ರೈಲಲ್ಲಿ ಜೈ ಶ್ರೀರಾಮ್‌ ಘೋಷಣೆ ಪ್ರಶ್ನಿಸಿದ ನಟಿ ಪೂಜಾ ಭಟ್‌ಗೆ ನೆಟ್ಟಿಗರ ಕ್ಲಾಸ್

By Kannadaprabha News  |  First Published Oct 15, 2024, 1:11 PM IST

ನವರಾತ್ರಿಯ ಆಚರಣೆಯ ಭಾಗವಾಗಿ ಮುಂಬೈನ ಮೆಟ್ರೋದಲ್ಲಿ ಜೈಶ್ರೀರಾಮ್ ಘೋಷಣೆ ಮತ್ತು ಗರ್ಬಾ ಹಾಡುಗಳನ್ನು ಹಾಡಿದವರ ವಿರುದ್ಧ ನಟಿ ಪೂಜಾ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಮುಂಬೈ: ನವರಾತ್ರಿಯ ಆಚರಣೆಯ ಭಾಗವಾಗಿ ಮುಂಬೈನ ಮೆಟ್ರೋದಲ್ಲಿ ಜೈಶ್ರೀರಾಮ್ ಘೋಷಣೆ ಮತ್ತು ಗರ್ಬಾ ಹಾಡುಗಳನ್ನು ಹಾಡಿದವರ ವಿರುದ್ಧ ನಟಿ ಪೂಜಾ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಅನುಮತಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಗುಂಪೊಂದು ಜೈಶ್ರೀರಾಮ್‌ ಪಠಿಸುತ್ತಾ, ಗರ್ಬಾ ಹಾಡುಗಳನ್ನು ಹಾಡುತ್ತಿರುವ ದೃಶ್ಯವನ್ನು ನಟಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು. ‘ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಅನುಮತಿಸಲಾಗಿದೆ. ಇದು ಸಾರ್ವಜನಿಕ ಸ್ಥಳದ ದುರುಪಯೋಗ’ ಎಂದು ಬರೆದಿದ್ದಾರೆ. ಇದಕ್ಕೆ ನೆಟ್ಟಿಗರು ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುವಾಗ ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಮಹಾ ಎಲೆಕ್ಷನ್‌ಗೂ ಮುನ್ನ ಶಿಂಧೆ ಗಿಫ್ಟ್‌: ಲಘು ವಾಹನಕ್ಕೆ ಮುಂಬೈ ಪ್ರವೇಶಕ್ಕಿಲ್ಲ ಟೋಲ್‌

Tap to resize

Latest Videos

undefined

ಮುಂಬೈ: ಮುಂಬೈಗೆ ಪ್ರವೇಶಿಸುವ 5 ಟೋಲ್‌ಗಳಲ್ಲಿ ಲಘುವಾಹನಗಳಿಗೆ ಟೋಲ್ ಪಾವತಿ ಮನ್ನಾ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ, ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ರಾಜ್ಯದ ಜನತೆಗೆ ಈ ಬಂಪರ್‌ ಗಿಫ್ಟ್‌ ನೀಡಿದ್ದಾರೆ. ಹೊರ ರಾಜ್ಯಗಳಿಂದ ಮುಂಬೈ ಪ್ರವೇಶಿಸುವ 5 ಟೋಲ್‌ಗಳಲ್ಲಿ ವಿನಾಯಿತಿ ನೀಡಲಾಗಿದೆ. ಈ ಕುರಿತು ಶಿಂಧೆ ಪ್ರತಿಕ್ರಿಯಿಸಿದ್ದು, ಟೋಲ್‌ಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಕಾರಣಕ್ಕೆ ವಾಹನ ಸವಾರರು ಈ ರೀತಿ ಬೇಡಿಕೆಯನ್ನಿಟ್ಟಿದ್ದರು. ಅದರಂತೆ ಟೋಲ್ ಶುಲ್ಕ ಮನ್ನಾ ಮಾಡಲಾಗಿದೆ’ ಎಂದರು. ಇದರಿಂದ ನಿತ್ಯ ಮುಂಬೈ ಪ್ರವೇಶಿಸುವ 2.8 ಲಕ್ಷ ವಾಹನ ಸವಾರರಿಗೆ ಲಾಭವಾಗಲಿದೆ. ಮಹಾರಾಷ್ಟ್ರದಲ್ಲಿ ಇದೇ ವರ್ಷ ಚುನಾವಣೆ ನಡೆಯಲಿದ್ದು, ದಿನಾಂಕ ಘೋಷಣೆಗೆ ದಿನ ಬಾಕಿಯಿರುವಾಗ ಶಿಂಧೆ ಸರ್ಕಾರ ಈ ಆದೇಶ ಹೊರಡಿಸಿದೆ.

ಆತ್ಮತೃಪ್ತಿಗಾಗಿ ಪುತ್ರಿ ಪೂಜಾ ದೇಹವನ್ನೇ ಬಳಸಿಕೊಂಡ್ರಾ ಮಹೇಶ್​ ಭಟ್​? ನಟಿ ಹೇಳಿದ್ದೇನು?

click me!