ಅಜ್ಜ ಅಜ್ಜಿಯ ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮೊಮ್ಮಗ : ವೀಡಿಯೋ ಭಾರಿ ವೈರಲ್

Published : Jan 16, 2026, 09:25 PM IST
Grandparents first flight to Dubai

ಸಾರಾಂಶ

ಯುವಕನೋರ್ವ ತನ್ನ ಅಜ್ಜ-ಅಜ್ಜಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದಾನೆ.  ಅವರ ಮೊದಲ ವಿಮಾನ ಪ್ರಯಾಣದ ಭಾವುಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಅಜ್ಜ-ಅಜ್ಜಿಯ ಕನಸನ್ನು ನನಸು ಮಾಡಿದ ಮೊಮ್ಮಗನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಜೀವನದಲ್ಲಿ ಒಮ್ಮೆಯಾದರು ವಿಮಾನದಲ್ಲಿ ಹೋಗಬೇಕು ವಿದೇಶಕ್ಕೆ ಹೋಗಬೇಕು ಎಂದು ಅನೇಕರು ಕನಸು ಕಾಣುತ್ತಾರೆ. ಆದರೆ ಅನೇಕರಿಗೆ ಈ ಕನಸು ಈಡೇರುವುದೇ ಇಲ್ಲ. ಆದರೆ ಇಲ್ಲೊಬ್ಬ ಮೊಮ್ಮಗ ತನ್ನ ಅಜ್ಜ ಅಜ್ಜಿಯನ್ನು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಅದೂ ಎಲ್ಲಿಗೆ ಅಂತೀರಾ ಮಾಯಾನಗರಿ ದುಬೈಗೆ ಕಣ್ರೀ.. 

ಹೌದು ಯುವಕನೋರ್ವ ತನ್ನ ಅಜ್ಜ ಅಜ್ಜಿಯನ್ನು ದುಬೈಗೆ ಕರೆದುಕೊಂಡು ಹೋಗಿದ್ದು, ಅಜ್ಜ ಅಜ್ಜಿಯ ಮೊದಲ ವಿಮಾನ ಪ್ರಯಾಣದ ಭಾವುಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಮೊದಲ ವಿಮಾನ ಪ್ರಯಾಣದಿಂದ ಆರಂಭಿಸಿ ದುಬೈನ ಫೂಲ್‌ಗಳಲ್ಲಿ ಎಂಜಾಯ್ ಮಾಡುವವರೆಗೆ ಅವರು ಪ್ರತಿಯೊಂದು ಕ್ಷಣವನ್ನು ಅವರು ಎಂಜಾಯ್ ಮಾಡಿದ್ದು, ವೀಡಿಯೋ ನೋಡಿದ ಅನೇಕರು ಆ ಅಜ್ಜಾಜ್ಜಿಯ ಉತ್ಸಾಹಕ್ಕೆ ಮನಸೋತಿದ್ದು, ದೇವರು ಅವರಿಗೆ ಇನ್ನಷ್ಟು ಆರೋಗ್ಯಾಯುಷ್ಯ ಕೊಡುವಂತೆ ಹಾರೈಸಿದ್ದಾರೆ. ಜೊತೆಗೆ ಇಳಿವಯಸ್ಸಿನ ಅಜ್ಜ ಅಜ್ಜಿಯ ಕನಸನ್ನು ಈಡೇರಿಸಿದ ಅವರ ಮೊಮ್ಮಗನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೋವನ್ನು @ankitranabigmouth ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಿಂದ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಈ ವೃದ್ಧ ದಂಪತಿ ತಮ್ಮ ಮೊಮ್ಮಗನ ಜೊತೆ ವಿಮಾನದಲ್ಲಿ ಏರ್‌ಪೋರ್ಟ್‌ಗೆ ಹೋಗಿ ಅಲ್ಲಿಂದ ವಿಮಾನದಲ್ಲಿ ಕುಳಿತು ದುಬೈಗೆ ಹೋಗುವವರೆಗೆನ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ವಿಮಾನ ಹತ್ತುವುದರಿಂದ ಹಿಡಿದು ಆಕಾಶದಷ್ಟು ಎತ್ತರದಿಂದ ದುಬೈನ ಅದ್ಭುತ ನೋಟಗಳನ್ನು ನೋಡುವವರೆಗೆ, ಅಜ್ಜ-ಅಜ್ಜಿಯರು ಪ್ರತಿ ಕ್ಷಣವನ್ನು ಮಗುವಿನಂತೆ ಖುಷಿ ಖುಷಿಯಿಂದ ಎಂಜಾಯ್ ಮಾಡಿದ್ದಾರೆ. ಅವರು ತಮ್ಮ ಮೊಮ್ಮಗನೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುತ್ತಿರುವುದು ಅವರ ಮುಖದಲ್ಲಿನ ಸಂತೋಷವೇ ಹೇಳುತ್ತಿದೆ.

ಇದನ್ನೂ ಓದಿ: ವಿಶ್ವದ ಅತೀ ಅಪರೂಪದ ಕೋತಿಯ ಸೌಂದರ್ಯಕ್ಕೆ ಫಿದಾ ಆದ ಯುವತಿ : ವೈರಲ್ ಆಗ್ತಿದೆ ಸಿಂಗಾಪುರದ ಕಪಿ

ದಾದಿಜೀ ಕಿ ಫಸ್ಟ್ ಫ್ಲೈಟ್ ಎಂದು ಶೀರ್ಷಿಕೆಯಡಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಕನಸುಗಳಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹಲವರಿಗೆ ನೆನಪಿಸುತ್ತದೆ. ಲೆಕ್ಕವಿಲ್ಲದಷ್ಟು ಮಧ್ಯಮ ವರ್ಗದ ಕುಟುಂಬಗಳಿಗೆ, ವಿಮಾನದಲ್ಲಿ ಹಾರಾಟವು ಶಾಂತ, ಮಾತನಾಡದ ಆಸೆಯಾಗಿಯೇ ಉಳಿದಿದೆ, ಅದು ಕೆಲವೊಮ್ಮೆ ಈಡೇರುವುದೇ ಇಲ್ಲ. ಆದರೆ ಅಂಕಿತ್ ಅವರಂತಹ ಮೊಮ್ಮಗನಿದ್ದರೆ ಎಲ್ಲವೂ ಸಾಧ್ಯ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನರಕಕ್ಕೆ ಬನ್ನಿ ಅಂತ ಕರೆಯುತ್ತೆ ಈ ವೀಡಿಯೋ: ಅನೇಕರ ತಲೆ ಕೆಡಿಸಿದ 140 ವರ್ಷಗಳ ಅವಧಿಯ ವಿಚಿತ್ರ ಯುಟ್ಯೂಬ್ ವೀಡಿಯೋ

ಅಲ್ಲದೇ ತಮ್ಮ ಕುಟುಂಬವನ್ನು ಗೌರವಿಸಿದ್ದಕ್ಕಾಗಿ, ಅಜ್ಜ-ಅಜ್ಜಿಯೊಂದಿಗೆ ಅಮೂಲ್ಯವಾದ ಸಮಯ ಕಳೆದಿದ್ದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಂಕಿತ್ ಅವರನ್ನು ಶ್ಲಾಘಿಸಿದ್ದಾರೆ. 3 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಮೊಮ್ಮಗನೇ ವೃದ್ಧ ಅಜ್ಜ ಅಜ್ಜಿಯನ್ನು ಹಣಕ್ಕಾಗಿ ಕೊಂದಂತಹ ನಿದರ್ಶನಗಳಿರುವಾಗ ಅಂಕಿತ್ ಅವರು ಹಳೆಯ ಕಣ್ಣುಗಳಲ್ಲಿ ಕನಸುಗಳನ್ನು ಹುಟ್ಟಿಸಿ ಅವುಗಳನ್ನು ನನಸಾಗಿಸಿದ್ದಾನೆ. ದೇವರು ನಿನ್ನನ್ನು ಆಶೀರ್ವದಿಸಲಿ ಸಹೋದರ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಸಹೋದರ ನನ್ನ ಹೃದಯವನ್ನು ಸಂತೋಷಪಡಿಸಿದರು. ಒಳ್ಳೆಯ ಕೆಲಸ ಮಾಡುತ್ತಾ ಇರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಂಗಾಪುರದ ಕೋತಿ ಬ್ಯೂಟಿಗೆ ಮನಸೋತ ಯುವತಿ: ಇದು ಕಾಸ್ಟ್ಯುಮ್ ಅಲ್ಲ ದೇವರೇ ಕೊಡಿಸಿದ ಸೊಗಸಾದ ಬಟ್ಟೆ
ನರಕಕ್ಕೆ ಬನ್ನಿ ಅಂತ ಕರೆಯುತ್ತೆ ಈ ವೀಡಿಯೋ: ಅನೇಕರ ತಲೆ ಕೆಡಿಸಿದ 140 ವರ್ಷಗಳ ಅವಧಿಯ ವಿಚಿತ್ರ ಯುಟ್ಯೂಬ್ ವೀಡಿಯೋ