ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದಿದ್ದ ಘರ್ಷಣೆ
ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾರತದ 20 ಸೈನಿಕರ ಸಾವು
ಭಾರತಕ್ಕಿಂತ ಹೆಚ್ಚಿನ ಚೀನಾ ಸೈನಿಕರ ಸಾವು ಎಂದ ದಿ ಕ್ಲಾಕ್ಸನ್
ನವದೆಹಲಿ (ಫೆ. 2): ಆಸ್ಟ್ರೇಲಿಯಾದ ಪ್ರಮುಖ ಪ್ರತ್ರಿಕೆ ದಿ ಕ್ಲಾಕ್ಸನ್ (The Klaxon ), 2020ರಲ್ಲಿ ಭಾರತ (India) ಹಾಗೂ ಚೀನಾ (China) ನಡುವೆ ಗಲ್ವಾನ್ ಕಣಿವೆಯಲ್ಲಿ(Galwan Valley) ನಡೆದ ಘರ್ಷಣೆಯ ಕುರಿತಾಗಿ "ಗಲ್ವಾನ್ ಡಿಕೋಡೆಡ್:" ಎನ್ನುವ ತನಿಖಾ ವರದಿಯನ್ನು ಪ್ರಕಟಿಸಿದೆ. ಇದರ ಅನ್ವಯ ಈ ಘರ್ಷಣೆಯಲ್ಲಿ ಭಾರತಕ್ಕಿಂತ ಹೆಚ್ಚಾಗಿ ಚೀನಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದು, ಅದಕ್ಕೆ ಕೆಲ ಸಾಕ್ಷಿಗಳನ್ನೂ ನೀಡಿದೆ. ಅದರಲ್ಲೂ ಪ್ರಮುಖವಾಗಿ ಹೊಡೆದಾಟಕ್ಕಿಂತ ಹೆಚ್ಚಾಗಿ ನದಿಯನ್ನು ದಾಟುವಾಗ ( drowning )ಕನಿಷ್ಠ 38 ಸೈನಿಕರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಚೀನಾ ಈ ಸಂಘರ್ಷದಲ್ಲಿ ಹೆಚ್ಚಿನ ನಷ್ಟವನ್ನು ಅನುಭವಿಸಿರುವುದು ತಮ್ಮ ವರದಿಯಿಂದ ಖಚಿತವಾಗಿದೆ ಎಂದು ದಿ ಕ್ಲಾಕ್ಸನ್ ಪತ್ರಿಕೆಯ ಸಂಪಾದಕ ಹಾಗೂ ಬರಹಗಾರ ಅಂಥೋಣಿ ಕ್ಲಾನ್ (Anthony Klan ) ಹೇಳಿದ್ದಾರೆ. ಗಲ್ವಾನ್ ನಲ್ಲಿ ನಡೆದ ಎರಡು ಪ್ರತ್ಯೇಕ ಘರ್ಷಣೆಗಳು ಸತ್ಯಗಳು ಹಾಗೂ ಚಿತ್ರಗಳ ಆಧಾರದ ಮೇಲೆ ಈ ತನಿಖಾ ವರದಿಯನ್ನು ಬರೆಯಲಾಗಿದೆ. ಗಾಲ್ವಾನ್ ಘರ್ಷಣೆಯಲ್ಲಿ ಚೀನಾ ತನ್ನ ಸಾವುನೋವುಗಳನ್ನು ಬಹಿರಂಗಪಡಿಸದಿದ್ದರೂ, ಯುದ್ಧದಲ್ಲಿ ಮಡಿದ ತನ್ನ ನಾಲ್ವರು ಸೈನಿಕರಿಗೆ ಮರಣೋತ್ತರ ಪದಕಗಳನ್ನು (posthumous medals) ಘೋಷಿಸಿದೆ. ಸತ್ಯ ಶೋಧನೆಗಾಗಿ ದಿ ಕ್ಲಾಕ್ಸಕ್, ಸ್ವತಂತ್ರವಾಗಿ ಸಾಮಾಜಿಕ ಮಾಧ್ಯಮ ಸಂಶೋಧಕರ ತಂಡವನ್ನು ನೇಮಿಸಿತ್ತು. ಇವರ ತನಿಖೆಯಿಂದ ಬಹಿರಂಗವಾದ ಅಂಶವೇನೆಂದರೆ, ಬೀಜಿಂಗ್ ಅಧಿಕೃತವಾಗಿ ಘೋಷಣೆ ಮಾಡಿದ ನಾಲ್ವರು ಸೈನಿಕರಿಗಿಂತ ಹಲವು ಪಟ್ಟು ಹೆಚ್ಚು ಸೈನಿಕರು ಘರ್ಷಣೆಯಲ್ಲಿ ಮೃತರಾಗಿದ್ದಾರೆ.
ಸಾಮಾಜಿಕ ಮಾಧ್ಯಮ ಸಂಶೋಧಕರು 'ಗಾಲ್ವಾನ್ ಡಿಕೋಡೆಡ್' ('Galwan Decoded)ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಜೂನ್ 15-16 ರ ಘರ್ಷಣೆಯ ಆರಂಭಿಕ ಹಂತಗಳಲ್ಲಿ, ವೇಗವಾಗಿ ಹರಿಯುವ ಶೂನ್ಯ ತಾಪಮಾನದಗಾಲ್ವಾನ್ ನದಿಯಲ್ಲಿ ಈಜಲು ಪ್ರಯತ್ನಿಸುವಾಗ ಅನೇಕ ಚೀನೀ ಸೈನಿಕರು ಮುಳುಗಿ ಸಾವಿಗೀಡಾಗಿದ್ದರು ಎಂದು ಹೇಳಿದೆ. ಎಂದು ಹೇಳಲಾಗಿದೆ.
🚨EXCLUSIVE🚨The deadly 2020 China-India Himalayan clash was sparked over a "temporary bridge crossing" installed over the Galwan River, according to new claims. Chinese casualties allegedly higher than officially reported. https://t.co/17CAEoDsDy
— Anthony Klan (@Anthony_Klan)
ಮಾಹಿತಿ ಸಂಗ್ರಹಿಸಿದ್ದು ಹೇಗೆ?: ಬೀಜಿಂಗ್‌ನಿಂದ ಅಧಿಕೃತವಾಗಿ ನಿಷೇಧಿಸಲ್ಪಟ್ಟ, ಚೈನೀಸ್ ಬ್ಲಾಗರ್ ಗಳು, ಸ್ಥಳೀಯ ನಾಗರೀಕರ ಹೇಳಿಕೆಗಳು ಹಾಗೂ ಚೀನಾ ಮಾಧ್ಯಮಗಳ ವರದಿಯನ್ನು ಒಂದು ವರ್ಷದವರೆಗೆ ಪರಿಶೀಲನೆ ಮಾಡಿ ಈ ಮಾಹಿತಿ ನೀಡಲಾಗಿದೆ.
ತನಿಖೆಯ ಅಂಶಗಳು
* ವರದಿಯಲ್ಲಿ ಹೇಳಿಕೊಂಡಂತೆ, ಜೂನ್ 15 ರ ಘರ್ಷಣೆಯು ತಾತ್ಕಾಲಿಕ ಸೇತುವೆ ನಿರ್ಮಾಣಕ್ಕಾಗಿ ಪ್ರಾರಂಭವಾಯಿತು. ಭಾರತೀಯ ಸೈನಿಕರು ಮೇ 2022 ರಲ್ಲಿ ಗಾಲ್ವಾನ್ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದರು. ಮತ್ತೊಂದೆಡೆ, ಪಿಎಲ್ಎ, ಏಪ್ರಿಲ್‌ನಿಂದ ಪರಸ್ಪರ ನಿರ್ಧರಿಸಿದ ಬಫರ್ ವಲಯದಲ್ಲಿ ಮೂಲಸೌಕರ್ಯವನ್ನು ರಚಿಸಲು ಆರಂಭಿಸಿತ್ತು.
* ಜೂನ್ 6 ರಂದು, 80 ಪಿಎಲ್ಎ ಸೈನಿಕರು ಭಾರತದ ಕಡೆಯಿಂದ ರಚಿಸಲ್ಪಟ್ಟ ಸೇತುವೆಯನ್ನು ಕೆಡವಲು ಬಂದಿದ್ದರು. ಇದನ್ನು ರಕ್ಷಿಸಲು 100 ಭಾರತೀಯ ಸೈನಿಕರು ಸ್ಥಳಕ್ಕೆ ಬಂದಿದ್ದರು ಎಂದು ವರದಿ ತಿಳಿಸಿದೆ.
* ಬಫರ್ ವಲಯವನ್ನು ದಾಟಿದ ಎಲ್ಲಾ ಸಿಬ್ಬಂದಿಯನ್ನು ಎರಡೂ ಕಡೆಯಿಂದ ಹಿಂಪಡೆಯಲು ನಿರ್ಧರಿಸಲಾಯಿತು. ಆದರೆ, ತನ್ನ ಮಾತಿಗೆ ನಿಲ್ಲದ ಪಿಎಲ್ ಎ, ತಾನು ನಿರ್ಮಾಣ ಮಾಡಿದ್ದ ವ್ಯವಸ್ಥೆಗಳನ್ನು ಕಿತ್ತುಹಾಕುವ ಬದಲು, ಭಾರತೀಯ ಸೇನೆ ನಿರ್ಮಿಸಿದ್ದ ನದಿ ದಾಟುವ ಸೇತುವೆಯನ್ನು ರಹಸ್ಯವಾಗಿ ಕೆಡವಿ ಹಾಕಿತ್ತು ಎಂದು ವರದಿ ಹೇಳಿದೆ.
* ಕರ್ನಲ್ ಸಂತೋಷ್ ಬಾಬು (Colonel Santosh Babu) ಅವರು ಜೂನ್ 15 ರಂದು ವಿವಾದಿತ ಪ್ರದೇಶಕ್ಕೆ ತಮ್ಮ ಸೈನ್ಯದೊಂದಿಗೆ ಬಂದರೆ, ಚೀನಾದ ಪಡೆಗಳನ್ನು ಕರ್ನಲ್ ಕಿ ಫಾಬಾವೊ (Colonel Qi Fabao) ನೇತೃತ್ವ ವಹಿಸಿದ್ದರು.
* ಸಮಸ್ಯೆಯನ್ನು ಚರ್ಚಿಸುವ ಬದಲು, ಕರ್ನಲ್ ಫಾಬಾವೊ ತನ್ನ ಸೈನ್ಯಕ್ಕೆ ಯುದ್ಧ ರಚನೆಯನ್ನು ರೂಪಿಸಲು ಆದೇಶಿಸಿದ್ದ.
ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮರ ಜೀವನ ಪ್ರೇರಣೆಯಾಗಲಿ: ಆರ್‌ಸಿ!
* ಕರ್ನಲ್ ಫಾಬಾವೊ ದಾಳಿ ಮಾಡಿದ ಮರುಕ್ಷಣವೇ ಭಾರತೀಯ ಸೇನಾ ಪಡೆಗಳು ಆತನನ್ನು ತಕ್ಷಣವೇ ಮುತ್ತಿಗೆ ಹಾಕಿದವು. "ಅವನನ್ನು ರಕ್ಷಿಸಲು, ಪಿಎಲ್ಎ ಬೆಟಾಲಿಯನ್ ಕಮಾಂಡರ್ ಚೆನ್ ಹಾಂಗ್ಜುನ್ (Chen Hongjun) ಮತ್ತು ಸೈನಿಕ ಚೆನ್ ಕ್ಸಿಯಾಂಗ್ರಾಂಗ್ (Chen Xiangrong )ಅವರು ಭಾರತೀಯ ಸೇನೆಯ ಸ್ಥಳವನ್ನು ಪ್ರವೇಶಿಸಿದರು. ಅದಲ್ಲದೆ, ಉಕ್ಕಿನ ಕೊಳವೆಗಳು, ಕೋಲು ಹಾಗೂ ಕಲ್ಲುಗಳನ್ನು ಬಳಸಿ ತಮ್ಮ ಕಮಾಂಡರ್ ಅನ್ನು ಬಿಡಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು. "363 ನೇ ರೆಜಿಮೆಂಟ್, ಫ್ರಾಂಟಿಯರ್ ಡಿಫೆನ್ಸ್, ಕ್ಸಿನ್‌ಜಿಯಾಂಗ್ ಮಿಲಿಟರಿ ಪ್ರದೇಶದ ಮೋಟಾರು ಇನ್ ಫೆಂಟ್ರಿ ಬೆಟಾಲಿಯನ್ ಸೈನಿಕ, ಕ್ಸಿಯಾವೊ ಸಿಯುವಾನ್ (Xiao Siyuan), ಘಟನೆಗಳನ್ನು ರೆಕಾರ್ಡ್ ಮಾಡುತ್ತಿದ್ದರು". ಆದರೆ, ಈ ಘಟನೆ ಆದ ಬೆನ್ನಲ್ಲೇ ಕ್ಯಾಮೆರಾವನ್ನು ಬಿಟ್ಟು ದಾಳಿ ಮಾಡಲು ಆರಂಭಿಸಿದರು. ಭಾರತೀಯ ಸೈನಿಕನಿಂದ ತೀವ್ರವಾಗಿ ಗಾಯಗೊಂಡಿದ್ದ ಸಿಯುವಾನ್ ಸಾವಿಗೀಡಾಗಿದ್ದರು.
* ಆ ಬಳಿಕ ಚೀನಾ ಸೈನಿಕರು ಪ್ರತಿರೋಧ ಒಡ್ಡಲು ಆರಂಭಿಸಿದ್ದರು. ವಾಟರ್ ಪ್ಯಾಂಟ್ ಗಳನ್ನು ಧರಿಸಲು ಕೂಡ ಚೀನಿ ಸೈನಿಕರಿಗೆ ಸಮಯವಿರಲಿಲ್ಲ. ಕಡುಕತ್ತಲೆಯಲ್ಲಿ ಹಿಮದಂತಿದ್ದ ನದಿ ನೀರನ್ನು ದಾಟಲು ವಾಂಗ್ ಝುರಾನ್ ನೇತೃತ್ವದಲ್ಲಿ ಪ್ರಯತ್ನ ಪಟ್ಟಿದ್ದರು.
ಗಲ್ವಾನ್ ಕಣಿವೆಯಲ್ಲಿ 40 ಚೀನಾ ಯೋಧರು ಹತ: ಮಾಹಿತಿ ಬಿಚ್ಚಿಟ್ಟಾತನಿಗೆ 8 ತಿಂಗಳು ಜೈಲು!
* ಚೀನಾ ಸೈನಿಕರು ಮುಳುಗಿಹೋಗಿದ್ದನ್ನು ವರದಿ ವಿವರಿಸಿದ್ದು, ನದಿಯು ಇದ್ದಕ್ಕಿದ್ದಂತೆ ಉಕ್ಕಿ ಹರಿದರೆ, ಗಾಯಗೊಂಡಿದ್ದ ಚೀನಾದ ಸೈನಿಕರು ನದಿಯಲ್ಲಿ ಜಾರಿ ಬೀಳುತ್ತಾ ಮುಳುಗಿ ಹೋಗುತ್ತಿದ್ದರು. ಆ ರಾತ್ರಿ ವಾಂಗ್ ಅವರೊಂದಿಗೆ ಕನಿಷ್ಠ 38 ಪಿಎಲ್ ಎ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ.