ಎನ್‌ಟಿ ರಾಮರಾವ್‌ ಪುತ್ರಿ ಉಮಾ ಮಹೇಶ್ವರಿ ಶವವಾಗಿ ಪತ್ತೆ!

Published : Aug 01, 2022, 05:36 PM ISTUpdated : Aug 01, 2022, 06:00 PM IST
ಎನ್‌ಟಿ ರಾಮರಾವ್‌ ಪುತ್ರಿ ಉಮಾ ಮಹೇಶ್ವರಿ ಶವವಾಗಿ ಪತ್ತೆ!

ಸಾರಾಂಶ

ಆಘಾತಕಾರಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಚಂದ್ರಬಾಬು ನಾಯ್ಡು, ಅವರ ಪುತ್ರ ನಾರಾ ಲೋಕೇಶ್ ಮತ್ತು ಇತರ ಕುಟುಂಬ ಸದಸ್ಯರು ಮಹೇಶ್ವರಿ ನಿವಾಸಕ್ಕೆ ದೌಡಾಯಿಸಿದ್ದಾರೆ. ಜ್ಯುಬಿಲಿ ಹಿಲ್ಸ್‌ನಲ್ಲಿನ ಅವರ ನಿವಾಸಕ್ಕೆ ಪೊಲೀಸರು ತೆರಳಿದ್ದ ವೇಳೆ, ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.  

ಹೈದರಾಬಾದ್ (ಆ.1): ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗು ಖ್ಯಾತ ಚಿತ್ರನಟ ಎನ್‌ಟಿ ರಾಮರಾವ್‌ ಅವರ ಪುತ್ರಿ, ಕಾಂತಮನೇನಿ ಉಮಾ ಮಹೇಶ್ವರಿ ಸೋಮವಾರ (ಆಗಸ್ಟ್‌ 1) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪ ಕಾಲದಿಂದ ಅನಾರೋಗ್ಯದಲ್ಲಿದ್ದ ಕೆ.ಉಮಾ ಮಹೇಶ್ವರಿ, ತೆಲುಗು ದೇಶಂ ಪಾರ್ಟಿ ಸಂಸ್ಥಾಪಕರಾಗಿದ್ದ ಎನ್‌ಟಿಆರ್‌ ಅವರ 12 ಜನ ಮಕ್ಕಳಲ್ಲಿ ಅತ್ಯಂತ ಕಿರಿಯವರಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಹೈದರಾಬಾದ್‌ನಲ್ಲಿದ್ದ ತಮ್ಮ ಸ್ವಗೃಹದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾ ಮಹೇಶ್ವರಿ ಅವರ ನಿಧನ ನಂದಮೂರಿ ಕುಟುಂಬದ ಆಘಾತಕ್ಕೆ ಕಾರಣವಾಗಿದೆ. 52 ವರ್ಷದ ಉಮಾ ಮಹೇಶ್ವರಿ ನಾಲ್ಕು ಸಹೋದರಿಯರಲ್ಲಿ ಕಿರಿಯವರು. ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ದಗ್ಗುಬಾಟಿ ಪುರಂದೇಶ್ವರಿ ಮತ್ತು ಹಾಲಿ ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಸಹೋದರಿಯರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಂದ್ರಬಾಬು ನಾಯ್ಡು, ಅವರ ಪುತ್ರ ನಾರಾ ಲೋಕೇಶ್ ಮತ್ತು ಇತರ ಕುಟುಂಬ ಸದಸ್ಯರು ಮಹೇಶ್ವರಿ ನಿವಾಸಕ್ಕೆ ದೌಡಾಯಿಸಿದ್ದಾರೆ. ಉಮಾ ಮಹೇಶ್ವರಿ ಅವರ ಸಹೋದರ ಜನಪ್ರಿಯ ಟಾಲಿವುಡ್ ನಟ ಮತ್ತು ಟಿಡಿಪಿ ಶಾಸಕ ಎನ್.ಬಾಲಕೃಷ್ಣ. ಅದರೊಂದಿಗೆ ವಿದೇಶದಲ್ಲಿ ನೆಲೆಸಿರುವ ಇತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜ್ಯುಬಿಲಿ ಹಿಲ್ಸ್‌ನಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಉಮಾ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿಯೇ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪಕ್ಕದೂರಿನವನ ಜತೆ ಹೆಂಡತಿ ಚಕ್ಕಂದ; ಬೇಸತ್ತು ಗಂಡ ನೇಣಿಗೆ ಶರಣು

ಎಂಟು ಗಂಡು, ನಾಲ್ವರು ಹೆಣ್ಣು ಮಕ್ಕಳನ್ನು ಹೊಂದಿದ್ದ ಎನ್‌ಟಿಆರ್‌: ಎನ್‌ಟಿಆರ್ (NT Rama Rao) ಎನ್ನುವ ಹೆಸರಿನಿಂದಲೇ ಖ್ಯಾತರಾಗಿದ್ದ ಎನ್.ಟಿ. ರಾಮರಾವ್ ಅವರು ತೆಲುಗು ಹಾಗೂ ದಕ್ಷಿಣ ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟ ಹಾಗೂ ತೆಲುಗು ಅಸ್ಮಿತೆಯನ್ನು ಉಳಿಸಿಕೊಟ್ಟ ರಾಜಕಾರಣಿ. ಆಗಿನ ಅವಿಭಜಿತ ಆಂಧ್ರಪ್ರದೇಶವನ್ನು ದಶಕಗಳ ಕಾಲ ಆಡಿದ್ದ ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಎನ್‌ಟಿಆರ್‌ ನೇತೃತ್ವದ ಟಿಡಿಪಿ ಕೊನೆಗೊಳಿಸಿತ್ತು. 1982 ರಲ್ಲಿ ತೆಲುಗು ಸ್ವಾಭಿಮಾನದ ಘೋಷಣೆಯ ಮೇಲೆ ಟಿಡಿಪಿಯನ್ನು ಕಟ್ಟಿದ ಎನ್‌ಟಿಆರ್‌, ಪಕ್ಷ ಸೃಷ್ಟಿಯಾದ ಕೇವಲ ಒಂಭತ್ತೇ ತಿಂಗಳಲ್ಲಿ ಅಧಿಕಾರಕ್ಕೆ ತರುವ ಮೂಲಕ ದಾಖಲೆ ಸೃಷ್ಟಿಸಿದ್ದರು.

ವಯಸ್ಸಿಗೆ ಬಂದ್ರೂ ಪಾಲಕರು ಮದುವೆ ಮಾಡ್ತಿಲ್ಲ ಏನು ಮಾಡ್ಲಿ?

ಎನ್‌ಟಿಆರ್‌ಗೆ ಎಂಟು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದರು. ನಾಲ್ಕು ಹೆಣ್ಣು ಮಕ್ಕಳಲ್ಲಿ ಮಹೇಶ್ವರಿ ಕಿರಿಯವರು. ಇತ್ತೀಚೆಗೆ ಉಮಾ ಮಹೇಶ್ವರಿ ಅವರ ಮಗಳ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಒಟ್ಟಾಗಿ ಸೇರಿದ್ದರು. ಎನ್‌ಟಿಆರ್‌ ಅವರ ಮೂವರು ಪುತ್ರರು ಈಗಾಗಲೇ ನಿಧನರಾಗಿದ್ದಾರೆ. ಎನ್‌ಟಿಆರ್‌ 1996ರಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ಸಾವಿಗೆ ಕೆಲವು ತಿಂಗಳುಗಳ ಮೊದಲು, ಅವರ ಅಳಿಯ ಚಂದ್ರಬಾಬು ನಾಯ್ಡು ನೇತೃತ್ವದ ಬಿಕ್ಕಟ್ಟಿನ ನಂತರ ಎನ್ಟಿಆರ್ ಅವರನ್ನು ಅಧಿಕಾರದಿಂದ ಹೊರಹಾಕಲಾಗಿತ್ತು.

ಯಾರಿವರು ಉಮಾ ಮಹೇಶ್ವರಿ: ಕಾಂತಮನೇನಿ ಉಮಾ ಮಹೇಶ್ವರಿ ಎರಡು ವಿವಾಹವಾಗಿದ್ದರು. ಭಾರತೀಯ ಮೂಲದ ಉದ್ಯಮಿ ನರೇಂದ್ರ ರಾಜನ್‌ ಅವರನ್ನು ಮೊದಲಿಗೆ ವಿವಾಹವಾಗಿದ್ದ ಉಮಾ ಮಹೇಶ್ವರಿ, ವೈಯಕ್ತಿಕ ಕಾರಣಗಳಿಗಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಕ.ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಮಹೇಶ್ವರಿ ವಿವಾಹವಾಗಿ ಅವರೊಂದಿಗೆ ಜ್ಯುಬಿಲಿ ಹಿಲ್ಸ್‌ನಲ್ಲಿ ವಾಸವಿದ್ದರು. ಉಮಾ ಮಹೇಶ್ವರಿ ಅವರ ತಾಯಿ ಬಸವತಾರಕಂ ನಂದಮೂರಿ, ಕ್ಯಾನ್ಸರ್‌ನಿಂದಾಗಿ 1985ರಲ್ಲಿ ನಿಧನರಾಗಿದ್ದರು. ವೈದ್ಯೆಯಾಗಿದ್ದ ಉಮಾ ಮಹೇಶ್ವರಿ, ಇಡೀ ಎನ್‌ಟಿಆರ್‌ ಕುಟುಂಬದಲ್ಲಿ ಚಿತ್ರರಂಗಕ್ಕೆ ಕಾಲಿಡದೇ ಇದ್ದ ಏಕೈಕ ವ್ಯಕ್ತಿ ಎನಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ