ಗಾಜಿಯಾಬಾದ್(ಏ.04): ಏಪ್ರಿಲ್ 2ರಿಂದ ಹಿಂದೂಗಳು ನವರಾತ್ರಿಯನ್ನು ಆಚರಿಸುತ್ತಾರೆ, ಗಾಜಿಯಾಬಾದ್ ಮೇಯರ್ ಆಶಾ ಶರ್ಮಾ ಅವರು ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಹಸಿ ಮಾಂಸವನ್ನು ತೆರೆದ ಸ್ಥಳದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದ್ದಾರೆ.
“ನವರಾತ್ರಿಯ ಸಮಯದಲ್ಲಿ, ಗಾಜಿಯಾಬಾದ್‌ನಲ್ಲಿ ತೆರೆದ ಸ್ಥಳದಲ್ಲಿ ಮಾಂಸ ಮಾರಾಟವನ್ನು ಅನುಮತಿಸಲಾಗುವುದಿಲ್ಲ, ಆದರೆ ಅದನ್ನು (ಸಂಪೂರ್ಣವಾಗಿ) ದೇವಾಲಯಗಳ ಬಳಿ ಮತ್ತು ದೇವಾಲಯಗಳು ಇರುವ ಸ್ಥಳದಲ್ಲಿ ನಿಷೇಧಿಸಲಾಗಿದೆ. ಅಂಗಡಿ ಮಾಲೀಕರು ತಾವು ಮಾರುವ ಮಾಂಸವನ್ನು ಮುಚ್ಚಿಡಬಹುದು. ಲಾಭ ಅಥವಾ ನಷ್ಟದಲ್ಲಿ ಯಾರಿಗೂ ಸಹಾಯ ಮಾಡಲು ನಾವು ಇಲ್ಲಿಲ್ಲ, ಎಂದು ಶರ್ಮಾ ಪಿಟಿಐಗೆ ತಿಳಿಸಿದ್ದಾರೆ. ಈ ನಿಯಮ ಪ್ರತಿ ವರ್ಷ ಪಾಲಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮೇಯರ್ ತಿಳಿಸಿದರು.
ಇದೇ ವೇಳೆ, ನವರಾತ್ರಿಯ ಸಮಯದಲ್ಲಿ ಗಾಜಿಯಾಬಾದ್‌ನಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ಇದೇ ಮೊದಲು ಎಂದು ಸಂತ್ರಸ್ತ ಅಂಗಡಿಕಾರರು ಎಎನ್‌ಐಗೆ ತಿಳಿಸಿದ್ದಾರೆ. ಮದ್ಯದಂಗಡಿಗಳನ್ನು ತೆರೆಯಲಾಗಿದ್ದು, ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದು ವ್ಯಾಪಾರಿಗಳುಯ ತಿಳಿಸಿದ್ದಾರೆ. ನಮ್ಮ ಆದಾಯದ ಮೂಲ ಿದೇ ಆಗಿದೆ. ನಾವು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತೇವೆ. ಲಕ್ಷಗಟ್ಟಲೆ ಮೌಲ್ಯದ ಮಾಂಸ ಉತ್ಪನ್ನಗಳನ್ನು ನಮ್ಮ ಅಂಗಡಿಗಳಲ್ಲಿ ಇರಿಸಿದ್ದೇವೆ ಎಂದಿದ್ದಾರೆ.
ಗಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್.ಕೆ.ಸಿಂಗ್ ಪಿಟಿಐ ಜೊತೆ ಮಾತನಾಡುತ್ತಾ, ಮಾಂಸದ ಅಂಗಡಿ ಮಾಲೀಕರಿಗೆ ಪ್ರಾಣಿಗಳ ಶವವನ್ನು ಹೊರಗೆ ಎಸೆಯಲು ಬಿಡುವುದಿಲ್ಲ, ನವರಾತ್ರಿಯ ಸಮಯದಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ವಿಭಾಗವು ಮಾಂಸದ ಅಂಗಡಿಗಳ ಬಳಿ ಶುಚಿತ್ವ ಕಾಪಾಡಿದ್ದಾರಾ ಎಂಬುವುದನ್ನು ಗಮನಿಸುತ್ತದೆ ಎಂದಿದ್ದಾರೆ. ಅಲ್ಲದೇ, “ನೈರ್ಮಲ್ಯ ಮಾನದಂಡಗಳನ್ನು ಅನುಸರಿಸುವಾಗ ಪರವಾನಗಿ ಪಡೆದ ಮಾಂಸದ ಅಂಗಡಿಗಳಿಗೆ ಮಾತ್ರ ಮುಚ್ಚಿದ ಕಿಯೋಸ್ಕ್‌ಗಳಲ್ಲಿ ತಮ್ಮ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ. ಯಾವುದೇ ಅಂಗಡಿ ಮಾಲೀಕರಿಗೆ ಪ್ರಾಣಿಗಳ ಶವವನ್ನು ತೆರೆದ ಪ್ರದೇಶಗಳಲ್ಲಿ ಎಸೆಯಲು ಅನುಮತಿ ಇಲ್ಲ ಎಂದಿದ್ದಾರೆ.
ಚೈತ್ರ ನವರಾತ್ರಿಯು ಶನಿವಾರ ಪ್ರಾರಂಭವಾಗಿದೆ ಮತ್ತು ಏಪ್ರಿಲ್ 10 ರಂದು ರಾಮ ನವಮಿಯಂದು ಕೊನೆಗೊಳ್ಳಲಿದೆ. ಒಂಬತ್ತು ದಿನಗಳ ಈ ಉತ್ಸವದಲ್ಲಿ ಭಕ್ತರು ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ