ಸೇನಾಧಿಕಾರಿ ವಿರುದ್ಧ ಮಾಡಿದ ಆರೋಪ ಸುಳ್ಳು: ತೆಹಲ್ಕಾದ ಪತ್ರಕರ್ತ ಸೇರಿ ಮೂವರಿಗೆ 2 ಕೋಟಿ ರು. ದಂಡ

Published : Jul 23, 2023, 09:29 AM IST
ಸೇನಾಧಿಕಾರಿ ವಿರುದ್ಧ ಮಾಡಿದ ಆರೋಪ ಸುಳ್ಳು: ತೆಹಲ್ಕಾದ ಪತ್ರಕರ್ತ ಸೇರಿ ಮೂವರಿಗೆ 2 ಕೋಟಿ ರು. ದಂಡ

ಸಾರಾಂಶ

ರಕ್ಷಣಾ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವರದಿ ಮಾಡಿದ್ದ ತೆಹಲ್ಕಾ.ಕಾಂ ಹಾಗೂ ಅದರ ಪತ್ರಕರ್ತರಾದ ತರುಣ್‌ ತೇಜ್‌ಪಾಲ್‌ ಸೇರಿದಂತೆ ಮೂವರಿಗೆ ದಿಲ್ಲಿ ಹೈಕೋರ್ಟ್ 2 ಕೋಟಿ ರು. ದಂಡ ವಿಧಿಸಿದೆ.

ನವದೆಹಲಿ: ರಕ್ಷಣಾ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವರದಿ ಮಾಡಿದ್ದ ತೆಹಲ್ಕಾ.ಕಾಂ ಹಾಗೂ ಅದರ ಪತ್ರಕರ್ತರಾದ ತರುಣ್‌ ತೇಜ್‌ಪಾಲ್‌ ಸೇರಿದಂತೆ ಮೂವರಿಗೆ ದಿಲ್ಲಿ ಹೈಕೋರ್ಟ್ 2 ಕೋಟಿ ರು. ದಂಡ ವಿಧಿಸಿದೆ. ಸುಳ್ಳು ಆರೋಪದಿಂದ ಸೇನಾಧಿಕಾರಿ ತಮ್ಮ ಪ್ರತಿಷ್ಠೆ ಕಳೆದುಕೊಂಡಿದ್ದಾರೆ ಎಂಬ ಕಾರಣ ನೀಡಿ ಅವರಿಗೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ. 2001ರಲ್ಲಿ ಪ್ರಕಟವಾಗಿದ್ದ ಸುದ್ದಿಯ ವಿರುದ್ಧ ಮೇಜರ್‌ ಜನರಲ್‌ ಅಹ್ಲುವಾಲಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ನೀನಾ ಬನ್ಸಲ್‌ ಕೃಷ್ಣ (Justice Neena Bansal Krishna) ಅವರು ತೆಹಲ್ಕಾ ಡಾಟ್‌ ಕಾಮ್‌ ಹಾಗೂ ಅದರ ಮುಖ್ಯಸ್ಥ ತರುಣ್‌ ತೇಜ್‌ಪಾಲ್‌ ಮತ್ತು ಇಬ್ಬರು ವರದಿಗಾರರಾದ ಅನಿರುದ್ಧ್ ಬಹಲ್‌ ಮತ್ತು ಮ್ಯಾಥ್ಯೂ ಸ್ಯಾಮುಯೆಲ್‌ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೇ ಪ್ರಾಮಾಣಿಕ ಸೇನಾಧಿಕಾರಿಯ ಗೌರವಕ್ಕೆ ಧಕ್ಕೆ ಉಂಟು ಮಾಡುವುದಕ್ಕಿಂತ ಘೋರ ಪ್ರಕರಣ ಇರಲು ಸಾಧ್ಯವಿಲ್ಲ. 23 ವರ್ಷಗಳ ಬಳಿಕ ಕ್ಷಮೆಯಾಚಿಸುವುದು ಅಸಮರ್ಪಕ ಮತ್ತು ಅರ್ಥಹೀನ ಎಂದು ಹೇಳಿದ್ದಾರೆ.

ಪ್ರಕರಣವೇನು?:

2001ರ ಮಾ.13ರಂದು ಪ್ರಕಟಿಸಲಾದ ಸುದ್ದಿಯಲ್ಲಿ ರಕ್ಷಣಾ ಪರಿಕರಗಳನ್ನು ಖರೀದಿಸುವಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಅಹ್ಲುವಾಲಿಯಾ 50 ಸಾವಿರ ರು. ಲಂಚ ಸ್ವೀಕರಿಸಿದ್ದಾರೆ ಎಂದು ಬರೆಯಲಾಗಿತ್ತು. ಇದು ಸುಳ್ಳು ಎಂದು ಅಹ್ಲುವಾಲಿಯಾ ಕೋರ್ಟ್ ಮೆಟ್ಟಿಲೇರಿದ್ದರು.

ಏಷ್ಯಾನೆಟ್ ಪತ್ರಕರ್ತರ ಮೇಲೆ ಕೇರಳ ಸರ್ಕಾರ ಕೇಸ್‌: ತುರ್ತು ಪರಿಸ್ಥಿತಿಗೆ ಹೋಲಿಸಿದ ಬಿಜೆಪಿ; ಮಾಧ್ಯಮಕ್ಕೆ ಬೆಂಬಲ

ನಿಮ್ಮ ಸಂಸ್ಥೆ ಕೆಲಸ ಕಲಿಸಿಲ್ವಾ?; ಜರ್ನಲಿಸ್ಟ್ ಅಸಂಬದ್ಧ ಪ್ರಶ್ನೆಗೆ ಐಶ್ವರ್ಯಾ ರೈ ಫುಲ್ ಗರಂ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!