ಮೆಟ್ರೋದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರಯಾಣಕ್ಕೆ ಪುತ್ರಿ-ಸೊಸೆ ಸಾಥ್!

By Chethan Kumar  |  First Published Aug 4, 2024, 4:46 PM IST

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಗೌಡರಿಗೆ ಮಗಳು ಹಾಗೂ ಸೊಸೆ ಸಾಥ್ ನೀಡಿದ್ದಾರೆ. ಪ್ರಯಾಣಿಕರ ಜೊತೆ ಮಾತನಾಡುತ್ತಾ ದೇವೇಗೌಡರು ಪ್ರಯಾಣ ಮಾಡಿದ ವಿಡಿಯೋ ವೈರಲ್ ಆಗಿದೆ.
 


ದೆಹಲಿ(ಆ.04) ಮಾಜಿ ಪ್ರಧಾನಿ ದೇವೇಗೌಡರು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ಪ್ರಧಾನಿ ಮ್ಯೂಸಿಯಂಗೆ ಭೇಟಿ ನೀಡಿದ್ದ ದೇವೇಗೌಡರು ಇಂದು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಹೆಚ್‌ಡಿ ದೇವೇಗೌಡರಿಗೆ ಪುತ್ರಿ ಡಾ.ಅನಸೂಯಾ ಹಾಗೂ ಸೊಸೆ ಸಾಥ್ ನೀಡಿದ್ದಾರೆ. ದೆಹಲಿಯ ಲೋಕಕಲ್ಯಾಣ ಮಾರ್ಗ್ ಮೆಟ್ರೋ ನಿಲ್ದಾಣದಿಂದ ದೇವೇಗೌಡರು ದಿಲ್ಲಿ ಹಾತ್ ನಿಲ್ದಾಣದ ವರೆಗೆ ಪ್ರಯಾಣ ಮಾಡಿದ್ದಾರೆ. ಗೌಡರ ದೆಹಲಿ ಮೆಟ್ರೋ ಪ್ರಯಾಣ ವಿಡಿಯೋ ವೈರಲ್ ಆಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಜೊತೆ ಅಧಿಕಾರಿಗಳು ತೆರಳಿದ್ದಾರೆ. ಇದೇ ವೇಳೆ ಅಧಿಕಾರಿಗಳಿಂದ ದೆಹಲಿ ಮೆಟ್ರೋ ಮಾರ್ಗ, ಪ್ರತಿ ದಿನದ ಪ್ರಯಾಣಿಕರು, ಸಂಚಾರ ದಟ್ಟಣೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮೆಟ್ರೋದಲ್ಲಿದ್ದ ಪ್ರಯಾಣಿಕರನ್ನು ದೇವೇಗೌಡರು ಮಾತನಾಡಿದ್ದಾರೆ.  ಹಾತ್ ನಿಲ್ದಾಣದಲ್ಲಿ ಇಳಿದ ದೇವೇಗೌಡರು ಬಳಿಕ ಅಲ್ಲಿಂದ ಲೋಕಕಲ್ಯಾಣ ಮಾರ್ಗ ನಿಲ್ದಾಣಕ್ಕೆ ವಾಪಸಾಗಿದ್ದಾರೆ. 

Latest Videos

undefined

ಮೋದಿ ಗೆದ್ದರೆ ರಾಜೀನಾಮೆ ಎಂದಿದ್ದೆ, ನಡ್ಡಾ ಸಮಯ ಪಡೆದು ಬಜೆಟ್ ಚರ್ಚೆ ನಡೆಸಿದ ದೇವೇಗೌಡರು!

ದೆಹಲಿ ಮೆಟ್ರೋ ಪ್ರಯಾಣದ ಬಳಿಕ ದೇವೇಗೌಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾನು ಇಂದು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದೇನೆ. ಈ ಮೆಟ್ರೋ ಸೌಲಭ್ಯ ನಮ್ಮ ಸಹೋದರ, ಸಹೋದರಿಯರಿಗೆ ಹೇಗೆ ನೆರವಾಗುತ್ತಿದ್ದೆ ಎಂಬುದನ್ನು ಅರಿತುಕೊಳ್ಳಲು ಪ್ರಯಾಣ ಮಾಡಿದ್ದೇನೆ. ಇದೇ ವೇಳೆ ನನ್ನ ಜೊತೆಗೆ ಆಗಮಿಸಿದ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ದೇವೇಗೌಡರು ಹೇಳಿದ್ದಾರೆ.

ಶನಿವಾರ(ಆ.03) ದೇವೇಗೌಡರು ದೆಹಲಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಭಾರತದ ಎಲ್ಲಾ ಪ್ರಧಾನಿಗಳ ಸ್ಮರಣೀಯ ಸಂಗ್ರಹಾಲಯ ಇದಾಗಿದೆ. ಅತ್ಯುತ್ತಮವಾಗಿ, ಅಚ್ಚುಕಟ್ಟಾಗಿ ಇಲ್ಲಿ ವಸ್ತುಗಳ ಜೋಡಣೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಯೋಜನೆ ರೂಪಿಸಿ ಯಶಸ್ವಿಯಾಗಿ ಲೋಕಾರ್ಪಣೆಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರು ಧನ್ಯವಾದ ಅರ್ಪಿಸಿದ್ದರು.

 

 

ಸಾಮಾನ್ಯ ರೈತ ಕುಟುಂಬದಿಂದ ಬಂದು ಈ ದೇಶದ ಪ್ರಧಾನಿಯಾಗಿ ಇದೀಗ ಈ ವಸ್ತುಸಂಗ್ರಹಾಲಯದಲ್ಲೂ ವಿಷವಾಗಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ಈ ದೇಶದ ಪ್ರಜಾಪ್ರಭುತ್ವ ನನಗೆ ಅವಕಾಶ ಮಾಡಿಕೊಟ್ಟಿದೆ. ಜನಗಳು ತೋರಿದ ಪ್ರೀತಿಯಿಂದ ನನಗೆ ಇದೆಲ್ಲವೂ ಸಾಧ್ಯವಾಯಿತು ಎಂದು ದೇವೇಗೌಡರು ಹೇಳಿದ್ದರು. ಮ್ಯೂಸಿಯಂಗೆ ಆಗಮಿಸಿದ ದೇವೇಗೌಡರನ್ನು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಸ್ವಾಗತಿಸಿದ್ದರು. ಬಳಿಕ ಸಂಪೂರ್ಣ ಮ್ಯೂಸಿಯಂ ಕುರಿತು ಮಾಹಿತಿ ನೀಡಿದ್ದರು.  

ಎಲ್ಲದಕ್ಕೂ ದೇವೇಗೌಡರನ್ನು ಹೊಣೆ ಮಾಡಲಾಗದು: ಸಿ.ಎಸ್.ಪುಟ್ಟರಾಜು
 

click me!