ವಿಪಕ್ಷನಾಯಕ ರಾಹುಲ್ ಗಾಂಧಿ ವಿರುದ್ಧ ದೇಶದ ರಾಜ ಮನೆತನಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ರಾಹುಲ್ ಗಾಂಧಿ ಬರೆದಿರುವ ಒಂದು ಲೇಖನ.
ನವದೆಹಲಿ (ನ.7): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮೈಸೂರು ಸೇರಿದಂತೆ ದೇಶದ ವಿವಿಧ ಪ್ರಖ್ಯಾತ ರಾಜಮನೆತನಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ಕೂಡ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಭಾರತದ ರಾಜಮನೆತನವನ್ನು ಬೆದರಿಸಿ ಲಂಚ ನೀಡಿ ಭಾರತವನ್ನು ಆಳಿತು ಎಂದು ಅವರು ತಮ್ಮ ಲೇಖನದಲ್ಲಿ ಬರೆದಿರುವುದೇ ವಿವಾದಕ್ಕೆ ಕಾರಣವಾಗಿದೆ. ಈಸ್ಟ್ ಇಂಡಿಯಾ ಕಂಪನಿ ಈಗ ಇಲ್ಲ. ಆದರೆ, ಅದು ಸೃಷ್ಟಿಸಿದ ಭಯ ಮತ್ತೆ ಕಾಣಿಸಿಕೊಳ್ಳಲು ಆರಂಭವಾಗಿದೆ. ಹೊಸ ಪೀಳಿಗೆಯಲ್ಲಿ ಕಾಣುತ್ತಿರುವ ಏಕಸ್ವಾಮ್ಯವು ಅದರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಲೇಖನ ಬರೆದಿದ್ದರು. ಇದೇ ಬರಹ ಈಗ ದೇಶಾದ್ಯಂತ ರಾಜ ಮನೆತನಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜ್ಯೋತಿರಾಧಿತ್ಯ ಸಿಂಧಿಯಾ, ರಾಹುಲ್ ಗಾಂಧಿ ಇನ್ನೂ ವಸಾಹಾತುಶಾಶಹಿ ಧೋರಣೆಯಲ್ಲಿಯೇ ಇದ್ದಾರೆ. ಅವರೀಗ ಎಲ್ಲಾ ಲಿಮಿಟ್‌ಅನ್ನೂ ದಾಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಜೈಪುರದ ರಾಜ ಕುಟುಂಬದ ಸದಸ್ಯೆ ಆಗಿರುವ ದಿಯಾ ಕುಮಾರ್, ಕಾಂಗ್ರೆಸ್ ಸಂಸದನಿಗೆ ಇತಿಹಾಸ ಕಿಂಚಿತ್ತು ಜ್ಞಾನವೂ ಇಲ್ಲ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಟೀಕೆ ಮಾಡಿದ್ದಾರೆ. ನಮ್ಮ ರಾಜ ಮಹಾರಾಜರು ತಮ್ಮ ಸ್ವಾಭಿಮಾನ ಮತ್ತು ದೇಶದ ಅಸ್ಮಿತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಯಾವ ರಾಜ ಲಂಚ ತೆಗೆದುಕೊಂಡಿದ್ದಾರೆ ಅನ್ನೋದನ್ನ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹೇಳಬೇಕು. ಇಲ್ಲದೇ ಇದ್ದಲ್ಲಿ ಅವರು ಸಾರ್ವಜನಿಕವಾಗಿ ತಮ್ಮ ಲೇಖನದ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
ಗ್ವಾಲಿಯರ್‌ಅನ್ನು ಆಳಿದ ರಾಜಮನೆತನದವರಾದ ಜ್ಯೋತಿರಾಧಿತ್ಯ ಸಿಂಧಿಯಾ, ರಾಹುಲ್ ಗಾಂಧಿಯವರ ಆಯ್ದ ವಿಸ್ಮೃತಿ, ತಮ್ಮ ವಂಶಾವಳಿಯಿಂದ ಅವರು ಅನುಭವಿಸಿದ ಸವಲತ್ತುಗಳನ್ನು ಮರೆತುಬಿಡುವಂತೆ ಮಾಡಿದೆ."ದ್ವೇಷ ಮಾರುವವರಿಗೆ ಭಾರತೀಯ ಹೆಮ್ಮೆ ಮತ್ತು ಇತಿಹಾಸದ ಬಗ್ಗೆ ಉಪನ್ಯಾಸ ನೀಡುವ ಹಕ್ಕಿಲ್ಲ. ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ರಾಹುಲ್ ಗಾಂಧಿಯವರ ಅಜ್ಞಾನ ಮತ್ತು ಅವರ ವಸಾಹತುಶಾಹಿ ಮನಸ್ಥಿತಿ ಎಲ್ಲಾ ಮಿತಿಗಳನ್ನು ಮೀರಿದೆ" ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.
undefined
ದೇಶದ 21 ಶಾಲೆಗಳ ಮಾನ್ಯತೆ ರದ್ದು ಮಾಡಿದ ಸಿಬಿಎಸ್‌ಇ, ಕರ್ನಾಟಕದ ಶಾಲೆ ಇದರಲ್ಲಿದ್ಯಾ?
ಒಂದು ಕಾಲದಲ್ಲಿ ರಾಯ್ಬರೇಲಿ ಸಂಸದರ ಆಪ್ತ ವ್ಯಕ್ತಿ ಎನಿಸಿಕೊಂಡಿ ಕೇಂದ್ರ ಸಚಿವರು, ಭಾರತದ ಪರಂಪರೆಯು "ಗಾಂಧಿ" ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭವಾಗುವುದಿಲ್ಲ ಅಥವಾ ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು. "ನಿಮ್ಮ ಅಪಶ್ರುತಿಯು ಕಾಂಗ್ರೆಸ್‌ನ ಕಾರ್ಯಸೂಚಿಯನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ -- ರಾಹುಲ್ ಗಾಂಧಿ ಆತ್ಮನಿರ್ಭರ ಭಾರತ್‌ನ ಚಾಂಪಿಯನ್ ಅಲ್ಲ. ಅವರು ಕೇವಲ ಹಳತಾದ ಅರ್ಹತೆಯ ಉತ್ಪನ್ನ" ಎಂದು ಸಿಂಧಿಯಾ ಟೀಕಿಸಿದ್ದಾರೆ.
ಭೂಮಿಯ ಕಟ್ಟಕಡೆಯ ದೇಶ ನಾರ್ವೆ, ಇಲ್ಲಿ ದಿನದ 23 ಗಂಟೆ ಬೆಳಕಿರುತ್ತದೆ!
ಜೈಪುರದ ಕೊನೆಯ ಮಹಾರಾಜರಾದ ಮಾನ್ ಸಿಂಗ್ II ರ ಮೊಮ್ಮಗಳು ದಿಯಾ ಕುಮಾರಿ, ಗಾಂಧಿಯವರು ಭಾರತದ ಹಿಂದಿನ ರಾಜಮನೆತನಗಳನ್ನು ಕೆಡಿಸಲು ಮತ್ತು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.