Congress Flag Falls Off: ಸಂಸ್ಥಾಪನಾ ದಿನದಂದೇ ಕೆಳಗೆ ಬಿದ್ದ ಕಾಂಗ್ರೆಸ್‌ ಧ್ವಜ

Suvarna News   | Asianet News
Published : Dec 28, 2021, 10:38 AM ISTUpdated : Dec 28, 2021, 11:15 AM IST
Congress Flag Falls Off: ಸಂಸ್ಥಾಪನಾ ದಿನದಂದೇ ಕೆಳಗೆ ಬಿದ್ದ ಕಾಂಗ್ರೆಸ್‌ ಧ್ವಜ

ಸಾರಾಂಶ

ಸಂಸ್ಥಾಪನಾ ದಿನದಂದೇ ಕೆಳಗೆ ಬಿದ್ದ ಕಾಂಗ್ರೆಸ್‌ ಪಕ್ಷದ ಧ್ವಜ ನವದೆಹಲಿಯಲ್ಲಿ ಪಕ್ಷದ  137ನೇ ಸಂಸ್ಥಾಪನಾ ದಿನಾಚರಣೆ ವೇಳೆ ಘಟನೆ ಧ್ವಜರೋಹಣ ಮಾಡುತ್ತಿದ್ದ ಸೋನಿಯಾ ಗಾಂಧಿ ಮೇಲೆಯೇ ಬಿದ್ದ ಧ್ವಜ

ನವದೆಹಲಿ(ಡಿ.28): ಪಕ್ಷದ 137ನೇ ಸಂಸ್ಥಾಪನಾ ದಿನದಂದೇ ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಹಾರಿಸಿದ ಪಕ್ಷದ ಧ್ವಜ ಕೆಳಗೆ ಬಿದ್ದಂತಹ ಘಟನೆ ನಡೆದಿದೆ. ಇಂದು ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಪಕ್ಷದ  137ನೇ ಸಂಸ್ಥಾಪಕ ದಿನವಾಗಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಯವರು ಧ್ವಜ ಹಾರಿಸಲು ಹಗ್ಗವನ್ನು ಎಳೆಯುತ್ತಿದ್ದಂತೆ ಅವರ ಮೇಲೆಯೇ ಪಕ್ಷದ ಧ್ವಜ ಬಿದ್ದು ಮುಜುಗರ ಪಡುವ ಸ್ಥಿತಿ ನಿರ್ಮಾಣವಾಗಿತ್ತು. 

ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಭಾರಿ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ.  ಅಲ್ಲದೇ ಕೆಲವೇ ತಿಂಗಳುಗಳಲ್ಲಿ ಗೋವಾ, ಪಂಜಾಬ್‌, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲ್ಲಿದ್ದು ಅಲ್ಲಿ ಉತ್ತಮ ಪ್ರದರ್ಶನ ನೀಡುವ ಹುರುಪಿನಲ್ಲಿದೆ. ಈ ಮಧ್ಯೆ ಹೀಗೆ ಸಂಸ್ಥಾಪನಾ ದಿನದಂದೇ ಧ್ವಜ ಬಿದ್ದಿರುವುದು ಕಾಂಗ್ರೆಸ್‌ನ ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿಯೇ ಎಂಬ ಪ್ರಶ್ನೆ ಮೂಡಿದೆ. 

P Chidambaram : ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ! 

ಪ್ರಸ್ತುತ, ಕಾಂಗ್ರೆಸ್ ಅಧಿಕಾರದಲ್ಲಿರುವ ಎರಡು ಪ್ರಮುಖ ರಾಜ್ಯಗಳಾದ ಪಂಜಾಬ್ ಮತ್ತು ಛತ್ತೀಸ್‌ಗಢದಲ್ಲಿ ಪಕ್ಷದಲ್ಲೇ ಗುಂಪುಗಾರಿಕೆಯನ್ನು ಎದುರಿಸುತ್ತಿದೆ. ಪಂಜಾಬ್‌ನಲ್ಲಿ, ಪಕ್ಷದೊಳಗಿನ ಆಂತರಿಕ ಸಂಘರ್ಷದಿಂದಾಗಿ ಈ ಹಿಂದೆ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. (ನಂತರ ಚರಣ್‌ ಜಿತ್ ಸಿಂಗ್ ( Charanjit Singh Channi) ಚನಿ ಪಂಜಾಬ್‌ ಸಿಎಂ ಆದರು) ಮತ್ತು ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲು ತನ್ನದೇ ಆದ ಪಕ್ಷವನ್ನು ಅಮರಿಂದರ್ ಸಿಂಗ್ ರಚಿಸಿದ್ದಾರೆ.

Karnataka Politics| ಕಾಂಗ್ರೆಸ್‌ ಬ್ರಿಟಿಷರಿಗೆ ಹುಟ್ಟಿದ ಪಕ್ಷ, ಅದರ ಕ್ಯಾಪ್ಟನ್‌ ಯಾರು?: ಪ್ರತಾಪ್‌

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು 1885 ರಲ್ಲಿ ಎ.ಓ.ಹ್ಯೂಮ್ ಎಂಬವರು ಸ್ಥಾಪಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧ್ಯಕ್ಷರಾಗಿ ಡಬ್ಲೂ.ಸಿ.ಬ್ಯಾನರ್ಜಿ ಆಯ್ಕೆಯಾದರು. ನಂತರ ಕಾಂಗ್ರೆಸ್‌ನ ಮೊದಲ ಸಭೆಯೂ ಮುಂಬಯಿಯ ಗೋಕುಲದಾಸ್ ತೇಜಪಾಲ ಕಾಲೇಜಿನಲ್ಲಿ ನಡೆಯಿತು. 1885 ರ ಡಿಸೆಂಬರ್‌ 28ರಂದು ನಡೆದ ಮೊದಲ ಸಭೆಯಲ್ಲಿ 72 ಜನ ಭಾರತೀಯರು ಭಾಗವಹಿಸಿದ್ದರು.  1896 ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಅಧಿವೇಶನದಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ