ಭೂಕುಸಿತವಾದ ವಯನಾಡು ಕ್ಷೇತ್ರದ ಸ್ಥಳಗಳಿಗೆ ಶಶಿ ತರೂರ್ ಭೇಟಿ ನೀಡಿದ್ದರು. ವಯನಾಡಿನಿಂದ ಹಿಂದಿರುಗಿದ ಬಳಿಯ ಇದೊಂದು ಸ್ಮರಣೀಯ ದಿನ ಎಂದು ಟ್ವೀಟ್ ಮಾಡಿದ್ದರು
ತಿರುವನಂತಪುರ: ಕೇರಳದ ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ವಯನಾಡಿನ ಭೇಟಿಯನ್ನು ಸ್ಮರಣೀಯ ದಿನ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಭೂಕುಸಿತವಾದ ವಯನಾಡು ಕ್ಷೇತ್ರದ ಸ್ಥಳಗಳಿಗೆ ಶಶಿ ತರೂರ್ ಭೇಟಿ ನೀಡಿದ್ದರು. ವಯನಾಡಿನಿಂದ ಹಿಂದಿರುಗಿದ ಬಳಿಯ ಇದೊಂದು ಸ್ಮರಣೀಯ ದಿನ ಎಂದು ಟ್ವೀಟ್ ಮಾಡಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಶಶಿ ತರೂರ್ ಸ್ಮರಣೀಯ ಅಂದ್ರೆ ಇದು ಮರೆಯಲಾರದಂತಹ ಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನನ್ನು ಟ್ರೋಲ್ ಮಾಡುತ್ತಿರುವ ಎಲ್ಲರಿಗೂ ಈ ಟ್ವೀಟ್ ಮಾಡುತ್ತಿದ್ದೇನೆ. ಸಾಮಾನ್ಯ ಭಾಷೆಯಲ್ಲಿ ಸ್ಮರಣೀಯ (Memorable) ಅಂದ್ರೆ ನೆನಪಿನಲ್ಲಿ ಉಳಿಯುವಂತಹದ್ದು. ಇದನ್ನು ಭವಿಷ್ಯದಲ್ಲಿ ನೆನಪಿನಲ್ಲಿ ಉಳಿಯುವಂತಹ ದಿನ ಅಂತಾನೂ ಅರ್ಥೈಸಲಾಗುತ್ತದೆ. ಹಾಗಾಗಿ ಈ ದುರಂತ ಜೀವನದಲ್ಲಿ ಸದಾ ನೆನಪಿನಲ್ಲಿರುತ್ತೆ ಎಂದು ಶಶಿ ತರೂರ್ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಶಿ ತರೂರ್ ಭೂಕುಸಿತ ಸಂತ್ರಸ್ತರಿಗೆ ಸಾಮಾಗ್ರಿಗಳನ್ನು ವಿತರಣೆ ಮಾಡೋದನ್ನು ಕಾಣಬಹುದು. ಹಾಗೆ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿರುವ ಶಶಿ ತರೂರ್, ಅಲ್ಲಿಯ ಜನತೆ ಜೊತೆ ಮಾತುಕತೆ ನಡೆಸಿ, ಅವರ ಕಷ್ಟವನ್ನು ಆಲಿಸಿದ್ದಾರೆ. ಈ ವೇಳೆ ಮಾತನಾಡಿದ ಶಶಿ ತರೂರ್, ಸದ್ಯ ನಮ್ಮ ತಂಡದಿಂದ ಹಾಸಿಗೆ ಸೇರಿದಂತೆ ಕೆಲವು ಅಗತ್ಯ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿದ್ದೇವೆ. ನಾವು ಭವಿಷ್ಯದಲ್ಲಿ ಸಂತ್ರಸ್ತರಿಗೆ ಕಲ್ಪಿಸಬಹುದಾದ ಸಹಾಯದ ಬಗ್ಗೆ ಪ್ಲಾನ್ ಮಾಡಿಕೊಳ್ಳಬೇಕು. ವಯನಾಡು ಭೇಟಿ ತುಂಬಾ ಭಾವನಾತ್ಮಕವಾಗಿದ್ದು, ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ.
Wayanad Landslides: ಭೂಕುಸಿತ ಪ್ರದೇಶದಲ್ಲಿ ನಾಲ್ವರನ್ನ ರಕ್ಷಣೆ ಮಾಡಿದ ಭಾರತೀಯ ಸೇನೆ!
ವಯನಾಡು ಭೂಕುಸಿತದಲ್ಲಿ ಮೃತರ ಸಂಖ್ಯೆ 365ಕ್ಕೆ ಏರಿಕೆಯಾಗಿದ್ದು, 206ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಇಂಡಿಯನ್ ಆರ್ಮಿ ಮತ್ತು ಎನ್‌ಡಿಆರ್‌ಎಫ್ ತಂಡದ ಸದಸ್ಯರು ಸತತವಾಗಿ ಆರನೇ ದಿನ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ವಯನಾಡು ಭಾಗದ ಬಹುತೇಕ ಎಲ್ಲಾ ಆಸ್ಪತ್ರೆಗಳು ಗಾಯಾಳುಗಳಿಂದ ಭರ್ತಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬದುಕಿದವರು ತಮ್ಮ ಕುಟುಂಬದವರ ಹುಡುಕಾಟದಲ್ಲಿದ್ದಾರೆ.
ವಯನಾಡು ಸಂತ್ರಸ್ತರಿಗೆ ನೆರವು
ಜಗತ್ತಿನ ನಾನಾ ಭಾಗಗಳಿಂದ ವಯನಾಡು ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ನೆರವು ಹರಿದುಬರುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಲಾ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಶೋಭಾ ರಿಯಲ್ ಎಸ್ಟೇಟ್ ಕಂಪನಿ 50 ಮನೆ, ವಿಶ್ವ ಮಲಯಾಳಿ ಮಂಡಳಿ 14 ಮನೆ, ಕೋಟಕ್ಕಲ್ ಆರ್ಯವೈದ್ಯಶಾಲಾದವರು 10 ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಜನರು ದೇಣಿಗೆ ನೀಡುವುದಕ್ಕೆ ಹೊಸ ವೆಬ್‌ಸೈಟ್ ಕೂಡ ರೂಪಿಸಲಾಗಿದೆ ಎಂದು ತಿಳಿಸಿದರು.
ವಯನಾಡು ದುರಂತಕ್ಕೆ ಎಚ್ಚೆತ್ತ ಕೇಂದ್ರ, ಕರ್ನಾಟಕ ಸೇರಿ 6 ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಗಣಿಗಳ ನಿಷೇಧಕ್ಕೆ ಸಿದ್ಧತೆ
Some memories of a memorable day in Wayanad pic.twitter.com/h4XEmQo66W
— Shashi Tharoor (@ShashiTharoor)For all the trolls: definition of “memorable”: Something that is memorable is worth remembering or likely to be remembered, because it is special or unforgettable.
Thats all i meant. https://t.co/63gkYvEohv
Chooralmala, Mundakkai and GroundZero of the , Punchirimattam, during our visit today pic.twitter.com/SRczwaKx6k
— Shashi Tharoor (@ShashiTharoor)