ಜನವರಿ 22ರಂದು ಭವ್ಯ ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆಗೆ 153 ದೇಶಗಳ ಪವಿತ್ರ ನದಿ ನೀರನ್ನು ಬಳಸಲಾಗುತ್ತಿದೆ. ಈ ಪೈಕಿ ರಾಮ ಮಂದಿರ ಧ್ವಂಸ ಮಾಡಿ ಬಾಬ್ರಿ ಮಸೀದಿ ಕಟ್ಟಿದ ಬಾಬರ್ ಹುಟ್ಟೂರಿನಿಂದಲೂ ನೀರು ತರಲಾಗಿದೆ.
ಆಯೋಧ್ಯೆ(ಜ.03) ರಾಮನಗರಿ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಮೂಲಕ ಬರೋಬ್ಬರಿ 500ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಬಳಿಕ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ 153 ದೇಶಗಳ ಪವಿತ್ರ ನದಿ ನೀರನ್ನು ಬಳಕೆ ಮಾಡಲಾಗುತ್ತಿದೆ. ಈ ಪೈಕಿ 1528ರಲ್ಲಿ ರಾಮ ಮಂದಿರವನ್ನು ಧ್ವಂಸ ಮಾಡಿ ಬಾಬ್ರಿ ಮಸೀದಿ ಕಟ್ಟಿದ ಬಾಬರ್ ಹುಟ್ಟೂರು ಉಜಬೇಕಿಸ್ತಾನ್‌ನಿಂದ ನದಿ ನೀರನ್ನು ಪ್ರಾಣಪ್ರತಿಷ್ಠೆಗೆ ಬಳಸಲಾಗುತ್ತಿದೆ.
ಮೊಘಲ ದಾಳಿಕೋರ ಬಾಬರ್ ಹುಟ್ಟೂರು ಉಜಬೇಕಿಸ್ತಾನದ ನದಿಯಿಂದಲೂ ನೀರನ್ನು ತರಲಾಗಿದೆ. ಪಾಕಿಸ್ತಾನ, ದುಬೈ, ಚೀನಾ, ಅಂಟಾರ್ಟಿಕಾ, ಕೀನ್ಯಾ ಸೇರಿದಂತೆ 153 ದೇಶದ ನದಿಯ ನೀರನ್ನು ತರಲಾಗಿದೆ.ಈ ನೀರನ್ನು ಪ್ರಾಣಪ್ರತಿಷ್ಠೆಯಲ್ಲಿ ಬಳಸಲಾಗುತ್ತದೆ. ವಿವಿದ ದೇಶದಲ್ಲಿನ ಎಲ್ಲಾ ಸಮುದಾಯದ ಜನರು ರಾಮ ಮಂದಿರದಲ್ಲಿ ಒಂದೊಂದು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಪವಿತ್ರ ನೀರು ಸಂಗ್ರಹಣೆಗೆ ಭಾರತೀಯ ಮೂಲದ ವಿದೇಶಿಗರು ಸೇರಿದಂತೆ ಎಲ್ಲರ ನೆರವನ್ನೂ ದೆಹಲಿ ಬಿಜೆಪಿ ಮಾಜಿ ಶಾಸಕ ವಿಜಯ್ ಜೊಲ್ಲಿ ಹೇಳಿದ್ದಾರೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಆಹ್ವಾನಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅರ್ಹರಲ್ಲ, ಇಲ್ಲಿದೆ ಕಾರಣ!
ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಸಮಯದ ಮುಹೂರ್ತ ನಿಗದಿಪಡಿಸಲಾಗಿದೆ. ಅಂದು ಮಧ್ಯಾಹ್ನ 12.20ಕ್ಕೆ ರಾಮನ ಪ್ರತಿಷ್ಠಾಪನೆ ಮಾಡಲು ನಿರ್ಣಯಿಸಲಾಗಿದೆ.2024ರ ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಜಟಾಯು ಪ್ರತಿಮೆಯನ್ನೂ ಮೋದಿ ಅನಾವರಣ ಮಾಡಲಿದ್ದಾರೆ. ಪ್ರತಿಷ್ಠಾಪನೆಯ ಮಾರನೇ ದಿನ ಭಕ್ತರಿಗೆ ದೇವಾಲಯ ತೆರೆಯಲಾಗುತ್ತದೆ. ಈ ನಡುವೆ, ಪ್ರತಿಷ್ಠಾಪನೆ ವೇಳೆ ದೇಶಾದ್ಯಂತ ವಿವಿಧ ದೇಗುಲಗಳಲ್ಲಿ ಪೂಜೆ ಹಮ್ಮಿಕೊಳ್ಳಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್ ಹೇಳಿದೆ.
ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಆಯೋಧ್ಯೆಯ ಎಲ್ಲಾ ಹೊಟೆಲ್ ಹಾಗೂ ರೂಂಗಳು ಬುಕ್ ಆಗಿವೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೊಠಡಿ ಮತ್ತು ಬಸ್‌ಗಳು ಸೇರಿದಂತೆ ಹಲವೆಡೆ ಈಗಾಗಲೇ ಜನರು ಭಾರೀ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅಯೋಧ್ಯೆ ಜಿಲ್ಲಾಧಿಕಾರಿ ಗೌರವ್ ದಯಾಳ್ ಅತಿಥಿಗಳಿಗೆ ಉತ್ತಮ ಸ್ವಾಗತ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಿಗೆ ಸೂಚಿಸಿದ್ದಾರೆ.
ಜನಸಾಮಾನ್ಯರಿಗೆ ಕೇಂದ್ರದ ಬಂಪರ್, ಶ್ರೀರಾಮ ಮಂದಿರ ದರ್ಶನಕ್ಕೆ ಪ್ರತಿ ದಿನ ಆಯೋಧ್ಯೆಗೆ 35 ರೈಲು!