ನವದೆಹಲಿ(ಡಿ. 28): ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರ ಇಂದು ಒಂದೇ ದಿನ ಎರಡು ರೀತಿಯ ಲಸಿಕೆ ಹಾಗೂ ವೈರಾಣು ವಿರೋಧಿ ಔಷಧಿಯ ಬಳಕೆಗೆ ಅನುಮತಿ ನೀಡಿದೆ. ಕೊರ್ಬೆವ್ಯಾಕ್ಸ್ ( CORBEVAX) ಹಾಗೂ ಕೊವೊವ್ಯಾಕ್ಸ್ (COVOVAX) ಹೆಸರಿನ ಹೊಸ ಲಸಿಕೆ ಹಾಗೂ ಮೊಲ್ನುಪಿರವಿರ್ ( Molnupiravir) ಹೆಸರಿನ ವೈರಾಣು ವಿರೋಧಿ ಔಷಧಿಯೂ ಪ್ರಸ್ತುತ ಕೇಂದ್ರ ಸರ್ಕಾರ ಅನುಮತಿ ನೀಡಿದ ಲಸಿಕೆಗಳು ಹಾಗೂ ಔಷಧಿಯಾಗಿದೆ.
CORBEVAX ಲಸಿಕೆಯೂ ಭಾರತದಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಿದ (RBD)ಆರ್‌ಬಿಡಿ ಪ್ರೊಟೀನ್ ಉಪ-ಘಟಕ ಹೊಂದಿರುವ ಮೊದಲ ಲಸಿಕೆಯಾಗಿದೆ. ಹಾಗೂ ಇದು ಕೋವಿಡ್ 19 (COVID-19) ವಿರುದ್ಧ ಭಾರತದಲ್ಲಿ ಅಭಿವೃದ್ಧಿಪಡಿಸಿದ ಮೂರನೇ ಲಸಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವ (Union Health Minister) ಮನ್ಸುಖ್ ಮಾಂಡವಿಯಾ (Mansukh Mandaviya) ಹೇಳಿದ್ದಾರೆ. ಇದನ್ನು ಹೈದರಾಬಾದ್ ಮೂಲದ ಬಯೋಲಾಜಿಕಲ್ -ಇ ( Biological-E) ಸಂಸ್ಥೆ ತಯಾರಿಸಿದೆ. ಹಾಗೆಯೇ ನ್ಯಾನೊಪರ್ಟಿಕಲ್ ಲಸಿಕೆ, ಕೊವೊವ್ಯಾಕ್ಸ್ (COVOVAX) ಅನ್ನು ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) ತಯಾರಿಸಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಇನ್ನು ಆಂಟಿವೈರಲ್ ಡ್ರಗ್ ಮೊಲ್ನುಪಿರವಿರ್ ಅನ್ನು ಕೂಡ ಈಗ ದೇಶದಲ್ಲಿ 13 ಫಾರ್ಮಾ ಕಂಪನಿಗಳು ತಯಾರಿಸುತ್ತಿದ್ದು, ಕೋವಿಡ್ 19 ಹೊಂದಿರುದ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಹಾಗೂ ಸೋಂಕಿನ ತೀವ್ರತರ ಏರಿಕೆಯಾದಂತಹ ಸಂದರ್ಭದಲ್ಲಿ ಮಾತ್ರ ಇದರ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದರು.
Modi Addresses Nation: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್!
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ತಲೆನೋವು ಕೊಡಲಾರಂಭಿಸಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ಹೊಸ ವರ್ಷಾಚರಣೆ ಮತ್ತೊಂದು ಹೊಸ ಅಲೆಗೆ ಕಾರಣವಾಗುತ್ತಾ ಎಂಬ ಭೀತಿ ಹುಟ್ಟಿಕೊಂಡಿದೆ. ಈಗಾಗಲೇ ಕರ್ನಾಟಕ ಸೇರಿ ಅನೇಕ ರಾಜ್ಯಗಳು ನ್ಯೂ ಇಯರ್ ಆಚರಣೆಗೆ ಬ್ರೇಕ್ ಹಾಕಿವೆ. ಹೀಗಿರುವಾಗ ಎರಡು ದಿನಗಳ ಹಿಂದಷ್ಟೇ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ಆರಂಭಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದರು. ನಮ್ಮ ರಕ್ಷಣೆಯೇ ಕೊರೋನಾ ವಿರುದ್ಧದ ಮೊದಲ ಅಸ್ತ್ರ. ಅಲ್ಲದೇ ಈ ಹೋರಾಟದಲ್ಲಿ ಎರಡನೇ ಪ್ರಮುಖ ಅಸ್ತ್ರವಾದ ಲಸಿಕೆಯನ್ನೂ ಎಲ್ಲರೂ ಪಡೆಯಬೇಕು ಎಂದು ಮೋದಿ ಹೇಳಿದ್ದರು.
ಈಗಾಗಲೇ ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲು ಭಾಗ ಲಸಿಕೆ ನೀಡಿದ್ದೇವೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಹಾಗೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ ಆಗಿದೆ. ಹನ್ನೊಂದು ತಿಂಗಳಿನಿಂದ ನಡೆಯುತ್ತಿರುವ ಲಸಿಕಾ ಅಭಿಯಾನದಡಿ ದೇಶದ ಶೇ. 90ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ದೇಶದಲ್ಲಿ ಲಸಿಕೆ ಆರಂಭವಾಗಲಿದೆ. 2022ರ ಜನವರಿ 3, ಸೋಮವಾರದಿಂದ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಪ್ರಧಾನಿ ಹೇಳಿದ್ದರು.
Omicron Cases In India: ಒಮಿಕ್ರೋನ್ ಸೋಂಕಿತರಲ್ಲಿ ಶೇ.91 ಜನ ಲಸಿಕೆ ಪಡೆದವರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ