PM Modi Address ದೇಶಾದ್ಯಂತ ಬಿಜೆಪಿ ಕಾರ‍್ಯಕರ್ತರು, ಹಿತೈಷಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ!

Published : Feb 03, 2022, 02:09 AM IST
PM Modi Address ದೇಶಾದ್ಯಂತ ಬಿಜೆಪಿ ಕಾರ‍್ಯಕರ್ತರು, ಹಿತೈಷಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ!

ಸಾರಾಂಶ

- ಕೇಂದ್ರ ಬಜೆಟ್‌ನ ಜನಸ್ನೇಹಿ, ಪ್ರಗತಿಪರ ಅಂಶಗಳನ್ನು ಎಳೆಎಳೆಯಾಗಿ ವಿವರಿಸಿದ ನಮೋ - ದೇಶವನ್ನು ಎಲ್ಲ ವಲಯದಲ್ಲೂ ಶಕ್ತಿಶಾಲಿ ಮಾಡುವ ಧ್ಯೇಯ - ಬಡ, ಮಧ್ಯಮ ವರ್ಗ, ಯುವಕರಿಗೆ ಮೂಲಸೌಕರ್ಯದ ಗುರಿ - ಕಳೆದ 7 ವರ್ಷದಗಳಲ್ಲಿ ದೇಶ ಸ್ವಾವಲಂಬಿ ಮಾಡಲು ಸಾಕಷ್ಟುಕ್ರಮ

ನವದೆಹಲಿ(ಜ.03): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌(Union Budget 2022) ಜನ ಸ್ನೇಹಿ ಮತ್ತು ಪ್ರಗತಿಪರವಾಗಿದೆ. ಕೋರೋನೋತ್ತರ ಕಾಲದಲ್ಲಿ ಬದಲಾಗಿರುವ ಪರಿಸ್ಥಿತಿಯಿಂದಾಗಿ ಭಾರತವು ತೀವ್ರಗತಿಯಲ್ಲಿ ಬದಲಾಗಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ದೇಶವನ್ನು ‘ಆತ್ಮನಿರ್ಭರ’ ಮಾಡುವ ಬಜೆಟ್‌ ಮಂಡಿಸಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ.

ದೇಶಾದ್ಯಂತ ಇರುವ ಬಿಜೆಪಿ ಕಾರ್ಯಕರ್ತರು(BJP workers), ಹಿತೈಷಿಗಳಿಗಾಗಿ ಆಯೋಜಿಸಲಾಗಿದ್ದ ‘ಆತ್ಮನಿರ್ಭರ ಅರ್ಥವ್ಯವಸ್ಥೆ’ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಬುಧವಾರ ವಚ್ರ್ಯುವಲ್‌ ವಿಧಾನದಲ್ಲಿ ಮಾತನಾಡಿದ ಮೋದಿ, ದೇಶವನ್ನು ಸ್ವಾವಲಂಬಿ(Aatmanirbhar Bharat) ಮಾಡಲು ತಮ್ಮ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ಹಲವು ಕ್ರಮಗಳು, ಜಾರಿಗೊಳಿಸಿದ ಯೋಜನೆಗಳು, ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಒತ್ತು ನೀಡಿದ ವಿಷಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಈ ಸಾಧನೆಗಳನ್ನು ಬಿಜೆಪಿ ಕಾರ್ಯಕರ್ತರು ಜನತೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!

‘ಬಡವರು, ಮಧ್ಯಮ ವರ್ಗ ಮತ್ತು ಯುವಸಮೂಹಕ್ಕೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಬಜೆಟ್‌ ವ್ಯಕ್ತಪಡಿಸುತ್ತದೆ. ಕೊರೋನೋತ್ತರ ಕಾಲದಲ್ಲಿ ದೇಶ-ದೇಶಗಳ ನಡುವೆ ಸ್ಪರ್ಧೆ ಉಂಟಾಗಿದೆ. ವಿಶ್ವವು ಭಾರತವನ್ನು ನೋಡುವ ದೃಷ್ಟಿಕೋನದಲ್ಲಿನ ಬೃಹತ್‌ ಬದಲಾವಣೆ ಕಾಣಿಸಿಗುತ್ತಿದೆ. ಶಕ್ತಿಶಾಲಿ ಭಾರತವನ್ನು ಎದುರುಗಾಣಲು ಜಾಗತಿಕ ಸಮುದಾಯ ಬಯಸುತ್ತಿದೆ. ಹೀಗಾಗಿ ದೇಶವನ್ನು ವೇಗವಾಗಿ ಅಭಿವೃದ್ಧಿ ಗತಿಯಲ್ಲಿ ಕೊಂಡೊಯ್ಯುವುದು ಮತ್ತು ಎಲ್ಲಾ ವಲಯಗಳಲ್ಲೂ ಶಕ್ತಿಶಾಲಿಯನ್ನಾಗಿ ಮಾಡುವುದು ನಮ್ಮ ಪಾಲಿಗೆ ಅತ್ಯಗತ್ಯ. ಈ ಧ್ಯೇಯದೊಂದಿಗೆ ಬಜೆಟ್‌ ಮಂಡಿಸಲಾಗಿದೆ’ ಎಂದು ಪ್ರತಿಪಾದಿಸಿದರು.

ಆತ್ಮನಿರ್ಭರತೆಗೆ ಕ್ರಮಗಳು:
‘ಬಜೆಟ್‌ನಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅನುದಾನವನ್ನು 3 ಪಟ್ಟು ಹೆಚ್ಚಿಸಲಾಗಿದೆ. ಶೀಘ್ರವೇ ಹಳ್ಳಿಗಳಿಗೂ 5ಜಿ ಸೇವೆ ಆರಂಭವಾಗಲಿದೆ. ಇದು ಬದಲಾವಣೆಯ ಹೊಸ ಶಕೆಗೆ ಕಾರಣವಾಗಲಿದೆ. ‘ಡಿಜಿಟಲ್‌ ರುಪಿ’ ಕ್ರಮವು ಫಿನ್‌ಟೆಕ್‌ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಸ್ಟಾರ್ಟಪ್‌ಗಳಿಗೆ ನೀಡಿರುವ ತೆರಿಗೆ ವಿನಾಯ್ತಿಗಳು ಯುವ ಸಮೂಹವು ಹೊಸತನ್ನು ಸೃಷ್ಟಿಸಲು ಉತ್ತೇಜಿಸಲಿದೆ’ ಎಂದರು.

1 ಕೋಟಿ ಸಬ್‌ಸ್ಕ್ರೈಬರ್‌ ಗಳಿಸಿದ ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್

‘ಯುಪಿಎ ಅವಧಿಗೆ ಹೋಲಿಸಿದರೆ ಸಾರ್ವಜನಿಕ ಹೂಡಿಕೆಯಲ್ಲಿ 4 ಪಟ್ಟು ಏರಿಕೆಯಾಗಿದೆ. 2013-14ರ ಯುಪಿಎ ಅವಧಿಯಲ್ಲಿ 1.87 ಲಕ್ಷ ಕೋಟಿ ರು. ಸಾರ್ವಜನಿಕ ಹೂಡಿಕೆ ಇತ್ತು. ಇದು ಕೇವಲ 7 ವರ್ಷದಲ್ಲಿ 7.5 ಲಕ್ಷ ಕೋಟಿ ರು.ಗೆ ಏರಿಕೆ ಆಗಿದೆ. ರಫ್ತು ಪ್ರಮಾಣವು 2013-14ರ 2.5 ಲಕ್ಷ ಕೋಟಿ ರು.ನಿಂದ 4.7 ಲಕ್ಷ ಕೋಟಿ ರು.ಗೆ ಏರಿಕೆ ಆಗಿದೆ’ ಎಂದು ಮೋದಿ ಹೇಳಿದರು.

ಬಡವರು, ಮಹಿಳೆಯರಿಗೆ ನೆರವು:
ಕಳೆದ 7 ವರ್ಷಗಳಲ್ಲಿ ನಾವು 3 ಕೋಟಿ ಬಡವರಿಗೆ ಪಕ್ಕಾ ಮನೆಗಳನ್ನು ವಿತರಿಸಿದ್ದೇವೆ, ಈ ಮೂಲಕ ಬಡವರನ್ನು ‘ಲಕ್ಷಾಧಿಪತಿ’ಗಳನ್ನಾಗಿ ಮಾಡಿದ್ದೇವೆ. ಈ ಹಿಂದೆ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರು ಇದೀಗ ತಮ್ಮದೇ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ನಮ್ಮ ಸರ್ಕಾರವು ಮನೆಗಳ ವಿಸ್ತೀರ್ಣ ಮತ್ತು ಮನೆ ನಿರ್ಮಾಣಕ್ಕೆ ಮಾಡುತ್ತಿದ್ದ ವೆಚ್ಚ ಎರಡನ್ನೂ ಹೆಚ್ಚಳ ಮಾಡಿದೆ. ಈ ಮೂಲಕ ಮನೆಯಲ್ಲಿನ ಓದುತ್ತಿರುವ ಮಕ್ಕಳಿಗೆ ಹೆಚ್ಚಿನ ಸ್ಥಳಾವಕಾಶ ಸಿಗುವಂತೆ ಮಾಡಿದ್ದೇವೆ. ಹೀಗೆ ವಿತರಿಸಿದ ಬಹುತೇಕ ಮನೆಗಳು, ಮಹಿಳೆಯರ ಹೆಸರಲ್ಲೇ ಇದೆ. ಈ ಮೂಲಕ ನಾವು ಮಹಿಳೆಯರನ್ನು ‘ಮಾಲೀಕ’ರನ್ನಾಗಿ ಮಾಡಿದ್ದೇವೆ’ ಎಂದು ಹರ್ಷಿಸಿದರು.

ಕೃಷಿಗೆ ಆದ್ಯತೆ:
ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯ ಬಗ್ಗೆ ಸಾಕಷ್ಟುಮಾತುಗಳು ಕೇಳಿಬಂದಿದ್ದವು. ಆದರೆ ಈ ವರ್ಷ ಬರೀ ಭತ್ತದ ಬೆಳೆಗಾರರೇ ಬೆಂಬಲ ಬೆಲೆ ರೂಪದಲ್ಲಿ 1.5 ಲಕ್ಷ ಕೋಟಿ ರು.ಗೂ ಹೆಚ್ಚಿನ ನೆರವು ಪಡೆಯಲಿದ್ದಾರೆ. ಜೊತೆಗೆ ಗಂಗಾ ನದಿಯ ತಟದ 2500 ಕಿ.ಮೀ ಉದ್ದಕ್ಕೂ ನೈಸರ್ಗಿಕ ಕೃಷಿ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಹೇಳಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana