Thai Maman Gold Ring Scheme: ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ 1 ಗ್ರಾಂ ಚಿನ್ನದ ಉಂಗುರು!

Kannadaprabha News   | Kannada Prabha
Published : Jun 25, 2026, 06:44 AM IST
Thai Maman Gold Ring Scheme

ಸಾರಾಂಶ

ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರವು, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ 'ತೈಮಾಮನ್‌ ತಂಗ ಮೋತಿರಾಂ ತಿಟ್ಟಂ' ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಈ ಯೋಜನೆಗೆ ಚಾಲನೆ ಸಿಗಲಿದೆ.

ಚೆನ್ನೈ (ಜೂ.25): ಟಿವಿಕೆ ಪಕ್ಷ(TVK Party)ದ ಭರವಸೆಗಳಲ್ಲಿ ಒಂದಾದ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ ಯೋಜನೆಯನ್ನು ಜೂ.22ರಿಂದ ಪೂರ್ವಾನ್ವಯ ಆಗುವಂತೆ ಸೆ.15ರಿಂದ ಜಾರಿಗೆ ತರಲು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರ ಸರ್ಕಾರ ನಿರ್ಧರಿಸಿದೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಇದು ಅನ್ವಯ ಆಗಲಿದೆ.

ಇದೇ ವೇಳೆ, ಯೋಜನೆಯ ನಿರ್ವಹಣೆಗಾಗಿ ಪ್ರತ್ಯೇಕ ರಾಜ್ಯ ಯೋಜನೆ/ಕಾರ್ಯಕ್ರಮ ನಿರ್ವಹಣಾ ಘಟಕದ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಪರಿವಾರದಲ್ಲಿ ಜನಿಸುವ ಮಗುವನ್ನು ಮನೆಗೆ ಬರಮಾಡಿಕೊಳ್ಳುವಾಗ ಸೋದರ ಮಾವನ ಕಡೆಯಿಂದ ಚಿನ್ನದ ಉಡುಗೊರೆ ನೀಡುವ ಪದ್ಧತಿ ತಮಿಳುನಾಡಲ್ಲಿದೆ. ಇದನ್ನೇ ‘ತೈಮಾಮನ್‌ ತಂಗ ಮೋತಿರಾಂ ತಿಟ್ಟಂ’ ಯೋಜನೆಯ ಮೂಲಕ ವಿಜಯ್‌ ಮಾಡಲು ಹೊರಟಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಶಿಶುವಿಗೆ 13,600 ರು. ಮೌಲ್ಯದ 1 ಗ್ರಾಂ ಚಿನ್ನದ ಉಂಗುರವನ್ನು ನೀಡಲಾಗುವುದು. ಇದಕ್ಕೆ ವಾರ್ಷಿಕ 755 ಕೋಟಿ ರು. ಅನುದಾನ ತೆಗೆದಿಡಲಾಗಿದೆ.

ಶಿಶುಗಳಿಗೆ ಚಿನ್ನದ ಉಂಗುರ ಸೆ.15ಕ್ಕೆ ಜಾರಿ:

ಡಿಎಂಕೆ ಪಕ್ಷದ ಸ್ಥಾಪಕರಾದ ಸಿ.ಎನ್‌. ಅಣ್ಣಾದುರೈ ಅವರ ಜನ್ಮದಿನವಾದ ಸೆ.15ರಂದು ಚಿನ್ನದುಂಗುರದ ಯೋಜನೆಯನ್ನು ಜಾರಿಗೆ ತರಲು ವಿಜಯ್‌ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ವಿಜಯ್‌ ಅವರ ಜನ್ಮದಿನವಾದ 2026ರ ಜೂ.22ರ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಎಲ್ಲಾ ಕಂದಮ್ಮಗಳಿಗೆ ಪೂರ್ವಾನ್ವಯ ಆಗುವಂತೆ 1 ಗ್ರಾಂ ಹೊನ್ನಿನ ಉಗುರ ನೀಡಲಾಗುವುದು. ತಮಿಳುನಾಡಿನ ಸಂಸ್ಕೃತಿಯಂತೆ ಮಗುವನ್ನು ಜಗತ್ತಿಗೆ ಬರಮಾಡಿಕೊಳ್ಳಲು ಮತ್ತು ತಾಯ್ತನವನ್ನು ಸಂಭ್ರಮಿಸುವ ಉದ್ದೇಶವು ಈ ಯೋಜನೆಯದ್ದಾಗಿದೆ.

ತಮಿಳುನಾಡಿನಲ್ಲಿ ವರ್ಷಕ್ಕೆ ಸರಾಸರಿ 7.8 ಲಕ್ಷ ಮಕ್ಕಳು ಜನಿಸುತ್ತಿದ್ದು, ಅವುಗಳ ಪೈಕಿ 4.2 ಲಕ್ಷ ಜನನಗಳು ಸರ್ಕಾರಿ ಆಸ್ಪತ್ರೆಗಳಲ್ಲಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸೆರಾಸರಿ 63 ಸಾವಿರ ರು. ಖರ್ಚಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ 1300 ರು.ಗೆ ಆಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಣ ಪಡೆದು ಸೇವೆ ನೀಡದ Airtel; ಕನೆಕ್ಷನ್ ಸಿಗದೆ ಬೇಸತ್ತ ಗ್ರಾಹಕ; ಸಿಇಒ ಮಟ್ಟಕ್ಕೆ ದೂರು ನೀಡಿದ್ರೂ ಸಿಗಲಿಲ್ಲ ಪರಿಹಾರ!
'ಪದ್ಮಶ್ರೀ' ಸ್ವೀಕರಿಸುವಾಗ ವಿಶ್ವದಲ್ಲೇ ಸಿಗುವ ಅತಿ ಅಪರೂಪದ ವಾಚ್‌ ಧರಿಸಿದ್ದ R Madhavan; ಬೆಲೆ ಎಷ್ಟು?