ಆಪರೇಷನ್ ಅಜಯ್: 9 ಕನ್ನಡಿಗರು ಸೇರಿ 235 ಮಂದಿ ಭಾರತೀಯರು ಇಸ್ರೇಲ್‌ನಿಂದ ತಾಯ್ನಾಡಿಗೆ ಎಂಟ್ರಿ

Published : Oct 14, 2023, 07:54 AM ISTUpdated : Oct 15, 2023, 11:47 AM IST
ಆಪರೇಷನ್ ಅಜಯ್: 9 ಕನ್ನಡಿಗರು ಸೇರಿ 235 ಮಂದಿ ಭಾರತೀಯರು ಇಸ್ರೇಲ್‌ನಿಂದ ತಾಯ್ನಾಡಿಗೆ ಎಂಟ್ರಿ

ಸಾರಾಂಶ

ಆಪರೇಷನ್‌ ಅಜಯ್‌ ಹೆಸರಲ್ಲಿ ಇಸ್ರೇಲ್‌ನಲ್ಲಿ ಸಿಲುಕಿರೋ ಭಾರತೀಯರನ್ನು ಕೇಂದ್ರ ಸರ್ಕಾರ ಭಾರತಕ್ಕೆ ಕರೆತರುತ್ತಿದೆ. ಈ ಪೈಕಿ ಇಂದು ಬೆಳಗ್ಗೆ 9 ಕನ್ನಡಿಗರು ಸೇರಿ 235 ಮಂದಿ ಭಾರತೀಯರು ತಾಯ್ನಾಡಿಗೆ ಆಗಮಿಸಿದ್ದಾರೆ. 

ನವದೆಹಲಿ (ಅಕ್ಟೋಬರ್ 14, 2023): ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧದ ನಡುವೆ ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರ ಎರಡನೇ ಬ್ಯಾಚ್‌ ಆಗಮಿಸಿದೆ. ಕೇಂದ್ರ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆಯಲ್ಲಿ ಎರಡನೇ ವಿಮಾನದಲ್ಲಿ 235 ಮಂದಿ ಭಾರತೀಯರು ತಾಯ್ನಾಡಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪೈಕಿ 9 ಮಂದಿ ಕನ್ನಡಿಗರು ಸಹ ಆಗಮಿಸಿದ್ದಾರೆ.

ಇಸ್ರೇಲ್‌ನಲ್ಲಿ ಸಿಲುಕಿರೋ ಭಾರತೀಯರನ್ನು ಕರೆತರುವ ಮೋದಿ ಸರ್ಕಾರದ ಆಪರೇಷನ್‌ ಅಜಯ್‌ ಕಾರ್ಯಾಚರಣೆಯಡಿ ಅಕ್ಟೋಬರ್ 12 ರ ರಾತ್ರಿ ಮೊದಲ ವಿಮಾನ ದೆಹಲಿಗೆ ಆಗಮಿಸಿತ್ತು. ಈ ವೇಳೆ 5 ಕನ್ನಡಿಗರು ಸೇರಿ 200ಕ್ಕೂ ಹೆಚ್ಚು ಜನ ಅಗಮಿಸಿದ್ದರು. ಅಕ್ಟೋಬರ್ 14, 2023 ರಂದು ಬೆಳಗ್ಗೆ ಭಾರತೀಯರನ್ನು ಕರೆತಂದ ಎರಡನೇ ಬ್ಯಾಚ್‌ ಆಗಮಿಸಿದೆ. 

ಇದನ್ನು ಓದಿ: ಯಾರ್ಯಾರು ಬದುಕ್ಬೇಕೋ ಅವರು 24 ಗಂಟೆಗಳಲ್ಲಿ ಊರು ಖಾಲಿ ಮಾಡಿ ಎಂದ ಇಸ್ರೇಲ್‌: ದಿಕ್ಕಾಪಾಲಾಗಿ ಓಡ್ತಿರೋ ಗಾಜಾ ಜನತೆ!

 ಎರಡನೇ ವಿಮಾನದಲ್ಲಿ 235 ಮಂದಿ ಭಾರತೀಯರು ತಾಯ್ನಾಡಿಗೆ ಎಂಟ್ರಿ ಕೊಟ್ಟಿದ್ದು, ಇದ್ರಲ್ಲಿ 9 ಕನ್ನಡಿಗರು ಸಹ ದೆಹಲಿಗೆ ಬಂದಿದ್ದಾರೆ.  ನಿನ್ನೆ ತಡ ರಾತ್ರಿ 11:30ಕ್ಕೆ ಇಸ್ರೇಲ್‌ನ ಟೆಲ್ ಅವಿವಾದಿಂದ ಹೊರಟಿದ್ದ ವಿಮಾನ ಇಂದು ಬೆಳಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ.

235 ಮಂದಿ ಭಾರತೀಯರ ಪೈಕಿ ಸೂರಜ್ ಕೃಷ್ಣ, ಸುಮತಿ ಸತೀಶ್, ಶಿಲ್ಪಾಶ್ರೀ ನಾಗರಾಜ್,  ಸತೀಶ್ ಮೇಧಾ, ಪೃಥ್ವಿ ದತ್ತಾತ್ರೇಯ ಹೆಗ್ಡೆ, ಮನು ಹೆಗ್ಡೆ, ಹುತಾಶ್ ದೇವನೂರ್, ಚೇತನ್ ದೇವನೂರ್ ಹಾಗೂ ಅಥರೇ ಚೋಳಶೆಟ್ಟಿ ಹಳ್ಳಿ ತವರಿಗೆ ಬಂದಿದ್ದಾರೆ. ಇಸ್ರೇಲ್‌ನಿಂದ ತಾಯ್ನಾಡಿಗೆ ಬಂದ ಭಾರತೀಯ ಪ್ರಜೆಗಳನ್ನು ಕೇಂದ್ರ‌ ಸಚಿವ ಬರಮಾಡಿಕೊಂಡಿದ್ದಾರೆ. 

ಕೇಂದ್ರದ ರಾಜ್ಯ ಖಾತೆ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ‌ಕೋರಿದ್ದಾರೆ. 

ಇದನ್ನೂ ಓದಿ: ಗಾಜಾಗೆ ಮತ್ತೊಂದು ದೊಡ್ಡ ಶಾಕ್ ನೀಡಿದ ಇಸ್ರೇಲ್‌: ನೀರಿಲ್ಲ, ಕರೆಂಟಿಲ್ಲ, ಇಂಧನವೂ ಇಲ್ಲ!

ಬೆಂಗಳೂರಿನತ್ತ ಹೊರಟ ಇಸ್ರೇಲ್ ಕನ್ನಡಿಗರು
ಈ ಮಧ್ಯೆ, ದೆಹಲಿಗೆ ಆಗಮಿಸಿದ 9 ಮಂದಿ ಇಸ್ರೇಲ್‌ ಕನ್ನಡಿಗರು ಬೆಂಗಳೂರಿನತ್ತ ಹೊರಟಿದ್ದಾರೆ. ಆಪರೇಷನ್ ಅಜಯ್ ಕಾರ್ಯಾಚರಣೆಯಡಿ ಇಸ್ರೇಲ್‌ನಿಂದ ಆಗಮಿಸಿದವರು ಬೆಳಗ್ಗೆ 10 ಗಂಟೆಗೆ AI 506 ವಿಮಾನದ ಮೂಲಕ ಬೆಂಗಳೂರಿಗೆ ಬರಲಿದ್ದಾರೆ. ದೆಹಲಿಯಿಂದ ನೇರ ವಿಮಾನದಲ್ಲಿ 9 ಕನ್ನಡಿಗರು ಬೆಂಗಳೂರಿಗೆ ಆಗಮಿಸಲಿದ್ದಾರೆ. 

ಮೈಸೂರು ಐವರು, ಬೆಂಗಳೂರಿನ ಬಸವನಗುಡಿಯ ನಾಲ್ಕು ಮಂದಿ ನಿವಾಸಿಗಳು ಇಂದು ಬೆಳಗ್ಗೆ ಇಸ್ರೇಲ್ ನಿಂದ ದೆಹಲಿಗೆ ಬಂದಿದ್ದರು ಎಂದು ತಿಳಿದುಬಂದಿದೆ. 
ಇದನ್ನೂ ಓದಿ: ಹಮಾಸ್‌ ಬಗ್ಗೆ ಶಶಿ ತರೂರ್‌ ಹೇಳಿಕೆಗೆ ಇಸ್ರೇಲ್‌ ಮಾಜಿ ರಾಯಭಾರಿ ಆಘಾತ: ಕಾಂಗ್ರೆಸ್‌ ನಾಯಕನ ಸ್ಪಷ್ಟನೆ ಹೀಗಿದೆ..

ಇದನ್ನೂ ಓದಿ: ಇಸ್ರೇಲ್‌ ಮೊದಲ ಗುರಿ; ಮುಂದೆ ಸಂಪೂರ್ಣ ಭೂಮಿಯಲ್ಲೇ ನಮ್ಮ ಕಾನೂನು ಇರುತ್ತೆ: ಹಮಾಸ್‌ ಕಮಾಂಡರ್‌ ಎಚ್ಚರಿಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ