ಭಾರತದ ಅತಿ ಹೆಚ್ಚು ದಾನ ನೀಡುವವರ ಪಟ್ಟಿ ಬಿಡುಗಡೆಯಾಗಿದೆ. ಭಾರತದಲ್ಲಿ ಗರಿಷ್ಠ ದಾನ ನೀಡಿದವರ ಪೈಕಿ ಮೊದಲ ಸ್ಥಾನ ಶಿವ್ ನಾಡರ್ ಪಾಲಾಗಿದೆ..ಶಿವ್ ನಾಡರ್ ಎಷ್ಟು ಕೋಟಿ ದಾನ ನೀಡಿದ್ದಾರೆ ಗೊತ್ತಾ?
ನವದೆಹಲಿ(ನ.07) ಭಾರತ ಪುರಾತನ ಕಾಲದಿಂದಲೂ ದಾನ ಧರ್ಮಕ್ಕೆ ಪ್ರಸಿದ್ಧಿ. ಅಧುನಿಕ ಭಾರತದಲ್ಲೂ ಭಾರತದಲ್ಲಿ ದಾನ ಧರ್ಮಕ್ಕೆ ಮೊದಲ ಸ್ಥಾನ. ಭಾರತದಲ್ಲಿ ಉದ್ಯಮಿಗಳು, ಶ್ರೀಮಂತರು, ಸೆಲೆಬ್ರೆಟಿಗಳು ಹೆಚ್ಚಿನ ಮೊತ್ತ ದಾನ ಮಾಡಿದ್ದಾರೆ. ದೇಶಕ್ಕೆ ಸಂಕಷ್ಟ ಎದುರಾದಾಗ ದೇಣಿಕೆ ಮೂಲಕ ನೆರವು ನೀಡಿದ್ದಾರೆ. ಇದೀಗ ಹುರನ್ ಇಂಡಿಯಾ ಭಾರತದ ದಾನಶೀಲ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಂಬಾನಿ, ಅದಾನಿ, ಟಾಟಾ ಯಾರೂ ಅಲ್ಲ, ಹೆಚ್‌ಸಿಎಲ್ ಸಂಸ್ಥಾಪಕ ಶಿವ್ ನಾಡರ್ ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ಶ್ರೀಮಂತ ವ್ಯಕ್ತಿಗಳ ಪೈಕಿ ಶಿವ್ ನಾಡರ್ ಕೂಡ ಒಬ್ಬರು. ಹುರನ್ ಇಂಡಿಯಾ EdelGive 2024 ಭಾರತೀಯ ದಾನಶೀಲ ವ್ಯಕ್ತಿಗಳನ್ನು ಬಿಡುಗಡೆ ಮಾಡಿದೆ. ಶಿವ್ ನಾಡರ್ ಬರೋಬ್ಬರಿ 2,153 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ಗರಿಷ್ಠ ದಾನ ಮಾಡಿದ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 79 ವರ್ಷದ ಶಿವ್ ನಾಡರ್ ದಿನಕ್ಕೆ 5.9 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಗರಿಷ್ಠ ದಾನ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
undefined
ಟಾಟಾ ಟ್ರಸ್ಟ್‌ನಿಂದ ಸ್ಫೂರ್ತಿ ಪಡೆದ ಲೋಧಾ ಫ್ಯಾಮಿಲಿ, 20 ಸಾವಿರ ಕೋಟಿ ದಾನಕ್ಕೆ ನಿರ್ಧಾರ
ದೇಶದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿರುವ ಮುಖೇಶ್ ಅಂಬಾನಿ ವರ್ಷಕ್ಕೆ ₹407 ಕೋಟಿ ದಾನದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. Zerodha ಸಂಸ್ಥಾಪಕ ನಿಖಿಲ್ ಕಾಮತ್ ಕಿರಿಯ ಪರೋಪಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ₹154 ಕೋಟಿ ರೂಪಾಯಿ ದಾನ ಮಾಡಿದ್ದರೆ. ರೋಹಿಣಿ ನಿಲೇಕಣಿ ಪಟ್ಟಿಯಲ್ಲಿ ಅತಿ ಹೆಚ್ಚು ದಾನ ನೀಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದರ ಬಗ್ಗೆ EdelGive-Hurun ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ "ಭಾರತದಲ್ಲಿ ಹೆಚ್ಚು ದಾನ ನೀಡುವವರನ್ನು ಮುನ್ನಲೆಗೆ ತರಲು ಮತ್ತು ದೇಶವನ್ನು ಕಟ್ಟಲು ಭಾರತದ ಪರೋಪಕಾರ ಕ್ಷೇತ್ರದಲ್ಲಿ ವೈಯಕ್ತಿಕ ದಾನಿಗಳ ಪ್ರಾಮುಖ್ಯತೆಯನ್ನು ಸೆರೆಹಿಡಿಯಲು ಇದು ನಮ್ಮ ಪ್ರಯತ್ನವಾಗಿದೆ. ದಾನಗಳು ಏಪ್ರಿಲ್ 1, 2023 ರಿಂದ ಮಾರ್ಚ್ 31, 2024 ರವರೆಗೆ ಮಾಡಿದ ದಾನಗಳನ್ನು ಮೌಲ್ಯಮಾಪನ ಮಾಡಲಾಗಿದೆ.
EdelGive ಪಟ್ಟಿಯಲ್ಲಿರುವ ಮೊದಲ 10 ಜನರು 4,625 ಕೋಟಿ ರೂಪಾಯಿ ದಾನವಾಗಿ ನೀಡಿದ್ದಾರೆ. ಇದು ಪಟ್ಟಿಯಲ್ಲಿರುವ ಒಟ್ಟು ದಾನದ ಸುಮಾರು52 ಶೇಕಡಾ ಆಗಿದೆ. ಕೃಷ್ಣ ಸಿವುಕುಲ ಮತ್ತು ಸುಸ್ಮಿತಾ & ಸುಪ್ರೊಟೊ ಬಾಕ್ಸಿ ಕ್ರಮವಾಗಿ 7 ಮತ್ತು9ನೇ ಸ್ಥಾನಗಳನ್ನು ಪಡೆದು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಉನ್ನತ ದಾನಿಗಳಲ್ಲಿ 6 ಜನರು ತಮ್ಮ ದಾನದ ಪ್ರಯತ್ನಗಳಲ್ಲಿ ಪ್ರಾಥಮಿಕವಾಗಿ ಶಿಕ್ಷಣದ ಮೇಲೆ ಗಮನಹರಿಸಿದ್ದಾರೆ. ಗುಣಮಟ್ಟದ ಕಲಿಕೆಗೆ ಪ್ರವೇಶವನ್ನು ಸುಧಾರಿಸಲು ಮತ್ತು ಭಾರತದಾದ್ಯಂತ ಶೈಕ್ಷಣಿಕ ಪ್ರಯತ್ನಗಳನ್ನು ಬೆಂಬಲಿಸಲು ಬಲವಾದ ಬದ್ಧತೆಯನ್ನು ಎತ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ.