ಆಂಬುಲೆನ್ಸ್‌ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್‌ ಅಂದರ್

Published : Feb 01, 2026, 02:08 PM ISTUpdated : Feb 01, 2026, 02:50 PM IST
YouTuber Akash Jadhav arrested

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಹಾವುಗಳ ರಕ್ಷಣೆ ಮಾಡುವ ವೀಡಿಯೋಗಳಿಂದಲೇ ಖ್ಯಾತಿ ಗಳಿಸಿದ್ದ 'ಸರ್ಪಮಿತ್ರ' ಆಕಾಶ್ ಜಾಧವ್ ಎಂಬ ಯೂಟ್ಯೂಬರ್‌ನನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಾರ್ವಜನಿಕ ಇಮೇಜ್ ಬಳಸಿ ಆಂಬ್ಯುಲೆನ್ಸ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದ..

ಆಂಬುಲೆನ್ಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಸರ್ಪಮಿತ್ರ ಆಕಾಶ್ ಯಾದವ್:

ಮುಂಬೈ: ಹಾವುಗಳನ್ನು ರಕ್ಷಣೆ ಮಾಡುವ ವೀಡಿಯೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಮಹಾರಾಷ್ಟ್ರದ ಯುಟ್ಯೂಬರ್ ಓರ್ವನನ್ನು ಛತ್ತೀಸ್‌ಗಢದ ಪೊಲೀಸರು ಅಕ್ರಮ ಗಾಂಜಾ ಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಯುಟ್ಯೂಬರ್ ಆಕಾಶ್ ಜಾಧವ್ ಬಂಧಿತ ವ್ಯಕ್ತಿ. ಈತ ಯುಟ್ಯೂಬ್‌ನಲ್ಲಿ Sarpmitra Akash Jadhav ಎಂದೇ ಫೇಮಸ್ ಆಗಿದ್ದು, ಈತನಿಗೆ ಯುಟ್ಯೂಬ್‌ನಲ್ಲಿ 5.68 ಮಿಲಿಯನ್ ಫಾಲೋವರ್ಸ್‌ಗಳಿದ್ದಾರೆ. ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 3.17 ಲಕ್ಷ ಫಾಲೋವರ್ಸ್‌ಗಳಿದ್ದಾರೆ. ಈತ ಹಾವುಗಳನ್ನು ರಕ್ಷಿಸುವ ವೀಡಿಯೋಗಳಿಂದಲೇ ಫೇಮಸ್ ಆಗಿದ್ದರು.

ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಪೊಲೀಸರು ಆಕಾಶ್ ಜಾಧವ್‌ನನ್ನು ಬಂಧಿಸಿದ್ದಾರೆ. ಜಾಧವ್ ಮಹಾರಾಷ್ಟ್ರದ ಅಹಲ್ಯಾಪುರದ ನಿವಾಸಿಯಾಗಿದ್ದು, ಆಕಾಶ್ ಜಾಧವ್ ಸಾಮಾಜಿಕ ಜಾಲತಾಣದಲ್ಲಿ 'ಸರ್ಪ್ ಮಿತ್ರ' (ಹಾವು ರಕ್ಷಕ) ಎಂದೇ ಪರಿಚಿತರಾಗಿದ್ದರು, ಹಾವುಗಳನ್ನು ರಕ್ಷಿಸುವ ಮತ್ತು ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕವಾಗಿ ಅವರಿಗೆ ಅವರದೇ ಆದ ಒಂದು ವಿಶೇಷ ಖ್ಯಾತಿ ನಿರ್ಮಾಣವಾಗಿತ್ತು. ಆದರೆ ಈ ಸಾರ್ವಜನಿಕ ವ್ಯಕ್ತಿತ್ವದ ಹಿಂದಿದ್ದ ಅವರ ಮತ್ತೊಂದು ಮುಖ ಬಯಲಾಗಿದೆ. ಅವರು ಒಡಿಶಾದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಅಕ್ರಮ ಸಾಗಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಅಂತಾರಾಜ್ಯ ಮಾದಕವಸ್ತು ಜಾಲದ ಭಾಗವಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ:   ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ

ಹಿಂದಿ ಮಾಧ್ಯಮ ಆಜ್ ತಕ್ ವರದಿಯ ಪ್ರಕಾರ , ಮಹಾಸಮುಂದ್ ಪೊಲೀಸರು ನಿಯಮಿತ ವಾಹನ ತಪಾಸಣೆಯ ವೇಳೆ ಆಂಬ್ಯುಲೆನ್ಸ್ ಅನ್ನು ತಡೆದ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಂಬುಲೆನ್ಸ್ ವಾಹನದಲ್ಲಿ 5 ಕ್ವಿಂಟಾಲ್ ಮತ್ತು 20 ಕಿಲೋಗ್ರಾಂಗಳಷ್ಟು ಗಾಂಜಾ ಸಾಗಿಸುತ್ತಿರುವುದು ಕಂಡುಬಂದಿದ್ದು, ಅಕ್ರಮ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 2.6 ಕೋಟಿ ರೂ. ಎಂದು ಪೊಲೀಸರಿ ಅಂದಾಜಿಸಿದ್ದಾರೆ. ಮಾದಕ ದ್ರವ್ಯಗಳನ್ನು ಸಾಗಿಸಲು ಇವರು ಆಂಬ್ಯುಲೆನ್ಸ್ ಬಳಸಿರುವುದು ಆಳವಾದ ತನಿಖೆಗೆ ಕಾರಣವಾಗಿದೆ

ಈ ಮಾದಕ ದ್ರವ್ಯ ವಶಪಡಿಸಿಕೊಂಡ ನಂತರ, ಪೊಲೀಸರು ಈ ಮಾದಕದ್ರವ್ಯದ ಪೂರೈಕೆ ಜಾಲದ ಬಗ್ಗೆ ವಿವರವಾದ ತನಿಖೆ ಪ್ರಾರಂಭಿಸಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿದೆ,. ಈ ಮಾದಕದ್ರವ್ಯದ ಸಾಗಣೆಗೆ ಸಗಟು ಮಾರಾಟಗಾರರು, ಸಾಗಣೆದಾರರು, ಬೃಹತ್ ಖರೀದಿದಾರರು ಮತ್ತು ಚಿಲ್ಲರೆ ಪೂರೈಕೆದಾರರನ್ನು ಒಳಗೊಂಡ ಸುಸಂಘಟಿತ ಜಾಲ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಕಾಶ್ ಜಾಧವ್ ಸೇರಿದಂತೆ ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ಯಾಕರ್ಸ್ & ಮೂವರ್ಸ್‌ ಕಾರ್ಮಿಕರಿಗೆ ಲಿಫ್ಟ್ ಬಳಕೆಗೆ ನಿರಾಕರಿಸಿದ ರೆಸಿಡೆನ್ಸಿಯಲ್ ಸೊಸೈಟಿ ಸದಸ್ಯರು

ಮಹಾಸಮುಂದ್ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ಮಾತನಾಡಿ, ಈ ಕಾರ್ಯಾಚರಣೆಯನ್ನು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF)ಮತ್ತು ಕೊಮಾಖಾನ್ ಪೊಲೀಸ್ ಠಾಣೆ ಜಂಟಿಯಾಗಿ ನಡೆಸಿವೆ. ತನಿಖೆಯ ಸಮಯದಲ್ಲಿ ಗುರುತಿಸಲಾದ ಪ್ರಮುಖ ಆರೋಪಿಗಳಲ್ಲಿ ಆಕಾಶ್ ಜಾಧವ್ ಒಬ್ಬರು, ಆರೋಪಿಯು ತನ್ನ ಹಾವು ರಕ್ಷಣಾ ಕಾರ್ಯ ಹಾಗೂ ವನ್ಯಜೀವಿ ಕಾರ್ಯಕರ್ತನಾಗಿ ತನಗಿದ್ದ ಸಾರ್ವಜನಿಕ ಇಮೇಜ್ ಬಳಸಿಕೊಂಡು ಮುಕ್ತವಾಗಿ ಚಲಿಸಲು ಮತ್ತು ಪೊಲೀಸರ ಅನುಮಾನವನ್ನು ತಪ್ಪಿಸಿಕೊಂಡು ಸಾಗಲು ಬಯಸಿದ್ದ ಎಂದು ಎಸ್ಪಿ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಜಾಧವ್ ಒಡಿಶಾದಿಂದ ಮಹಾರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಪುಣೆ ಅವರ ಪ್ರಮುಖ ಗಾಂಜಾ ಪೂರೈಕೆ ತಾಣಗಳಲ್ಲಿ ಒಂದಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ಕಳೆದ ವರ್ಷ ಇದೇ ರೀತಿ ಆರರಿಂದ ಏಳು ಬಾರಿ ರಾಜ್ಯ ಗಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜಾಧವ್ ಅವರ ಬಲವಾದ ಉಪಸ್ಥಿತಿ ಮತ್ತು ಹಾವು ರಕ್ಷಕನಾಗಿ ಅವರಿಗಿದ್ದ ಖ್ಯಾತಿಯು ಈ ಕಳ್ಳಸಾಗಣೆ ಚಟುವಟಿಕೆಯ ನಡುವೆಯೂ ಅವರಿಗೆ ಸಾರ್ವಜನಿಕ ಇಮೇಜ್ ಅನ್ನು ಸ್ವಚ್ಛವಾಗಿಡಲು ಸಹಾಯ ಮಾಡಿತು.ಈ ಜಾಲದಲ್ಲಿರುವ ಹೆಚ್ಚುವರಿ ಲಿಂಕ್‌ಗಳನ್ನು ಗುರುತಿಸಲು ಮತ್ತು ಕಾರ್ಯಾಚರಣೆಯ ಪೂರ್ಣ ಪ್ರಮಾಣವನ್ನು ನಿರ್ಧರಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

https://youtu.be/gHWjUqZCbkA?si=kUI3itiXbvFJJx4J

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಲವಂತದ ಮದುವೆ, ಲಿವ್‌ಇನ್‌ಗೆ 7 ವರ್ಷ ಜೈಲು ಫಿಕ್ಸ್! ಸರ್ಕಾರದಿಂದ ಖಡಕ್ ತೀರ್ಮಾನ
ಕೇಂದ್ರ ಬಜೆಟ್ ಮಂಡಿಸಿದ 15 ನಿಮಿಷಕ್ಕೆ ಷೇರು ಮಾರುಕಟ್ಟೆಯಲ್ಲಿ ₹30,000 ಕೋಟಿ ನಷ್ಟ: ಜಿ.ಸಿ. ಚಂದ್ರಶೇಖರ್ ಆಕ್ರೋಶ