ಅಸ್ಸಾಂನಲ್ಲಿ ಮಳೆಯ ಅವಾಂತರ: ಕೊಚ್ಚಿ ಹೋದ ರಸ್ತೆಗಳು, ಮೂವರ ಬಲಿ

By Anusha KbFirst Published May 15, 2022, 11:35 AM IST
Highlights
  • ಅಸ್ಸಾಂನಲ್ಲಿ ಮಳೆಯ ಆರ್ಭಟ
  • ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆಗಳು
  • ದಿಮಾ ಹಸಾವೊ ಜಿಲ್ಲೆಯಲ್ಲಿ ಮೂವರು ಬಲಿ

ಗುವಾಹಟಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬೇಸಿಗೆ ಮಳೆಯ ಆರ್ಭಟ ಜೋರಾಗಿದ್ದು, ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ರಾಜ್ಯದ ದಿಮಾ ಹಸಾವೊ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಮಳೆಯಿಂದ ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿವೆ. ಪ್ರವಾಹದಿಂದ ಅಸ್ಸಾಂನ ಆರು ಜಿಲ್ಲೆಗಳಳ ಸುಮಾರು 25,000 ಜನರು ಸಂತ್ರಸ್ತರಾಗಿದ್ದಾರೆ. ದಿಮಾ ಹಸಾವೊ (Dima Hasao) ಜಿಲ್ಲೆಯ ಹಫ್ಲಾಂಗ್ (Haflong) ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಅಸ್ಸಾಂ ಮತ್ತು ನೆರೆಯ ರಾಜ್ಯಗಳಾದ ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನದಿಗಳ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದ್ದು, ಕೊಪಿಲಿ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Torrential rains washed away a portion of a road in the Haflong area in Assam's Dima Hasao district pic.twitter.com/SLZdo1O07B

— ANI (@ANI)

Latest Videos

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (Assam State Disaster Management Authority) (ASDMA) ಪ್ರವಾಹ ವರದಿಗಳ ಪ್ರಕಾರ, ಮೇ 14 ರವರೆಗೆ, ಆರು ಜಿಲ್ಲೆಗಳ 94 ಹಳ್ಳಿಗಳಲ್ಲಿ ಒಟ್ಟು 24,681 ಜನರು ಈ ಪ್ರವಾಹದಿಂದ ಹಾನಿಗೊಳಗಾಗಿದ್ದಾರೆ.  ಕ್ಯಾಚಾರ್ (Cachar), ಧೆಮಾಜಿ (Dhemaji), ಹೊಜೈ (Hojai), ಕರ್ಬಿ ಆಂಗ್ಲಾಂಗ್ ಪಶ್ಚಿಮ (Karbi Anglong West), ನಾಗಾಂವ್ (Nagaon) ಮತ್ತು ಕಾಮ್ರೂಪ್ (Kamrup) ಈ ಪ್ರದೇಶಗಳು ಪ್ರವಾಹದಿಂದ ತೀವ್ರ ಹಾನಿಗೊಳಗಾಗಿವೆ. 

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಅವಾಂತರ: ಬೀದಿಗೆ ಬಂದ ಬದುಕು

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 1732.72 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಮುಳುಗಡೆಯಾಗಿದೆ. ಕ್ಯಾಚಾರ್ ಜಿಲ್ಲೆಯಲ್ಲಿಯೇ 21,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್‌ಡಿಆರ್‌ಎಫ್ (SDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (Emergency Services)ಶನಿವಾರ ಕ್ಯಾಚಾರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಂದ 2,150 ಜನರನ್ನು ರಕ್ಷಿಸಿವೆ. ಹೋಜೈ, ಲಖಿಂಪುರ, ನಾಗಾಂವ್ ಜಿಲ್ಲೆಗಳಲ್ಲಿ ಹಲವು ರಸ್ತೆಗಳು, ಸೇತುವೆಗಳು ಮತ್ತು ನೀರಾವರಿ ಕಾಲುವೆಗಳು ಪ್ರವಾಹದಿಂದ  ಹಾನಿಗೊಳಗಾಗಿವೆ.

ಅಸಾನಿ ಚಂಡಮಾರುತದ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ.

ಪಿಒಕೆಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ ನಿರ್ಮಿತ ಹಾಸನಾಬಾದ್ ಸೇತುವೆ!

 ಪ್ರತಿ ವರ್ಷದ ವಾಡಿಕೆಯಂತೆ ಜೂನ್‌ ತಿಂಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುತ್ತಿದ್ದ ಮುಂಗಾರು ಮಳೆ ಈ ಬಾರಿ ಮೇ ತಿಂಗಳ್ಯಾಂತಕ್ಕೇ ರಾಜ್ಯಕ್ಕೆ ಕಾಲಿಡಲಿದೆ. ಜತೆಗೆ ಈ ಬಾರಿ ಮುಂಗಾರು ರಾಜ್ಯದಲ್ಲಿ ಉತ್ತಮ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಪ್ರತಿ ವರ್ಷ ಜೂನ್‌ 1 ಅಥವಾ ಅದರ ಬಳಿಕ ಕೇರಳದ ಕರಾವಳಿಗೆ ಮುಂಗಾರು ಪ್ರವೇಶವಾಗುತ್ತಿತ್ತು. ಈ ಬಾರಿ ಮೇ 27 ರಂದೇ ಕೇರಳದ ಕರಾವಳಿಗೆ ಮಾನ್ಸೂನ್‌ ಮಾರುತ ಅಪ್ಪಳಿಸಲಿದೆ. ಪರಿಣಾಮ ಮುಂದಿನ 3-4 ದಿನದ ಒಳಗಾಗಿ ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರನ್ನು ಮಾನ್ಸೂನ್‌ ಮಾರುತ ಪ್ರವೇಶಿಸಲಿದೆ ಎಂದು ಹಾವಾಮಾನ ಕೇಂದ್ರದ ಅಧಿಕಾರಿ ಸದಾನಂದ ಅಡಿಗ ತಿಳಿಸಿದ್ದಾರೆ. ರಾಜ್ಯದ ಕರಾವಳಿಗೆ ತಲುಪಿದ ಬಳಿಕ ಸುಮಾರು 3 ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡನ್ನು ಮಾನ್ಸೂನ್‌ ಆವರಿಸಲಿದೆ. ಇದರಿಂದ ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಈ ಬಾರಿಯ ಮಾನ್ಸೂನ್‌ ಮಳೆ ಸುರಿಯಲಿದೆ ಎಂದು ಹೇಳಿದರು.

click me!