ಏರ್‌ಪೋರ್ಟ್‌ ಕಸ್ಟಮ್ಸ್‌ನಿಂದ 10 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ವಶ

Published : Jul 23, 2023, 11:36 AM IST
ಏರ್‌ಪೋರ್ಟ್‌ ಕಸ್ಟಮ್ಸ್‌ನಿಂದ  10 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ವಶ

ಸಾರಾಂಶ

ತಾಜಿಕಿಸ್ತಾನ್‌ ಪ್ರಜೆಗಳಿಂದ ಸುಮಾರು 10 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಈವರೆಗೆ ಕಸ್ಟಮ್‌ ಇಲಾಖೆ ವಶಪಡಿಸಿಕೊಂಡ ಗರಿಷ್ಠ ಮೌಲ್ಯದ ವಿದೇಶಿ ಕರೆನ್ಸಿಯಾಗಿದೆ.  

ನವದೆಹಲಿ: ತಾಜಿಕಿಸ್ತಾನ್‌ ಪ್ರಜೆಗಳಿಂದ ಸುಮಾರು 10 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಈವರೆಗೆ ಕಸ್ಟಮ್‌ ಇಲಾಖೆ ವಶಪಡಿಸಿಕೊಂಡ ಗರಿಷ್ಠ ಮೌಲ್ಯದ ವಿದೇಶಿ ಕರೆನ್ಸಿಯಾಗಿದೆ.  ಇಸ್ತಾನ್‌ಬುಲ್‌ಗೆ ಪ್ರಯಾಣಿಸುತ್ತಿದ್ದ ತಾಜಿಕಿಸ್ತಾನ್‌ ಪ್ರಜೆಗಳ ಬ್ಯಾಗ್‌ಗಳನ್ನು ಪರೀಕ್ಷೆ ಮಾಡುವ ವೇಳೆ ಈ ಹಣ ಲಭ್ಯವಾಗಿದೆ. ಬ್ಯಾಗ್‌ನಲ್ಲಿ ಇವರು ಶೂಗಳನ್ನು ಇರಿಸಿಕೊಂಡು ಅದರ ಒಳಗೆ ಹಣ ಬಚ್ಚಿಟ್ಟಿದ್ದಿದು ತಪಾಸಣೆ ವೇಳೆ ಪತ್ತೆ ಆಗಿದೆ.  ಜಪ್ತಿ ಮಾಡಲಾದ ಕರೆನ್ಸಿಯಲ್ಲಿ 7.2 ಲಕ್ಷ ಅಮೆರಿಕನ್‌ ಡಾಲರ್‌ ಮತ್ತು 4.66 ಲಕ್ಷ ಯುರೋ ಇದ್ದು, ಭಾರತೀಯ ರುಪಾಯಿಯಲ್ಲಿ ಇದರ ಮೌಲ್ಯ ಸುಮಾರು 10 ಕೋಟಿ ರು. ಎಂದು ಕಸ್ಟಮ್ಸ್‌ ಇಲಾಖೆ ಹೇಳಿದೆ. ಇಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬಂಧಿತರಲ್ಲಿ ಒಬ್ಬ ಬಾಲಾರೋಪಿ ಆಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಗ್ ಹ್ಯಾಂಡಲ್‌ನಲ್ಲಿ ಪತ್ತೆಯಾಯ್ತು 64 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ನೋಟು..! ಸಿಕ್ಕಿದ್ದು ಹೇಗೆ ನೋಡಿ..

ಮಾಗಡಿ ದೇವಾಲಯದ ಹುಂಡಿ ತೆರೆದಾಗ ಕಾದಿದ್ದ ಅಚ್ಚರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್