From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

By Suvarna News  |  First Published May 21, 2023, 6:02 PM IST

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..


ಪಂಕ್ಚರ್‌ ಆದ ತೆಲಂಗಾಣ ಸಿಎಂ ಕನಸಿನ ಕಾರು!

ಕರ್ನಾಟಕ ಚುನಾವಣಾ ಫಲಿತಾಂಶವು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಬಿಆರ್‌ಎಸ್ ಕಾರನ್ನು ರಾಷ್ಟ್ರ ರಾಜಧಾನಿಗೆ ಓಡಿಸುವ ಕನಸನ್ನು ಪಂಕ್ಚರ್ ಮಾಡಿದೆ.
ತನ್ನನ್ನು ಸಂಭಾವ್ಯ ರಾಷ್ಟ್ರೀಯ ಪರ್ಯಾಯ ಎಂದು ತೋರಿಸಿಕೊಳ್ಳುತ್ತಿದ್ದ ಕೆಸಿಆರ್ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ಸೇತರ, ಬಿಜೆಪಿಯೇತರ ರಂಗವನ್ನು ಸ್ಥಾಪಿಸುವ ಪ್ರಸ್ತಾಪಿಸಿ ಅನೇಕ ಸಭೆಗಳನ್ನು ಕರೆದಿದ್ದರು. ಆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಮರಳಿ ಪಡೆಯುವುದರೊಂದಿಗೆ ಕೆಸಿಆರ್ ಅವರ ಮಹತ್ವಾಕಾಂಕ್ಷೆಗೆ ಭಂಗ ಬಂದಿದೆ. 

Tap to resize

Latest Videos

ಇನ್ನು, ಸಿದ್ದರಾಮಯ್ಯ, ಡಿಕೆಶಿ ಹಾಗೂ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಹಲವು ಬಿಜೆಪಿಯೇತರ ಮುಖ್ಯಮಂತ್ರಿಗಳ ಉಪಸ್ಥಿತಿ ಇದ್ದು, ಇದು ಪರೋಕ್ಷವಾಗಿ ಕರ್ನಾಟಕದಲ್ಲಿ ಗೆಲುವಿನ ನಂತರ ಕಾಂಗ್ರೆಸ್ ಗಳಿಸಿದ ಪ್ರಾಮುಖ್ಯತೆಯನ್ನು ಅನುಮೋದಿಸುತ್ತದೆ. ಕೆಸಿಆರ್ ಅವರು ತಮ್ಮ ಪ್ರಯೋಗಾಲಯದಲ್ಲಿ ಪ್ರಯತ್ನಿಸಿದ ಒಂದು ರಾಜಕೀಯ ಸೂತ್ರವೆಂದರೆ, ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ಮೈತ್ರಿ ಮಾಡಿಕೊಂಡಿದ್ದು. ಅಂತಿಮ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ಎದುರಾದರೆ ಎಚ್‌ಡಿಕೆ ಕಿಂಗ್ ಮೇಕರ್ ಆಗುತ್ತಾರೆ ಎಂದು ಆಶಿಸಿದ್ದರು.

ಇದನ್ನು ಓದಿ: From the India Gate: ಇದೇ ಭವಾನಿ ರೇವಣ್ಣ ಶಕ್ತಿ; 2000 ಕೋಟಿ ರೂ. ಭರವಸೆಗಾಗಿ ತಲೆಮರೆಸಿಕೊಂಡ ಸಚಿವರು!

ಆದರೆ ತೆಲಂಗಾಣದಲ್ಲಿ ಬಿಜೆಪಿ ಜೊತೆಗೆ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ ಭರ್ಜರಿ ಗೆಲುವು ಕೆಸಿಆರ್‌ ಅನ್ನು ಕಂಗೆಡಿಸಿದ್ದು, ಇದು ಅವರ ನಿದ್ದೆಗೆಡಿಸಿರಬಹುದು. ಈ ಹಿನ್ನೆಲೆ ಸಿದ್ದರಾಮಯ್ಯ ಹಾಗೂ  ಇತರರ ಪ್ರಮಾಣ ವಚನ ಸ್ವೀಕಾರದ ಆಹ್ವಾನಿತರ ಪಟ್ಟಿಯಲ್ಲಿ ಅವರು ಹೆಸರು ಇರಲಿಲ್ಲ ಅನ್ನೋದ್ರಲ್ಲಿ ಆಶ್ಚರ್ಯವಿಲ್ಲ.
 
ಸೈಲೆಂಟ್‌ ಆದ ಕರ್ನಾಟಕ ಸಿಂಗಂ
‘ಕರ್ನಾಟಕ ಸಿಂಗಂ’ (ಕರ್ನಾಟಕದ ಸಿಂಹ) ಆಗಿರೋ ಅಣ್ಣಾಮಲೈ ತನ್ನ ಘರ್ಜನೆಯನ್ನು ಕಳೆದುಕೊಂಡಿದೆ. ನೆರೆಯ ತಮಿಳುನಾಡಿನಲ್ಲಿ ಬಿಜೆಪಿಯ ರಾಜ್ಯ ಮುಖ್ಯಸ್ಥರಾಗಿದ್ದರೂ, ಕರ್ನಾಟಕ ಚುನಾವಣೆಯ ಸಮಯದಲ್ಲಿ ಈ ನಾಯಕನಿಗೆ ಸಾಕಷ್ಟು ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಅವರು ಹಿರಿಯ ನಾಯಕರನ್ನು ನಿರ್ಲಕ್ಷಿದ್ದು, ಮತ್ತು ಟಿಕೆಟ್ ಹಂಚಿಕೆಯಲ್ಲಿನ ಮಧ್ಯಸ್ಥಿಕೆಗಳು ಈಗ ಬಿಜೆಪಿಯ ಚುನಾವಣಾ ಸೋಲಿಗೆ ಒಂದು ಕಾರಣವೆಂದು ಹೇಳಲಾಗುತ್ತಿದೆ. ಅನೇಕ ಹಿರಿಯ ನಾಯಕರು, ವಾಸ್ತವವಾಗಿ, ಅವರೊಂದಿಗೆ ವೇದಿಕೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು.

ಇದನ್ನೂ ಓದಿ: From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್‌ ಡ್ಯೂಟಿಯದ್ದೇ ದೊಡ್ಡ ಚಿಂತೆ!

ಈ ಹಿನ್ನೆಲೆ ತೀವ್ರ ವಿರೋಧವನ್ನು ಎದುರಿಸುತ್ತಿರುವ ಈ ಘರ್ಜಿಸುವ ಸಿಂಹವು ತನ್ನ ರಾಜಕೀಯ ಹಿರಿಮೆಯನ್ನು ಮರಳಿ ಪಡೆಯುವವರೆಗೆ ಸೌಮ್ಯವಾದ ಬೆಕ್ಕಿನ ಮರಿಯಂತೆ ಸುಮ್ಮನಾಗಿದೆ ಎಂದು ಹೇಳಲಾಗಿದೆ.

ಕೇರಳದಲ್ಲಿ ಕುಸ್ತಿ - ದೆಹಲಿಯಲ್ಲಿ ದೋಸ್ತಿ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೈರು ಹಾಜರಾಗಿದ್ದು ಎದ್ದುಕಾಣುವಂತಿತ್ತು. ಅವರು ತಮ್ಮನ್ನು ಪ್ರತಿಪಕ್ಷಗಳ ಐಕ್ಯತೆಯ ಉದಯೋನ್ಮುಖ ಚಿಹ್ನೆ ಎಂದು ಬಿಂಬಿಸುತ್ತಿದ್ದರೂ, ಕಾಂಗ್ರೆಸ್ ನಾಯಕರು ಅವರನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾರೆ. ಹಲವು ಬಿಜೆಪಿಯೇತರ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರೆ, ಕುತೂಹಲಕಾರಿಯಾಗಿ, ಕಾಮ್ರೇಡ್ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ನಾಯಕ ಡಿ. ರಾಜಾ ಪ್ರಮಾಣ ವಚನ ಸಮಾರಂಭದಲ್ಲಿ ಜಾಗಕ್ಕಾಗಿ ಹರಸಾಹಸ ಪಡುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: From the India Gate: ವಂದೇ ಭಾರತ್‌ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!

ವಿಪರ್ಯಾಸವೆಂದರೆ, ಪ್ರತಿಪಕ್ಷಗಳ ಏಕತೆಯನ್ನು ದೃಢೀಕರಿಸಲು ಎಡ ರಾಷ್ಟ್ರೀಯ ನಾಯಕರು ಕಾಂಗ್ರೆಸ್ ನಾಯಕರೊಂದಿಗೆ ಕೈ ಹಿಡಿದಾಗ, ತಿರುವನಂತಪುರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎಡ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಒನ್-ಲೈನರ್ ಕೇರಳದಲ್ಲಿ ಕುಸ್ತಿ ಹಾಗೂ ದೆಹಲಿಯಲ್ಲಿ ದೋಸ್ತಿಯನ್ನು ನೆನಪಿಸುವ ಎರಡೂ ದೃಶ್ಯಗಳು ಏಕಕಾಲದಲ್ಲಿ ಟಿವಿಯಲ್ಲಿ ಮಿಂಚಿದವು.

 

ಇದನ್ನೂ ಓದಿ:  From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!

click me!