ಗೂಗಲ್ ಜೆಮಿನಿ ನ್ಯಾನೋ ಬನಾನಾ ಟ್ರೆಂಡ್‌: ರೆಟ್ರೊ ಬಾಲಿವುಡ್ ಲುಕ್‌ನಲ್ಲಿ ಮಿಂಚಲು ಈ ಪ್ರಾಂಪ್ಟ್‌ಗಳು ಬೆಸ್ಟ್

Published : Sep 15, 2025, 04:24 PM IST
nano banana trend famous prompts

ಸಾರಾಂಶ

ಗೂಗಲ್ ಜೆಮಿನಿ ಎಐನ ನ್ಯಾನೋ ಬನಾನಾ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ವಿಂಟೇಜ್ ಸಾರಿ ಲುಕ್‌ನೊಂದಿಗೆ ಫೋಟೋಗಳನ್ನು ಅದ್ಭುತವಾಗಿ ಎಡಿಟ್ ಮಾಡಲು ಹಲವು ಆಕರ್ಷಕ ಪ್ರಾಂಪ್ಟ್‌ಗಳ ಡಿಟೇಲ್ ಇಲ್ಲಿದೆ ನೋಡಿ…

ಗೂಗಲ್ ಜೆಮಿನಿ ಕೃತಕ ಬುದ್ಧಿಮತ್ತೆ ಅತವಾ ಎಐ ಹೊರತಂದ ನ್ಯಾನೋ ಬನಾನಾ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿದೆ. ಬಹುತೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ನ್ಯಾನೋ ಬನಾನಾ ಟ್ರೆಂಡ್ ನೀಡುತ್ತಿರುವ ಅತ್ಯದ್ಭುತವಾದ ಆಯ್ಕೆಗಳನ್ನು ಬಳಸಿಕೊಂಡು ತಮ್ಮ ಫೋಟೋಗಳನ್ನು ಹೀರೋ/ಹಿರೋಯಿನ್‌ಗಳ ರೇಂಜ್‌ಗೆ ಎಡಿಟ್ ಮಾಡಿ ತಮ್ಮ ಪ್ರೊಫೈಲ್‌ಗಳಲ್ಲಿ ಹಾಕಿ ಖುಷಿ ಪಡುತ್ತಿದ್ದಾರೆ. ಈ ನ್ಯಾನೋ ಬನಾನಾ ಟ್ರೆಂಡ್ ವಿಂಟೇಜ್‌ ಲುಕ್‌ನ ಹೊಸ ಅವಕಾಶಗಳನ್ನು ಕೂಡ ತನ್ನ ಗ್ರಾಹಕರಿಗೆ ನೀಡುತ್ತಿದೆ. ಫೋಟೋಗಳ ಸುಲಭವಾದ ಎಡಿಟಿಂಗ್‌ನಿಂದಾಗಿ ಜನ ಈ ನ್ಯಾನೋ ಬನಾನಾ ಟ್ರೆಂಡ್ ಆಗಿದ್ದು, ಎಲ್ಲರೂ ಇದನ್ನು ಚೆನ್ನಾಗಿ ಬಳಸಿಕೊಂಡು ಫೋಟೋಗಳಲ್ಲಿ ಸೊಗಸಾಗಿ ಕಾಣಿಸುತ್ತಿದ್ದಾರೆ.

ವಿಂಟೇಜ್ ಸಾರಿ ಎಐ ಟ್ರೆಂಡ್ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ವೈರಲ್ ಆಗ್ತಿದ್ದು, ಇದರ ನಿಜವಾದ ಮ್ಯಾಜಿಕ್ ಹಿಂದಿರುವುದು ಅದಕ್ಕೆ ನೀವು ನೀಡುವ ಈ ನ್ಯಾನೋ ಬನಾನಾ ಟ್ರೆಂಡ್‌ನ ಪ್ರಾಂಫ್ಟ್‌ಗಳಾಗಿವೆ. ಈ ಅದ್ಭುತವಾದ ಪ್ರಾಂಫ್ಟ್‌ಗಳು ನೀವು ದಿನನಿತ್ಯ ತೆಗೆಯುವ ಸೆಲ್ಪಿಗೂ ಚಲನಚಿತ್ರದ ಪೋಸ್ಟರ್ ಲುಕ್ ನೀಡಬಹುದು. ಹೀಗಿರುವಾಗಿ ನೀವು ನಿಮ್ಮ ಫೋಟೋಗಳನ್ನು ಈ ರೀತಿ ಬಾಲಿವುಡ್ ಹೀರೋಯಿನ್ ರೀತಿ ವಿಂಟೇಜ್ ಸಾರಿ ಲುಕ್‌ನಲ್ಲಿ ಕಂಗೊಳಿಸುವಂತೆ ಮಾಡುವುದಕ್ಕೆ ಬಯಸಿದ್ದರೆ ಇಲ್ಲಿ ನಿಮಗೆ ಕೆಲವು ಅದ್ಭುತ ಎನಿಸಿದ ನ್ಯಾನೋ ಬನಾನಾ ಟ್ರೆಂಡ್‌ ಒಳಗೊಂಡಿರುವ ಪ್ರಾಂಫ್ಟ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕ್ಲಾಸಿಕ್ ಕಪ್ಪು ಸೀರೆ ಪ್ರಾಂಪ್ಟ್(Classic Black Saree Prompt):

ಈ ಪ್ರಾಂಫ್ಟನ್ನು ಬಳಸಿಕೊಂಡು ನಿಮ್ಮ ಫೋಟೋ ಹಾಕಿ 90ರ ರೆಟ್ರೋದಿಂದ ಪ್ರೇರಿತವಾದ ಭಾವಚಿತ್ರವನ್ನು ನೀವು ತಯಾರಿಸಬಹುದು. ಈ ಫೋಟೋಗೆ ನೀವು ಹೊಳೆಯುವ ಕಪ್ಪು ಚಿಫೋನ್ ಸೀರೆಯನ್ನು ಅಳವಡಿಸಬೇಕು ಫೋಟೋದ ಹಿನ್ನೆಲೆ ನಾಟಕೀಯವಾದ ನೆರಳಿನೊಂದಿಗೆ ಗೋಲ್ಡನ್ ಅವರ್ ಟೋನ್‌ಗಳಿಂದ ಬೆಳಗುತ್ತದೆ. ಈ ಪ್ರಾಂಫ್ಟ್ ಬಳಸಿಕೊಂಡು ನಿಮ್ಮ ಹಾವಭಾವ ಶಾಂತವಾಗಿರುವುದರ ಜೊತೆ ನಿಗೂಢವಾಗಿ ಹಳೆಯ ಬಾಲಿವುಡ್ ಪೋಸ್ಟರ್‌ನ್ನು ಹೋಲುವಂತೆ ಮಾಡುತ್ತದೆ.

ಬಿಳಿ ಪೋಲ್ಕಾ-ಡಾಟ್ ಸೀರೆ ಪ್ರಾಂಪ್ಟ್(White Polka-Dot Saree Prompt):

ಈ ಪ್ರಾಂಫ್ಟ್ ಬಳಸಿ ನೀವು ಮ್ಯಾಚಿಂಗ್ ಬ್ಲೌಸ್ ಧರಿಸಿ ನೈಜವಾದ ಪೋಲ್ಕಾ ಡಾಟ್ ಸಾರಿಯನ್ನು ಧರಿಸಿರುವಂತೆ ಫೋಟೋ ಎಡಿಟ್ ಮಾಡಬಹುದು. ಫೋಟೋದಲ್ಲಿರುವವರ ಕಿವಿ ಪಕ್ಕದಲ್ಲಿ ಮೃದುವಾದ ಪಿಂಕ್ ಬಣ್ಣದ ಹೂವಿದ್ದು, ಬದಿಯಿಂದ ಬರುವ ಬೆಚ್ಚಗಿನ ಬೆಳಕು ಈ ಫೋಟೋಗೆ ಸಿನಿಮೀಯಾ ಲುಕ್ ನೀಡುತ್ತದೆ.

ಕೆಂಪು ಸೀರೆ ಡ್ರಾಮಾ ಪ್ರಾಂಪ್ಟ್(Red Saree Drama Prompt)

ಈ ಆಯ್ಕೆಯನ್ನು ಬಳಸಿಕೊಂಡು ನೀವು ಕ್ಲಾಸಿಕ್ ಬಾಲಿವುಡ್ ಹಿರೋಯಿನ್‌ನಂತೆ ಕೆಂಪು ಬಣ್ನದ ಚಿಪ್ಪನ್ ಸಾರಿಯಲ್ಲಿ ಮಿಂಚಬಹುದಾಗಿದೆ. ಕೂದಲಿಗೆ ಸಾಫ್ಟ್‌ ವೇವಿಲುಕ್ ನೀಡಿದರೆ, ಹಿನ್ನೆಲೆ ಬೆಚ್ಚಗಿನ ಟೋನ್ ಹೊಂದಿರದೆ. ಪ್ರಜ್ವಲಿಸುವ ಸೂರ್ಯಾಸ್ತದ ಬೆಳಕು ಈ ಫೋಟೋಗೆ ರೋಮ್ಯಾಂಟಿಕ್ ಹಾಗೂ ನಾಟಕೀಯ ಲುಕ್ ನೀಡುತ್ತದೆ.

ನೇರಳೆ ಬಣ್ಣದ ಚಿಫನ್ ಪ್ರಾಂಫ್ಟ್‌(Purple Chiffon Prompt)

ಈ ಪ್ರಾಂಪ್ಟ್ ಬಳಸಿಕೊಂಡು ನೀವು 90ರ ದಶಕದ ಹಿರೋಯಿನ್ ಲುಕ್‌ ಅನ್ನು ನಿಮ್ಮ ಫೋಟೋಗಳಿಗೆ ನೀಡಬಹುದಾಗಿದೆ. ಈ ಪ್ರಾಂಫ್ಟ್‌ ನೇರಳೆ ಬಣ್ಣದ ಚಿಫನ್ ಸಾರಿಯನ್ನು ಹೊಂದಿದ್ದು ಮೂಡಿ ವೈಬ್ ನೀಡುತ್ತದೆ. ಇದರಲ್ಲಿ ಹಳೆಯ ಮರದ ಬಾಗಿಲಿನ ಬಳಿ ನಿಂತಿದ್ದರೆ ಗಾಳಿ ಆಕೆಯ ಮುಂಗುರುಳನ್ನು ತಾಕುತ್ತಿರುವಂತೆ ಫೋಟೋ ರೆಡಿಯಾಗುತ್ತದೆ. 90 ರ ದಶಕದ ಸಿನಿಮೀಯ ದೃಶ್ಯವನ್ನು ನಿಮ್ಮ ಪೋಟೋಗೆ ಈ ಆಯ್ಕೆ ನೀಡುತ್ತದೆ.

ಬನರಾಸಿ ಇಲಿಗೆನ್ಸ್ ಪ್ರಾಂಪ್ಟ್(Banarasi Elegance Prompt)

ಈ ಪ್ರಾಂಫ್ಟ್ ತಲೆಗೆ ಹೂ ಮುಡಿದ, ಚಿನ್ನದ ಬಣ್ಣದ ಬನರಾಸಿ ಸೀರೆಯಲ್ಲಿ ಕಂಗೊಳಿಸುವಂತ ಅದ್ಭುತವಾದ ಕಲಾತ್ಮಕವಾದ ಫೋಟೋವನ್ನು ಸೃಷ್ಟಿ ಮಾಡುತ್ತದೆ.

ಬಾಲಿವುಡ್ ಮಳೆಯ ದೃಶ್ಯದ ಪ್ರಾಂಪ್ಟ್(Rainy Bollywood Scene Prompt)

90ರ ದಶಕದ ಮಳೆಯ ದೃಶ್ಯದಲ್ಲಿ ಹಿರೋಯಿನ್ ಇರುವಂತೆ ಈ ಫೋಟೋವನ್ನು ಈ ಪ್ರಾಂಪ್ಟ್ ಮೂಲಕ ಆಯ್ಕೆ ಮಾಡಬಹುದು. ಇದರಲ್ಲಿ ಡಾರ್ಕ್‌ ಬಣ್ಣದ ಸೀರೆ ಒದ್ದೆಯಾಗಿ ಹೊಳೆಯುವಂತೆ ಕಾಣುತ್ತಿದೆ. ಇದರ ಬೆಳಕು ಮೂಡಿ ರೋಮ್ಯಾಂಟಿಕ್ ಆಗಿದೆ. ಇದು ಮಾನ್ಸೂನ್‌ನ ನೋಸ್ಟಲಾಜಿಯಾವನ್ನು ಸೆರೆ ಹಿಡಿಯುತ್ತದೆ.

ಪ್ಯಾಸ್ಟಲ್ ಸೀರೆ ಪಿಕ್ನಿಕ್ ಪ್ರಾಂಪ್ಟ್(Pastel Saree Picnic Prompt)

ಈ ಪ್ರಾಂಫ್ಟ್ ಮೂಲಕ ವಿಂಟೇಜ್ ಪ್ಯಾಸ್ಟಲ್ ಸಾರಿ ತೆಳು ಪಿಂಕ್ ಬಣ್ಣದ ಸೀರೆಯಲ್ಲಿ ತಲೆಕೂದಲನ್ನು ಬನ್ ಮಾಡಿ ಸರಳವಾಗಿ ಜ್ಯುವೆಲ್ಲರಿ ಧರಿಸಿ ಕನಸಿನಂತೆ ಕಾಣುವ ಪಿಕನಿಕ್ ಸೀನರಿಯ ಹುಲ್ಲಿನ ಮೇಲೆ ಕುಳಿತಂತೆ ಇರುವ ಫೋಟೋ ಬರುತ್ತದೆ. ಇದು ನಿಮ್ಮ ಫೋಟೊಗೆ ರೋಮ್ಯಾಂಟಿಕ್ ಮೆರುಗು ನೀಡುವುದು.

ರೆಟ್ರೋ ಫಿಲಂ ಪೋಸ್ಟರ್ ಪ್ರಾಂಫ್ಟ್(Retro Film Poster Prompt)

ಇದು ನಿಮ್ಮನ್ನು 1990ರ ದಶಕದ ಬಾಲಿವುಡ್ ಪೋಸ್ಟರ್ ರೀತಿ ನಿಮ್ಮ ಫೋಟೋವನ್ನು ಕಂಗೊಳಿಸುವಂತೆ ಮಾಡುತ್ತದೆ. ಫೋಟೋದ ಹಿಂದಿರುವ ಬೋಲ್ಡ್ ಅಕ್ಷರಗಳು ಸ್ಪಾಟ್‌ಲೈಟ್ ಬೆಳಕು ಮಿನುಗುವ ಸಾರಿ ಹಾಗೂ ಹಾಗೂ ಹಾವಭಾವ ನಿಮ್ಮ ಫೋಟೋಗೆ ಬೇರೆಯದೇ ಸೊಗಸಾದ ಲುಕ್ ನೀಡುವುದು.

ಇದನ್ನೂ ಓದಿ: ಐಸ್‌ಕ್ರೀಂ ಶಾಪ್‌ಗೆ ನುಗ್ಗಿ ಹೊಟ್ಟೆ ಬಿರಿಯುವಷ್ಟು ಐಸ್‌ಕ್ರೀಂ ತಿಂದು ಅಲ್ಲೇ ನಿದ್ದೆಗೆ ಜಾರಿದ ಕರಡಿ

ಇದನ್ನೂ ಓದಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ: ಕೆಲ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ