ತಮ್ಮ ನಿವಾಸಕ್ಕೆ 'Mama Ka Ghar' ಎಂದು ಹೆಸರಿಟ್ಟ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌!

Published : Jan 03, 2024, 05:41 PM IST
ತಮ್ಮ ನಿವಾಸಕ್ಕೆ 'Mama Ka Ghar' ಎಂದು ಹೆಸರಿಟ್ಟ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌!

ಸಾರಾಂಶ

ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಜ್ಯದ ಜನರಲ್ಲಿ ಮನವಿ ಮಾಡಿದ್ದು ತಮ್ಮ ನಿವಾಸ ಸಾರ್ವಜನಿಕರಿಗಾಗಿ ಯಾವಾಗಲೂ ತೆರೆದಿರುತ್ತದೆ. ಯಾವ ಹಿಂಜರಿಕೆಯೂ ಇಲ್ಲದೆ ನೀವು ಮನೆಗೆ ಬರಬಹುದು ಎಂದು ಹೇಳಿದ್ದಾರೆ. ಅದಲ್ಲದೆ, ತಮ್ಮ ನಿವಾಸಕ್ಕೆ ರಾಜ್ಯದ ಜನರು ಕೊಟ್ಟ 'ಮಾಮಾ ಕಾ ಘರ್‌' ಎಂದೇ ಹೆಸರನ್ನಿಟ್ಟಿದ್ದಾರೆ.

ನವದೆಹಲಿ (ಜ.3): ಮಧ್ಯಪ್ರದೇಶದ ಹಿಂದಿನ ಬಿಜೆಪಿ ಸರ್ಕಾರದ ಮಹತ್ವದ ಯೋಜನೆ 'ಲಾಡ್ಲಿ ಬೆಹೆನಾ'. ಈ ಯೋಜನೆಯಿಂದ ದೊಡ್ಡ ಮಟ್ಟದ ಲಾಭ ಗಳಿಸಿದ ಬಿಜೆಪಿ, ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಲಾಡ್ಲಿ ಬೆಹೆನಾ ಎಂದರೆ ಮುದ್ದು ಸಹೋದರಿ ಯೋಜನೆಯ ಅನ್ವಯ ಪ್ರತಿ ತಿಂಗಳು ರಾಜ್ಯ ಮಹಿಳೆಯರಿಗೆ 1250 ರೂಪಾಯಿ ನೀಡಲಾಗುತ್ತಿತ್ತು. ಇದರಿಂದಾಗಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು 'ಮಾಮಾ' ಎಂದೇ ಮಹಿಳೆಯರು ಕರೆಯಲು ಆರಂಭಿಸಿದ್ದರು. ಆದರೆ, ಮತ್ತೊಮ್ಮೆ ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅಧಿಕಾರಕ್ಕೆ ಏರಿದರೂ, ಶಿವರಾಜ್ ಸಿಂಗ್‌ ಚೌಹಾಣ್‌ಗೆ ಸಿಎಂ ಸ್ಥಾನ ಸಿಕ್ಕಿರಲಿಲ್ಲ. ಇದರ ನಡುವೆ ತಮ್ಮ ಅಧಿಕೃತ ಸಿಎಂ ನಿವಾಸವನ್ನು ಖಾಲಿ ಮಾಡಿ ತಮ್ಮ ನಿವಾಸಕ್ಕೆ ವಾಪಾಸಾಗಿದ್ದಾರೆ. ಹಾಗಿದ್ದರೂ, ತಮ್ಮ ಮನೆಗೆ ಅವರು 'ಮಾಮಾ ಕಾ ಘರ್‌' ಎಂದು ಹೆಸರನ್ನಿಟ್ಟಿದ್ದಾರೆ. ಇದೇ ವೇಳೆ ಮನವಿ ಮಾಡಿರುವ ಅವರು, 'ನನ್ನ ಪ್ರೀತಿಯ ಸಹೋದರಿಯರು, ಸಹೋದರರು ಮತ್ತು ಸೋದರಳಿಯರು ಮತ್ತು ಸೊಸೆಯರೇ, ನಿಮ್ಮೆಲ್ಲರೊಂದಿಗಿನ ನನ್ನ ಸಂಬಂಧವು ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯದಿಂದ ಕೂಡಿದೆ. ವಿಳಾಸ ಬದಲಾಗಿದೆ ಆದರೆ ನಿಮ್ಮ ಮಾಮಾನ ಮನೆ ಹಾಗಯೇ ಇದೆ. ನಾನು ಸಹೋದರ ಮತ್ತು ಚಿಕ್ಕಪ್ಪನಂತೆ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇನೆ. ನಿನಗಾಗಿ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ' ಎಂದು ಬರೆದುಕೊಂಡಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಲು ಸಾಧ್ಯವಾಗದಿದ್ದರೂ ಜನರ ಮೇಲಿನ ಪ್ರೀತಿ ಕಡಿಮೆಯಾಗುತ್ತಿಲ್ಲ. ಮಾಜಿ ಸಿಎಂ ಜನರೊಂದಿಗೆ ಸಾಕಷ್ಟು ಸಂಪರ್ಕ ಹೊಂದಿದ್ದಾರೆ. ಮಧ್ಯಪ್ರದೇಶದ ಜನರು ಅವರನ್ನು 'ಮಾಮಾ' ಎಂದೇ ಕರೆಯುತ್ತಾರೆ. ಇದಕ್ಕಾಗಿ ತಮ್ಮ ನಿವಾಸವನ್ನೇ ಅವರು 'ಮಾಮಾ ಕಾ ಘರ್‌' ಎಂದರೆ ಮಾಮನ ಮನೆ ಎಂದೇ ನಾಮಕರಣ ಮಾಡಿದ್ದಾರೆ.

ನಿಮಗೆ ನನ್ನ ನೆನಪಾದಾಗ ಅಥವಾ ನನಗೆ ಅಗತ್ಯವಿರುವಾಗ, ಮನೆಗೆ ಬರಲು ಹಿಂಜರಿಯಬೇಡಿ, ಇದು ನಿಮ್ಮ ಮಾಮನ ಮನೆ ಎಂದೇ ಭಾವಿಸಿ ಬನ್ನಿ ಎಂದು ಶಿವರಾಜ್ ಸಿಂಗ್ ಚೌಹಾಣ್ ಸಾರ್ವಜನಿಕರನ್ನು ಉದ್ದೇಶಿಸಿ ಹೇಳಿದರು.

ಶಿವರಾಜ್ ಸಿಂಗ್ ಚೌಹಾಣ್ ಮನೆ ಬದಲು: ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮನೆಯ ವಿಳಾಸ ಬದಲಾಗಿದೆ. ತಮ್ಮ ಹಳೆಯ ನಿವಾಸವನ್ನು ಖಾಲಿ ಮಾಡಿ ಈಗ ಹೊಸ ಮನೆಗೆ ವಾಸವಾಗಿದ್ದಾರೆ. ಸುಮಾರು ಒಂದು ವಾರದ ಹಿಂದೆ ಅವರು ತಮ್ಮ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಬಂಗಲೆಯನ್ನು ಖಾಲಿ ಮಾಡಿದ ಸಂದರ್ಭದಲ್ಲೂ ಜನರಿಗೆ ಇದೇ ರೀತಿಯ ಸಂದೇಶವನ್ನು ನೀಡಿದ್ದರು. ಆ ವೇಳೆ ಭಾವುಕರಾಗಿ ಮನವಿ ಮಾಡಿದ್ದ ಅವರು, ನನ್ನ ವಿಳಾಸ ಬದಲಾಗುತ್ತಿರಬಹುದು, ಆದರೆ ನಿಮ್ಮ ಅಣ್ಣ, ಚಿಕ್ಕಪ್ಪನ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ ಎಂದಿದ್ದರು.

ಶಿವರಾಜ್‌ಸಿಂಗ್ ರಾಜ್ಯ ರಾಜಕೀಯ ಅಂತ್ಯ? ಮಧ್ಯ ಪ್ರದೇಶದಲ್ಲಿ ಅಚ್ಚರಿ ಆಯ್ಕೆ

ಇತ್ತೀಚೆಗಷ್ಟೇ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಆದರೆ, ಈ ಬಾರಿ ಪಕ್ಷವು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಿಎಂ ಮಾಡಲಿಲ್ಲ, ಬದಲಿಗೆ ಮೋಹನ್ ಯಾದವ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

ಗೆದ್ದ ಮೂರು ರಾಜ್ಯಗಳಿಗೂ ಹೊಸ ಸಿಎಂ ನೇಮಕಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್