ನವದೆಹಲಿ(ಫೆ.03): 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆಯ(Covid Vaccine) ಮೊದಲನೇ ಡೋಸ್ ನೀಡಿಕೆ ಆರಂಭವಾಗಿ ಗುರುವಾರಕ್ಕೆ 1 ತಿಂಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಅರ್ಹರಿಗೆ ಲಸಿಕೆಯ 2 ನೇ ಡೋಸನ್ನು(2nd Dose) ತ್ವರಿತವಾಗಿ ನೀಡಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.
15-18 ವರ್ಷದ ಮಕ್ಕಳಿಗೆ ಜ.3ರಿಂದ ಕೋವ್ಯಾಕ್ಸಿನ್(Covaxin) ಲಸಿಕೆ ನೀಡಿಕೆ ಆರಂಭವಾಗಿತ್ತು. ಕಳೆದ 1 ತಿಂಗಳಲ್ಲಿ, ಒಟ್ಟು 7.5 ಕೋಟಿ ಅರ್ಹ ಮಕ್ಕಳಲ್ಲಿ(Childrens), ಶೇ.63 ಎಂದರೆ 4,95,96,148 (4.95 ಕೋಟಿ) ಅರ್ಹರಿಗೆ ಮೊದಲನೇ ಡೋಸನ್ನು ನೀಡಲಾಗಿದೆ. ಕೋವ್ಯಾಕ್ಸಿನ್‌ನ 2ನೇ ಡೋಸ್ ನೀಡಿಕೆ ಅಂತರ 4 ವಾರಗಳಾಗಿದ್ದು, ಈ ಹಿನ್ನೆಲೆಯಲ್ಲಿ ಭೂಷಣ್ ಅವರು 2ನೇ ಡೋಸ್ ನೀಡಿಕೆಯ ಬಗ್ಗೆ ಜ್ಞಾಪಿಸಿದ್ದಾರೆ.
undefined
Vaccine Drive ಕರ್ನಾಟಕದಲ್ಲಿ 100% ಮೊದಲ ಡೋಸ್, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ!
ಅಲ್ಲದೇ, ‘ಕೋವಿಡ್‌ನಿಂದ ಸಂಪೂರ್ಣ ಸುರಕ್ಷತೆಯನ್ನು ಪಡೆಯಲು ಕೋವಿಡ್ ಲಸಿಕೆಯನ್ನು ಸಮಯೋಚಿತವಾಗಿ ಪಡೆಯುವುದು ಅಗತ್ಯವಾಗಿದೆ. ಮೊದಲನೇ ಡೋಸನ್ನು ಇನ್ನೂ ಸ್ವೀಕರಿಸದ ಅರ್ಹರಿಗೆ ಲಸಿಕೆಯನ್ನು ಕಾಲಮಿತಿ ನಿಗದಿಪಡಿಸಿಕೊಂಡು ನೀಡಬೇಕು. ಇನ್ನು ಮೊದಲ ಡೋಸ್ ಪಡೆದ 15ರಿಂದ 18 ರ್ವದ ಮಕ್ಕಳಿಗೂ ಕಾಲಮಿತಿಗೆ ಅನುಗುಣವಾಗಿ 2ನೇ ಡೋಸ್ ಲಸಿಕೆ ಕೊಡಬೇಕು. ಇನ್ನು ಮುಂದೆ ನೀಡಲಾಗುವ ಲಸಿಕೆಯ ಎರಡನೇ ಡೋಸ್ ಪ್ರಮಾಣವನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲಿಯೂ ಪ್ರತಿದಿನ ಪರಿಶೀಲಿಸಬೇಕು’ ಎಂದು ಭೂಷಣ್ ತಿಳಿಸಿದ್ದಾರೆ.
ಬಜೆಟ್ ಲೆಕ್ಕಾಚಾರ:
ಹಿಂದಿನ ವರ್ಷ ಬಜೆಟ್‌ನಲ್ಲಿ ಕೋವಿಡ್ ಲಸಿಕೆ ಖರೀದಿಗೆ .35000 ಕೋಟಿ ತೆಗೆದಿಟ್ಟಿದ್ದ ಕೇಂದ್ರ ಸರ್ಕಾರ, ಈ ಬಾರಿ ಕೇವಲ .5000 ಕೋಟಿ ಮೀಸಲಿಟ್ಟಿದೆ. ಹಾಗಾಗಿ, 3ನೇ ಡೋಸ್ ಎಲ್ಲರಿಗೂ ಉಚಿತವಾಗಿ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Corona Vaccines: ಸಾಮಾನ್ಯ ಔಷಧಿಗಳಂತೆ ಸಿಗಲಿದೆ ಲಸಿಕೆ, 1 ಡೋಸ್‌ಗೆ 275 ರು.?
ಮಕ್ಕಳಿಗೆ ಲಸಿಕೆ ಪಡೆಯುವಂತೆ ಪ್ರೇರಣೆ
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಔರಾದ್ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರು ಮಕ್ಕಳಿಗೆ ಧೈರ್ಯ ತುಂಬಿ ಲಸಿಕೆ ಪಡೆಯುವಂತೆ ಪ್ರೇರೆಪಿಸಿದರು. ಜನವರಿ 3ರಿಂದ ಆರಂಭವಾಗಿರುವ 15-18 ವರ್ಷ ವಯೋಮಾನದ ಮಕ್ಕಳ ಲಸಿಕಾಕರಣ ಅಭಿಯಾನದಲ್ಲಿ ಸರ್ಕಾರಿ ಪ್ರೌಢಶಾಲೆಯ ಕೆಲ ಮಕ್ಕಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಖುದ್ದು ತಹಸೀಲ್ದಾರ್ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳ ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಿದರು.
ಬಾಕಿ ಉಳಿದ ಎಲ್ಲ ಮಕ್ಕಳಿಗೆ ಲಸಿಕೆ ಪಡೆಯುವ ನಿಟ್ಟಿನಲ್ಲಿ ವರ್ಗ ಶಿಕ್ಷಕರು ಕ್ರಮವಹಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಬಿಆರ್‌ಸಿ ನಾರಾಯಣ ರಾಠೋಡ್, ಬಿಆರ್‌ಪಿ ಬಿಎಂ ಅಮರವಾಡಿ, ಸಿಆರ್‌ಪಿ ಉಮಾಕಾಂತ ಮಹಾಜನ, ವೆಂಕಟ ಔತಾಡೆ, ಮುಖ್ಯ ಶಿಕ್ಷಕ ಮಹಾದೇವ ಬಿಜಾಪೂರೆ ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿಯವರು ಉಪಸ್ಥಿತರಿದ್ದರು
ಬೆಂ. ಗ್ರಾಮಾಂತರ ಜಿಲ್ಲೆ ಶೇ.100 ಸಾಧನೆ
ಕೊರೋನಾ ಲಸಿಕೆ ಎರಡನೇ ಡೋಸ್ ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ.100 ರಷ್ಟುಗುರಿತಲುಪಿದ್ದು, ಈ ಸಾಧನೆ ಮಾಡಿದ ರಾಜ್ಯ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎರಡನೇ ಡೋಸ್ ವಿತರಣೆಯಲ್ಲಿ ಶೇ.100 ಗುರಿ ಸಾಧನೆ ಮಾಡಿದೆ. 10 ಜಿಲ್ಲೆಗಳು ಶೇ.90ರಷ್ಟುಮಂದಿಗೆ ಲಸಿಕೆ ನೀಡಿವೆ. ಈ ಸಾಧನೆ ಮಾಡಿ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.