ಒಡಿಶಾ(ಏ.1): ಪ್ರೇಮಿಗಳಿಬ್ಬರು ಪರಸ್ಪರ ರಸ್ತೆಯಲ್ಲೇ ಹೊಡೆದಾಡುತ್ತಿದ್ದು, ಇದನ್ನು ನೋಡಿದ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಜಗಳ ಬಿಡಿಸಲು ಹೋಗಿ ಯುವತಿಗೆ ಸರಿಯಾಗಿ ಬಾರಿಸಿದ್ದಾನೆ. ಒಡಿಶಾದ (Odisha) ರಾಜಧಾನಿ ಭುವನೇಶ್ವರದಲ್ಲಿ (Bhubaneswar) ಈ ಘಟನೆ ನಡೆದಿದೆ. ಇವರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಭುವನೇಶ್ವರದಲ್ಲಿರುವ ಇಂದಿರಾ ಗಾಂಧಿ ಪಾರ್ಕ್‌ನಿಂದ (Indira Gandhi Park) ಹೊರಬಂದ ನಂತರ ಹುಡುಗಿ ತನ್ನ ಗೆಳೆಯನೊಂದಿಗೆ (oyfriend) ತೀವ್ರವಾಗಿ ಜಗಳವಾಡಲು ಶುರು ಮಾಡಿದ್ದಾಳೆ. ವಿಡಿಯೋದಲ್ಲಿ ಆಕೆ ತನ್ನ ಗೆಳೆಯನನ್ನು ಮೌಖಿಕವಾಗಿ ಮತ್ತು ದೈಹಿಕವಾಗಿ ನಿಂದಿಸುತ್ತಿರುವುದು ಕಂಡು ಬರುತ್ತದೆ. ಕೋಪದಿಂದ ಕೊತ ಕೊತ ಕುದಿಯುತ್ತಿದ್ದ ಆಕೆ ಆತನನ್ನು ಬೈಗುಳದಿಂದಲೇ ಸಾಕಷ್ಟು ನಿಂದಿಸಿದ ನಂತರ ರಸ್ತೆ ಪಕ್ಕ ಇದ್ದ ಕಲ್ಲೊಂದನ್ನು ತೆಗೆದು ಆತ ಕುಳಿತಿದ್ದ ಗಾಡಿಯ ಹತ್ತಿರ ಎಸೆಯುತ್ತಾಳೆ. ಈ ವೇಳೆ ರಸ್ತೆಯಲ್ಲಿ ಹೋಗುವ ಇತರ ವಾಹನ ಸವಾರರು ಇವರ ಹೊಡೆದಾಟವನ್ನು ಗಮನಿಸಿದ್ದಾರೆ. ಅಲ್ಲದೇ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಹುಡುಗಿ ಮತ್ತಷ್ಟು ಕೋಪಗೊಂಡಿದ್ದು, ಮತ್ತು ದಾರಿಹೋಕರ ಫೋನ್ (mobile phone) ಕಸಿದುಕೊಳ್ಳಲು ಪ್ರಯತ್ನಿಸಿದ್ದಾಳೆ.
ಪೆಟ್ರೋಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದ ಅಣ್ಣತಂಗಿಗೆ ಸ್ವಿಗ್ಗಿ ಬಾಯ್ ಸಹಾಯ
ಆಗ ಅಲ್ಲಿಗೆ ಬಂದ ಆಹಾರ ವಿತರಣಾ ಕಾರ್ಯನಿರ್ವಾಹಕ ಮಧ್ಯಪ್ರವೇಶಿಸಿ ಗಲಾಟೆ ಶಮನಗೊಳಿಸಲು ಪ್ರಯತ್ನಿಸಿದ್ದಾನೆ. ಜಗಳವಾಡುತ್ತಿದ್ದ ಜೋಡಿಗೆ ಶಾಂತವಾಗುವಂತೆ ಹೇಳಿದ್ದಾನೆ. ಈ ವೇಳೆ ಯುವತಿ ಆತನನ್ನು ಕೂಡ ಅವಾಚ್ಯವಾಗಿ ನಿಂದಿಸಲು ಶುರು ಮಾಡಿದ್ದಾಳೆ ಎನ್ನಲಾಗಿದೆ, ಇದರಿಂದ ಜಗಳ ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು, ಹುಡುಗಿಯ ಅಸಭ್ಯ ಮಾತುಗಳಿಂದ ಕೋಪಗೊಂಡ ಆತ ಸಾರ್ವಜನಿಕ ಸ್ಥಳದಲ್ಲೇ ಆಕೆಯ ಗೆಳೆಯನ ಮುಂದೆಯೇ ಸರಿಯಾಗಿ ಬಾರಿಸಿದ್ದಾನೆ.
ವಿಡಿಯೋದಲ್ಲಿ ಡೆಲಿವರಿ ಬಾಯ್ (delivery executive) ತನ್ನ ತಾಳ್ಮೆ ಕಳೆದುಕೊಂಡು ಆಕೆಯನ್ನು ಥಳಿಸಲು ಆರಂಭಿಸಿದ್ದನ್ನು ಕಾಣಬಹುದು. ಆತ ವೀಡಿಯೊದಲ್ಲಿಅವಳನ್ನು ತಳ್ಳುವುದು, ಗುದ್ದುವುದು ಮತ್ತು ಕಪಾಳಮೋಕ್ಷ ಮಾಡುವುದು ರೆಕಾರ್ಡ್ ಆಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ನೋಡುಗರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಯುವತಿಯಾಗಲಿ ಅಥವಾ ಡೆಲಿವರಿ ಬಾಯ್ ಆಗಲಿ ಯಾವುದೇ ದೂರು ದಾಖಲಿಸಿಲ್ಲ. ಈ ಬಗ್ಗೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಭುವನೇಶ್ವರ (Bhubaneswar) ಡಿಸಿಪಿ ಉಮಾಶಂಕರ್ ದಾಶ್ (Umashankar Dash), ಇದು ಇಬ್ಬರು ಪರಸ್ಪರ ಥಳಿಸಿದ ಘಟನೆಯಾಗಿರುವುದರಿಂದ, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲು ಸಂಬಂಧಿಸಿದ ಪೊಲೀಸ್ ಠಾಣೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಡಿಶುಂ..ಡಿಶುಂ.. ಕಾರವಾರದಲ್ಲಿ ಚಾಲಕರಿಬ್ಬರ ಬೀದಿ ಹೊಡೆದಾಟ..ವಿಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ