ರತನ್ ಟಾಟಾ ನಿಧನದ ಬೆನ್ನಲ್ಲೇ ಟಾಟ್ ಗ್ರೂಪ್ಸ್ ಮಹತ್ವದ ಘೋಷಣೆ, 5 ಲಕ್ಷ ಉದ್ಯೋಗ ಸೃಷ್ಟಿ!

By Chethan KumarFirst Published Oct 15, 2024, 1:15 PM IST
Highlights

ರತನ್ ಟಾಟಾ ನಿಧನದ ಬೆನ್ನಲ್ಲೇ ಟಾಟಾ ಸಮೂಹ ಇದೀಗ ಮಹತ್ವದ ಘೋಷಣೆ ಮಾಡಿದೆ. ಮುಂದಿನ 6 ವರ್ಷದಲ್ಲಿ ಭಾರತದಲ್ಲಿ ಬರೋಬ್ಬರಿ 5 ಲಕ್ಷ ಉದ್ಯೋಗ ಸೃಷ್ಟಿಸುತ್ತಿದೆ. ಈ ಮೂಲಕ ಭಾರತೀಯರಿಗೆ ಕೈತುಂಬ ವೇತನ ಜೊತೆಗೆ ಉದ್ಯೋಗವಕಾಶ ನೀಡಲಿದೆ.

ಮುಂಬೈ(ಅ.15) ರತನ್ ಟಾಟಾ ನಿಧನ ಭಾರತೀಯರ ಹೃದಯ ಭಾರವಾಗಿಸಿದೆ. ಟಾಟಾ ಸಮೂಹ ಎಲ್ಲಾ ಕಂಪನಿಗಳು ರತನ್ ಟಾಟಾಗೆ ಗೌರವ ನಮನ ಸಲ್ಲಿಸಿದೆ. ಇಷ್ಟೇ ಅಲ್ಲ ರತನ್ ಟಾಟಾ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿದೆ. ಇದೀಗ ಟಾಟಾ ಗ್ರೂಪ್ ಮಹತ್ವದ ಘೋಷಣೆ ಮಾಡಿದೆ. ಮುಂದಿನ 6 ವರ್ಷದಲ್ಲಿ ಟಾಟಾ ಗ್ರೂಪ್ ಬರೋಬ್ಬರಿ 5 ಲಕ್ಷ ಉದ್ಯೋಗಳನ್ನು ಸೃಷ್ಟಿಸುತ್ತಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಟಾಟಾ ಗ್ರೂಪ್ ಹಂತ ಹಂತವಾಗಿ ಭಾರತೀಯರಿಗೆ ಕೈತುಂಬ ವೇತನದ ಉದ್ಯೋಗ ನೀಡಲಿದೆ.

ಟಾಟಾ ಗ್ರೂಪ್ ಈಗಾಗಲೇ ಸೆಮಿಕಂಡಕ್ಟರ್, ಎಲೆಕ್ಟ್ರಿಕ್ ಬ್ಯಾಟರಿ ಸೇರಿದಂತೆ ಹಲವು ಕೈಗಾರಿಕೋದ್ಯಮದಲ್ಲಿ ಭಾರಿ ಬಂಡವಾಳ ಹೂಡಿಕೆ ಮಾಡಿದೆ. ಹೀಗಾಗಿ ಮುಂದಿನ 6 ವರ್ಷದಲ್ಲಿ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಟಾಟಾ ಸನ್ಸ್ ಮುಖ್ಯಸ್ಥ ಎನ್ ಚಂದ್ರಶೇಖರನ್ ಹೇಳಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ಇಂಡಿಯನ್ ಫೌಂಡೇಷನ್ ಕ್ವಾಲಿಟಿಟ್ ಮ್ಯಾನೇಜ್ಮೆಂಟ್(IFQM) ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ ಚಂದ್ರಶೇಖರನ್, ಭಾರತದಲ್ಲಿ ಉತ್ಪನ್ನಗಳ ಗುಣಮಟ್ಟತೆ, ಜನರ ಬದುಕು ಸುಮಗೊಳಿಸುವ ಕಾರ್ಯಕದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದಿದ್ದಾರೆ.

Latest Videos

ರತನ್ ಟಾಟಾಗೆ ಕುಳ್ಳ ಎಂದು ಕಮೆಂಟ್, ಮಹಿಳೆ ಮೇಲೆ ನೆಟ್ಟಿಗರು ಗರಂ ಆಗುತ್ತಿದ್ದಂತೆ ನೆರವಿಗೆ ಧಾವಿಸಿದ್ದ ಟಾಟಾ!

ಪ್ರತಿ ತಿಂಗಳು ಸುಮಾರು 10 ಲಕ್ಷ ಮಂದಿ ವಿದ್ಯಾಭ್ಯಾಸ, ಕೋರ್ಸ್ ಪೊರೈಸಿ ಉದ್ಯೋಗ ಅರಸುತ್ತಾ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ನಾವು 100 ಮಿಲಿಯನ್ ಉದ್ಯೋಗವನ್ನು ಸೃಷ್ಟಿಸಬೇಕಿದೆ ಎಂದು ಎನ್ ಚಂದ್ರಶೇಖರನ್ ಹೇಳಿದ್ದಾರೆ. ಭಾರತ ಇದೀಗ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಇಷ್ಟೇ ಅಲ್ಲ ಭಾರತ ವಿಶ್ವದ ಮಾನಸಂಪನ್ಮೂಲ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಎನ್ ಚಂದ್ರಶೇಖರನ್ ಹೇಳಿದ್ದಾರೆ.

ಆರ್ಥಿಕವಾಗಿ ಭಾರತ ಸಶಕ್ತವಾಗಲು ನಾವು ಉದ್ಯೋಗ ಸೃಷ್ಟಿ ಮೂಲಕ ಹಾಗೂ ಉದ್ಯೋಗ ನೀಡುವ ಮೂಲಕ ಮೊದಲು ಸಶಕ್ತರಾಗಬೇಕು. ಇದು ಜನರ ಜೀವನ ಮಟ್ಟ ಸುಧಾರಿಸಲಿದೆ. ಇದರಿಂದ ಆರ್ಥಿಕವಾಗಿ ದೇಶ ಬಲಿಷ್ಠಗೊಳ್ಳಲಿದೆ ಎಂದಿದ್ದಾರೆ. ಸದ್ಯ ಭಾರತ ಹಲವು ಕಾರಣಗಳಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.  ಜಾಗತಿಕ ಮಟ್ಟದ ಬೇಡಿಕೆಗೆ ಭಾರತ ಪೂರೈಕೆಯ, ಉತ್ಪಾದನಾ ಕೇಂದ್ರವಾಗಿ ಮಾರ್ಪಡುತ್ತಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸರ್ಕಾರ ಕಳೆದ 10 ವರ್ಷದಲ್ಲಿ ಭಾರತದಲ್ಲಿ ಐಐಟಿ, ಏಮ್ಸ್, ವಿಶ್ವಿವಿದ್ಯಾಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.  ಭಾರತದಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಡಿಜಿಟಲ್ ಇಂಡಿಯಾ ಮೂಲಕ ಭಾರತದ ಚಿತ್ರಣ ಬದಲಿಸಲಾಗಿದೆ. ಯುಪಿಐ ಪಾವತಿ ಸೇರಿದಂತೆ ಹಲವು ಐತಿಹಾಸಿಕ ಮೈಲಿಗಲ್ಲು ಭಾರತದ ಪ್ರಗತಿಗೆ ಪೂರಕವಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರತನ್ ಟಾಟಾ ಕೊನೆಯ ಹುಟ್ಟು ಹಬ್ಬದ ವಿಡಿಯೋ, ಆಚರಣೆಯಲ್ಲಿ ಸರಳತೆ ಮೆರೆದಿದ್ದ ಉದ್ಯಮಿ!

click me!