ಏನಿದು ವಿಚಿತ್ರ... ಮನುಷ್ಯರನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

Suvarna News   | Asianet News
Published : Dec 28, 2021, 01:32 PM ISTUpdated : Dec 28, 2021, 01:38 PM IST
ಏನಿದು ವಿಚಿತ್ರ... ಮನುಷ್ಯರನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

ಸಾರಾಂಶ

ಮನುಷ್ಯರನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ ಅಸ್ಸಾಂನ ಕಛರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆ

ಅಸ್ಸಾಂ(ಡಿ. 28): ಆಡೊಂದು ಮಗುವನ್ನು ಹೋಲುವ ಮರಿಗೆ ಜನ್ಮ ನೀಡಿದ ವಿಲಕ್ಷಣ ಘಟನೆ ಅಸ್ಸಾಂ (Assam)ನಲ್ಲಿ ನಡೆದಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಅಸ್ಸಾಂನ ಕಛರ್ (Cachar) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು. ಮೇಕೆಯ ಮರಿಯೂ ಮನುಷ್ಯರ ಮಗುವಿನಂತೆ ಇದೆ. ಇದು ಸ್ಥಳೀಯ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಸ್ಸಾಂನ ಧೋಲೈ ( Dholai)ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಂಗಾಪುರ (Gangapur) ಗ್ರಾಮದಲ್ಲಿಈ ಘಟನೆ ನಡೆದಿದ್ದು,  ಮೇಕೆಯ ಮರಿಯೂ ಮಗುವನ್ನು ಹೋಲುವಂತಿದೆ.  ಮೇಕೆ ಮರಿಯ ಕಣ್ಣು ಮೂಗು ಹಾಗೂ ಬಾಯಿ ಮನುಷ್ಯರನ್ನು ಹೋಲುವಂತಿದೆ. ಇದರ ಕಿವಿ ಮೇಕೆಯಂತೆ ಇದ್ದು, ಮುಂಭಾಗದ ಎರಡು ಕಾಲುಗಳನ್ನಷ್ಟೇ ಇದು ಹೊಂದಿದೆ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಈ ವಿಸ್ಮಯವನ್ನು ನೋಡಲು ಗ್ರಾಮಕ್ಕೆ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. 

ಈ ಹಿಂದೆ ಗುಜರಾತ್‍ನ ಸಾಂಗ್ದ್ (Sangd) ತಾಲೂಕಿನ ತಾಪಿ ನದಿ (Tapi River) ಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ಇದೇ ರೀತಿ ಮನುಷ್ಯನ ಹೋಲಿಕೆ ಇರುವ ಮರಿಗೆ ಮೇಕೆಯೊಂದು ಜನ್ಮ ನೀಡಿತ್ತು. ವಿಚಿತ್ರ ಎಂದರೆ ಈ ಮೇಕೆ ಮರಿಗೆ ನಾಲ್ಕು ಕಾಲು ಹಾಗೂ ಎರಡು ಕಿವಿಗಳಿತ್ತು ಮತ್ತು ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯನನ್ನು ಹೋಲುವಂತಿತ್ತು. ಆದರೆ ಈ ಮೇಕೆ ಜನಿಸಿದ ಹತ್ತು ನಿಮಿಷದ ನಂತರ ಸಾವನ್ನಪ್ಪಿತ್ತು. 

ಮೇಕೆ ಜೊತೆ ಸೆಲ್ಫಿ, ಚೆಲುವೆಯ ಫಜೀತಿ..! ವಿಡಿಯೋ ಸಖತ್ ಫನ್ನಿ.! 

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋ ಮೇಕೆ ಹಾಲು

ನಿರಂತರವಾಗಿ ಬೀಸುತ್ತಿರುವ ಕೊರೋನಾ ಅಲೆಯಿಂದ ಎಲ್ಲರೂ ಕಂಗೆಟ್ಟಿದ್ದಾರೆ. ಈ ಸಾಂಕ್ರಾಮಿಕ ರೋಗದ (pandemic) ವಿರುದ್ಧ ಹೋರಾಡಲು, ಜನರು ಕೊರೊನಾ ಶಿಷ್ಟಾಚಾರವನ್ನು ಅನುಸರಿಸಬೇಕು ಮತ್ತು ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗಮನ ಹರಿಸಬೇಕು ಎಂದು ವೈದ್ಯರು ಹೇಳುತ್ತಾರೆ. ವೈದ್ಯರ ಪ್ರಕಾರ, ಮೇಕೆಯ ಹಾಲು (Goat Milk) ಅಂತಹ ಪ್ರಯೋಜನಕಾರಿ ಉತ್ಪನ್ನಗಳಲ್ಲಿ ಒಂದಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಡೆಂಗ್ಯೂ-ಕೊರೊನಾದಂತಹ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. 

ಕಾನ್ಪುರದ ಚಂದ್ರಶೇಖರ್ ಆಜಾದ್ ಕೃಷಿ ವಿಶ್ವವಿದ್ಯಾಲಯದ ಡಾ. ಚಂದ್ರಕೇಶ್ ರೈ ಅವರು ಕೊರೊನಾ ವೈರಸ್ ನಿಂದ  ರಕ್ಷಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೇಕೆಯ ಹಾಲನ್ನು ಕುಡಿಯುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಪ್ರತಿದಿನ ಊಟದ ನಂತರ 240 ಗ್ರಾಂ ಮೇಕೆಹಾಲು ಕುಡಿಯಲು ಪ್ರಾರಂಭಿಸಿದರೆ ಜನರ ರೋಗ ನಿರೋಧಕ ಶಕ್ತಿಯಲ್ಲಿ (immunity power)  ಗಮನಾರ್ಹ ಹೆಚ್ಚಳವಾಗಬಹುದು. ಇಂದು ಮೇಕೆಯ ಹಾಲಿನ ಇಂತಹ 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಸುತ್ತೇವೆ. 

Goat Milk : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋ ಮೇಕೆ ಹಾಲು

ಮೇಕೆಯ ಹಾಲಿನಲ್ಲಿ  ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದರಿಂದ ಮೇಕೆಯ ಹಾಲು  ಸೇವನೆಯಿಂದ ದೇಹದ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿ ಕೆಲವು ಪ್ರಮಾಣದ ಮೆಗ್ನೀಶಿಯಂ ಮತ್ತು ರಂಜಕವೂ ಇದೆ. ಮೂಳೆಗಳನ್ನು ಆರೋಗ್ಯಕರವಾಗಿಡಲು ರಂಜಕ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಒಟ್ಟಿಗೆ ಕೆಲಸ ಮಾಡುತ್ತದೆ. ಇದು ಒಬ್ಬ ವ್ಯಕ್ತಿಯನ್ನು  ಫಿಟ್ ಮಾಡುತ್ತದೆ. 

ಮೇಕೆಯ ಹಾಲಿನಲ್ಲಿ ಹಸು ಮತ್ತು ಎಮ್ಮೆಗಿಂತ ಕಡಿಮೆ ಲ್ಯಾಕ್ಟೋಸ್ (lactose) ಇದೆ. ಅದರ ಹಾಲಿನಲ್ಲಿ ಕಂಡುಬರುವ ಪ್ರೋಟೀನ್ ಹಸುವಿನ ಹಾಲು ಮತ್ತು ಅದರ ಉತ್ಪನ್ನಗಳಿಗಿಂತ ಜೀರ್ಣಿಸಿಕೊಳ್ಳಲು ಸುಲಭ. ಇದರಿಂದ ಮೇಕೆಯ ಹಾಲಿನಿಂದ ಹೊಟ್ಟೆ ಆರೋಗ್ಯಕರ ಮತ್ತು ಸ್ವಚ್ಛವಾಗಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ರೋಗಗಳಿಂದ ಮುಕ್ತರಾಗಿರುವಿರಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು