ಚಿನ್ನ ಕಳ್ಳಸಾಗಣೆ ಕೇಸ್: ಇಡಿ ವಿರುದ್ಧ ನ್ಯಾಯಾಂಗ ತನಿಖೆಗೆ ಕೇರಳ ನಿರ್ಧಾರ!

By Suvarna NewsFirst Published Mar 27, 2021, 9:53 AM IST
Highlights

ಚಿನ್ನ ಕಳ್ಳಸಾಗಣೆ ಕೇಸಲ್ಲ ಸಿಎಂ ಸಿಲುಕಿಸಲು ಯತ್ನದ ಆರೋಪ| ಚಿನ್ನ ಕಳ್ಳಸಾಗಣೆ ಕೇಸ್: ಇಡಿ ವಿರುದ್ಧ ನ್ಯಾಯಾಂಗ ತನಿಖೆಗೆ ಕೇರಳ ನಿರ್ಧಾರ!

ತಿರುವನಂತಪುರ(ಮಾ.27): ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಚಿನ್ನ ಮತ್ತು ಡಾಲರ್‌ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ವಿರುದ್ಧವೇ ನ್ಯಾಯಾಂಗ ತನಿಖೆ ನಡೆಸಲು ಕೇರಳ ಸರ್ಕಾರ ನಿರ್ಧರಿಸಿದೆ. ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಚಿನ್ನ ಸ್ಮಗ್ಲಿಂಗ್‌ನಲ್ಲಿ ಕೇರಳದ ಸಿಎಂ ಭಾಗಿ, ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ!

ಆದರೆ ಸದ್ಯ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಚುನಾವಣಾ ಆಯೋಗದ ಅನುಮತಿ ಪಡೆದು, ಬಳಿಕ ತನಿಖೆಗೆ ನ್ಯಾಯಾಂಗ ಆಯೋಗ ರಚಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಚಿನ್ನ ಮತ್ತು ಡಾಲರ್‌ ಕಳ್ಳಸಾಗಣೆ ಪ್ರಕರಣದ ಪ್ರಮುಖ ರೂವಾರಿ ಸ್ವಪ್ನಾ ಸುರೇಶ್‌ ಅವರ ಆಡಿಯೋ ಹೇಳಿಕೆಯೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಅದರಲ್ಲಿ ಪ್ರಕರಣದಲ್ಲಿ ಸಿಎಂ ವಿಜಯನ್‌ ಅವರನ್ನು ಸಿಲುಕಿಸುವಂತೆ ಇಡಿ ಅಧಿಕಾರಿಗಳು ತಮಗೆ ಬಲವಂತ ಮಾಡಿದ್ದರು ಎಂದು ಹೇಳಿದ್ದರು.

ಚಿನ್ನ ಕಳ್ಳ ಸಾಗಣೆ ಕೇಸ್‌: ಕೇರಳ ಸಿಎಂ ಪಿಣರಾಯಿಗೆ ಉರುಳು?

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪೊಲೀಸರು ಇಡಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಅದಾದ ಬೆನ್ನಲ್ಲೇ ಇದೀಗ ಇಡಿ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.

click me!