ಎಂ777 ಹೊವಿಟ್ಜರ್ ಸಹಕಾರ ರಹಿತವಾಗಿ 24.7 ಕಿಲೋಮೀಟರ್‌ಗಳ ಗರಿಷ್ಠ ವ್ಯಾಪ್ತಿ ಹೊಂದಿದ್ದು, ರಾಕೆಟ್ ಸಹಾಯ ಹೊಂದಿರುವ ಸುತ್ತುಗಳಲ್ಲಿ 30 ಕಿಲೋಮೀಟರ್‌ಗಳ ಗರಿಷ್ಠ ವ್ಯಾಪ್ತಿ ಹೊಂದಿದೆ. ಅದರೊಡನೆ, ವಿಶೇಷ ಆಯುಧಗಳನ್ನು ಪ್ರಯೋಗಿಸುವ ಇದರ ಸಾಮರ್ಥ್ಯ ಹೊವಿಟ್ಜರ್ ವ್ಯಾಪ್ತಿಯನ್ನು ಅಂದಾಜು 40 ಕಿಲೋಮೀಟರ್‌ಗೆ ಹೆಚ್ಚಿಸಲಿದೆ
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ನವದೆಹಲಿ (ಜೂನ್ 22, 2023): ಭಾರತೀಯ ಸೇನೆ ಸದಾ ವಿವಾದಾತೀತವಾಗಿರುವ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ನಲ್ಲಿ ಚೀನಾದ ವಿರುದ್ಧ ಬಳಸಲು ಫಿರಂಗಿಗಳನ್ನು ಖರೀದಿಸಿತ್ತು. ಈಗ, ಭಾರತ ಮತ್ತು ಅಮೆರಿಕಗಳು ಎಂ777 ಅಲ್ಟ್ರಾ ಲೈಟ್ ವೇಯ್ಟ್ ಹೊವಿಟ್ಜರ್‌ನ ಹೆಚ್ಚಿನ ವ್ಯಾಪ್ತಿ ಹೊಂದಿರುವ ಆವೃತ್ತಿಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸುವ ಸಾಧ್ಯತೆಗಳ ಕುರಿತು ಚಿಂತಿಸುತ್ತಿವೆ.
ಎಂ777 ಹೊವಿಟ್ಜರ್ ಸಹಕಾರ ರಹಿತವಾಗಿ 24.7 ಕಿಲೋಮೀಟರ್‌ಗಳ ಗರಿಷ್ಠ ವ್ಯಾಪ್ತಿ ಹೊಂದಿದ್ದು, ರಾಕೆಟ್ ಸಹಾಯ ಹೊಂದಿರುವ ಸುತ್ತುಗಳಲ್ಲಿ 30 ಕಿಲೋಮೀಟರ್‌ಗಳ ಗರಿಷ್ಠ ವ್ಯಾಪ್ತಿ ಹೊಂದಿದೆ. ಅದರೊಡನೆ, ವಿಶೇಷ ಆಯುಧಗಳನ್ನು ಪ್ರಯೋಗಿಸುವ ಇದರ ಸಾಮರ್ಥ್ಯ ಹೊವಿಟ್ಜರ್ ವ್ಯಾಪ್ತಿಯನ್ನು ಅಂದಾಜು 40 ಕಿಲೋಮೀಟರ್‌ಗೆ ಹೆಚ್ಚಿಸಲಿದೆ. ಮೂಲಗಳ ಪ್ರಕಾರ, ಈ ಯೋಜನೆ ಹೆಚ್ಚಿನ ವ್ಯಾಪ್ತಿಯ ಸ್ಫೋಟಕಗಳನ್ನು ನಿರ್ಮಿಸುವುದರ ಜೊತೆಗೆ, ಗನ್ನಿನ ನೈಜ ವ್ಯಾಪ್ತಿಯನ್ನೂ ಪ್ರತ್ಯೇಕವಾಗಿ ಹೆಚ್ಚಿಸುವುದಾಗಿದೆ.
ಇದನ್ನು ಓದಿ: ನೀವು ಪೋಕೆಮಾನ್ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'
ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಮೆರಿಕಾದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಅವರೊಡನೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ ತಿಂಗಳಲ್ಲಿ ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಿದ್ದರು ಎಂದು ರಕ್ಷಣಾ ಮತ್ತು ಭದ್ರತಾ ಇಲಾಖೆಯ ಮೂಲಗಳು ತಿಳಿಸಿವೆ.
ಬಲ್ಲ ಮೂಲಗಳ ಪ್ರಕಾರ, ಭಾರತ ಮತ್ತು ಅಮೆರಿಕ ದೇಶಗಳುನೂತನ ಎಂ777 ಎಕ್ಸ್‌ಟೆಂಡೆಡ್ ರೇಂಜ್ (ಇಆರ್) ಆರ್ಟಿಲರಿ ಗನ್ ನಿರ್ಮಿಸುವ ಕುರಿತು ಮಾತುಕತೆ ನಡೆಸುತ್ತಿವೆ. ಈ ಮಾಹಿತಿಯ ಪ್ರಕಾರ, ಭಾರತೀಯ ಸೇನೆ ಪ್ರಸ್ತುತ ಹೊಂದಿರುವ 145 ಹೊವಿಟ್ಜರ್‌ಗಳ ವ್ಯಾಪ್ತಿಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಭಾರತ ಸಮಯದ ಪರಿಮಿತಿಯೊಳಗೆ ಕಾರ್ಯಾಚರಿಸಿ, ಆ ಮೂಲಕ ಸೂಕ್ತ ಹೆಜ್ಜೆಗಳನ್ನಿಟ್ಟು, ಈ ಉದ್ದೇಶಗಳು ಮತ್ತು ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಬೇಕೆಂಬ ಸ್ಪಷ್ಟತೆ ಹೊಂದಿದೆ.
ಇದನ್ನೂ ಓದಿ: ಸೋನಮ್ ವಾಂಗ್‌ಚುಕ್ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!
155 ಎಂಎಂ/39 ಕ್ಯಾಲಿಬರ್ ಎಂ777 ಹೊವಿಟ್ಜರ್ ಅನ್ನು ಪರ್ವತ ಪ್ರದೇಶಗಳಲ್ಲಿ ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಭಾರತ ವಿಶೇಷ ಬೇಡಿಕೆ ಸಲ್ಲಿಸಿತ್ತು. ಪ್ರಸ್ತುತ ಭಾರತೀಯ ಸೇನೆ ಹೊಂದಿರುವ ಎಲ್ಲ ಎಂ777 ಹೊವಿಟ್ಜರ್‌ಗಳನ್ನು ಈಶಾನ್ಯ ಭಾರತದ ಎಲ್ಎಸಿಯಾದ್ಯಂತ ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಕಡಿದಾದ ಭೂಪ್ರದೇಶಗಳು, ಹಲವಾರು ಕಣಿವೆಗಳಿದ್ದು, ಇಲ್ಲಿ ಸಾಮಾನ್ಯವಾಗಿ ಆರ್ಟಿಲರಿ ವ್ಯವಸ್ಥೆಗಳ ಸಾಗಾಟ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. 25 ಹೊವಿಟ್ಜರ್‌ಗಳನ್ನು ಆಮದು ಮಾಡಲಾಯಿತು. ಆದರೆ, ಉಳಿದ 75 ಹೊವಿಟ್ಜರ್‌ಗಳನ್ನು ಮಹೀಂದ್ರಾ ಡಿಫೆನ್ಸ್ ಸಂಸ್ಥೆ ಬಿಎಇ ಸಿಸ್ಟಮ್ಸ್ ಜೊತೆ ಸಹಯೋಗ ಹೊಂದಿ ಭಾರತದಲ್ಲೇ ನಿರ್ಮಿಸಿತು.
ಭಾರತ ಮತ್ತು ಅಮೆರಿಕ ದೇಶಗಳು ಹಲವು ಪ್ರಮುಖ, ಸೂಕ್ಷ್ಮ ಹಾಗೂ ವೆಚ್ಚದಾಯಕ ಒಪ್ಪಂದಗಳಿಗೆ ಸಹಿ ಹಾಕುವ ಕುರಿತು ಆಲೋಚಿಸುತ್ತಿವೆ. ಇದರಲ್ಲಿ ಅತ್ಯಂತ ಎತ್ತರದಲ್ಲಿ ಕಾರ್ಯಾಚರಿಸುವ ಡ್ರೋನ್ ಖರೀದಿ, ಜೆಟ್ ಇಂಜಿನ್ ತಂತ್ರಜ್ಞಾನ ವರ್ಗಾವಣೆ, ಹಾಗೂ ಇತರ ಪ್ರಮುಖ ಮಿಲಿಟರಿ ಮತ್ತು ಭದ್ರತಾ ಸಂಬಂಧಿಸಿದ ಯೋಜನೆಗಳು ಹಾಗೂ ಒಪ್ಪಂದಗಳು ಸೇರಿವೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತುತ ಅಮೆರಿಕ ಭೇಟಿಯಲ್ಲಿ ಇವೆಲ್ಲವೂ ಕಾರ್ಯರೂಪಕ್ಕೆ ಬರುವ ನಿರೀಕ್ಷೆಗಳಿವೆ.
ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!
ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ, ಮೂಲಗಳ ಪ್ರಕಾರ, ಜಿಇ ಎಫ್414 ಇಂಜಿನ್ ಜಂಟಿ ಉತ್ಪಾದನೆಯ ಒಪ್ಪಂದ ಮಾತುಕತೆಯ ಹಂತದಲ್ಲಿದ್ದು, ಅದರೊಡನೆ ಹೈ ಆಲ್ಟಿಟ್ಯೂಡ್ ಲಾಂಗ್ ಎಂಡ್ಯುರೆನ್ಸ್ (ಎಚ್ಎಎಲ್ಇ) ಡ್ರೋನ್‌ಗಳ ಖರೀದಿ, ಮುಂದಿನ ತಲೆಮಾರಿನ ಎಂ777 ಲೈಟ್‌ವೇಯ್ಟ್ ಹೊವಿಟ್ಜರ್, ಹೆಚ್ಚಿನ ವ್ಯಾಪ್ತಿಯ, ವಿಶಿಷ್ಟ ಆರ್ಟಿಲರಿ ಆಯುಧಗಳ ಖರೀದಿ, ಹಾಗೂ ಭಾರತದಲ್ಲಿ ಸ್ಟ್ರೈಕರ್ ಶಸ್ತ್ರಸಜ್ಜಿತ ವಾಹನಗಳ ಉತ್ಪಾದನೆಯ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿವೆ.
ಎಂ777 ಹೊವಿಟ್ಜರ್ ಎಂದರೇನು?
ಈ ಕ್ಯಾನನ್ (ಫಿರಂಗಿ) ಅನ್ನು ಮೊದಲ ಬಾರಿಗೆ 1997ರಲ್ಲಿ ಅಮೆರಿಕಾದ ಸೇನೆ ಮತ್ತು ಮರೀನ್ ಕಾರ್ಪ್ಸ್ ಬಳಕೆಗೆ ತಯಾರಿಸಲಾಯಿತು. ಎಂ777 ಹೊವಿಟ್ಜರ್ ಈ ಮೊದಲು ಬಳಕೆಯಲ್ಲಿದ್ದ, ಎಂ198 ಟೊವ್ಡ್ 155 ಎಂಎಂ ಹೊವಿಟ್ಜರ್‌ಗಳ ಬದಲಿಗೆ ಬಳಕೆಗೆ ಬಂತು. ಸಾಂಪ್ರದಾಯಿಕ ಆರ್ಟಿಲರಿ ವ್ಯವಸ್ಥೆಗಳ ರೀತಿಯಲ್ಲದೆ, ಈ ಗನ್ ಅತ್ಯಂತ ಹಗುರವಾಗಿದ್ದರಿಂದ ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಅನುಕೂಲಕರವಾಗಿತ್ತು. ಇದರ ಪ್ರತಿಯೊಂದು ಬಿಡಿಭಾಗಗಳನ್ನು ಮೂಲತಃ ಟೈಟಾನಿಯಂ ಹಾಗೂ ಟೈಟಾನಿಯಂ ಕಾಸ್ಟಿಂಗ್ ಮೂಲಕ ನಿರ್ಮಿಸಲಾಗಿದ್ದು, 4,000 ಕೆಜಿಗಿಂತ ಕಡಿಮೆ ತೂಕ ಹೊಂದಿವೆ. ಎಂ777 ಪ್ರತಿ ನಿಮಿಷಕ್ಕೆ ನಾಲ್ಕು ಸುತ್ತುಗಳ ಬರ್ಸ್ಟ್ ದರ ಹೊಂದಿದ್ದು, ಪ್ರತಿ ನಿಮಿಷಕ್ಕೆ ಎರಡು ಸುತ್ತುಗಳ ಸಸ್ಟೇನ್ಡ್ ದರ ಹೊಂದಿದೆ.
ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ
ಎಂ777 ಅನ್ನು ಅಫ್ಘಾನಿಸ್ತಾನ ಯುದ್ಧದಲ್ಲಿ ಬಳಸಲಾಗಿದ್ದರೂ, ಪ್ರಸ್ತುತ ನಡೆಯುತ್ತಿರುವ ರಷ್ಯಾ - ಉಕ್ರೇನ್ ಯುದ್ಧ ಇದರಲ್ಲಿರುವ ಕೆಲವು ಪ್ರಮುಖ ಸಮಸ್ಯೆಗಳೆಡೆಗೆ ಬೆಳಕು ಚೆಲ್ಲಿವೆ. ಅಮೆರಿಕ ಕನಿಷ್ಠ 142 ಎಂ777ಗಳನ್ನು ಉಕ್ರೇನಿಗೆ ಪೂರೈಸಿದ್ದು, ಉಕ್ರೇನ್ ಸೇನಾಪಡೆಗಳು ಅವುಗಳನ್ನು ರಷ್ಯನ್ ನೆಲೆಗಳ ಮೇಲೆ ದಾಳಿ ನಡೆಸಲು ಅಪಾರವಾಗಿ ಬಳಸಿಕೊಂಡಿವೆ.
ಉಕ್ರೇನಿನ ಯೋಧರು ಪ್ರತಿದಿನವೂ 2,000 ದಿಂದ 4,000 ಆರ್ಟಿಲರಿ ದಾಳಿ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಷ್ಟೊಂದು ಪ್ರಮಾಣದಲ್ಲಿ ದಾಳಿ ನಡೆಸಿರುವುದರಿಂದ, ಉಕ್ರೇನಿನ ಸೈನಿಕರಿಗೆ ಎಂ777 ನಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ. ಅದರ ಶೆಲ್‌ಗಳು ನಿರೀಕ್ಷಿಸಿದಷ್ಟು ನಿಖರವಾಗಿ, ಅಷ್ಟು ದೂರಕ್ಕೆ ಸಾಗುತ್ತಿಲ್ಲ. ಹಲವು ಸಮಸ್ಯೆಗಳಿಗೆ ಹೊವಿಟ್ಜರ್ ವಿನ್ಯಾಸವೂ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?
ಈ ಆಯುಧ ಯುದ್ಧಭೂಮಿಯಲ್ಲಿ ಸಾಗಿಸಲು ಸುಲಭವಾಗಿದ್ದು, ಈ ಮೊದಲಿನ ಆರ್ಟಿಲರಿ ಗನ್‌ಗಳಿಗೆ ಹೋಲಿಸಿದರೆ ಇದನ್ನು ಜೋಡಿಸುವುದೂ ಸುಲಭವಾಗಿದೆ. ಆದ್ದರಿಂದ 2,000ನೇ ದಶಕದ ಆರಂಭದಲ್ಲಿ ಅಮೆರಿಕಾ ಎಂ777 ಅನ್ನು ಅಫ್ಘಾನಿಸ್ತಾನ ಮತ್ತು ಇರಾಕ್‌ಗಳಲ್ಲಿ ಬಳಸಲು ಆರಂಭಿಸಿದಾಗ ಸಾಕಷ್ಟು ಅನುಕೂಲತೆಗಳು ಉಂಟಾಗಿದ್ದವು. ಇದರ ಉತ್ಪಾದನೆಯಲ್ಲಿ ಉಕ್ಕಿಗಿಂತ ಸಾಕಷ್ಟು ಹಗುರವಾಗಿರುವ, ಆದರೆ ಉಕ್ಕಿನಷ್ಟೇ ಗಟ್ಟಿಯಾಗಿರುವ ಟೈಟಾನಿಯಂ ಅನ್ನು ಬಳಸಲಾಗುತ್ತದೆ. ಈ ಹಿಂದಿನ ಯುದ್ಧಗಳಲ್ಲಿ, ಉಕ್ರೇನ್ ಕದನದ ರೀತಿಯಲ್ಲಿ ಅಲ್ಲದೆ, ಸೇನಾಪಡೆಗೆ ಬೆಂಬಲ ನೀಡುವ ರೀತಿಯಲ್ಲಿ ಎಂ777 ಮೂಲಕ ಶೆಲ್ ದಾಳಿ ನಡೆಸಲಾಗುತ್ತಿತ್ತು ಎಂದು ಸಂಶೋಧನೆಗಳು ಹೇಳಿವೆ.
ಎಂ777 ಹೊವಿಟ್ಜರ್‌ಗಳ ಅಪಾರವಾದ ಶಕ್ತಿಯ ಕಾರಣದಿಂದ ಅವುಗಳನ್ನು ಆಗಾಗ ದುರಸ್ತಿಗೊಳಿಸಬೇಕಾಗುತ್ತದೆ. ಅವುಗಳ ಬ್ಯಾರಲ್‌ಗಳನ್ನೂ ನಿಯಮಿತವಾಗಿ ಬದಲಾಯಿಸುವ ಅವಶ್ಯಕತೆ ಇರುತ್ತದೆ.
ಇದನ್ನೂ ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?