ಕೇರಳದಲ್ಲಿ ರಾಜಾರಾಣಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಹಾವು ಕಚ್ಚಿದ್ದಾಗಿ ವರದಿಯಾಗಿತ್ತು. ಆದರೆ, ಇದು ಹಾವು ಆಗಿರುವ ಸಾಧ್ಯತೆ ಕಡಿಮೆ ಎಂದು ರೈಲ್ವೇಸ್ ಹೇಳಿದೆ.
ಕೊಚ್ಚಿ (ಮೇ.28): ಕೇರಳದ (Kerala) ನಿಲಂಬೂರಿನಿಂದ ಶೋರ್ನೂರ್ (Shoranur) ಕಡೆಗೆ ಸಾಗುತ್ತಿದ್ದ ರಾಜಾರಾಣಿ ಎಕ್ಸ್‌ಪ್ರೆಸ್ (Rajyarani Express) ರೈಲಿನಲ್ಲಿ 25 ವರ್ಷದ ಮಹಿಳೆಗೆ ಹಾವು ಕಚ್ಚಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇಸ್ (Railways), ಮಹಿಳೆಗೆ ರೈಲಿನಲ್ಲಿ ಕಚ್ಚಿರೋದು ಹಾವಲ್ಲ (Snak Bite) ಎಂದು ಹೇಳಿದೆ. ಅದರ ಬದಲು ವಿಷಕಾರಿಯಲ್ಲದ ಯಾವುದೋ ಸರಿಸೃಪ ಅಥವಾ ಪ್ರಾಣಿ ಕಚ್ಚಿರಬಹುದು ಎಂದು ತಿಳಿಸಿದೆ. ಆದರೆ, ಇದು ಯಾವ ಪ್ರಾಣಿ ಅನ್ನೋದನ್ನ ತನಿಖೆ ಮಾಡುತ್ತಿರುವುದಾಗಿ ಹೇಳಿದೆ. ಪೂಕೊಟ್ಟುಂಪದಂ ನಿವಾಸಿ ಆಯುರ್ವೇದ ವೈದ್ಯೆಯಾಗಿರುವ ಡಾ.ಟಿ.ಪಿ.ಗಾಯತ್ರಿ (25) ಮಂಗಳವಾರ ಶೋರ್ನೂರ್ ವಿಷ್ಣು ಆಯುರ್ವೇದ ಆಸ್ಪತ್ರೆಗೆ ತೆರಳಬೇಕಿತ್ತು. ವಾಣಿಯಂಬಲಂನಿಂದ ಗಾಯತ್ರಿ ರೈಲು ಹತ್ತಿದ್ದರು. ವಲ್ಲಪುಳ ತಲುಪುವ ಮುನ್ನ ನನ್ನ ಕಾಲಿಗೆ ಏನೋ ಕಚ್ಚಿದ ಅನುಭವವಾಯಿತು. ಸಣ್ಣದಾಗಿ ಕಚ್ಚಿದ ಗುರುತು ಕೂಡ ಕಾಣಿಸಿತು. ನಂತರ ವಲ್ಲಪುಳ ನಿಲ್ದಾಣದಲ್ಲಿ ಇಳಿದು ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಗೆ ತಮ್ಮನ್ನು ಸಾಗಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಗಾಯತ್ರಿ ಅವರಿಗೆ ರಕ್ತ ಪರೀಕ್ಷೆಯನ್ನೂ ಮಾಡಲಾಗಿದೆ. ಮೂರು ಗಂಟೆಗಳ ಕಾಲ, ಅಬ್ಸರ್ವೇಷನ್‌ನಲ್ಲಿ ಇಡಲಾಗಿತ್ತು. ವೈದ್ಯರು ಕೂಡ ಪ್ರತಿ ಗಂಟೆಗೆ ರೋಗಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೆ, ಗಾಯತ್ರಿ ಅವರಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಈ ಹಂತದಲ್ಲಿ ಅವರು ಆರೋಗ್ಯವಾಗಿದ್ದರು ಎಂದು ತಿಳಿಸಿದ್ದಾರೆ. ರಕ್ತ ಪರೀಕ್ಷೆಯ ವರದಿಯಲ್ಲೂ ಅವರ ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಗಾಯತ್ರಿ ಅವರು ಪ್ರಯಾಣ ಮಾಡುತ್ತಿದ್ದ ಕಂಪಾರ್ಟ್‌ಮೆಂಟ್‌ಅನ್ನು ರೈಲ್ವೆ ಅಧಿಕಾರಿಗಳು ಖಾಲಿ ಮಾಡಿಸಿದ್ದರು. ಖಾಲಿ ಕಂಪಾರ್ಟ್‌ಮೆಂಟ್‌ನೊಂದಿಗೆ ರೈಲು ನಿಲಂಬೂರಿಗೆ ತೆರಳಿತ್ತು. ಈ ವೇಳೆ ರೈಲ್ವೆ ಪೊಲೀಸರಲ್ಲದೆ, ಅರಣ್ಯ ಇಲಾಖೆಯ ವಾನಂ ಸೆಕ್ಷನ್‌ನ ಅಧಿಕಾರಿಗಳು ಕೂಡ ಕಂಪಾರ್ಟ್‌ಮೆಂಟ್‌ಅನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದರು.
ಈ ವೇಳೆ ರೈಲಿನಲ್ಲಿ ಯಾವುದೇ ಹಾವು ಪತ್ತೆಯಾಗಿಲ್ಲ. ಬಹುಶಃ ಆಕೆಯ ಕಾಲಿಗೆ ಇಲಿ ಕಚ್ಚಿರಬಹುದು ಎಂದು ರೈಲ್ವೆ ಮತ್ತು ಆಸ್ಪತ್ರೆ ಅಧಿಕಾರಿಗಳು ಸದ್ಯಕ್ಕೆ ತೀರ್ಮಾನಿಸಿದ್ದಾರೆ. ಅರಣ್ಯ ಇಲಾಂಎಕಯ ಅಧಿಕಾರಿಗಳಾದ ಸುಮಿತ್ ಮತ್ತು ಬಿನೀಶ್, ವಾಚರ್‌ಗಳಾದ ನಿಸಾರ್ ಮತ್ತು ಅಜೀಜ್ ಮತ್ತು ತುರ್ತು ಸ್ಪಂದನಾ ಪಡೆಯ (ಇಆರ್‌ಎಫ್) ಸದಸ್ಯ ಮಜೀದ್ ತಪಾಸಣೆಯಲ್ಲಿ ಭಾಗವಹಿಸಿದ್ದರು.
undefined
ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಎರಡು ದಿನ ಧ್ಯಾನ!
ಇದಕ್ಕೂ ಮುನ್ನ, ಗಾಯತ್ರಿ ತಮಗೆ ಹಾವು ಕಚ್ಚಿದೆ ಎನ್ನುವ ಕಾರಣಕ್ಕೆ ರೈಲಿನಿಂದ ಇಳಿದಿದ್ದರು. ಬಳಿಕ ರೈಲ್ವೆ ನಿಲ್ದಾಣದ ಜನರ ಸಹಾಯ ಕೋರಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಸೀಟಿನ ಕೆಳಗೆ ಹಾವನ್ನು ಕಂಡಿರುವುದಾಗಿ ತಿಳಿಸಿದ್ದರು. "ನಾವು ಅವಳ ಕಾಲಿನಲ್ಲಿ ಕಚ್ಚಿದ ಗುರುತುಗಳನ್ನು ನೋಡಿದ್ದೇವೆ. ನಾವು ಅವಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದೇವೆ" ಎಂದು ಇತರರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ರೀಲ್ ಮಾಡುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬರಾದ ವಿಜೇಶ್ ತಿಳಿಸಿದ್ದರು. ವಲ್ಲಪುಳ ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಸಿಬ್ಬಂದಿ ಇಲ್ಲದ ಕಾರಣ, ಗಾಯತ್ರಿಯನ್ನು ಪೆರಿಂತಲ್ಮನ್ನಾದಲ್ಲಿರುವ ಮತ್ತೊಂದು ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿತ್ತು.
ಭಾರತೀಯ ರೈಲ್ವೇಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್, 20 ರೂಪಾಯಿಗೆ ಊಟ-ತಿಂಡಿ!