ಗಲಭೆ ಕೋರರಿಂದ 15 ಪುರುಷರನ್ನು ರಕ್ಷಿಸಿದ ಗಟ್ಟಿಗಿತ್ತಿ!

By Contributor AsianetFirst Published Apr 15, 2022, 5:52 PM IST
Highlights

* ಯುಗಾದಿ ಮೆರವಣಿಗೆ ಸಂದರ್ಭ ಉಂಟಾದ ಗಲಭೆ
* ದಾಳಿಕೋರರಿಂದ ಹದಿನೈದು ಜರನ್ನು ರಕ್ಷಣೆ ಮಾಡಿದ ಮಹಿಳೆ
* ಹಿಂದು -ಮುಸ್ಲಿಂ ನಡುವೆ ರಾಜಕಾರಣಿಗಳಿಂದ ಒಡಕು ತರುವ ಯತ್ನ
* ಮಹಿಳೆ ಮಧುಲಿಕಾ ಸಿಂಗ್ ಕಾರ್ಯಕ್ಕೆ ಶ್ಲಾಘನೆ

ಜೈಪುರ ( ಏ. 15)   ಇದು ಏಕಾಂಗಿ  ಹೋರಾಟದ ಕತೆ.   ಏಪ್ರಿಲ್ 2 ರಂದು ರಾಜಸ್ಥಾನದ (Rajasthan) ಕರೌಲಿಯಲ್ಲಿ ನಡೆದ  ಘಟನೆ ಇದು. ಅಂಗಡಿಗೆ ನುಗ್ಗಿ 15 ಪುರುಷರ ಮೇಲೆ ದಾಳಿ ಮಾಡಲು ಮುಂದಾದ ಗುಂಪನ್ನು (Mob) ಮಹಿಳೆ ಹಿಮ್ಮೆಟ್ಟಿಸಿದ್ದಾರೆ.  ಇದು 48 ವರ್ಷದ ಮಹಿಳೆಯ ಏಕಾಂಗಿ ಹೋರಾಟದ ಕತೆ.

ಪತಿ ತೀರಿಕೊಂಡ ನಂತರ ಕಳೆದ ಐದು ವರ್ಷಗಳಿಂದ ಗಾರ್ಮೆಂಟ್ಸ್ (Garments)ವ್ಯಾಪಾರ ನಡೆಸುತ್ತಿದ್ದ ಮಹಿಳೆ ಮಧುಲಿಕಾ ಸಿಂಗ್  (Madhulika Singh) ಏಕಾಂಗಿ ವೀರ ವನಿತೆ. ಹಿಂದೂ ಹೊಸ ವರ್ಷ ಅಥವಾ ನವ ಸಂವತ್ಸರ ಯುಗಾದಿ ಮೆರವಣಿಗೆ ಮಾರುಕಟ್ಟೆಯ ಮೂಲಕ ಹಾದು ಬರುತ್ತಿತ್ತು.  ಮಹಿಳೆ ನಡೆಸುತ್ತಿದ್ದ ಅಂಗಡಿ ಮುಂದೆ  ಮೆರವಣಿಗೆ ಬಂದಿತ್ತು.  ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಇರುವ ಪ್ರದೇಶಕ್ಕೆ ಮೆರವಣಿಗೆ ಪ್ರವೇಶ ಮಾಡಿದಾಗ ಸಮಸ್ಯೆ ಕಾಣಿಸಿಕೊ೦ಡಿತು.

Latest Videos

ಮೆರವಣಿಗೆಯಲ್ಲಿ ಧ್ವನಿವರ್ಧಕದಲ್ಲಿ  ಘೋಷಣೆಗಳನ್ನು ಕೂಗಿಸಲಾಗುತ್ತಿದ್ದುದ್ದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲು ಕಾರಣವಾಯಿತು. ಕೆಲವೇ ಕ್ಷಣದಲ್ಲಿ  ಹಿಂಸಾಚಾರ ಮತ್ತು ಕಲ್ಲು ತೂರಾಟ  ಆರಂಭವಾಯಿತು ಎಂದು ಪೊಲೀಸರು ಹೇಳುತ್ತಾರೆ.

ಜನರು ಕೂಗುತ್ತಿರುವುದನ್ನು ಕಂಡ  ಅಂಗಡಿಗಳ ಮಾಲೀಕರು  ಶಟರ್‌ಗಳನ್ನು ಯದ್ವಾತದ್ವಾ ಎಳೆದು ಕ್ಲೋಸ್ ಮಾಡಲು ಆರಂಭಿಸಿದರು.  ಈ ಸಂದರ್ಭ ಮಹಿಳೆ ಹೊರಗೆ ಏನಾಗುತ್ತಿದೆ ಎಂದು ನೋಡಲು ಹೊರಟಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸ್‌ನಿಂದ ಜನರು ಓಡಿಹೋಗಲು ಪ್ರಯತ್ನಿಸುತ್ತಿರುವುದನ್ನು ಕಂಡಿದ್ದಾರೆ. ಬೆಂಕಿ ಹಚ್ಚುವ ಕೆಲಸವೂ ನಡೆಯುತ್ತಿತ್ತು. 

ಗಲಭೆಕೋರರ ಗುಂಪು ಶಾಪಿಂಗ್ ಮಾಲ್ ನತ್ತ ಬರುತ್ತಿತ್ತು. ಈ ವೇಳೆ ನಾನು ಗೇಟ್ ಕ್ಲೋಸ್ ಮಾಡಿ ಅವರಿಗೆ ಧೈರ್ಯ ತುಂಬಿದೆ ಎಂದು ಮಹಿಳೆ ಅಂದಿನ ಘಟನೆಗಳನ್ನು ತಿಳಿಸುತ್ತಾರೆ.

ಇದಾದ ಮೇಲೆ ಹದಿನೈದಕ್ಕೂ ಅಧಿಕ ಮಂದಿ ಮಹಿಳೆ ವಾಸವಿದ್ದ ಅಪಾರ್ಟ್ ಮೆಂಟ್ ಬಳಿ ಓಡಿ ಬಂದು ರಕ್ಷಣೆ ಕೇಳಿದ್ದಾರೆ.  ಹೊರಗೆ ದಂಗೆ ಭುಗಿಲೆದ್ದಿದ್ದು ನಮಗೆ ಏನು ಮಾಬೇಕು ಎಂದು ತೋಚುತ್ತಿಲ್ಲ ಎಂದು ಅಂಗಲಾಚಿಕೊಂಡಿದ್ದಾರೆ.

ಹಿಂದಿನಿಂದ ಬಂದ  ಗುಂಪು ಒಳನುಗ್ಗಲು ಪ್ರಯತ್ನಿಸಿತು, ಆದರೆ ಸಿಂಗ್ ಅವರನ್ನು ತಡೆದಿದ್ದಾರೆ  ಮೊಹಮ್ಮದ್ ತಾಲಿಬ್ ಮತ್ತು ಡ್ಯಾನಿಶ್ ಸೇರಿದಂತೆ ಹದಿನೈದು ಜನರನ್ನು ಮಹಿಳೆ ಕಾಪಾಡಿದ್ದಾರೆ.  ಅವರಿಗೆ ಚಹಾ ಮತ್ತು ನೀರು ಕೊಟ್ಟು ಉಪಚರಿಸಿದ್ದಾರೆ.

MP Ram Navami Clash: ಹಿಂಸಾಚಾರಕ್ಕೂ ಮೊದಲೇ ಜೈಲಿನಲ್ಲಿದ್ದವರ ವಿರುದ್ಧ ಕೇಸ್, ಈಗ ಮನೆಯೂ ಧ್ವಂಸ!

ಜನರು ಎಲ್ಲೆಂದರಲ್ಲಿ ಓಡುತ್ತಿದ್ದರು. ಕೋಲುಗಳಿಂದ ಗುಂಪುಗಳು, ಕೆಲವು ಲೂಟಿ ಮಾಡುವ ಅಂಗಡಿಗಳು. ಆದರೆ ಮಧುಲಿಕಾ ದೀದಿ ನಮ್ಮನ್ನು ರಕ್ಷಿಸಿದರು ಎಂದು ರಕ್ಷಣೆಗೆ ಒಳಗಾದವರು ಧನ್ಯವಾದ ಅರ್ಪಿಸಿದ್ದಾರೆ.  ಇದಾದ ಕೆಲವೇ  ಕ್ಷಣದಲ್ಲಿ ಮಹಿಳೆಯ ಸಹೋದರ ಸ್ಥಳಕ್ಕೆ ಆಗಮಿಸಿದ್ದಾರೆ.

ನಾವು ಅವರಿಗೆ ಚಹಾ ಮತ್ತು ನೀರು ನೀಡಿದ್ದೇವೆ ಮತ್ತು ಪರಿಸ್ಥಿತಿ ಶಾಂತವಾಗುವವರೆಗೆ ಅವರನ್ನು ಹೊರಗೆ  ಬಿಡಲಿಲ್ಲ. ನನ್ನ ಸಹೋದರಿ ಆಶ್ರಯ ನೀಡಿದ 15-16 ಜನರಲ್ಲಿ 13 ಜನರು ಮುಸ್ಲಿಮರಾಗಿದ್ದರು ಎಂದು ಸಹೋದರ ಸಂಜಯ್ ಹೇಳಿದ್ದಾರೆ.

ಅದೇ ಸಂಕೀರ್ಣದಲ್ಲಿ ಸಲೂನ್ ನಡೆಸುತ್ತಿರುವ ಮಿಥಿಲೇಶ್ ಸೋನಿ ಅವರು ಮತ್ತು ಇತರ ಮೂವರು ಮಹಿಳೆಯರು ನೀರಿನಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಗಲಭೆಕೋರರ ದಾಳಿಗೆ ಒಳಗಾಗಬಹುದೆಂಬ ಕಾರಣದಿಂದ ನಾವು ಮುಸ್ಲಿಂ ಪುರುಷರನ್ನು ಹೊರಗೆ ಹೋಗಲು ಬಿಡಲಿಲ್ಲ ಎನ್ನುತ್ತಾರೆ.

ಕರೌಲಿಯಲ್ಲಿನ ಘರ್ಷಣೆಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ  ವಾಗ್ವಾದಕ್ಕೆ ಕಾರಣವಾಯಿತು.  ಪ್ರತಿಯೊಬ್ಬರೂ ಹೊಣೆಗಾರರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  ರಾಜಕಾರಣಿಗಳೆ ಜನರಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ಮಾರುಕಟ್ಟೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ವರ್ಷಗಳಿಂದ ಒಟ್ಟಿಗೆ ವ್ಯಾಪಾರ ಮಾಡುತ್ತಿದ್ದಾರೆ. ಜನರ ನಡುವೆ ಅಪನಂಬಿಕೆ ಮತ್ತು ಒಡಕು ಇರುವಂತಹ ಪರಿಸ್ಥಿತಿ ನಮಗೆ ಬೇಡ. ಶಾಂತಿ ಮತ್ತು ಸಹೋದರತ್ವ ಮರಳಲು ನಾವು ಬಯಸುತ್ತೇವೆ ಎಂದು ಕರೌಲಿ ಸದರ್ ಬಜಾರ್ ಮಾರ್ಕೆಟ್ ಅಸೋಸಿಯೇಶನ್ ಮುಖ್ಯಸ್ಥ ರಾಜೇಂದ್ರ ಶರ್ಮಾ ಹೇಳಿದ್ದಾರೆ. 

click me!