
ನವದೆಹಲಿ (ಮೇ.28): ಪುಲ್ವಾಮಾ ದಾಳಿಯಲ್ಲಿ (Pulwama attack) ಪಾಕಿಸ್ತಾನದ ಪಾತ್ರವಿದೆ ಎಂದು ದೇಶದ ಸಂಸತ್ತಿನಲ್ಲಿಯೇ ಮುಕ್ತವಾಗಿ ಹೇಳಿದ್ದ ಪಾಕಿಸ್ತಾನದ (Pakistan ) ಮಾಜಿ ಸಚಿವ ಫವಾದ್ ಚೌಧರಿ (Fawad Chaudhry) ಭಾರತದಲ್ಲಿನ ಚುನಾವಣೆಯ (Lok Sabha Elections 2024) ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಐಎಎನ್‌ಎಸ್‌ಗೆ ಮಾತನಾಡಿದ್ದಾರೆ. ಸುದ್ದಿಸಂಸ್ಥೆ ಎಕ್ಸ್‌ಕ್ಲೂಸಿವ್ ವಿಡಿಯೋವನ್ನು ಹಂಚಿಕೊಂಡಿದ್ದು, 'ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರಲ್ಲಿ ಭಾರತೀಯ ಮತದಾರನ ಲಾಭ ಕೂಡ ಅಡಗಿದೆ. ಭಾರತವು ಪ್ರಗತಿಪರ ರಾಷ್ಟ್ರವಾಗಿ ಮುನ್ನಡೆಯಬೇಕು ಮತ್ತು ಅದಕ್ಕಾಗಿಯೇ ನರೇಂದ್ರ ಮೋದಿ ಮತ್ತು ಅವರ ತೀವ್ರವಾದ ಸಿದ್ಧಾಂತವನ್ನು ಸೋಲಿಸಬೇಕಾಗಿದೆ. ಅವರನ್ನು ಸೋಲಿಸುವವರು ಯಾರೇ ಆಗಲಿ, ಅದು ರಾಹುಲ್ ಜೀ ಆಗಿರಲಿ. ಕೇಜ್ರಿವಾಲ್ ಜಿ ಅಥವಾ ಮಮತಾ ಬ್ಯಾನರ್ಜಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ತಮ್ಮ 1. 45 ಸೆಕೆಂಡ್‌ನ ವಿಡಿಯೋದಲ್ಲಿ ಹೇಳಿದ್ದಾರೆ.
ಕಾಶ್ಮೀರವಾಗಲಿ ಅಥವಾ ಭಾರತದ ಯಾವುದೇ ಪ್ರದೇಶದಲ್ಲಿರುವ ಮುಸ್ಲಿಮರಾಗಲಿ ಇಂದು ಯಾವ ರೀತಿಯಲ್ಲಿ ಕಟ್ಟರ್‌ವಾದಿ ಸಿದ್ಧಾಂತವನ್ನು ಎದುರಿಸುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಮುಸ್ಲಿಮರಲ್ಲದೆ ಇರುವ ಅಲ್ಪಸಂಖ್ಯಾತರು ಯಾವ ರೀತಿಯ ಸಮಸ್ಯೆಗಳಲ್ಲಿ ಮುಳುಗಿದ್ದಾರೆ ಅನ್ನೋದು ತಿಳಿದಿದೆ. ಆ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಸೋಲು ಕಾಣುವುದು ಬಹಳ ಅಗತ್ಯವಾಗಿದೆ. ಪಾಕಿಸ್ತಾನದ ಪ್ರತಿಯೊಬ್ಬರೂ ಕೂಡ ಮೋದಿ ಸೋಲು ಕಾಣೋದನ್ನೇ ಬಯಸುತ್ತಾರೆ.
ಉಗ್ರವಾದ ಯಾವಾಗ ಕಡಿಮೆಯಾಗುತ್ತದೆಯೋ ಹಿಂದುಸ್ತಾನ ಹಾಗೂ ಪಾಕಿಸ್ತಾನದ ನಡುವಿನ ಸಂಭಂಧ ಅಂದು ಉತ್ತಮವಾಗುತ್ತದೆ. ಪಾಕಿಸ್ತಾನದ ಒಳಗೂ ಇದು ಸಾಧ್ಯವಾಗುತ್ತದೆ. ಭಾರತದಲ್ಲೂ ಇದು ಸಾಧ್ಯವಾಗುತ್ತದೆ. ಪಾಕಿಸ್ತಾನದಲ್ಲಿ ಹಿಂದುಸ್ತಾನದ ಕುರಿತಾಗಿ ಯಾವುದೇ ದ್ವೇಷವಿಲ್ಲ. ಆದರೆ, ಭಾರತದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್, ಪಾಕಿಸ್ತಾನದ ಕುರಿತಾಗಿ, ಮುಸ್ಲಿಮರ ಕುರಿತಾಗಿ ದ್ವೇಷವನ್ನು ಹಂಚುವ ಕೆಲಸ ಮಾಡುತ್ತಿದೆ. ಈ ದ್ವೇಷದ ವಿರುದ್ಧ ಹೋರಾಡುವ ವ್ಯಕ್ತಿಗಳನ್ನು ನಾವು ಚುನಾವಣೆಯಲ್ಲಿ ಗೆಲ್ಲಿಸಬೇಕು. ಅದಕ್ಕಾಗಿಯೇ ನಾನು ಹೇಳುತ್ತೇನೆ, ಭಾರತದ ಮತದಾರರು ಮೂರ್ಖರಲ್ಲ. ಅವರಿಗೆ ಯಾವುದರಲ್ಲಿ ಲಾಭವಿದೆ ಅನ್ನೋದು ಗೊತ್ತಿದೆ. ಪಾಕಿಸ್ತಾನದ ಜೊತೆಗೆ ಸಂಬಂಧ ವೃದ್ಧಿಯಾದರೆ ಮಾತ್ರವೇ ತಮಗೆ ಲಾಭ ಅನ್ನೋದು ಅವರಿಗೆ ತಿಳಿದಿದೆ. ಇದರಿಂದಾಗಿಯೇ ಭಾರತ, ಪ್ರಗತಿಶೀಲ ರಾಷ್ಟ್ರವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ನರೇಂದ್ರ ಮೋದಿ ಹಾಗೂ ಅವರ ಕಟ್ಟರ್‌ವಾದಿ ಸಿದ್ಧಾಂತ ಸೋಲೋದು ಅಗತ್ಯವಾಗಿದೆ.
ಚಂದ್ರಯಾನ-3 ಯಶಸ್ವಿಯಿಂದ ಪಾಕ್‌ಗೆ ಹೊಟ್ಟೆ ಉರಿ, ಉಡಾವಣೆ ವ್ಯಂಗ್ಯವಾಡಿದ ಮಾಜಿ ಸಚಿವ!
ಅವರನ್ನು ಸೋಲಿಸವ ವ್ಯಕ್ತಿಗಳು ಯಾರೇ ಆಗಿರಲಿ, ಅದು ರಾಹುಲ್ ಜೀ ಆಗಿರಬಹುದು. ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಸೇರಿದಂತೆ ಯಾರೇ ಆಗಿರಬಹುದು. ಅವರಿಗೆ ನಾವು ಶುಭಕೋರುತ್ತೇವೆ. ಅವರಿಗೆ ನಾವು ಬೆಂಬಲ ನೀಡುತ್ತೇವೆ. ಯಾಕೆಂದರೆ, ಇವರಿಂದಲೇ ಈ ಕಟ್ಟರ್‌ವಾದಿ ಸಿದ್ಧಾಂತ ಸೋಲಲು ಸಾಧ್ಯ ಎಂದು ಫವಾದ್ ಚೌಧರಿ ಹೇಳಿದ್ದಾರೆ.
14 ಕೋಟಿ ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ