ತುಂಬಿ ಹರಿಯೋ ಹೊಳೆ ದಾಟೋ ಸ್ಮಾರ್ಟ್ ಮೇಕೆ video viral

Published : Jul 12, 2022, 10:39 AM ISTUpdated : Jul 12, 2022, 10:44 AM IST
ತುಂಬಿ ಹರಿಯೋ ಹೊಳೆ ದಾಟೋ ಸ್ಮಾರ್ಟ್ ಮೇಕೆ video viral

ಸಾರಾಂಶ

ಮೇಯಲು ಹೋದ ಮೇಕೆಗಳು ತುಂಬಿ ಹರಿಯುತ್ತಿರುವ ಹೊಳೆ ದಾಟುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಹೇಳಿ ಕೇಳಿ ಇದು ಮಳೆಗಾಲ ದೇಶಾದ್ಯಂತ ಎಲ್ಲೆಡೆ ಬಾನಿಗೆ ತೂತು ಬಿದ್ದಂತೆ ಮಳೆ ಸುರಿಯುತ್ತಿದ್ದು, ನದಿ ತೊರೆ ಜಲಪಾತಗಳು ಉಕ್ಕಿ ಹರಿಯುತ್ತಿವೆ. ತೀವ್ರವಾದ ಮಳೆಯಿಂದಾಗಿ ಜನ ಮನೆಯಿಂದ ಹೊರಬರಲಾಗದೇ ಪರದಾಡುತ್ತಿದ್ದಾರೆ. ನಗರಗಳ ಜನ ಮಳೆ ಎಂದು ಮನೆಯಲ್ಲಿ ಕೂರಬಹುದು. ಆದರೆ ಹಳ್ಳಿಗಳ ಕಡೆ ಜೀವನೋಪಾಯಕ್ಕಾಗಿ ಹಸು ಕರು ಆಡು ಮೇಕೆಗಳನ್ನು ಸಾಕುತ್ತಿರುವವರಿಗೆ ಮಳೆಗಾಲದಲ್ಲಿ ಇವುಗಳನ್ನು ಸಾಕುವುದು ಕಷ್ಟದ ಕೆಲಸ. ಮಳೆ ಧೋ ಎಂದು ಸುರಿಯುತ್ತಿದ್ದರು ಇವುಗಳ ಹೊಟ್ಟೆ ತುಂಬಿಸಲೇಬೇಕು. ಈ ಮಧ್ಯೆ ಮೇಯಲು ಹೋದ ಮೇಕೆಗಳು ತುಂಬಿ ಹರಿಯುತ್ತಿರುವ ಹೊಳೆ ದಾಟುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಮೇಕೆಗಳು ಒಂದಾದ ನಂತರ ಒಂದರಂತೆ ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿವೆ. ಹೊಳೆಯ ಮಧ್ಯೆ ಚೆಕ್‌ ಡ್ಯಾಂಗಳ ಫಿಲ್ಲರ್‌ಗಳಂತೆ ಕಾಣುವ ಕಂಬಗಳು ಕಾಣುತ್ತಿದ್ದು, ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಒಂದೊಂದೆ ಮೇಕೆಗಳು ಹಾರುವ ಮೂಲಕ ದೊಡ್ಡದಾದ ಹೊಳೆಯನ್ನು ಅನಾಯಾಸವಾಗಿ ದಾಟುತ್ತಿವೆ. ಐಎಎಸ್‌ ಅಧಿಕಾರಿ ದೀಪಾಂಶು ಕಬ್ರಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬೇರೆಯವರ ಸ್ಥಾನವನ್ನು ನೋಡುತ್ತಾ ನೀವು ಬದುಕಿನಲ್ಲಿ ಮುಂದೆ ಬರಬಹುದು ಎಂದು ಬರೆದು 15 ಸೆಕೆಂಡುಗಳ ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ 16,000ಕ್ಕೂ ಹೆಚ್ಚು ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಉದ್ಘಾಟನೆ ಟೈಮ್ ನಲ್ಲೇ ಮುರಿದು ಬಿದ್ದ ಸೇತುವೆ, ಪತ್ನಿಯೊಂದಿಗೆ ಮೋರಿಗೆ ಬಿದ್ದ ಮೇಯರ್!


ಈ ವಿಡಿಯೋದಿಂದ ನೋಡುಗರು ಸ್ಫೂರ್ತಿ ಪಡೆದಿದ್ದು, ನೀವು ಈಗಿರುವುದಕ್ಕಿಂತ ಉನ್ನತ ಸ್ಥಾನಕ್ಕೆ ಏರಬೇಕಾದರೆ, ಅಥವಾ ಇನ್ನೆಲ್ಲೋ ತಲುಪಬೇಕಾದರೆ ಪ್ರಸ್ತುತ ಈಗಿರುವ ಜಾಗವನ್ನು ಬಿಟ್ಟು ಬರಬೇಕು ಎಂದು ಒಬ್ಬರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ವಿಶೇಷವಾಗಿ ಕಾರ್ಪೋರೇಟ್ ಸಂಸ್ಥೆಯಲ್ಲಿ ಮುಂದೆ ಬರಲು ಸರಿಯಾದ ಮಾರ್ಗವಿದು. ನಿಮ್ಮ ತಂಡದ ಸದಸ್ಯರಿಗೂ ಮುಂದೆ ಬರಲು ತರಬೇತಿ ನೀಡಿ, ಜೊತೆಗೆ ನಿಮ್ಮ ನಾಯಕತ್ವದ ಗುಣಗಳನ್ನು ಕೂಡ ಬೆಳೆಸಿಕೊಳ್ಳಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

 

19 ಇಂಚಿನ ಕಿವಿಯೊಂದಿಗೆ ಜನಿಸಿದ ಮೇಕೆ ಮರಿ
ಕೆಲ ದಿನಗಳ ಹಿಂದೆ ಪಾಕಿಸ್ತಾನದಲ್ಲಿ 19 ಇಂಚಿನ ಕಿವಿಯೊಂದಿಗೆ ಮೇಲಕೆ ಮರಿ ಜನಿಸಿತ್ತು ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸಾಮಾನ್ಯವಾಗಿ ಪುಟ್ಟ ಮೇಕೆ ಮರಿಯ ಕಿವಿಯ ಅಂದಾಜು ಉದ್ದ ಹೆಚ್ಚೆಂದರೆ ಎರಡು ಇಂಚು. ಆದರೆ ಪಾಕಿಸ್ತಾನದಲ್ಲಿ ಮೇಕೆಯೊಂದು 19 ಇಂಚು ಉದ್ದದ ಕಿವಿಯೊಂದಿಗೆ ಜನಿಸಿತ್ತು. ಅಲ್ಲದೇ ಈಗ ಅದು ತನ್ನ ಕಿವಿಯ ಗಾತ್ರದಿಂದಲೇ ಗಿನ್ನೆಸ್ ಪುಟ ಸೇರಿದೆ. ಸಿಂಬಾ ಹೆಸರಿನ ಈ ಮೇಕೆ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದೆ. ಇದರ ಕಿವಿಗಳು  9 ಇಂಚು ಉದ್ದವಿದ್ದು, ಕಿವಿಯಿಂದಲೇ ಇದು ನೋಡುಗರ ಆಕರ್ಷಣೆಗೆ ಪಾತ್ರವಾಗಿದೆ. ಸ್ಥಳೀಯ ಮಟ್ಟದಲ್ಲಿ ಇದು ಸೆಲೆಬ್ರಿಟಿಯಾಗಿದ್ದು, ದೂರ ದೂರದ ಹಳ್ಳಿಯ ಜನ ಈ ಮೇಕೆ ಮರಿಯನ್ನು ನೋಡಲು ಆಗಮಿಸಿದ್ದರು.

ಅಬ್ಬ ಬದುಕಿದೆ... ಕಾಡಿಗೆ ಬಿಡುತ್ತಿದಂತೆ ಎದ್ನೋಬಿದ್ನೋ ಎಂದು ಓಡಿದ ಚೀತಾ... ವಿಡಿಯೋ

ಕೆಲವು ವಾರಗಳ ಪ್ರಾಯದ ಈ ಆಡು ಮರಿ ಸಾಮಾನ್ಯವಾಗಿ ಉದ್ದ ಕಿವಿಗಳಿಗೆ ಹೆಸರಾದ ನ್ಯುಬಿಯನ್‌ ತಳಿಯ ಮೇಕೆಯಾಗಿದೆ. ಅವುಗಳ ಕಿವಿಗಳು ಬೇಸಿಗೆ ಕಾಲದ ಸೆಖೆಯ ದಾಹವನ್ನು ತಡೆಯಲು ಪೂರಕವಾಗಿ ರಚಿಸಲ್ಪಟ್ಟಿವೆ. ಆದರೆ ಸಿಂಬಾ ಈಗ ತನ್ನ ಕಿವಿಗಳ ಗಾತ್ರದಿಂದಲೇ ಗಿನ್ನೆಸ್ ಪುಟ ಸೇರಿದೆ. ಮೇಕೆ ಮರಿಇಷ್ಟು ಉದ್ದವಾದ ಕಿವಿಗಳೊಂದಿಗೆ ಸಿಂಬಾ (Simba) ಜನಿಸಿದಾಗ ಅದರ ಮಾಲೀಕ ಮುಹಮ್ಮದ್ ಹಸನ್ ನರೇಜೋ ಆಘಾತಕ್ಕೊಳಗಾದರು. ಸಿಂಬಾ ಕಿವಿಗಳು ಎಷ್ಟು ಉದ್ದವಾಗಿವೆ ಎಂದರೆ ಅದು ನಡೆಯುವಾಗ ಕಿವಿಗಳು ನೆಲದ ಮೇಲೆ ಎಳೆಯಲ್ಪಡುತ್ತವೆ. ಅಲ್ಲದೇ ಅವುಗಳು ಅದರ ಮುಖದ ಎರಡೂ ಬದಿಗಳಲ್ಲಿ ತೂಗಾಡುತ್ತಿದ್ದು, ಗಾಳಿಗೆ ಅತ್ತಿತ್ತ ಹಾರಾಡುತ್ತವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು