ರಸ್ತೆ ತಪಾಸಣೆ ವೇಳೆಯೇ ಉರುಳಿದ ಟ್ರಕ್ ದೂರ ಓಡಿ ಜೀವ ಉಳಿಸಿಕೊಂಡ ಅಧಿಕಾರಿಗಳು

Published : Jul 13, 2025, 11:29 AM ISTUpdated : Jul 13, 2025, 11:45 AM IST
Maharashtra road inspection team narrowly escapes truck accident

ಸಾರಾಂಶ

ಮಹಾರಾಷ್ಟ್ರದ ಬೀಡ್‌ನಲ್ಲಿ ರಸ್ತೆ ತಪಾಸಣೆ ವೇಳೆ ಲಾರಿಯೊಂದು ಉರುಳಿಬಿದ್ದು, ಅಧಿಕಾರಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ.  ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ. ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆ, ಸೇತುವೆ ಕಾಮಗಾರಿಯೊಂದರ ತಪಾಸಣೆಗೆ ಅಧಿಕಾರಿಗಳು ಬಂದಿದ್ದ ವೇಳೆ ಅದೇ ರಸ್ತೆಯಲ್ಲಿ ಬಂದ ದೊಡ್ಡ 8 ಚಕ್ರಗಳ ಲಾರಿಯೊಂದು ಆ ರಸ್ತೆಯಲ್ಲಿ ನೋಡು ನೋಡುತ್ತಿದ್ದಂತೆ ಉರುಳಿ ಬಿದ್ದಿದ್ದೆ. ಇದರಿಂದ ರಸ್ತೆ ತಪಾಸಣೆಗಾಗಿ ಅದೇ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಅಧಿಕಾರಿಗಳು ಎದ್ನೋ ಬಿದ್ನೋ ಎಂದು ದೂರ ಓಡಿ ಜೀವ ಉಳಿಸಿಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಬೀಡ್‌ನಲ್ಲಿ

ಕಳೆದ ಬುಧವಾರ ಈ ಘಟನೆ ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮತ್ತು ಇತರ ಅಧಿಕಾರಿಗಳು ಮಹಾರಾಷ್ಟ್ರದ ಬೀಡ್‌ನಲ್ಲಿ ರಸ್ತೆ ತಪಾಸಣೆ ನಡೆಸುತ್ತದ್ದರು. ಇದೇ ಸಮಯದಲ್ಲಿ ಬಂದ ಟ್ರಕ್ಕೊಂದು ಕೆಸರು ತುಂಬಿದ ರಸ್ತೆಯನ್ನು ಹಾದು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪ ಅಧಿಕಾರಿಗಳಿದ್ದ ಪಕ್ಕಕ್ಕೆ ಮಗುಚಿದೆ. ಅದೃಷ್ಟವಶಾತ್ ಈ ವೇಳೆ ತಕ್ಷಣವೇ ಜಾಗರೂಕರಾದ ಅಧಿಕಾರಿಗಳು ಅಲ್ಲಿಂದ ಪಕ್ಕಕ್ಕೆ ಓಡಿ ಹೋಗಿ ಪಾರಾಗಿದ್ದಾರೆ.

 

ಬೀಡ್‌ನ ಕಡ್ಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿದ್ಯಾರ್ಥಿಗಳ ಮನವಿಯ ಮೇರೆಗೆ ಇಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹೀಗಾಗಿ ಅಲ್ಲಿಯವರೆಗೆ ಪರ್ಯಾಯ ಮಾರ್ಗವನ್ನು ನಿರ್ಣಯಿಸಲು ತಂಡವೊಂದು ಸ್ಥಳದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.

ಈಗ ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ನಿರ್ಮಾಣ ಸ್ಥಳದಂತೆ ಕಾಣುವ ಕಿರಿದಾದ ರಸ್ತೆಯ ಮೂಲಕ ಟ್ರಕ್ ಹಾದು ಹೋಗುವುದನ್ನು ರಸ್ತೆ ಬದಿ ನಿಂತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗುಂಪು ವೀಕ್ಷಿಸುವುದನ್ನು ನೋಡಬಹುದು. ಅವರು ನೋಡು ನೋಡುತ್ತಿದ್ದಂತೆ ಟ್ರಕ್ ತಿರುವು ತೆಗೆದುಕೊಳ್ಳಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ವೇಳೆ ಅವರೆಲ್ಲರೂ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಮತ್ತು ಕೆಲವರು ಸೇತುವೆ ನಿರ್ಮಾಣಕಕ್ಕೆ ಮಾಡಿದ ಹೊಂಡಕ್ಕೆ ಹಾರುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ.

 

 

ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಇಲ್ಲಿನ ರಸ್ತೆಯ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಕೆಲವು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ ನಂತರ ಎಂಜಿನಿಯರ್ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಇದಕ್ಕೂ ಮೊದಲು, ವಿದ್ಯಾರ್ಥಿಗಳು ಮುಖ್ಯಮಂತ್ರಿಗಳ ಗ್ರಾಮ ಸಡಕ್ ಇಲಾಖೆಗೆ ಈ ವಿಷಯವನ್ನು ಪ್ರಸ್ತಾಪಿಸಿ, ನಡೆಯುತ್ತಿರುವ ಸೇತುವೆ ಕಾಮಗಾರಿಯು ಪ್ರಸ್ತುತ ರಸ್ತೆಯನ್ನು ಬಳಸಲು ತುಂಬಾ ಅಪಾಯಕಾರಿಯಾಗಿಸಿರುವುದರಿಂದ ಪರ್ಯಾಯ ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಎಂಜಿನಿಯರ್ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಉಸ್ತುವಾರಿ ಗುತ್ತಿಗೆದಾರರಿಗೆ ತಿಳಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು