'ಪ್ರಧಾನಿ ಮೋದಿ ರಾಜಕೀಯ ಮುತ್ಸದ್ದಿ..' ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಬಹುಪರಾಕ್‌!

By Santosh Naik  |  First Published Apr 4, 2023, 6:17 PM IST

ದೇಶದ ಹಿತಕ್ಕೆ ವಿರುದ್ಧವಾದ ಯಾವುದೇ ವಿಚಾರವಿರಲಿ ನಾನು ಮೋದಿ ಅವರನ್ನು ಟೀಕಿಸಿದೇ ಸುಮ್ಮನೆ ಇರೋದಿಲ್ಲ. ಆದರೆ, ಅವರ ವರ್ತನೆ ಮಾತ್ರ ರಾಜಕೀಯ ಮುತ್ಸದ್ಧಿತನದಿಂದ ಕೂಡಿದೆ ಎಂದು ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.
 


ನವದೆಹಲಿ (ಏ.4): ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದ ನಾಯಕರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದ ಜಮ್ಮು ಕಾಶ್ಮೀರದ ಬಲಾಢ್ಯ ನಾಯಕ ಗುಲಾಂ ನಬಿ ಆಜಾದ್‌ ಕಳೆದ ವರ್ಷ, ಪಕ್ಷದ ಜೊತೆಗಿನ ಭಿನ್ನಾಭಿಪ್ರಾಯದಿಂದ ತಮ್ಮ ಎಲ್ಲಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಬುಧವಾರ ತಮ್ಮ ಆತ್ಮಚರಿತ್ರೆ 'ಆಜಾದ್‌' ಬಿಡುಗಡೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬರೀ ನಾಯಕರಲ್ಲ ಅವರೊಬ್ಬ ಮುತ್ಸದ್ಧಿ ಎಂದು ಹೇಳುವ ಮೂಲಕ ಹೊಗಳಿದ್ದಾರೆ. ನಾನು ಮೋದಿಯವರನ್ನು ಸಾಕಷ್ಟು ವಿಚಾರಗಳಲ್ಲಿ ಟೀಕೆ ಮಾಡಿದ್ದೇವೆ. ವಾಗ್ವಾದ ಮಾಡಿದ್ದೇನೆ. ಆದರೆ, ಎಂದೂ ಅವರು ಸೇಡು ತೀರಿಸಿಕೊಳ್ಳುವ ಮನೋಭಾವವನ್ನು ಹೊಂದಿರಲಿಲ್ಲ. ಅವರ ವರ್ತನೆ ಮುತ್ಸದ್ಧಿಯ ರೀತಿಯಲ್ಲಿತ್ತು ಎಂದು ಆಜಾದ್‌ ಹೇಳಿದ್ದಾರೆ. ನಾನು ಅವರನ್ನು ಟೀಕೆ ಮಾಡಿದ್ದರೂ ಸೇಡು ತೀರಿಸಿಕೊಳ್ಳುವ ಸಣ್ಣ ಪ್ರಯತ್ನ ಕೂಡ ಮಾಡಿರಲಿಲ್ಲ. ಇದಕ್ಕಾಗಿ ನನಗೆ ಅವರ ಬಗ್ಗೆ ಗೌರವವಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿ ನಾನು ಯಾವುದೇ ವಿಷಯದ ಬಗ್ಗೆ ಅವರನ್ನು ಟೀಕಿಸದೇ ಬಿಡಲಿಲ್ಲ. ಅದು ಆರ್ಟಿಕಲ್ 370 ಅಥವಾ ಸಿಎಎ ಅಥವಾ ಹಿಜಾಬ್ ಆಗಿರಲಿ. ಕೆಲವೊಂದು ಮಸೂದೆಗಳು ನನ್ನ ಟೀಕೆಯ ಕಾರಣದಿಂದಾಗಿಯೇ ಸದನದಲ್ಲಿ ಸೋಲು ಕಂಡವು. ಇಷ್ಟೆಲ್ಲ ಆದರೂ ಅವರ ಮರ್ತನೆ ಮುತ್ಸದ್ಧಿ ರೀತಿಯಲ್ಲಿತ್ತು' ಎಂದು ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್‌ ಅವರ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಭಾವುಕವಾಗಿ ಮಾತನಾಡಿದ್ದರು. 2006ರಲ್ಲಿ ಶ್ರೀನಗರದಲ್ಲಿ ಸಂಭವಿಸಿದ ಗ್ರೆನೆಡ್‌ ದಾಳಿಯಲ್ಲಿ ಸಾವು ಕಂಡ ಗುಜರಾತ್‌ನ ಪ್ರವಾಸಿಗರ ಶವಗಳನ್ನು ಜಮ್ಮು ಕಾಶ್ಮೀರದಿಂದ ತರುವ ನಿಟ್ಟಿನಲ್ಲಿ ಗುಲಾಂ ನಬಿ ಆಜಾದ್‌ ಮಾಡಿದ್ದ ಸಹಾಯವನ್ನು ಮೋದಿ ನೆನಪಿಸಿಕೊಂಡಿದ್ದರು.

ಜಿ23 ಬಿಜೆಪಿ ಪರವಾಗಿ ಮಾತನಾಡಿರಲಿಲ್ಲ: ಕಾಂಗ್ರೆಸ್‌ನಲ್ಲಿ ಭಿನ್ನರ ಗುಂಪಾಗಿದ್ದ ಜಿ23 ಬಿಜೆಪಿ ಪರವಾಗಿ ಮಾತನಾಡುತ್ತಿತ್ತು ಎನ್ನುವ ಆರೋಪಗಳನ್ನು ಆಜಾದ್ ತಳ್ಳಿ ಹಾಕಿದ್ದಾರೆ. 'ಇದು ಮೂರ್ಖತನದ ಸುದ್ದಿ. ಹಾಗೇನಾದರೂ ಅವರು ಬಿಜೆಪಿ ಪರವಾಗಿ ಮಾತನಾಡಿದ್ದಲ್ಲಿ, ಕಾಂಗ್ರೆಸ್‌ ಪಕ್ಷದಿಂದ ಅವರು ಹೇಗೆ ಸಂಸದರಾಗುತ್ತಿದ್ದರು.  ಜಿ23ಯಲ್ಲಿದ್ದ ವ್ಯಕ್ತಿಗಳನ್ನು ಸಂಸದರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳನ್ನಾಗಿ ಯಾಕೆ ಮಾಡುತ್ತಿದ್ದರು? ಜಿ23ಯಲ್ಲಿದ್ದ ವ್ಯಕ್ತಿಗಳ ಪೈಕಿ ನಾನೊಬ್ಬನೇ ಪಕ್ಷ ತೊರೆದಿದ್ದೇನೆ. ಉಳಿದವರೆಲ್ಲರೂ ಅಲ್ಲಿಯೇ ಇದ್ದಾರೆ. ಇದೊಂದು ಬಾಲಿಶ ಆರೋಪ ಎಂದು ಹೇಳಿದ್ದಾರೆ.

ಕೇಂದ್ರ ಕಾಂಗ್ರೆಸ್ ನಾಯಕರಿಂದ ರಾಜ್ಯ ಗೆಲ್ಲಲ್ಲ, ಕರ್ನಾಟಕ ಚುನಾವಣೆಗೂ ಮೊದಲು ಗುಲಾಮ್ ನಬಿ ಬಾಂಬ್!

ಈಗಿನ ಕಾಂಗ್ರೆಸ್‌ ನಾಯಕರನ್ನು ತೀವ್ರವಾಗಿ ಟೀಕೆ ಮಾಡಿದ ಗುಲಾಂ ನಬಿ ಆಜಾದ್‌, ಇಂದಿನ ಕಾಂಗ್ರೆಸ್‌ ನಾಯಕತ್ವಕ್ಕೆ ಜನರ ಮೇಲೆ ಪ್ರಭಾವ ಬೀರುವ ಶಕ್ತಿಯೇ ಇಲ್ಲ ಎಂದು ಹೇಳಿದ್ದಾರೆ. "ನೆಹರೂ ಜಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರಿಗೆ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿ ಇತ್ತು. ಅವರಿಗೆ ಸಹಿಷ್ಣುತೆ ಇತ್ತು, ಅವರಿಗೆ ಸಾರ್ವಜನಿಕ ಬೆಂಬಲ ಮತ್ತು ಗೌರವವಿತ್ತು ಮತ್ತು ಕಾಲಾವಧಿಯಲ್ಲಿ ಅವರ ಕೆಲಸದಿಂದ ಅವರು ಮರಳಿ ಬಂದಿದ್ದರು. ಆದರೆ, ಪ್ರಸ್ತುತ ಕಾಂಗ್ರೆಸ್ ನಾಯಕತ್ವವು ಜನರ ಮೇಲೆ ಪ್ರಭಾವ ಬೀರುವ ಯಾವುದೇ ಅಂಶ ಹೊಂದಿಲ್ಲ' ಎದು ಆಜಾದ್‌ ಟೀಕಿಸಿದ್ದಾರೆ.

Tap to resize

Latest Videos

ಗುಲಾಂ ನಬಿ ಆಜಾದ್‌ರ 17 ಆಪ್ತರು 2 ತಿಂಗಳಲ್ಲಿ ಕಾಂಗ್ರೆಸ್‌ಗೆ ವಾಪಸ್‌

ಕಾಂಗ್ರೆಸ್‌ನ ಮೌಲ್ಯಗಳು ಈಗಲೂ ನನ್ನಲ್ಲಿದೆ: ನಾನು ಕಾಂಗ್ರೆಸ್‌ನ ಟೀಕೆ ಮಾಡುತ್ತಿಲ್ಲ. ಕಾಂಗ್ರೆಸ್‌ನ ಆದರ್ಶ, ಮೌಲ್ಯಗಳು ಈಗಲೂ ನನ್ನಲ್ಲಿದೆ. ಆದರೆ, ನಾಯಕತ್ವದ ವಿಚಾರದಲ್ಲಿ ಮಾತ್ರವೇ ನನಗೆ ಭಿನ್ನಾಭಿಪ್ರಾಯವಿದೆ.  ಕಾಂಗ್ರೆಸ್‌ ಪಕ್ಷ ಹಾಗೂ ಅದರ ಮೌಲ್ಯಗಳ ಬಗ್ಗೆ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.

click me!