾಗಿ ನೀಡಿರುವ ಗುಜರಾತ್‌ ಜನರಿಗೆ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ, ದೇಶದ ಅಭಿವೃದ್ಧಿಗೆ ಬಿಜೆಪಿ ಪ್ರಸ್ತುತಪಡಿಸಿದ 'ಗುಜರಾತ್‌ ಮಾಡೆಲ್‌'ನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ 27 ವರ್ಷಗಳ ಬಳಿಕ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ವಿಶ್ಲೇಷಣೆಗಳೆಲ್ಲಾ ತಲೆ ಕೆಳಗಾಗಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಅದೇ ರೀತಿ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ತೋರುತ್ತಿದ್ದು ಅಲ್ಲಿಯೂ ಪಕ್ಷ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆ ಇದೆ. ಏನೇ ಆದರೂ ಅಂತಿಮ ಫಲಿತಾಂಶ ಬಂದ ಬಳಿಕಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.

01:45 PM (IST) Dec 08

ದೇಶದಲ್ಲಿ ಈಗ ಆಡಳಿತ ಪರ ಟ್ರೆಂಡ್‌ ಇದೆ: ಸಿಎಂ ಬೊಮ್ಮಾಯಿ

01:45 PM (IST) Dec 08

ದೇಶದಲ್ಲಿ ಈಗ ಆಡಳಿತ ಪರ ಟ್ರೆಂಡ್‌ ಇದೆ: ಸಿಎಂ ಬೊಮ್ಮಾಯಿ

01:42 PM (IST) Dec 08

ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿಯದ್ದೇ ಕಾರುಬಾರು: ‘ಸೊಸೆ’ ಡಿಂಪಲ್‌ ಯಾದವ್‌ ಎದುರು ಮಂಕಾದ ಕಮಲ..!

ಸಮಾಜವಾದಿ ಪಕ್ಷದ ಭದ್ರಕೋಟೆಯಲ್ಲಿ ಡಿಂಪಲ್ ಯಾದವ್ ಭಾರಿ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದರೂ ತೀರಾ ಹಿಂದುಳಿದಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:38 PM (IST) Dec 08

ಕಾಂಗ್ರೆಸ್‌ ನಾಯಕರು ಗುಜರಾತ್‌ನಲ್ಲಿ ಪ್ರಚಾರಕ್ಕೂ ಹೋಗಲು ಭಯ ಪಡ್ತಿದ್ದಾರೆ: ಡಿವಿಎಸ್‌

01:37 PM (IST) Dec 08

ಕರ್ನಾಟಕದಲ್ಲೂ 140+ ಕ್ಷೇತ್ರ ಗೆಲ್ತೀವಿ: ಬಿಎಸ್‌ ಯಡಿಯೂರಪ್ಪ

01:36 PM (IST) Dec 08

ಕರ್ನಾಟಕದಲ್ಲೂ ಬಿಜೆಪಿಯನ್ನ ಅಧಿಕಾರಕ್ಕೆ ತರ್ತೀವಿ: ಶೋಭಾ ಕರಂದ್ಲಾಜೆ

01:25 PM (IST) Dec 08

ಗುಜರಾತ್‍ನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು: ಕರ್ನಾಟಕ ಚುನಾವಣೆ ಮೇಲೂ  ಪರಿಣಾಮ ಬೀರಲಿರುವ ಫಲಿತಾಂಶ- ಸಚಿವ ನಿರಾಣಿ

ಬೆಂಗಳೂರು: ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು  ಸತತ 7ನೇ ಬಾರಿಗೆ ಗುಜರಾತ್‍ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್.ಆರ್ ನಿರಾಣಿ, ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರ ಸಂಘಟನಾ ಚಾತುರ್ಯ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ತಂತ್ರಗಾರಿಕೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸರಳತೆ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವಿಗೆ ಕಾರಣವಾಗಿದೆ ಎಂದು ನಿರಾಣಿ ವಿಶ್ಲೇಷಿಸಿದ್ದಾರೆ.

ವಿಶ್ವ ನಾಯಕ ನರೇಂದ್ರಮೋದಿ ಅವರ ಜನಪ್ರಿಯತೆಗೆ ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶವೇ ಸಾಕ್ಷಿ. ಸ್ವಚ್ಛ, ಪಾರದರ್ಶಕ ಹಾಗೂ ಸರ್ವರ ವಿಕಾಸವೇ ಪಕ್ಷದ ಗೆಲುವಿಗೆ ಕಾರಣವಾಗಿದೆ ಎಂದಿದ್ದಾರೆ. ಒಂದು ರಾಜ್ಯದಲ್ಲಿ ಸತತವಾಗಿ 7ನೇ ಬಾರಿ ಅಧಿಕಾರಕ್ಕೆ ಬರುವುದೆಂದರೆ ಸಾಮಾನ್ಯ ಮಾತಲ್ಲ. ಅಲ್ಲಿನ ಜನತೆ ಪಕ್ಷ ಮತ್ತು ನಾಯಕತ್ವದ ಮೇಲೆ ನಂಬಿಕೆ ಇಟ್ಟು ಹಿಂದಿನ ದಾಖಲೆಗಳನ್ನು ಮುರಿದು, ಇಷ್ಟು ದೊಡ್ಡ ಮಟ್ಟದಲ್ಲಿ ಜನಾದೇಶ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

01:17 PM (IST) Dec 08

ನಾವ್‌ ಸುಮ್ನೆ ಇದ್ರೂ ಕರ್ನಾಟಕದಲ್ಲಿ ಗೆಲ್ತೀವಿ: ಸಿದ್ಧರಾಮಯ್ಯ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸುಮ್ನೆ ಇದ್ರೂ ಗೆಲುವು ಸಾಧಿಸುತ್ತದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಬಗ್ಗೆ ಪ್ರತಿಕ್ರಿಸಿದ ಅವರು, ದೆಹಲಿಯವರ ಹವಾ ಕರ್ನಾಟಕದಲ್ಲಿ ನಡೆಯೋದಿಲ್ಲ ಎಂದಿದ್ದಾರೆ

01:14 PM (IST) Dec 08

ಆಪ್ ಸಿಎಂ ಅಭ್ಯರ್ಥಿ ಇಸುದನ್ ಗಡ್ವಿಗೆ ಸೋಲು?

ಖಂಬಾಟ್ಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಡ್ವಿ ಆರಂಭದ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಇದೀಗ ಅಂತಿಮ ಹಂತರ ಎಣಿಕೆ ಕಾರ್ಯ ನಡೆಯುತ್ತಿದ್ದು, ಹಿನ್ನಡೆ ಸಾಧಿಸಿದ್ದಾರೆ. ಬಹುತೇಕ ಸೋಲುವುದು ಖಚಿತ ಎನ್ನಲಾಗುತ್ತಿದೆ. 

01:14 PM (IST) Dec 08

ಹಿಮಾಚಲ ಪ್ರದೇಶದಲ್ಲಿ 9 ಕ್ಷೇತ್ರಗಳ ಮುನ್ನಡೆ ಅಂತರ 1 ಸಾವಿರಕ್ಕಿಂತ ಕಮ್ಮಿ

ಹಿಮಾಚಲ ಪ್ರದೇಶ ಚುನಾವಣೆ 2022 ಫಲಿತಾಂಶ ರೋಚಕ ಘಟ್ಟದಲ್ಲಿದೆ. ಸಾಕಷ್ಟು ಕ್ಷೇತ್ರಗಳಲ್ಲಿ ನಿಕಟ ಸ್ಪರ್ಧೆ ನಡೆಯುತ್ತಿದೆ. ಬಹುಶಃ ಅಂತಿಮ ಫಲಿತಾಂಶ ಬರುವ ವೇಳೆಗೆ ಅಂದಾಜು 9 ಕ್ಷೇತ್ರಗಳಲ್ಲಿ ಫಲಿತಾಂಶ ಯಾವ ಪಕ್ಷದ ಕಡೆಯಾದರೂ ವಾಲಬಹುದು ಎನ್ನುವ ಸೂಚನೆ ಸಿಕ್ಕಿದೆ.

ಹಿಮಾಚಲ ಪ್ರದೇಶದ 9 ಕ್ಷೇತ್ರಗಳಲ್ಲಿ 1 ಸಾವಿರಕ್ಕಿಂತ ಕಡಿಮೆ ಅಂತರದ ಮುನ್ನಡೆ!

01:12 PM (IST) Dec 08

ಮೋದಿ ಮತ್ತು ಬಿಜೆಪಿ ಮೇಲೆ ಮತದಾರರಿಗೆ ನಂಬಿಕೆಯಿಂದ ಬಿಜೆಪಿಗೆ ಮುನ್ನಡೆ

ಸಚಿವ ಅಶ್ವಥ್ ನಾರಯಣ್ ಹೇಳಿಕೆ,
ದೇಶದಲ್ಲಿ ವಿವಿಧ ರಾಜ್ಯದಲ್ಲಿ ಆಗುವ ಚುನಾವಣೆಯಲ್ಲಿ ಪುನರ್ ಆಯ್ಕೆಯಾಗುತ್ತಿದೆ. ಮೋದಿ, ನಮ್ಮ ಪಕ್ಷದ ಮೇಲೆ ಜನರು ವಿಶ್ವಾಸವಿಡುತ್ತಿದ್ದಾರೆ. ಜನಪರ ಕೆಲಸ ಆಗ್ತಿರೋದಕ್ಕೆ ಜನ ಮನಸೋತಿದ್ದಾರೆ. ಗುಜರಾತ್‌ನ ಜಯಭೇರಿ ಹಾಗೂ ದೊಡ್ಡ ಸಂದೇಶ. ಜನರ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ. ನಮ್ಮ ಪ್ರಧಾನಿಗೆ ಅಮಿತ್ ಶಾಗೆ ಧನ್ಯವಾದಗಳನ್ನು ತಿಳುಸುತ್ತೇನೆ. ಹಿಮಾಚಲ ಪ್ರದೇಶದಲ್ಲಿ ಇನ್ನೂ ರಿಸಲ್ಟ್ ಬಂದಿಲ್ಲ. ಆರಂಭದಲ್ಲಿ ನಾವು ಮುಂದೆ ಇದ್ವಿ ಆಮೇಲೆ ಅವರು ಮುಂದೆ ಬಂದ್ರು ಮುಂದೆ ಮತ್ತೆ ನಾವು ಬರಬಹುದು. ಹಿಮಾಚಲ ಪ್ರದೇಶದಲ್ಲಿ ಸೆಣಸಾಟವಿದೆ ನೋಡಣ. 

ದೆಹಲಿ ಮುನ್ಸಿಪಲ್ ಎಲೆಕ್ಷನ್ ಹಿನ್ನಡೆ ವಿಚಾರ. ಬಹಳ ವರ್ಷದಿಂದ ನಮ್ಮ ಪಕ್ಷ ಅಲ್ಲಿ ಆಡಳಿತ ನಡೆಸಿದೆ. ಲೋಕಲ್ ಬಾಡಿ ಎಲೆಕ್ಷನ್ ನಲ್ಲಿ ಸ್ವಲ್ಪ ಚಾಲೆಂಜ್ ಬಂದಿರುತ್ತೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ತಿರ್ಪನ್ನು ತಗೆದುಕೊಳ್ಳಬೇಕು. ಹೊಸ ಪ್ರಯತ್ನದಲ್ಲಿ ಬೇರೆಯವರಿಗೂ ಅವಕಾಶ ಕೊಟ್ಟಿರ್ತಾರೆ. ನಮ್ಗೆ ತೀರಾ ಹಿನ್ನಡೆಯಾಗಿಲ್ಲ, ಸಣ್ಣ ಹಿನ್ನಡೆಯಾಗಿದೆ ಅಷ್ಟೇ. *ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬಿರಲಿದೆ. ಕಾಂಗ್ರೆಸ್ ಎಲ್ಲಾ ಕಡೆ ವಾಶ್ ಔಟ್ ಆಗ್ತಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ವಿಫಲವಾಗಿರೋದು ಇದ್ರಿಂದ ಗೊತ್ತಾಗುತ್ತೆ.

01:05 PM (IST) Dec 08

ಹಾರ್ದಿಕ್ ಪಟೇಲ್ ವಿಧಾನಸಭೆ ಪ್ರವೇಶಿಸೋದು ಖಚಿತ

ವೀರಮ್ಗಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾರ್ದಿಕ್ ಪಟೇಲ್ ಈ ಹಿಂದೆ ಕಾಂಗ್ರೆಸ್‌ನ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ಗೆದ್ದು, ವಿಧಾನಸಭೆ ಪ್ರವೇಶಿಸಲಿದ್ದಾರೆ. 

01:02 PM (IST) Dec 08

ಹಿರಿಯರಿಗೆ ಟಿಕೆಟ್ ನಿರಾಕರಿಸುತ್ತಾ ಬಿಜೆಪಿ?

ಹಿರಿಯರಿಗೆ ಟಿಕೆಟ್ ನಿರಾಕರಣೆ ವಿಚಾರವಾಗಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಪ್ರತಿಕ್ರಿಯೆ ನೀಡಿದ್ದು, ಈ ತಿರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಆಡಳಿತ ವಿರೋಧಿ ಅಲೆ ಸರಿಪಡಿಸಲು ಪ್ರಯತ್ನ ಮಾಡಿದೆ. ಅಲೆ ಪಕ್ಷದ ವಿರುದ್ಧ ಅಲ್ಲ, ವ್ಯಕ್ತಿಯ ವಿರುದ್ಧ ಇರುತ್ತೆ. ಹೀಗಾಗಿ ಆ ನಾಯಕರಿಗೆ ಟಿಕೆಟ್ ನೀರಾಕರಿಸಿದೆ. ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಜಾರಿ ಮಾಡಬಹುದು. ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಗುಜರಾತ್ ಫಲಿತಾಂಶ ಇಲ್ಲಿ ಪರಿಣಾಮ ಬೀರುವುದು ಕಷ್ಟ. ಉತ್ತರ ಮತ್ತು ದಕ್ಷಿಣ ಭಾರತದ ಚುನಾವಣೆ ಬೇರೆ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತವೆ, ಎಂದಿದ್ದಾರೆ.

 

01:01 PM (IST) Dec 08

Gujarat Election Result 2022: ರಿವಾಬಾ ಜಡೇಜಾ ಗೆಲುವು ಖಚಿತ

ಜಾಮ್‌ನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಜಾ ಜಡೇಜಾ ಗೆಲುವು ಕಾಣುವುದು ಬಹುತೇಕ ಖಚಿತವಾಗಿದೆ. ಅವರು 20 ಸಾವಿರ ಮತಗಳ ಮುನ್ನಡೆ ಕಂಡುಕೊಂಡಿದ್ದಾರೆ.

12:48 PM (IST) Dec 08

ಗುಜರಾತ್: ಬಿಜೆಪಿ ಹೊಸಮುಖ ಪ್ರಯೋಗ ಕೆಪಿಸಿಸಿಯಲ್ಲಿ?

ಗುಜರಾತ್ ನ ಬಿಜೆಪಿ ಹೊಸಮುಖ ಪ್ರಯೋಗ ಸಮರ್ಥಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ.

ಹೊಸಬರಿಗೆ ಅವಕಾಶ ಕೊಡುವ ಮಾಡೆಲ್ ಕರ್ನಾಟಕಕ್ಕೆ ಮಾದರಿಯಾಗಲಿ. ಅತಿ ಹೆಚ್ಚು ವಯಸ್ಸಿನ ಇಲ್ಲವೇ ಹಿರಿಯ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ಮರುಚಿಂತನೆಯಾಗಲಿ. ಹಲವು ಬಾರಿ ಗೆದ್ದಿದ್ದಾರೆ ಅನ್ನೋ ಕಾರಣಕ್ಕಾಗಿ ಟಿಕೆಟ್ ಬೇಡ. ಹಿರಿಯರಿಗೆ ಪರಿಷತ್‌ನಲ್ಲಿ ಅವಕಾಶ ನೀಡಲಿ. ಎಂಟು ಬಾರಿ ಟಿಕೆಟ್ ಕೊಟ್ಟಿದ್ದೇವೆ. 9ನೇ ಬಾರಿಯೂ ಟಿಕೆಟ್ ಕೊಡಲು ಮುಂದಾಗಿದ್ದೇವೆ. ಇದು ಬದಲಾಗಬೇಕು, ಹೊಸಬರಿಗೆ ಅವಕಾಶ ನೀಡಬೇಕು. ಇದನ್ನು ಪಕ್ಷದ ವೇದಿಕೆಯಲ್ಲೂ ಹೇಳಿದ್ದೇವೆ. ಸೈದ್ದಾಂತಿಕವಾಗಿಯೂ ಪಕ್ಷ ಕೆಲ ಬದಲಾವಣೆ ಮಾಡಿಕೊಳ್ಳಬೇಕಿದೆ. ನಾವಿನ್ನೂ ಹಳೆ ಮಾದರಿ ಅನುಸರಿಸುತ್ತಿದ್ದೇವೆ, ಅದು ಬದಲಾಗಬೇಕಿದೆ. ಪರೋಕ್ಷವಾಗಿ ಬಿಜೆಪಿಯ ಗುಜರಾತ್ ಮಾಡೆಲ್ ರಾಜ್ಯದಲ್ಲಿ ಅನ್ವಯ ಮಾಡಲು ಸತೀಶ್ ಜಾರಕಿಹೊಳಿ ಒತ್ತಾಯ. ಓಲೈಕೆ ರಾಜಕಾರಣ ಬಗ್ಗೆ ನಕಾರಾತ್ಮಕ ಪರಿಣಾಮ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಸತೀಶ್ ಜಾರಕಿಹೊಳಿ. 

12:28 PM (IST) Dec 08

ಅಭಿವೃದ್ಧಿಗೆ ಮನಸೋತ ಮತದಾರ: ಕೆ.ಎಸ್.ಈಸ್ವರಪ್ಪ

ಶಿವಮೊಗ್ಗ: ಗುಜರಾತ್ ಸಾಕಷ್ಟು ಅಭಿವೃದ್ಧಿಯಾಗಿದೆ. ಗುಜರಾತ್‌ಗೆ ಹೋಗಿ ನೋಡಿದರೆ, ಅಲ್ಲಿನ ಅಭಿವೃದ್ಧಿ ಗೊತ್ತಾಗುತ್ತೆ. ಇಡೀ ದೇಶಕ್ಜೆ ಮಾದರಿಯಾಗಿ ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿಯಲ್ಲಿ ನಾವು ನಮ್ಮ ರಾಜ್ಯದಲ್ಲೂ ಅಭಿವೃದ್ಧಿ ಮಾಡಿದ್ದೇವೆ. ಗುಜರಾತ್ ರೀತಿಯಲ್ಲಿ ನಾವೂ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಗುಜರಾತ್‌ನಲ್ಲಿ ಪೇಜ್ ಪ್ರಮುಖ ರಚನೆ ಯಶಸ್ವಿಯಾಗಿದೆ.  ನಮ್ಮ ರಾಜ್ಯದಲ್ಲೂ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪೇಜ್ ಪ್ರಮುಖರನ್ನು ರಚಿಸಿದ್ದೇವೆ. ಪೂರ್ಣ ಬಹುಮತ ರಾಜ್ಯದಲ್ಲೂ ಬರಲಿದೆ. ಇಂದಿನ ಫಲಿತಾಂಶ ಇಡೀ ದೇಶಕ್ಕೇ ಸಂತೋಷ ತಂದಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಅಲ್ಲೂ ಗೆಲುವು ಸಾಧಿಸಲು ಈ ಫಲಿತಾಂಶ ದಿಕ್ಸೂಚಿ ಆಗಲಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಮುಖಂಡರು ಜಗಳ ಆಡ್ತಿದ್ದಾರೆ. ರಾಜ್ಯದಲ್ಲಿ 15 ಸೀಟು ಗೆಲುವು ಸಾಧಿಸಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಸೋತು ಸೋತು ಮುಖಂಡರಿಗೆ ಸಾಕಾಗಿದೆ. ಸೋಲು ತಮ್ಮ ಮೇಲೆ ಬಾರದಿರಲೆಂದು ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.  ಅವರಿಂದಲೇ ಕಾಂಗ್ರೆಸ್ ಸೋತಿದೆ ಎಂದು ಆರೋಪ ಹೊರಿಸುತ್ತಾರೆ. ಆಮ್ ಆದ್ಮಿ ಪ್ರಾದೇಶಿಕ ಪಕ್ಷದ ತರಹ ಅಲ್ಲೊಂದು ಇಲ್ಲೊಂದು ಗೆದ್ದಿದೆ. ಅವರಿಗೆ ಹೆಚ್ಚೇನೂ ಸೀಟು ಬಂದಿಲ್ಲ, ಎಂದಿದ್ದಾರೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ.

12:20 PM (IST) Dec 08

ಗುಜರಾತ್‌ನಲ್ಲಿ ನಿರೀಕ್ಷಿತ ಫಲಿತಾಂಶ: ಡಿ.ವಿ.ಸದಾನಂದ ಗೌಡ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆಯ ಫಲಿತಾಂಶ ಸಿಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿಕೆ, ನಿರೀಕ್ಷಿತ ಫಲಿತಾಂಶ ಅಂತಾ ಹೇಳಲು ಬಯಸ್ತೇನೆ. ಮೋದಿ ಸಿಎಂ ಆದಾಗಿನಿಂದ ಉತ್ತಮ ಆಡಳಿತ ನೀಡಿದ್ದಾರೆ. ಆಡಳಿತ ನೋಡಿ ನಮ್ಮ ಜೊತೆ ಹಲವು ನಾಯಕರು ಬಂದಿದ್ದಾರೆ. ಕಾಂಗ್ರೆಸ್ ಕೂಡ ಪ್ರಚಾರಕ್ಕೆ ಹೋಗಲು ಹೆದರುವ ಮಟ್ಟಿಗೆ ಆಡಳಿತ ನೀಡಿದೆ. ಸಣ್ಣ ರಾಜ್ಯಗಳಿಗೆ ದೊಡ್ಡ ರಾಜ್ಯಗಳ ಫಲಿತಾಂಶ ಹೋಲಿಕೆ ಸರಿಯಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸಿಸ್ಟಮ್ ಇದೆ. ಕೆಲವು ರಾಜ್ಯದಲ್ಲಿ ಅದು ಸಕ್ಸಸ್ ಆಗಿದೆ. ಉತ್ತರ ಭಾರತದ ಚುನಾವಣಾ ತಂತ್ರಗಾರಿಕೆಯೇ ಬೇರೆ. ದಕ್ಷಿಣ ಭಾರತದ ರಾಜಕೀಯ ತಂತ್ರಗಾರಿಕೆ ಬೇರೆಯಾಗಿರುತ್ತೆ . ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಗುತ್ತಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ವಿರೋಧಿ ಶಾಸಕರಿಗೆ ಇದು ಅನ್ವಯ ಆಗುತ್ತೆ. ಇತ್ತೀಚಿನ ದಿನಗಳಲ್ಲಿ ಜನರ ಪರಿಚಿತ ಇಲ್ಲವಾದಲ್ಲಿ ಬದಲಾವಣೆ ಸಾಧ್ಯತೆ ಇದೆ. ಇಂದಿನ ಫಲಿತಾಂಶ ನೋಡಿದ್ರೆ, ಕರ್ನಾಟಕಕ್ಕೂ ಈ ಮಾಡೆಲ್ ಅಪ್ಲೈ ಆಗಬಹುದು,  ಎಂದಿದ್ದಾರೆ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು.

12:05 PM (IST) Dec 08

ಹಿಮಚಾಲ ಪ್ರದೇಶ ಬಿಜೆಪಿ ಸಿಎಂ ಅಭ್ಯರ್ಥಿ ಠಾಕೂರ್‌ಗೆ ಗೆಲವು: ಕರ್ನಾಟಕದ ಅಳಿಯ ಇವರು

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಿರುಸಿನ ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಿದ್ದು, ಬಿಜೆಪಿಗೆ ಸರಳ ಬಹುಮತ ಸಿಗಬಹುದೆಂದ ನಿರೀಕ್ಷಿಸಲಾಗುತ್ತಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ವಿಜಯಲಕ್ಷ್ಮಿ ಒಲಿದಿದ್ದು, ಇವರ ಪತ್ನಿ ಡಾ.ಸಾಧನಾ ಠಾಕೂರ್ ಶಿವಮೊಗ್ಗ ಮೂಲದವರು ಎಂಬುವುದು ವಿಶೇಷ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

11:44 AM (IST) Dec 08

ಪ್ರತಿ ಹಳ್ಳಿಗರ ಬಾಯಲ್ಲೂ ಮೋದಿ ಗುಣಗಾನ: ಶೋಭಾ ಕರಂದ್ಲಾಜೆ

ನವದೆಹಲಿ: ಗುಜರಾತ್ ಫಲಿತಾಂಶ ದೇಶದಲ್ಲಿಯೇ ದಾಖಲೆ ಮಾಡಿದೆ. ಗುಜರಾತ್ ಪ್ರತಿ ಹಳ್ಳಿಯಲ್ಲಿ ಕೇಳಿಬರೋದು ಮೋದಿ ಹೆಸರು. ಅಭಿವೃದ್ಧಿ, ಡಬಲ್ ಎಂಜಿನ್ ಸರ್ಕಾರ ಇವತ್ತು ಕೆಲಸ ಮಾಡಿದೆ. 150ಕ್ಕೂ ಹೆಚ್ಚುಸ್ಥಾನ ಗಳಿಸಿರುವುದು ಬಹಳ ಖುಷಿಯಾಗಿದೆ. ಆಮ್ ಆದ್ಮಿ ಪಕ್ಷ ಗುಜರಾತ್ ನಲ್ಲಿ ಕೆಲಸ ಮಾಡಿದೆ ಅನ್ನಿಸಿಲ್ಲ. ಗುಜರಾತ್ ಜನತೆಗೆ ಆಪ್ ಪಕ್ಷದ ಬಗ್ಗೆ ಗೊತ್ತಿಲ್ಲ. ಅಲ್ಲಿ ಆಪ್ ನವರು ಗೆದ್ದರೇ ಅಲ್ಲಿನ ಅವರ ವೈಯಕ್ತಿಕ ವರ್ಚಸ್. ಕರ್ನಾಟಕದಲ್ಲೂ ಈ ಮ್ಯಾಜಿಕ್ ನಡೆಯಲಿದೆ. ನಾವೆಲ್ಲಾ ಸೇರಿ ಕರ್ನಾಟಕದಲ್ಲಿ ಕೆಲಸ ಮಾಡಲಿದ್ದು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ಗುಜರಾತ್ ಜನ ಬಯಸೋದು ಅಥವಾ ಓಟ್ ಹಾಕುವುದು ಅಭಿವೃದ್ಧಿಗೆ ಮತ್ತು ಮೋದಿಗಾಗಿ ಓಟ್ ಹಾಕ್ತಾರೆ. ಹಿಮಾಚಲ ಪ್ರದೇಶದಲ್ಲಿ ಫಲಿತಾಂಶ ಬಂದ ಮೇಲೆ ಮಾತಾಡೋಣ. ಒಮ್ಮೆ ಒಂದ ಪಕ್ಷ ಮತ್ತೆ ಬರೋದಿಲ್ಲ ಅನ್ನೋ ಮಾತು ಇದೆ. ಉತ್ತರ ಪ್ರದೇಶ್ ಮತ್ತು ಉತ್ತರಾಖಂಡ್‌ನಲ್ಲಿ ಅದೇ ಹೇಳಿದ್ರು. ಅಲ್ಲಿ ಬಿಜೆಪಿ ರಿಪೀಟ್ ಆಯ್ತು, ಎಂದಿದ್ದಾರ ೆಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

11:41 AM (IST) Dec 08

ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ಮೇಲೆ ಪರಿಣಾಮ ಬೀರಲ್ಲ: ಕಾಂಗ್ರೆಸ್

ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ಮೇಲೆ ಪರಿಣಾಮ ಬೀರಲ್ಲ. 2013ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ 2013ರಲ್ಲಿ ಕರ್ನಾಟಕದಲ್ಲಿ ನಾವು ಗೆದ್ದೆವು. ರಾಜ್ಯ ರಾಜ್ಯಗಳ ನಡುವಿನ ವಿಚಾರಗಳೇ ಬೇರೆ ಇರುತ್ತದೆ. ದಿನೇಶ್ ಗುಂಡೂರಾವ್ ಹೇಳಿಕೆ.

11:40 AM (IST) Dec 08

ಗುಜರಾತ್‌ನಲ್ಲಿ ಕಾಂಗ್ರೆಸ್ ನಿರೀಕ್ಷೆ ಸುಳ್ಳಾಯ್ತು, ಆಪ್‌ನಿಂದ ಬಿಜೆಪಿಗೆ ಮುನ್ನಡೆ: ದಿನೇಶ್ ಗುಂಡೂರಾವ್

ಗುಜರಾತ್‌ನಲ್ಲಿ ಫಲಿತಾಂಶ ನಿರೀಕ್ಷೆಯಂತೆ ಬರ್ತಿಲ್ಲ. ವಿರೋಧ ಪಕ್ಷಗಳಲ್ಲಿನ ಓಟ್ ವಿಭಜನೆಯಾಗಿದೆ. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಆಗಿದೆ. ಗುಜರಾತ್‌ನಲ್ಲಿ ಹೆಚ್ಚು ಸೀಟ್ ನಿರೀಕ್ಷೆ ಇತ್ತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಮ್ ಆದ್ಮಿ ಪಕ್ಷದಿಂದ ನಮಗೆ ತೊಂದರೆಯಾಗ್ತಿದೆ. ಅವರು ಬಿಜೆಪಿ ಗೆ ಅನುಕೂಲ ಆಗುವ ರೀತಿಯಲ್ಲಿಯೇ ಪ್ರಚಾರ ಮಾಡ್ತಾರೆ.
ಗೋವಾ ಸೇರಿದಂತೆ ಕೆಲವು ಕಡೆ ನಾವು ಅದನ್ನು ನೋಡಿದ್ದೇವೆ, ಎಂದಿದ್ದಾರೆ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್.

11:21 AM (IST) Dec 08

ಹಿಮಾಚಲ ಪ್ರದೇಶ: ಮೂವರು ಬಿಜೆಪಿ ಬಂಡಾಯ ಅಭ್ಯರ್ಥಿಗೇ ಆಗ್ತಾರಾ ಕಿಂಗ್ ಮೇಕರ್ಸ್?

ಹಿಮಾಚಲ ಪ್ರದೇಶದ ಭವಿಷ್ಯ ನಿರ್ಧರಿಸಲಿದ್ದಾರೆ ಮೂವರು ಪಕ್ಷೇತರರು
ಬಿಜೆಪಿ ಬಂಡಾಯ ಅಭ್ಯರ್ಥಿ ಹೋಷಿಯಾರ್ ಸಿಂಗ್ 5,959 ಮತಗಳ ಮುನ್ನಡೆ
ದೆಹ್ರಾ ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಹೋಷಿಯಾರ್ ಸಿಂಗ್

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಶಿಶ್ ಶರ್ಮಾ 7,560 ಮತಗಳಿಂದ ಮುನ್ನಡೆ
ಹಮಿಪುರ್ ಕ್ಷೇತ್ರದಿಂದ ಕಾಂಗ್ರೆಸ್​ ವಿರುದ್ಧ ಬಂಡಾಯ ಎದ್ದಿದ್ದ ಆಶಿಶ್ ಶರ್ಮಾ
ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಲ್ ಠಾಕೂರ್ 8,549 ಮತಗಳ ಮುನ್ನಡೆ
ನಾಲಘರ್ ಕ್ಷೇತ್ರದಿಂದ ಕಣಕ್ಕಿಳಿದಿರೋ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಲ್ ಠಾಕೂರ್

11:15 AM (IST) Dec 08

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಎಂದೂ ಕಾಣದ ಸೋಲು?

ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಈವರೆಗಿನ ಅತ್ಯಂತ ಕೆಟ್ಟ ನಿರ್ವಹಣೆಯತ್ತ ಮುಖ ಮಾಡಿದೆ ಎನ್ನುವುದು ಆರಂಭಿಕ ಟ್ರೆಂಡ್‌ಗಳನ್ನು ನೋಡಿದರೆ ಗೊತ್ತಾಗಿದೆ. ಇನ್ನೊಂದೆಡೆ ಬಿಜೆಪಿ 182 ಸದಸ್ಯ ಬಲದ ವಿಧಾನಸಭೆಯಲ್ಲಿ ತನ್ನ ಈವರೆಗಿನ ಅತೀದೊಡ್ಡ ಗೆಲುವಿನತ್ತ ಮುಖ ಮಾಡಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ: 


More Trending News