ಅಮೆಜಾನ್ ನದಿಯಲ್ಲಿ ಅನಕೊಂಡದ ಬಾಲ ಹಿಡಿದ ಮೀನುಗಾರ, ವಿಡಿಯೋ ನೋಡಿದ್ರೆ ಮೈ ಝುಂ ಅನ್ಸುತ್ತೆ!

Published : Jul 13, 2025, 12:15 PM IST
anakonda

ಸಾರಾಂಶ

ಇಂದು ನಾವು ನಿಮಗೆ ಒಂದು ವಿಡಿಯೋವನ್ನು ತೋರಿಸಲಿದ್ದೇವೆ. ಇದನ್ನು ನೋಡಿದ ನಂತರ ನಿಮಗೆ Goosebumps ಬರದೆ ಇರಲಾರದು. ಅಂಥದ್ದೇನಿದೆ ಈ ವಿಡಿಯೋದಲ್ಲಿ ಅಂತೀರಾ?.

ಹಾಲಿವುಡ್‌ನಲ್ಲಿ ಅನಕೊಂಡದ ಬಗ್ಗೆ ಅನೇಕ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ನರಭಕ್ಷಕ ಅನಕೊಂಡಗಳು ಸಹ ಕಾಣಿಸಿಕೊಂಡಿವೆ. ಆದರೆ ನಿಜ ಜೀವನದಲ್ಲೂ ಅನಕೊಂಡಗಳು ಅಷ್ಟೇ ದೈತ್ಯಾಕಾರದವು. ಆಗಾಗ್ಗೆ, ಅಮೆಜಾನ್ ಕಾಡುಗಳಲ್ಲಿ ಕಂಡುಬರುವ ದೈತ್ಯಾಕಾರದ ಅನಕೊಂಡಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ದೈತ್ಯ ಹಸಿರು ಅನಕೊಂಡ ನದಿಯಲ್ಲಿ ಚಲಿಸುತ್ತಿರುವುದು ಕಂಡುಬರುತ್ತದೆ. ಮತ್ತೆ ಕೆಲವೊಮ್ಮೆ ಕಪ್ಪು ಅನಕೊಂಡ ಕಂಡುಬರುತ್ತದೆ.

ಈ ಅನಕೊಂಡಗಳನ್ನು ನೋಡಿದ ನಂತರ ಯಾವುದೇ ವ್ಯಕ್ತಿಗಾಗಲೀ ಭಯವಾಗದೆ ಇರಲಾರದು. ಅವು ನದಿಗಳಲ್ಲಿ ರಭಸವಾಗಿ ಚಲಿಸುತ್ತಾ ಹೋಗುತ್ತವೆ. ಆದರೆ ಇಂದು ನಾವು ನಿಮಗೆ ಒಂದು ವಿಡಿಯೋವನ್ನು ತೋರಿಸಲಿದ್ದೇವೆ. ಇದನ್ನು ನೋಡಿದ ನಂತರ ನಿಮಗೆ Goosebumps ಬರದೆ ಇರಲಾರದು. ಅಂಥದ್ದೇನಿದೆ ಈ ವಿಡಿಯೋದಲ್ಲಿ ಅಂತೀರಾ?. ವಿಡಿಯೋದಲ್ಲಿ ಒಬ್ಬ ಮೀನುಗಾರ ಇದ್ದಕ್ಕಿದ್ದಂತೆ ದೊಡ್ಡ ಕಪ್ಪು ಅನಕೊಂಡವನ್ನು ನೋಡುವುದನ್ನು ನಾವು ಕಾಣಬಹುದು. ಅದು ಇರುವ ರೀತಿ ನೋಡಿದರೆ ಯಾರಿಗಾದರೂ ಭಯ ಆಗದೆ ಇರಲಾರದು. ಆದರೆ ಇಂತಹ ಸಮಯದಲ್ಲಿ ಮೀನುಗಾರ ನಡೆದುಕೊಂಡ ರೀತಿ ನೋಡಿದರೆ ಸರ್‌ಪ್ರೈಸಿಂಗ್ ಆಗಿದೆ.

ವಿಡಿಯೋದಲ್ಲಿ ಏನಿದೆ?
ವಿಡಿಯೋವನ್ನು ಮಾರ್ಚ್ 11, 2023 ರಂದು @TerrifyingNature ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಓರ್ವ ಮೀನುಗಾರನು ತನ್ನ ದೋಣಿಯಲ್ಲಿ ನದಿಯಲ್ಲಿ ಮೀನು ಹಿಡಿಯಲು ಹೋಗಿರುವುದನ್ನು ನೀವು ನೋಡುತ್ತೀರಿ. ನಂತರ ಅವನು ಒಂದು ದೊಡ್ಡ ಕಪ್ಪು ಅನಕೊಂಡವನ್ನು ನೋಡುತ್ತಾನೆ. ಅವನು ತಕ್ಷಣ ಅನಕೊಂಡವನ್ನು ಬೆನ್ನಟ್ಟಲು ಪ್ರಾರಂಭಿಸುತ್ತಾನೆ ಮತ್ತು ಅದರ ಬಾಲವನ್ನು ಬಿಗಿಯಾಗಿ ಹಿಡಿಯುತ್ತಾನೆ. ಅನಕೊಂಡವು ಈ ಕ್ಷಣದಲ್ಲಿ ತಿರುಗಿ ದಾಳಿ ಮಾಡಿದ್ದರೆ, ಮೀನುಗಾರ ಬದುಕುಳಿಯುವುದು ಕಷ್ಟವಾಗುತ್ತಿತ್ತು. ಆದರೆ ಇಲ್ಲಿ ಅನಕೊಂಡವೇ ಭಯಭೀತವಾಗಿತ್ತು. ಅದು ತನ್ನ ಜೀವವನ್ನು ಉಳಿಸಿಕೊಳ್ಳಲು ಓಡಿಹೋಗುವುದನ್ನು ಕಾಣಬಹುದು. ಆದರೆ ಮೀನುಗಾರನೂ ಕಡಿಮೆಯಿಲ್ಲ. ಅವನು ಬೇಗನೆ ಅದರ ಬಾಲವನ್ನು ಹಿಡಿದು ತನ್ನ ದೋಣಿಯೊಂದಿಗೆ ಅದನ್ನು ಬೆನ್ನಟ್ಟುತ್ತಿದ್ದಾನೆ. ಕೊನೆಯಲ್ಲಿ, ಅನಕೊಂಡ ತನ್ನ ಎಲ್ಲಾ ಶಕ್ತಿಯನ್ನು ಬಳಸಿಕೊಂಡು ಮೀನುಗಾರನ ಕೈಯಿಂದ ತನ್ನ ಬಾಲವನ್ನು ಎಳೆದುಕೊಳ್ಳುತ್ತದೆ. ಕೊನೆಗೆ ಅದು ತನ್ನನ್ನು ತಾನು ಉಳಿಸಿಕೊಳ್ಳಲು ಬೇಗನೆ ದಡದ ಕಡೆಗೆ ಓಡುತ್ತದೆ. ಈ ವಿಡಿಯೋವನ್ನು ನೋಡುವಾಗ ಎಷ್ಟು ಈಸಿಯಾಗಿ ಕಾಣುತ್ತದೆಯೋ ಅಷ್ಟೇ ಭಯಾನಕವಾಗಿದೆ. ಈ ಬಗ್ಗೆ ಯೋಚಿಸಿದರೇನೇ ನಿಮಗೆ ಆಶ್ಚರ್ಯವಾಗುತ್ತದೆ. ಇಷ್ಟು ದೊಡ್ಡ ಹಾವು ತಿರುಗಿ ಮೀನುಗಾರನ ಮೇಲೆ ದಾಳಿ ಮಾಡಿದ್ದರೆ ಏನಾಗುತ್ತಿತ್ತು? ಅಂತನಿಸುತ್ತದೆ.

ನೆಟ್ಟಿಗರು ಹೇಳಿದ್ದೇನು?
ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿರುವ ಬಳಕೆದಾರರು "ಈ ಮೀನುಗಾರ ಅನಕೊಂಡದ ಬಾಲವನ್ನು ಹಿಡಿದು ಏನು ಪ್ರೂವ್ ಮಾಡಲು ಬಯಸುತ್ತಾನೆ. ಅನಕೊಂಡ ಅವನನ್ನು ಸಂಪೂರ್ಣವಾಗಿ ನುಂಗಬಹುದಿತ್ತು" "ಇಂತಹ ಅಪಾಯವನ್ನು ತೆಗೆದುಕೊಳ್ಳುವ ಅಗತ್ಯವೇನಿತ್ತು?", "ಇದು ಯಾವ ರೀತಿಯ ಅನಕೊಂಡ, ಅದು ಓಡಿಹೋಗುತ್ತಿದೆ" "ಇದು ಅನಕೊಂಡವಾಗಲು ಸಾಧ್ಯವಿಲ್ಲ ಬಿಡಿ", "ಅದನ್ನು ಬಿಟ್ಟಿರುವುದೇ ಒಳ್ಳೆಯದು, ಇಲ್ಲದಿದ್ದರೆ ಅವನು ಬದುಕುಳಿಯುತ್ತಿರಲಿಲ್ಲ" "ಅದು ಎಲ್ಲಿಂದ ನೋಡಿದರೂ ಅನಕೊಂಡದಂತೆ ಕಾಣುವುದಿಲ್ಲ, ಅದು ಮೀನಿನಂತೆ ಕಾಣುತ್ತದೆ" ಎಂದೆಲ್ಲಾ ಮಿಶ್ರ ಪ್ರತಿಕ್ರಿಯೆಗಳನ್ನು ಹೊರಹಾಕಿದ್ದಾರೆ.

ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದಾರೆ ಮತ್ತು ಶೇರ್ ಮಾಡಿಕೊಂಡಿದ್ದಾರೆ. ಆದರೆ ವಿಡಿಯೋ ನೋಡಿದಾಗ ಇಂತಹ ಕೆಲಸ ನಿಜವಾಗಿಯೂ ಅಪಾಯಕಾರಿ ಅಂತನಿಸುತ್ತದೆ. ವಿಡಿಯೋ ನೋಡಿ ನಿಮಗೇನನಿಸಿತು ಎಂಬುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌