ನದಿಗೆ ಕಾರು ಬಿದ್ದು ಐವರು ಸಾವು: ಮದುವೆ ಮುಗಿಸಿ ಮನೆಗೆ ಹೊರಟವರು ಮಸಣ ಸೇರಿದರು

Published : May 15, 2022, 01:07 PM ISTUpdated : May 15, 2022, 01:12 PM IST
ನದಿಗೆ ಕಾರು ಬಿದ್ದು ಐವರು ಸಾವು: ಮದುವೆ ಮುಗಿಸಿ ಮನೆಗೆ ಹೊರಟವರು ಮಸಣ ಸೇರಿದರು

ಸಾರಾಂಶ

ಮನೆಗೆ ಹೊರಟವರು ಮಸಣ ಸೇರಿದರು ನದಿಗೆ ಕಾರು ಬಿದ್ದು ಐವರು ಸಾವು ಬಿಹಾರದ ನವೀನ್‌ಪುರದಲ್ಲಿ ಘಟನೆ

ಪಾಟ್ನಾ: ಮದುವೆ ಸಮಾರಂಭಕ್ಕೆ ಹೋಗಿ ಬರುತ್ತಿದ್ದ ಕಾರು ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಬಿಹಾರದ ನವೀನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರೆಲ್ಲರೂ ಜಾರ್ಖಂಡ್‌ನ (Jharkhand) ಪಲಮು (Palamu) ನಿವಾಸಿಗಳು. ಅವರು ಟೋಲ್‌ ಪಂಚಾಯತ್‌ನ (Tol Panchayat) ಬಾಗಿ ಗ್ರಾಮದಲ್ಲಿ (Baghi village) ಮದುವೆ ಸಮಾರಂಭ ಮುಗಿಸಿ ಪಲಮು ಜಿಲ್ಲೆಯಲ್ಲಿರುವ ಛತ್ರಾಪುರ್‌ಗೆ (Chhatarpur) ಕಾರಿನಲ್ಲಿ ಬರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. 

ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಜನರನ್ನು ಹೊತ್ತೊಯ್ಯುತ್ತಿದ್ದ ಎಂಎಚ್ 02 ಬಿಪಿ - 365 ನೋಂದಣಿ ಸಂಖ್ಯೆಯ ಕಾರು ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಬೆಳಗಾವಿಯ ಸುತಗಟ್ಟೆ ಬಳಿ ಭೀಕರ ಅಪಘಾತ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮೃತರನ್ನು ರಂಜಿತ್ ಕುಮಾರ್ (Ranjit Kumar), ಅಭಯ್ ಕುಮಾರ್ (Abhay Kumar), ಅಕ್ಷಯ್ ಕುಮಾರ್ (Akshay Kumar), ಶುಭಂ ಕುಮಾರ್ (Shubham Kumar) ಮತ್ತು ಬಬ್ಲು ಕುಮಾರ್ (Bablu Kumar) ಎಂದು ಗುರುತಿಸಲಾಗಿದೆ .ಗಾಯಾಳುಗಳಾದ ಗಂಜನ್ ಕುಮಾರ್ (Ganjan Kumar) ಮತ್ತು ಮುಖೇಶ್ ಕುಮಾರ್ (Mukesh Kumar) ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ವಾರಣಾಸಿಗೆ (Varanasi) ಕಳುಹಿಸಲಾಗಿದೆ. ಮಾಹಿತಿ ಪಡೆದ ಒಂದು ಗಂಟೆಯ ನಂತರ ಪೊಲೀಸ್ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರು ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಔರಂಗಾಬಾದ್‌ನಲ್ಲಿ (Aurangabad) ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Andrew Symonds: ಆಕ್ಸಿಡೆಂಟ್‌ನಲ್ಲಿ ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಸೈಮಂಡ್ಸ್ ದುರಂತ ಸಾವು..!


ವಾರದ ಹಿಂದೆ ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ಸ್ಯಾಂಡಲ್‌ವುಡ್‌ ಪೋಷಕ ನಟಿ ಅಪಘಾತಕ್ಕೀಡಾಗಿದ್ದರು. ಗಾಯಾಳು ನಟಿ ಸುನೇತ್ರಾ(40)ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ರಭಸಕ್ಕೆ ನಟಿ ಸುನೇತ್ರಾ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದು, ಕೂಡಲೇ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಗಾಯಾಳು ಸುನೇತ್ರರನ್ನು  ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಬಸವನಗುಡಿಯ ಖಾಸಗಿ ಆಸ್ಪ್ರತ್ರೆಯಲ್ಲಿ ಸುನೇತ್ರಾಗೆ ಚಿಕಿತ್ಸೆ ಮುಂದುವರೆದಿದೆ. ಸುನೇತ್ರರವರು ತಡರಾತ್ರಿ ಶೂಟಿಂಗ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು, ಎನ್ ಆರ್ ಕಾಲೋನಿ 9ನೇ ಅಡ್ಡ ರಸ್ತೆಯಲ್ಲಿ ಇವರ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ ಮತ್ತು ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿದ್ದು, ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. 

ಸದ್ಯಕ್ಕೆ ಸಮಸ್ಯೆಯಿಲ್ಲ-ಪುತ್ರಿ: ಅಮ್ಮ ರಾತ್ರಿ ಶೂಟಿಂಗ್‌ ಮುಗಿಸಿಕೊಂಡು ಮನೆಗೆ ಬರುವಾಗ ಈ ದುರ್ಘಟನೆಯಾಗಿದೆ. ರಸ್ತೆಯಲ್ಲಿನ ಹಂಪ್‌ನಿಂದ ಅಪಘಾತ ಸಂಭವಿಸಿದೆ. ಹಂಪ್ಸ್‌ ಸಮೀಪವೇ ರಸ್ತೆ ಗುಂಡಿಯೂ ಇದೆ. ಅಮ್ಮ ಹೆಲ್ಮೆಟ್‌ ಧರಿಸಿದ್ದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದಿಲ್ಲ. ಸಣ್ಣಪುಟ್ಟಗಾಯವಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಅಮ್ಮ ಆರಾಮಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅಮ್ಮನನ್ನು ಡಿಸ್ಚಾರ್ಜ್‌ ಮಾಡುತ್ತೇವೆ ಎಂದು ನಟಿ ಸುನೇತ್ರಾ ಪಂಡಿತ್‌ ಅವರ ಪುತ್ರಿ ಶ್ರೇಯಾ ಮಾಧ್ಯಮಗಳಿಗೆ ತಿಳಿಸಿದರು. ಅಪಘಾತಕ್ಕೆ ಕಾರಣವಾದ ಹಂಪ್‌ ಅವೈಜ್ಞಾನಿಕವಾಗಿದೆ. ಈ ಜಾಗದಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana;
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​