ಜನ ಮೋದಿ ವರ್ಚಸ್ಸಿಗೆ ವೋಟ್‌ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್‌ ಬೀಸಿದ ಎನ್‌ಸಿಪಿ ನಾಯಕ

By BK AshwinFirst Published Apr 4, 2023, 5:56 PM IST
Highlights

2014 ರಲ್ಲಿ ಪ್ರಧಾನಿ ಮೋದಿಗೆ ಸಾರ್ವಜನಿಕರು ಅವರ ಪದವಿಯ ಆಧಾರದ ಮೇಲೆ ಮತ ಚಲಾಯಿಸಿದ್ದಾರೆಯೇ? ಅವರು ಸೃಷ್ಟಿಸಿದ ವರ್ಚಸ್ಸು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು ಎಂದು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹೇಳಿದ್ದಾರೆ.

ಮುಂಬೈ (ಏಪ್ರಿಲ್‌ 4, 2023): ಪ್ರಧಾನಿ ಮೋದಿ ಪದವಿ ಹಾಗೂ ಪ್ರಮಾಣ ಪತ್ರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಈ ಸಂಬಂಧ ಕೋರ್ಟ್‌ ಮೊರೆ ಹೋಗಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನ್ಯಾಯಾಲಯ 25 ಸಾವಿರ ರೂ. ದಂಡ ಹಾಕಿತ್ತು ಹಾಗೂ ಆ ಉದ್ದೇಶವನ್ನೂ ಪ್ರಶ್ನೆ ಮಾಡಿತ್ತು. ಅನೇಕ ವಿ ಪಕ್ಷ ನಾಯಕರು ಸಹ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಎನ್‌ಸಿಪಿ ನಾಯಕ ಪ್ರಧಾನಿ ಮೋದಿ ಪರ ಬ್ಯಾಟ್‌ ಬೀಸಿದ್ದಾರೆ.

ಸಚಿವರ ಪದವಿಯನ್ನು ಪ್ರಶ್ನಿಸುವುದು ಸರಿಯಲ್ಲ, ಒಬ್ಬ ನಾಯಕ ತನ್ನ ಅಧಿಕಾರಾವಧಿಯಲ್ಲಿ ಏನು ಸಾಧಿಸಿದ್ದಾನೆ ಎಂಬುದರ ಮೇಲೆ ಜನರು ಗಮನ ಹರಿಸಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಮೋದಿ ಪರ ಬೆಂಬಲ ನೀಡಿದ್ದಾರೆ. ಭಾನುವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಜಿತ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

Latest Videos

ಇದನ್ನು ಓದಿ: ಭ್ರಷ್ಟರು ಸರ್ಕಾರ, ವ್ಯವಸ್ಥೆಯ ಭಾಗವಾಗಿದ್ದರೂ ಯಾರನ್ನೂ ಬಿಡಬೇಡಿ: ಸಿಬಿಐಗೆ ಪ್ರಧಾನಿ ಮೋದಿ ಸಲಹೆ

2014 ರಲ್ಲಿ ಪ್ರಧಾನಿ ಮೋದಿಗೆ ಸಾರ್ವಜನಿಕರು ಅವರ ಪದವಿಯ ಆಧಾರದ ಮೇಲೆ ಮತ ಚಲಾಯಿಸಿದ್ದಾರೆಯೇ? ಅವರು ಸೃಷ್ಟಿಸಿದ ವರ್ಚಸ್ಸು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು ಎಂದು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹೇಳಿದ್ದಾರೆ. ಹಾಗೂ, ಈಗ ಅವರು 9 ವರ್ಷಗಳಿಂದ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಪದವಿಯ ಬಗ್ಗೆ ಕೇಳುವುದು ಸರಿಯಲ್ಲ. ಹಣದುಬ್ಬರ ಮತ್ತು ನಿರುದ್ಯೋಗದಂತಹ ವಿಷಯಗಳ ಬಗ್ಗೆ ನಾವು ಅವರನ್ನು ಪ್ರಶ್ನಿಸಬೇಕು. ಸಚಿವರ ಪದವಿ ಮುಖ್ಯ ವಿಷಯವಲ್ಲ ಎಂದೂ ಅಜಿತ್‌ ಪವಾರ್‌ ಅಭಿಪ್ರಾಯ ಪಟ್ಟಿದ್ದಾರೆ. 

ಅಲ್ಲದೆ, ಮೋದಿಯವರ ಪದವಿಯ ಬಗ್ಗೆ ಸ್ಪಷ್ಟತೆ ಬಂದರೆ ಹಣದುಬ್ಬರ ಕಡಿಮೆಯಾಗಲಿದೆಯೇ? ಅವರ ಪದವಿಯ ಸ್ಥಿತಿಯನ್ನು ತಿಳಿದುಕೊಂಡ ನಂತರ ಜನರಿಗೆ ಉದ್ಯೋಗ ಸಿಗುತ್ತದೆಯೇ ಎಂದೂ ಪ್ರಶ್ನೆ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರು ತಮ್ಮ ಕಾಲೇಜು ಪದವಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಈ ಹಿಂದೆ ಹೇಳಿದ್ದರು. ಹಾಗೆ, "ತಮ್ಮ ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ? ನ್ಯಾಯಾಲಯದಲ್ಲಿ ತಮ್ಮ ಪದವಿಯನ್ನು ತೋರಿಸುವುದನ್ನು ಅವರು ಕಟುವಾಗಿ ವಿರೋಧಿಸಿದರು. ಏಕೆ? ಮತ್ತು ಅವರ ಪದವಿಯನ್ನು ನೋಡಲು ಒತ್ತಾಯಿಸುವವರಿಗೆ ದಂಡ ವಿಧಿಸಲಾಗುತ್ತದೆ? ಏನಾಗುತ್ತಿದೆ? ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ತುಂಬಾ ಅಪಾಯಕಾರಿ’’ ಎಂದೂ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ರು.

ಇದನ್ನೂ ಓದಿ: ರಾಜ್ಯದಲ್ಲಿ ಪ್ರಧಾನಿ ಮೋದಿ 20 ರ‍್ಯಾಲಿ: ನಮೋ ಜನಪ್ರಿಯತೆ ಲಾಭ ಪಡೆಯಲು ಬಿಜೆಪಿ ಪ್ಲಾನ್‌

ಕಳೆದ ವಾರ ಗುಜರಾತ್ ಹೈಕೋರ್ಟ್ ಮುಖ್ಯ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ರದ್ದುಗೊಳಿಸಿದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಒದಗಿಸುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ ಕೆಲವು ಗಂಟೆಗಳ ನಂತರ ಅರವಿಂದ್‌ ಕೇಜ್ರಿವಾಲ್‌ ಈ ಹೇಳಿಕೆಗಳನ್ನು ನೀಡಿದ್ದರು. ಸಿಐಸಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾನಿಲಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತ್ತು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಪ್ರಧಾನಿ ಪದವಿಗೆ ಸಂಬಂಧಿಸಿದ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು, ನನಗೆ ಆಶ್ಚರ್ಯವಾಯಿತು ಪ್ರಧಾನಿಯವರ ಶೈಕ್ಷಣಿಕ ಅರ್ಹತೆ ಮತ್ತು ಅವರ ಪದವಿ ನಿಜವೋ ಅಥವಾ ಇಲ್ಲವೋ, ಈ ವಿಷಯವು ನ್ಯಾಯಾಲಯಕ್ಕೆ ಹೋಗುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮತ್ತೆ ಜಗತ್ತಿನಲ್ಲೇ ನಂ. 1 ಜನಪ್ರಿಯ ನಾಯಕ

click me!