
ನವದೆಹಲಿ (ಸೆ.15) ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ ಹಾಗೂ ಪತ್ನಿ ಸಂದೀಪ್ ಕೌರ್ ಬೈಕ್ ಮೂಲಕ ಮನೆಗೆ ಮರಳುತ್ತಿರುವಾಗ ನಡೆದ ಭೀಕರ ಅಪಘಾತ ಹಲವರನ್ನು ಬೆಚ್ಚಿ ಬೀಳಿಸಿದೆ. BMW ಕಾರು ವೇಗವಾಗಿ ಬಂದು ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೈಕ್‌ನಲ್ಲಿದ್ದ ನವಜೋತ್ ಸಿಂಗ್ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಇತ್ತ ಅಧಿಕಾರಿ ಪತ್ನಿ ಸಂದೀಪ್ ಕೌರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತೀ ವೇಗದ ಚಾಲನೆ ಮಾತ್ರವಲ್ಲ, ಇದೀಗ BMW ಕಾರು ಚಲಾಯಿಸುತ್ತಿದ್ದ ಮಹಿಳೆ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ತಕ್ಷಣ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದು ಮಾತ್ರವಲ್ಲ, ಸ್ಥಳೀಯ ಆಸ್ರತ್ರೆ ದಾಖಲಿಸಿ 22 ಕಿಲೋಮೀಟರ್ ದೂರದ ಆಸ್ಪತ್ರೆ ದಾಖಲಿಸಿ ವಿಳಂಬ ಮಾಡಿದ ಆರೋಪ ಕೇಳಿಬಂದಿದೆ. ಖುದ್ದು ಸಂದೀಪ್ ಕೌರ್ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ.
BMW ಕಾರು ಚಲಾಯಿಸುತ್ತಿದ್ದ ಮಹಿಳೆ ಅತೀ ವೇಗವಾಗಿ ಕಾರು ಚಲಾಯಿಸಿದ್ದಾರೆ. ಪಕ್ಕದಲ್ಲಿ ಮಹಿಳೆ ಪತಿಯೂ ಇದ್ದರು. ಅತೀ ವೇಗವಾಗಿ ಬಂದ ಕಾರು ನಾವು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಒಂದು ಕ್ಷಣದಲ್ಲಿ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಪತಿ ನವಜೋತ್ ಸಿಂಗ್ ರಕ್ತದ ಮಡುವಿನಲ್ಲಿದ್ದರು. ನನಗೆ ಗಾಯಗಳಾಗಿತ್ತು. ಆದರೆ ಪ್ರಜ್ಞೆ ಇತ್ತು. ತಕ್ಷಣವೇ ಪತಿಯನ್ನು ಹಾಗೂ ತನ್ನನ್ನು ಪಕ್ಕದ ಆಸ್ಪತ್ರೆಗೆ ದಾಖಲಿಸಲು ಮನವಿ ಮಾಡಿದೆ. ನನಗೆ ಏಳಲು ಸಾಧ್ಯವಾಗುತ್ತಿರಲಿಲ್ಲ. ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆ ದಾಖಲಿಸಲು ಮನವಿ ಮಾಡಿದ್ದೆ. ಆದರೆ BMW ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಪತಿ ವಿಳಂಬ ಮಾಡಿದರು ಎಂದು ಸಂದೀಪ್ ಕೌರ್ ಆರೋಪಿಸಿದ್ದಾರೆ.
ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ
ಹತ್ತಿರದಲ್ಲೇ ಉತ್ತಮ ಆಸ್ಪತ್ರೆಗಳಿತ್ತು. ಆದರೆ BMW ಮಹಿಳೆ 22 ಕಿಲೋಮೀಟರ್ ದೂರದ ಆಸ್ಪತ್ರೆಗೆ ದಾಖಲಿಸಿದ್ದಾರೆ. 22 ಕಿಲೋಮೀಟರ್ ದೆಹಲಿಯಲ್ಲಿ ತೆರಳುವುದು ಹೆಚ್ಚಿನ ಸಮಯ ಬೇಕಿದೆ. ಸಣ್ಣ ಆಸ್ಪತ್ರೆಯಲ್ಲಿ ತಕ್ಷಣದ ಚಿಕಿತ್ಸೆ ಸಿಗಲಿಲ್ಲ. ನನ್ನ ಪತಿಗೆ ಪ್ರಜ್ಞೆ ಇರಲಿಲ್ಲ. ಜೊತೆಗೆ ವಿಳಂಬವಾಗಿದ್ದ ಕಾರಣ ಮೃತಪಟ್ಟಿದ್ದಾರೆ. ಮಹಿಳೆ ಉದ್ದೇಶಪೂರ್ವಕವಾಗಿ ಸಣ್ಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂದೀಪ್ ಕೌರ್ ಆರೋಪಿಸಿದ್ದಾರೆ.
ಆಸ್ಪತ್ರೆ ಸಿಬ್ಬದಿಗಳೂ ನಿರ್ಲಕ್ಷ್ಯ ತೋರಿದ್ದಾರೆ. ತಂದೆ ಸ್ಟ್ರೆಚರ್‌ನಲ್ಲಿ ಮಲಗಿದ್ದರೂ ಭಾರಿ ವಿಳಂಬ ಮಾಡಿದ್ದಾರೆ. ಹಲವು ಹೊತ್ತು ಕಾಯಿಸಿದ್ದಾರೆ. ತುರ್ತು ಚಿಕಿತ್ಸೆಯ ಅಗತ್ಯವಿತ್ತು. ಆದರೆ ನಿರ್ಲಕ್ಷ್ಯ, ವಿಳಂಬ ನೀತಿಯಿಂದ ಪತಿ ಮೃತಪಟ್ಟಿದ್ದಾರೆ. ತಕ್ಷಣದಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುತ್ತಿದ್ದರು ಎಂದು ನವಜೋತ್ ಸಿಂಗ್ ಪುತ್ರ ನವನೂರ್ ಸಿಂಗ್ ಹೇಳಿದ್ದಾರೆ. ಸಣ್ಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಸಣ್ಣತನ ತೋರಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ತಂದೆ ಮೃತಪಟ್ಟಿದ್ದಾರೆ ಎಂದು ನವನೂರ್ ಆರೋಪಿಸಿದ್ದಾರೆ.
ಫ್ಲೈಒವರ್‌ನಿಂದ ಪಲ್ಟಿಯಾಗಿ ರೈಲ್ವೆ ಹಳಿಗೆ ಬಿದ್ದ ಕಾರು: ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ BMW ಕಾರು ಹಲವು ಪಲ್ಟಿಯಾಗಿದೆ. BMW ಕಾರು ಬಹುತೇಕ ನಜ್ಜುಗುಜ್ಜಾಗಿದೆ. ಈ ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ಯಾವುದೇ ಗಾಯವಾಗಿಲ್ಲ. ಆಕೆಯ ಪತಿಗೆ ಗಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ