ಧರ್ಮ, ಭಾಷೆ, ಸಂಸ್ಕೃತಿ ಹೆಸರಲ್ಲಿ ಸಮಾಜ ವಿಭಜನೆ: ಮಾಜಿ ಪ್ರಧಾನಿ ಸಿಂಗ್!‌

By Kannadaprabha NewsFirst Published Mar 27, 2021, 8:40 AM IST
Highlights

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸರ್ಕಾರವನ್ನು ಆಯ್ಕೆ ಮಾಡಿ| ಧರ್ಮ, ಭಾಷೆ, ಸಂಸ್ಕೃತಿ  ಹೆಸರಲ್ಲಿ ಸಮಾಜ ವಿಭಜನೆ: ಮಾಜಿ ಪ್ರಧಾನಿ ಸಿಂಗ್!‌

ನವದೆಹಲಿ(ಮಾ.27): ಸಮಾಜವನ್ನು ಧರ್ಮ, ಸಂಸ್ಕೃತಿ, ಭಾಷೆಯ ಆಧಾರದಲ್ಲಿ ವಿಭಜಿಸಲಾಗುತ್ತಿದೆ. ಆದರೆ ಅಂಥವರನ್ನು ಬದಿಗೊತ್ತಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸರ್ಕಾರವನ್ನು ಆಯ್ಕೆ ಮಾಡಿ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಶುಕ್ರವಾರ ಜನರಲ್ಲಿ ಮನವಿ ಮಾಡಿದರು.

ಅಸ್ಸಾಂ ವಿಧಾನಸಭಾ ಚುನಾವಣೆಯ ಸ್ಟಾರ್‌ ಪ್ರಚಾರಕರಾಗಿರುವ ಸಿಂಗ್‌ ಕೋವಿಡ್‌ ಹಿನ್ನೆಲೆಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನ ಮಾಡುವುದಿಲ್ಲ. ಯೋಚಿಸಿ ನಿಮ್ಮ ಮತ ಚಲಾಯಿಸಿ. ನಿಮ್ಮ ಮತ್ತು ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ.

ಸಿಂಗ್‌ 1991ರಿಂದ 2019ರ ವರೆಗೆ 28 ವರ್ಷಗಳ ಕಾಲ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

click me!