ಚಿಲ್ಲರೆಗಳನ್ನೇ ನೀಡಿ ಐಫೋನ್‌ ಖರೀದಿಸಿದ ಭಿಕ್ಷುಕ, Mobile Store ರಿಯಾಕ್ಷನ್‌ ಹೀಗಿತ್ತು!

By Santosh Naik  |  First Published Oct 13, 2023, 8:37 PM IST

ನಾವು ಹಾಕಿರೋ ಬಟ್ಟೆ, ನಾವು ಇರೋ ರೀತಿಯಲ್ಲೇ ಜನರು ನಮ್ಮನ್ನು ಜಡ್ಜ್‌ ಮಾಡುತ್ತಾರೆ. ನಿಮ್ಮ ಹತ್ರ ದುಡ್ಡಿದೆ ಎಂದರೆ ಜನ ನಿಮಗೆ ನೀಡೋ ಗೌರವವೇ ಬೇರೆ ರೀತಿ, ದುಡ್ಡಿಲ್ಲ ಅಂದರೆ ನೀವು ಯಾರಿಗೂ ಬೇಡ!
 


ಬೆಂಗಳೂರು (ಅ.13): ಇಂದಿನ ಸಮಾತದಲ್ಲಿ ಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಹಾಗೂ ಗೌರವಿಸಲಾಗುತ್ತದೆ ಅನ್ನೋದರ ಮೇಲೆ ನೀವು ಇರುವ ರೀತಿಯೇ ಹೆಚ್ಚಾಗಿ ಪ್ರಭಾವ ಬೀರುತ್ತದೆ. ನೀವು ಸಮಾಜದ ಎದುರು ಹೇಗೆ ಕಾಣುತ್ತಿದ್ದೀರಿ ಎನ್ನುವುದರ ಆಧಾರ ಮೇಲೆ ಇತರರು ನಿಮ್ಮನ್ನು ಅಂದಾಜು ಮಾಡುತ್ತಾರೆ.  ಅದರಲ್ಲೂ ಆರ್ಥಿಕವಾಗಿ ಗಟ್ಟಿಮುಟ್ಟಾಗಿದ್ದರೆ, ಜನ ನಿಮ್ಮನ್ನು ನೋಡುವ ರೀತಿಯೇ ಭಿನ್ನ, ಇನ್ನು ದುಡ್ಡು ಕಾಸು ಇಲ್ಲ ಎಂದಾದಲ್ಲಿ  ಎಷ್ಟೇ ಆತ್ಮೀಯರಾಗಿರಲಿ ನೀವು ಯಾರಿಗೂ ಬೇಡ. ಸಾಮಾನ್ಯವಾಗಿ ನೀವು ಶ್ರೀಮಂತರ ರೀತಿ ಕಾಣಿಸಿಕೊಂಡರೆ, ಅಥವಾ ಶ್ರೀಮಂತರೇ ಆಗಿದ್ದರೆ, ಸಮಾಜದಲ್ಲಿ ನಿಮ್ಮನ್ನು ಹೆಚ್ಚು ಗೌರವವಿಂದ ಪರಿಗಣಿಸಲಾಗುತ್ತದೆ. ಇದು ಪ್ರಸ್ತುತ ಸಮಾಜದಲ್ಲಿ ಕಣ್ಣಿಗೆ ರಾಚುವಂಥ ಸತ್ಯ. ಇತ್ತೀಚೆಗೆ ಜನರ ಗ್ರಹಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಪ್ರಯೋಗದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಅದರಲ್ಲೂ ಇನ್ಸ್‌ಟಾಗ್ರಾಮ್‌ನಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಭಿಕ್ಷುಕನಂತೆ ವೇಷ ಧರಿಸುವ ವ್ಯಕ್ತಿ, ಐಫೋನ್‌ ಖರೀದಿಸಲು ಹೊರಡುತ್ತಾನೆ. ಬೆನ್ನಿಗೆ ತಾನು ಸಂಗ್ರಹಿಸಿದ್ದ ನಾಣ್ಯಗಳ ಚೀಲವನ್ನು ಹೇರಿಕೊಂಡು ಹೋಗುವ ಆತನಿಗೆ ಮೊಬೈಲ್‌ ಶಾಪ್‌ಗಳಲ್ಲಿ ಯಾವೆಲ್ಲಾ ಅನುಭವವಾಗುತ್ತದೆ ಎನ್ನುವುದನ್ನು ವಿಡಿಯೋ ಮಾಡಲಾಗಿದೆ.

ಐಫೋನ್‌-15 ಖರೀದಿಸುವ ಸಲುವಾಗಿ ಆ ವ್ಯಕ್ತಿ ಸಂಪೂರ್ಣ ಚಿಲ್ಲರೆಗಳನ್ನು ಹೊಂದಿರುವ ಬ್ಯಾಗ್‌ಗಳೊಂದಿಗೆ ಬರುತ್ತಾರೆ. ಈ ವೇಳೆ ಹರಿದ ಬನಿಯನ್‌, ಪಂಚೆ ಹಾಗೂ ಮುಖಕ್ಕೆ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಮೆತ್ತಿಕೊಂಡು ತಮ್ಮೂರಿನ ಕೆಲವು ಮೊಬೈಲ್‌ ಶಾಪ್‌ಗಳು ಹಾಗೂ ಆಪಲ್‌ ಸ್ಟೋರ್‌ಗೆ ಭೇಟಿ ನೀಡುತ್ತಾರೆ.

ವಿಡಿಯೋದ ಕಂಟೆಂಟ್‌ಅನ್ನು ನಿರ್ಮಾಣ ಮಾಡಲಾಗಿದ್ದರೂ, ಆಪಲ್‌ ಸ್ಟೋರ್‌ನ ಸಿಬ್ಬಂದಿಯ ಪ್ರತಿಕ್ರಿಯೆ ವೀಕ್ಷಕರ ಗಮನಸೆಳೆದಿದ್ದು, ಮಾತ್ರವಲ್ಲ ಸಮಾಜದಲ್ಲಿ ನಮ್ಮ ಲುಕ್‌ ಎನ್ನುವುದು ಯಾವಾಗಲೂ ಇಂಪಾರ್ಟೆಂಟ್‌ ಎನ್ನುವ ಸಂದೇಶವನ್ನು ರವಾನಿಸಿದೆ.

ಈ ಸಾಮಾಜಿಕ ಪ್ರಯೋಗವನ್ನು 'ಎಕ್ಸ್‌ಪರಿಮೆಂಟ್ ಕಿಂಗ್' ಎನ್ನುವ ಹೆಸರಿನ ಯೂಟ್ಯೂಬ್‌ ಚಾನಲ್‌ನ ಸಂಯೋಜಕರು ನಿರ್ಮಾಣ ಮಾಡಿದ್ದಾರೆ. ತಮಾಷೆಯ ವಿಡಿಯೋದಲ್ಲಿ ಒಬ್ಬಾತ ಭಿಕ್ಷುಕ ವೇಷ ಧರಿಸಿ ರಾಜಸ್ಥಾನದ ಜೋಧ್‌ಪುರದ ವಿವಿಧ ಮೊಬೈಲ್‌ ಶೋರೂಮ್‌ಗಳಿಗೆ ತೆರಳುತ್ತಾರೆ. ಹೆಚ್ಚಿನ ಮೊಬೈಲ್‌ ಶೋರೂಮ್‌ಗಳು ಈತನನ್ನು ಒಳಗೆ ಬಿಟ್ಟುಕೊಳ್ಳಲು ತಯಾರಿರೋದಿಲ್ಲ. ಇನ್ನೂ ಕೆಲವು ಶೋರೂಮ್‌ಗಳು ಒಳಗೆ ಬಿಟ್ಟುಕೊಂಡರೂ, ನಾಣ್ಯ ರೂಪದಲ್ಲಿ ಪಾವತಿಯನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ.

ಮಾಲ್‌ನಲ್ಲಿ ಭಾರತದ ತ್ರಿವರ್ಣಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ, ವೈರಲ್‌ ಚಿತ್ರಕ್ಕೆ ಲುಲು ಮಾಲ್‌ನಿಂದ ಸ್ಪಷ್ಟನೆ!

ಕೊನೆಗೆ ಒಂದು ಮೊಬೈಲ್‌ ಅಂಗಡಿಯ ಮಾಲೀಕ, ನಾಣ್ಯ ರೂಪದಲ್ಲಿ ಭಿಕ್ಷುಕ ನೀಡುವ ಹಣವನ್ನು ತೆಗೆದುಕೊಳ್ಳಲು ಒಪ್ಪಿ, ಐಫೋನ್‌ ಪ್ರೋ ಮ್ಯಾಕ್ಸ್‌ ಮಾಡೆಲ್‌ ಫೋನ್‌ಅನ್ನು ನೀಡುತ್ತಾರೆ. ಇಡೀ ಅಂಗಡಿಯವರು ಸೇರಿ ನಾಣ್ಯವನ್ನು ಸರಿಯಾಗಿ ಎಣಿಸಿದ ಬಳಿಕ ಮೊಬೈಲ್‌ಅನ್ನು ನೀಡಿದ್ದಾರೆ. ಇದೆಲ್ಲವೂ ತಮಾಷೆಯ ವಿಡಿಯೋಗಾಗಿ ಎಂದು ಆತ ಹೇಳಿದ ಬಳಿಕ ಸ್ವತಃ ಮೊಬೈಲ್‌ ಅಂಗಡಿಯ ಮಾಲೀಕ ಅಚ್ಚರಿಗೆ ಒಳಗಾಗುತ್ತಾನೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಈವರೆಗೂ 33.7 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದ್ದು,3.4 ಮಿಲಿಯನ್‌ ಲೈಕ್ಸ್‌ ಪಡೆದುಕೊಂಡಿದೆ. ಭಿಕ್ಷುಕ ಕೂಡ ಹೇಗೆ ಐಫೋನ್‌ ಖರೀದಿಸಬಹುದು ಎಂದು  ಅಚ್ಚರಿಗೊಳಪಟ್ಟಿದ್ದಾರೆ. ಹೆಚ್ಚಿನವರಿಗೆ ಇದೊಂದು ಸ್ಕ್ರಿಪ್ಟ್‌ ಕಂಟೆಂಟ್‌ ಎನ್ನುವುದು ಗೊತ್ತಾಗಿದೆ. ಕೊನೆಯಲ್ಲಿ ಆಪಲ್‌ ಸ್ಟೋರ್‌ನ ವ್ಯಕ್ತಿಯ ಪ್ರತಿಕ್ರಿಯೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಯಾರ್ಯಾರು ಬದುಕ್ಬೇಕೋ ಅವರು 24 ಗಂಟೆಗಳಲ್ಲಿ ಊರು ಖಾಲಿ ಮಾಡಿ ಎಂದ ಇಸ್ರೇಲ್‌: ದಿಕ್ಕಾಪಾಲಾಗಿ ಓಡ್ತಿರೋ ಗಾಜಾ ಜನತೆ!

 

click me!