ಜೈಲಿನಲ್ಲಿರುವ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ದೇಹಸ್ಥಿತಿ ವಿಷಮ

By Gowthami K  |  First Published Oct 14, 2023, 9:31 AM IST

ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಬಂಧನದಲ್ಲಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಗ್ಯ ತುಂಬಾ ಹದಗೆಟ್ಟಿದೆ. ಅವರ ದೇಹದ ತೂಕ ದಿಢೀರನೆ 5 ಕೆಜಿ ಇಳಿದಿದೆ ಎಂದು ಪುತ್ರ ನಾರಾ ಲೋಕೇಶ್ ಅಳಲು ತೋಡಿಕೊಂಡಿದ್ದಾರೆ.


ಅಮರಾವತಿ (ಅ.14): ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಬಂಧನದಲ್ಲಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಗ್ಯ ತುಂಬಾ ಹದಗೆಟ್ಟಿದೆ. ಅವರ ದೇಹದ ತೂಕ ದಿಢೀರನೆ 5 ಕೆಜಿ ಇಳಿದಿದೆ ಎಂದು ಪುತ್ರ ನಾರಾ ಲೋಕೇಶ್ ಅಳಲು ತೋಡಿಕೊಂಡಿದ್ದಾರೆ. ತಂದೆಯ ಆರೋಗ್ಯ ದಿನದಿಂದ ದಿನಕ್ಕೆ  ಕ್ಷೀಣಿಸುತ್ತಿದೆ. ಅವರನ್ನು ಬಂಧಿಯಾಗಿ ಇರಿಸಿರುವ ರಾಜಮಂಡ್ರಿ ಜೈಲಿನಲ್ಲಿ ಸೊಳ್ಳೆ, ಅಲರ್ಜಿ, ಮಾಲಿನ್ಯಕರ ನೀರು, ರೋಗಗಳಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ಆಂಧ್ರಪ್ರದೇಶ ಸರ್ಕಾರ ಸೂಕ್ತ ವೈಧ್ಯಕೀಯ ಸೌಲಭ್ಯ ನೀಡದೆ ಅವರ ಜೀವನವನ್ನು ಆತಂಕಕ್ಕೆ ದೂಡುತ್ತಿದೆ. ಜೈಲಿನಲ್ಲಿ ಕುಡಿಯುವ ನೀರು ಕೂಡ ಕಲುಷಿತವಾಗಿದೆ. ಓರ್ವ ಮಾಜಿ ಮುಖ್ಯಮಂತ್ರಿಯನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ಕ್ರಮ ಖಂಡನೀಯ ಎಂದಿದ್ದಾರೆ.

ತಂದೆಯವರಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಲಾಗುತ್ತಿದೆ. ಅವರ ಜೀವಕ್ಕೆ ಯಾವುದೇ ಸುರಕ್ಷತೆ ಇಲ್ಲ, ನಿಸ್ಸಂದೇಹವಾಗಿ ಅವರು ಅಪಾಯದಲ್ಲಿದ್ದಾರೆ. ತಂದೆಯವರಿಗೆ ಏನಾದರೂ ಆದರೆ ನೇರವಾಗಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಜವಾಬ್ದಾರರಾಗಿರುತ್ತಾರೆ ಎಂದು ಟ್ವೀಟ್‌ ನಲ್ಲಿ ಹೇಳಿದ್ದಾರೆ.

Tap to resize

Latest Videos

ಪಂಚರಾಜ್ಯ ಚುನಾವಣೆಗೆ ಕರ್ನಾಟಕದಿಂದ ಹಣ?

ಈ ನಡುವೆ  ಶ್ರೀ ನಾಯ್ಡು ಅವರ ಸೋದರ ಮಾವ ,  ಹಿಂದ್‌ಪುರ  ಶಾಸಕ  ಎನ್.ಬಾಲಕೃಷ್ಣ  ಉತ್ತಮ ಚಿಕಿತ್ಸೆಗಾಗಿ ಸರ್ಕಾರವು ಟಿಡಿಪಿ ರಾಷ್ಟ್ರೀಯ ಅಧ್ಯಕ್ಷರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ನಾಯ್ಡು ಅವರ ಬದುಕಿನೊಂದಿಗೆ ಆಟವಾಡುತ್ತಿದ್ದು, ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ ನಂತರವೂ ಅವರ ದ್ವೇಷ ಮುಂದುವರಿದಿದೆ ಎಂದು  ಆರೋಪಿಸಿದ್ದಾರೆ.

ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್‌ ಹಣ: ಸಿಎಂ, ಡಿಸಿಎಂ

ಇನ್ನು ಕಳೆದ ವಾರ ಸಿಬಿಎನ್‌ ಅವರಿಗೆ 3 ವಿವಿಧ ಪ್ರಕರಣಗಳಲ್ಲಿ ಜಾಮೀನು ನೀಡಲು ಆಂಧ್ರಪ್ರದೇಶ ಹೈಕೋರ್ಟ್‌ ನಿರಾಕರಿಸಿತ್ತು. ರಾಜ್ಯ ಕೌಶಲ್ಯ ನಿಗಮದ 300 ಕೋಟಿ ರು. ಹಣವನ್ನು ದುರ್ಬಳಕೆ ಮಾಡಿರುವ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಬಾಬು ನಾಯ್ಡು, 2 ಪ್ರಕರಣದಲ್ಲಿ ಜಾಮೀನು ಹಾಗೂ 1 ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಫೈಬರ್‌ನೆಟ್‌ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ಆರೋಪ ಎದುರಿಸುತ್ತಿರುವ ನಾಯ್ಡು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ರಸ್ತೆ ನಿರ್ಮಾಣದಲ್ಲಿ ಅಧಿಕಾರ ದುರ್ಬಳಕೆ ಮತ್ತು ಗಲಭೆ ಪ್ರಕರಣಗಳಲ್ಲಿ ಜಾಮೀನಿನ ಮೊರೆ ಹೋಗಿದ್ದರು ಆದರೆ ಯಾವುದಕ್ಕೂ ಈವರೆಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ಅವರನ್ನು ರಾಜಮಂಡ್ರಿ ಜೈಲಿನಲ್ಲಿ ಇರಿಸಲಾಗಿದೆ.

click me!