ಭಾರತ ವಿಭಜನೆಯಲ್ಲಿ ಹಿಂದೂ ಮಾರಣಹೋಮಕ್ಕೆ ಗಾಂಧಿ ಕಾರಣ, ವಿವಾದಿತ ಹೇಳಿಕೆಗೆ ಅರ್ಚಕನ ವಿರುದ್ಧ ಕೇಸ್!

Published : Jul 16, 2022, 11:37 AM IST
ಭಾರತ ವಿಭಜನೆಯಲ್ಲಿ ಹಿಂದೂ ಮಾರಣಹೋಮಕ್ಕೆ ಗಾಂಧಿ ಕಾರಣ, ವಿವಾದಿತ ಹೇಳಿಕೆಗೆ ಅರ್ಚಕನ ವಿರುದ್ಧ ಕೇಸ್!

ಸಾರಾಂಶ

ಮಹಾತ್ಮಾ ಗಾಂಧಿ ವಿರುದ್ಧ ವಿವಾದಿತ ಹೇಳಿಕೆ ನೀಡಿದ ದಸ್ನಾ ದೇವಿ ಅರ್ಚಕ ಯಾತ್ರಿ ನರಸಿಂಹಾನಂದದ ಸರಸ್ವತಿ ಅರ್ಚಕನ ವಿರುದ್ಧ ಪ್ರಕರಣ 6 ತಿಂಗಳ ಹಳೇ ವಿಡಿಯೋ ಇದೀಗ ವೈರಸ್, ಸ್ವಯಂ ಪ್ರೇರಿತ ಕೇಸ್

ಘಾಜಿಯಾಬಾದ್(ಜು.16):  ಅಖಂಡ ಭಾರತ ವಿಭಜನೆಯಾದಾಗ ಹಿಂದೂಗಳ ಮಾರಾಣ ಹೋಮ ನಡೆದಿದೆ. ಇದಕ್ಕೆ ನೇರವಾಗಿ ಮಹತ್ಮಾಗಾಂಧಿ ಕಾರಣ ಎಂದು ವಿವಾದಿತ ಹೇಳಿಕೆ ನೀಡಿದ ಉತ್ತರ ಪ್ರದೇಶದ ದಾಸ್ನದೇವಿ ಮಂದಿರದ ಅರ್ಚಕ ಯಾತ್ರಿ ನರಸಿಂಹಾನಂದದ ಸರಸ್ವತಿ  ವಿರುದ್ದ ಪ್ರಕರಣ ದಾಖಲಾಗಿದೆ. 6 ತಿಂಗಳ ಹಿಂದಿನ ವಿಡಿಯೋ ಇದೀಗ ವೈರಲ್ ಆಗಿದ್ದು, ಘಾಜಿಯಾಬಾದ್ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಜುಲೈ 13 ರಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವಿವಾದಿತ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸೆಕ್ಷನ್ 505(2)ರ ಅಡಿಯಲ್ಲಿ ಕೇಸ್ ದಾಖಲಾಗಿದೆ.  ಈ ವಿಡಿಯೋ 5 ರಿಂದ 6 ತಿಂಗಳ ಹಳೆಯ ವಿಡಿಯೋ ಆಗಿದೆ. ಯಾತ್ರಿ ನರಸಿಂಹಾನಂದದ ಸರಸ್ವತಿ ಈ ಮಾತನ್ನು ಎಲ್ಲಿ ಹೇಳಿದ್ದಾರೆ ಎಂದು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹರಿದ್ವಾರದಲ್ಲಿ ಹೇಳಿಕೆ ನೀಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಸೂಪರಿಡೆಂಟ್ ಇರಾಜ್ ರಾಜಾ ಹೇಳಿದ್ದಾರೆ.

ಭಾರತ ವಿಭಜನೆ ಮಾಡಿ ಪಾಕಿಸ್ತಾನ ರಾಷ್ಟ್ರ ಸೃಷ್ಟಿಸಲಾಯಿತು. ಈ ವೇಳೆ ಮುಸ್ಲಿಮರ ಕುರಿತು ಹೆಚ್ಚಿನ ಕಾಳಜಿವಹಿಸಲಾಯಿತು. ಆದರೆ ಹಿಂದೂಗಳ ಮಾರಾಣಹೋಮವೇ ನಡೆದಿದೆ. ಇದಕ್ಕೆ ಗಾಂಧಿ ಕಾರಣ. ಮಹಾತ್ಮಾ ಗಾಂಧಿಗೆ ಬ್ರಿಟೀಷರು ಹಾಗೂ ಮುಸ್ಲಿಮರ ಪರ ಓಲವು ಹೊಂದಿದ್ದರು. ಆದರೆ ಹಿಂದೂಗಳ ಕುರಿತು ಯಾವುದೇ ಕಾಳಜಿ ಇರಲಿಲ್ಲ.  ಗಾಂಧಿ ನನಗೆ ಮಹಾತ್ಮ ಆಗಲು ಸಾಧ್ಯವಿಲ್ಲ ಎಂದು ಯಾತ್ರಿ ನರಸಿಂಹಾನಂದದ ಸರಸ್ವತಿ ಅರ್ಚಕ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

India partition story: ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

ಎಫ್ಐಆರ್ ಕುರಿತು ಪ್ರತಿಕ್ರಿಯಿಸಿದ ಅರ್ಚಕ ಯಾತ್ರಿ ನರಸಿಂಹಾನಂದದ ಸರಸ್ವತಿ, ಇತ್ತೀಚೆಗೆ ಪೊಲೀಸರಿಗೆ ಹಳೇ ವಿಡಿಯೋಗೆ, ಹಿಂದೂ ಸ್ವಾಮೀಜಿಗಳ ಮೇಲೆ, ಹಿಂದೂಗಳ ಮೇಲೆ ಪ್ರಕರಣ ದಾಖಲಿಸುವುದು ಅಭ್ಯಾಸವಾಗಿದೆ.  ಒಂದಲ್ಲಾ ಒಂದು ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೊಲೀಸರಿಗೆ ನನ್ನ ಮೇಲೆ ಕೇಸ್ ಹಾಕುವುದೇ ಕೆಲಸವಾಗಿದೆ. ಗಾಂಧಿ ಕುರಿತು ನನ್ನ ವೈಯುಕ್ತಿಕ ಅಭಿಪ್ರಾಯ ಹೇಳಿದ್ದೇನೆ. ಈ ದೇಶ ಇಬ್ಬಾಗ ಮಾಡಲು ಸಮ್ಮತಿಸಿದ್ದು ಹಾಗೂ ನಿರ್ಧಾರ ಜಾರಿಗೊಳಿಸಿದ್ದು ಯಾರು? ವಿಭಜನೆಯಾದಾಗ ಹಿಂದೂಗಳ ಹತ್ಯೆ ನಡೆದಿದೆ. ಇದಕ್ಕೆ ದಾಖಲೆಯೂ ಇದೆ. ಹಿಂದೂಗಳ ಮಾರಣಹೋಮಕ್ಕೆ ಯಾರು ಕಾರಣ. ಇದೇ ಕಾರಣಕ್ಕೆ ಗಾಂಧಿ ನನಗೆ ಯಾವತ್ತೂ ಮಹಾತ್ಮ ಅಲ್ಲ ಎಂದು ಅರ್ಚಕ ಪುನರುಚ್ಚರಿಸಿದ್ದಾರೆ.

ಯಾತ್ರಿ ನರಸಿಂಹಾನಂದದ ಸರಸ್ವತಿ ಅರ್ಚಕನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಮುಸ್ಲಿಮರ ವಿರುದ್ಧ ಹೇಳಿಕೆ ಆರೋಪದಡಿಯಲ್ಲಿ ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ.  

 

ಯಾರಿಗೋ ಪ್ರಧಾನಿಯಾಗುವ ಬಯಕೆಯಿತ್ತು, ಅದಕ್ಕೆ ದೇಶ ಇಬ್ಭಾಗವಾಯ್ತು: ಮೋದಿ!

ದೇಶ ವಿಭಜನೆಯಲ್ಲಿನ ಸಾವು ನೋವುಗಳು ಹಾಗೂ ಪಾಕಿಸ್ತಾನದಲ್ಲಿದ್ದ ಹಿಂದೂಗಳ ಮಾರಣಹೋಮದ ಕುರಿತು ಹಲವು ಚರ್ಚೆಗಳು ವಿವಾದಗಳು ಆಗಿವೆ. ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಲಾಗಿತ್ತು. ಮುಸ್ಲಿಮರಿಗಾಗಿ ಪಾಕಿಸ್ತಾನ ಎಂಬ ಹೊರ ರಾಷ್ಟ್ರ ಸೃಷ್ಟಿಯಾಗಿತ್ತು. ಈ ವೇಳೆ ಲಾಹೋರ್, ಕರಾಚಿ ಸೇರಿದಂತೆ ಪಾಕಿಸ್ತಾನದಲ್ಲಿದ್ದ ಹಿಂದೂಗಳನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗಿತ್ತು. ಹಲವರು ಜೀವ ಭಯದಿಂದ ಭಾರತಕ್ಕೆ ಬಂದಿದ್ದರು. ಇತ್ತ ಭಾರತದಲ್ಲಿನ ಮುಸ್ಲಿಮರಿಗೆ ದೇಶದಲ್ಲೇ ಉಳಿದುಕೊಳ್ಳಲು ಹಾಗೂ ಗೌರವಯುತವಾಗಿ ನೋಡಿಕೊಳ್ಳಲಾಗಿತ್ತು.  ಬಳಿಕ ಹೊಸ ರಾಷ್ಟ್ರ ಪಾಕಿಸ್ತಾನಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನ ಕೊಡಿಸುವಲ್ಲಿ ಮಹಾತ್ಮಾ ಗಾಂಧೀಜಿ ಯಶಸ್ವಿಯಾಗಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!