
ನವದೆಹಲಿ: ಪೂರ್ವ ದೆಹಲಿಯ ಬ್ಲೂ ಲೈನ್‌ನಲ್ಲಿ ಅಕ್ಷರಧಾಮ ಮೆಟ್ರೋ ನಿಲ್ದಾಣದಿಂದ (Akshardham metro station) ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಯುವತಿ ಸಂಜೆ ವೇಳೆ ಮೃತಪಟ್ಟಿದ್ದಾಳೆ. ಗುರುವಾರ ಬೆಳಗ್ಗೆ 7.30ರ ಸಮಯದಲ್ಲಿ ಈಕೆ ಅಕ್ಷರಧಾಮ ಮೆಟ್ರೋ ನಿಲ್ದಾಣದ ಕಟ್ಟಡವೇರಿ ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಸಿಐಎಸ್‌ಎಫ್ ಸಿಬ್ಬಂದಿಯ ಚಾಣಾಕ್ಷತನದಿಂದ ಆಕೆ ಹಾರುವ ವೇಳೆ ಕೆಳಗೆ ಬೆಡ್‌ಶೀಟ್ ಹಿಡಿದು ರಕ್ಷಣೆ ಮಾಡಿದ್ದರು. ಆದರೆ ಆಕೆ ಕೆಳಗೆ ಬಿದ್ದ ರಭಸಕ್ಕೆ ದೇಹದ ಒಳಭಾಗಲ್ಲಿ ತೀವ್ರ ಗಾಯವಾಗಿದ್ದು ಪರಿಣಾಮ ನಂತರದಲ್ಲಿ ಮೃತಪಟ್ಟಿದ್ದಾಳೆ.
ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಸಂಜೆ 8.45ರ ಸುಮಾರಿಗೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. 22 ವರ್ಷದ ಈ ಯುವತಿ ಪಂಜಾಬ್‌ನ (Punjab) ಹೋಶಿಯಾರ್‌ಪುರದ (Hoshiarpur) ನಿವಾಸಿಯಾಗಿದ್ದು, ಹರಿಯಾಣದ (Haryana) ಗುರುಗ್ರಾಮ್‌ನಲ್ಲಿ (Gurugram)ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ತನ್ನ ಕೆಲಸವನ್ನು ತೊರೆದಿದ್ದಳು ಎಂದು ಮೆಟ್ರೋದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ)ಜಿತೇಂದ್ರ ಮಣಿ (Jitendra Mani) ಅವರು ಹೇಳಿದ್ದಾರೆ.
ಅಕ್ಷರಧಾಮ ಮೆಟ್ರೊ ನಿಲ್ದಾಣದಿಂದ ಕೆಳಗೆ ಜಿಗಿದ ಈ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವಳು ಪಂಜಾಬ್‌ನ ಹೋಶಿಯಾರ್‌ಪುರದ ನಿವಾಸಿಯಾಗಿದ್ದಳು, ಹರಿಯಾಣದ ಗುರುಗ್ರಾಮ್‌ನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಇತ್ತೀಚೆಗಷ್ಟೇ ತನ್ನ ಕೆಲಸವನ್ನು ತೊರೆದಿದ್ದಳು ಎಂದು ಜಿತೇಂದ್ರ ಮಣಿ ಹೇಳಿದರು.
ಕೆಲ ಮೂಲಗಳ ಪ್ರಕಾರ ಈಕೆ ಕೆಲ ದಿನಗಳಿಂದ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಗುರುವಾರ ಬೆಳಗ್ಗೆ ಆಕೆ ಮೆಟ್ರೋ ನಿಲ್ದಾಣದ ಕಟ್ಟಡವೇರಿದ್ದಾಳೆ. ಬೆಳಗ್ಗೆ 7.30 ರ ಸುಮಾರಿಗೆ ಮೆಟ್ರೋ ನಿಲ್ದಾಣದ ಪ್ಯಾರಪೆಟ್ ಅನ್ನು ಈಕೆ ಹತ್ತಿದ್ದನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಿದ್ದಾರೆ ಎಂದು ಹಿರಿಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ಅವರು ಆಕೆಯ ಮನವೊಲಿಸಲು ಮತ್ತು ಬ್ಲೂ ಲೈನ್‌ನಲ್ಲಿರುವ ಮೆಟ್ರೋ ಸ್ಟೇಷನ್‌ನ ಗೋಡೆಯಿಂದ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು.
ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ
ಆದರೂ ಆಕೆ ಹಿಂದೆ ಸರಿಯಲು ಒಪ್ಪದೇ ಇದ್ದಾಗ ಸಿಐಎಸ್ಎಫ್ ಸಿಬ್ಬಂದಿ ಮತ್ತು ಕೆಲ ಸ್ಥಳೀಯರು ಆಕೆ ಕೆಳಗೆ ಹಾರಿದರೆ ಹಿಡಿಯುವ ಸಲುವಾಗಿ ಬೆಡ್‌ಶಿಟ್ ಹಿಡಿದು ನಿಂತಿದ್ದರು, ಸ್ವಲ್ಪದರಲ್ಲೇ ಯುವತಿ ಕೆಳಗೆ ಹಾರಿದ್ದು, ಬೆಡ್‌ಶಿಟ್ ಮೇಲೆಯೇ ಬಿದ್ದಿದ್ದಾಳೆ. ಆದರೆ ಆಕೆ ಕೆಳಗೆ ಬಿದ್ದ ರಭಸಕ್ಕೆ ದೇಹದ ಒಳಭಾಗದಲ್ಲಿ ತೀವ್ರ ಗಾಯಗಳಾಗಿದ್ದವು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ನಂತರದಲ್ಲಿ ಆಕೆ ಮೃತಪಟ್ಟಿದ್ದಾಳೆ.
ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಎಂಬಿಎ ವಿದ್ಯಾರ್ಥಿಯೊಬ್ಬಳು ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮೊದಲೇ ಮತ್ತೊಂದು ದುರಂತ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ