ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಉಚಿತ ಪಡಿತರ ನೀಡಲು ಜಾರಿಗೊಳಿಸಲಾಗಿದ್ದ ಪ್ರಧಾನಮಂತ್ರಿ ಗರೀಬ್ ಅನ್ನ ಯೋಜನೆಯನ್ನು ಇನ್ನೂ 5 ತಿಂಗಳು ಅಂದರೆ ನವೆಂಬರ್‌ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ನವದೆಹಲಿ(ಜು.09): ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಉಚಿತ ಪಡಿತರ ನೀಡಲು ಜಾರಿಗೊಳಿಸಲಾಗಿದ್ದ ಪ್ರಧಾನಮಂತ್ರಿ ಗರೀಬ್ ಅನ್ನ ಯೋಜನೆಯನ್ನು ಇನ್ನೂ 5 ತಿಂಗಳು ಅಂದರೆ ನವೆಂಬರ್‌ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಈ ಸಂಬಂಧ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಘೋಷಣೆ ಮಾಡಿದ್ದರು. ಅದಕ್ಕೆ ಬುಧವಾರ ಸಂಪುಟ ಅನುಮೋದನೆ ನೀಡಿದೆ. 5 ಕೇಜಿ ಅಕ್ಕಿ/ಗೋಧಿ, ಒಂದು ಕೇಜಿ ಕಡ್ಲೇಕಾಳನ್ನು ಮೂರು ತಿಂಗಳ ಕಾಲ ಲಾಕ್‌ಡೌನ್ ವೇಳೆ ನೀಡಲಾಗಿತ್ತು.
ದಿನ ಭವಿಷ್ಯ: ಈ ರಾಶಿಯವರಿಗೆ ಅನುಕೂಲವೇ ತೊಡಕಾಗುವ ಸಾಧ್ಯತೆ
ಇನ್ನೂ 5 ತಿಂಗಳು ನೀಡುವ ನಿರ್ಧಾರದಿಂದ ಬೊಕ್ಕಸಕ್ಕೆ 1.49 ಲಕ್ಷ ಕೋಟಿ ರು. ಹೊರೆಯಾಗಲಿದೆ. ದೇಶದ ಇತಿಹಾಸದಲ್ಲಿ ಎಂದೂ 8 ತಿಂಗಳ ಕಾಲ ಉಚಿತ ಪಡಿತರ ನೀಡಿರಲಿಲ್ಲ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಸರ್ಕಾರದಿಂದಲೇ ಇನ್ನೂ 3 ತಿಂಗಳು ಪಿಎಫ್ ಪಾವತಿ
ಕಡಿಮೆ ಸಂಬಳ ಪಡೆಯುವ ನೌಕರರು ಹಾಗೂ ಅವರಿಗೆ ಉದ್ಯೋಗ ನೀಡಿರುವ ಕಂಪನಿಗಳ ಭವಿಷ್ಯ ನಿಧಿ ಪಾಲನ್ನು ಕಳೆದ ಮೂರು ತಿಂಗಳ ಕಾಲ ಪಾವತಿಸಿರುವ ಕೇಂದ್ರ ಸರ್ಕಾರ, ಮುಂಬರುವ ಇನ್ನೂ 3 ತಿಂಗಳು ತಾನೇ ಭರಿಸಲು ನಿರ್ಧರಿಸಿದೆ. 100 ಮಂದಿಯವರೆಗೆ ಉದ್ಯೋಗಿಗಳನ್ನು ಹೊಂದಿರುವ, ಆ ಪೈಕಿ ಶೇ.90ರಷ್ಟುಉದ್ಯೋಗಿಗಳ ವೇತನ 15 ಸಾವಿರ ರು.ಗಿಂತ ಕಡಿಮೆ ಇರುವ ಕಂಪನಿಗಳಿಗೆ, ನೌಕರರಿಗೆ ಇದರಿಂದ ಅನುಕೂಲವಾಗಲಿದೆ.
1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್
ಅವರ ಕೈಗೆ ಹೆಚ್ಚು ಹಣ ಸಿಗಲಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಪಾಲು ತಲಾ ಶೇ.12ರಂತೆ ಒಟ್ಟು ಶೇ.24 ಪಿಎಫ್ ಮೊತ್ತವನ್ನು ಸರ್ಕಾರ ಭರಿಸಿತ್ತು. ಇದೀಗ ಅದನ್ನು ಜೂನ್, ಜುಲೈ, ಆಗಸ್ಟ್‌ವರೆಗೂ ವಿಸ್ತರಣೆ ಮಾಡಿದೆ. ಇದರಿಂದ 72 ಲಕ್ಷ ಉದ್ಯೋಗಿಗಳು, 3.67 ಲಕ್ಷ ಉದ್ಯೋಗದಾತ ಕಂಪನಿಗಳಿಗೆ ಅನುಕೂಲವಾಗಲಿದ್ದು, ಒಟ್ಟಾರೆ 4860 ಕೋಟಿ ರು. ಹೊರೆಯಾಗಲಿದೆ.
ಧೋವಲ್ ಮಿಂಚಿನ ಮಾತುಕತೆ: ಗಡಿಯಿಂದ 2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ
ಸರ್ಕಾರಿ ಸ್ವಾಮ್ಯದ ಸಾಮಾನ್ಯ 3 ವಿಮಾ ಕಂಪನಿಗಳಾದ ನ್ಯಾಷನಲ್ ಇನ್ಶೂರೆನ್ಸ್, ಓರಿಯಂಟಲ್ ಇನ್ಶೂರೆನ್ಸ್ ಹಾಗೂ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗಳ ವಿಲೀನ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ. ಈ ಮೂರೂ ವಿಮಾ ಕಂಪನಿಗಳಿಗೆ 12450 ಕೋಟಿ ರು. ಬಂಡವಾಳ ಒದಗಿಸಿ, ಅವುಗಳ ಆರ್ಥಿಕ ಆರೋಗ್ಯ ಸುಧಾರಿಸಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ನಿರ್ಧರಿಸಿದೆ.