Gujarat Election: ಗುಜರಾತ್‌ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ

By Kannadaprabha NewsFirst Published Nov 30, 2022, 11:30 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಗುರುವಾರ ನಡೆಯಲಿದೆ. ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 788 ಜನರು ತಮ್ಮ ಅದೃಷ್ಟಪರೀಕ್ಷೆಗೆ ಒಡ್ಡಿದ್ದಾರೆ.

ಅಹಮದಾಬಾದ್‌ (ಡಿ.1): ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಗುರುವಾರ ನಡೆಯಲಿದೆ. ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 788 ಜನರು ತಮ್ಮ ಅದೃಷ್ಟಪರೀಕ್ಷೆಗೆ ಒಡ್ಡಿದ್ದಾರೆ.

ಸಾಮಾನ್ಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ದ್ವಿಪಕ್ಷೀಯ ಕದನಕ್ಕೆ ಸಾಕ್ಷಿಯಾಗುತ್ತಿದ್ದ ರಾಜ್ಯದಲ್ಲಿ ಈ ಬಾರಿ ಆಮ್‌ಆದ್ಮಿ ಪಕ್ಷ ಕೂಡಾ ದೊಡ್ಡಮಟ್ಟದಲ್ಲೇ ಸ್ಪರ್ಧೆ ಮಾಡಿರುವ ಕಾರಣ, ಫಲಿತಾಂಶ ಕುತೂಹಲ ಕೆರಳಿಸಿದೆ.

Gujarat assembly election: ಗುಜರಾತ್ ಗದ್ದುಗೆ ಯಾರಿಗೆ? ಏನ್ ಹೇಳುತ್ತೆ ಕೊನೆಯ ಸಮೀಕ್ಷೆ?

ದಕ್ಷಿಣ ಗುಜರಾತ್‌, ಕಛ್‌-ಸೌರಾಷ್ಟ್ರ ಪ್ರದೇಶದಲ್ಲಿ ಬರುವ 19 ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುರುವಾರ ಮತದಾನ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಎಲ್ಲಾ 89 ಕ್ಷೇತ್ರಗಳಲ್ಲಿ ಮತ್ತು ಆಪ್‌ 88 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಉಳಿದಂತೆ ಬಿಎಸ್‌ಪಿ 57, ಭಾರತೀಯ ಟ್ರೈಬಲ್‌ ಪಾರ್ಟಿ 14, ಸಮಾಜವಾದಿ ಪಕ್ಷ 12, ಎಡಪಕ್ಷಗಳು 6 ಸ್ಥಾನದಲ್ಲಿ ಸ್ಪರ್ಧಿಸಿವೆ. ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ 788 ಜನರ ಪೈಕಿ 718 ಪುರುಷ ಮತ್ತು 50 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. 339 ಪಕ್ಷೇತರ ಅಭ್ಯರ್ಥಿಗಳಿದ್ದಾರೆ. 2.39 ಕೋಟಿ ಜನರು ಗುರುವಾರ ಮತದಾನ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ. ಎರಡನೇ ಹಂತದ ಮತದಾನ ಡಿ.5ರಂದು ನಡೆಯಲಿದ್ದು, ಡಿ.8ಕ್ಕೆ ಪಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಸತತ 27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ.

89 ಸ್ಥಾನಕ್ಕೆ 788 ಜನರ ಸ್ಪರ್ಧೆ

  • ಡಿ.5ಕ್ಕೆ 2ನೇ ಹಂತ
  • ಡಿ.8ಕ್ಕೆ ಫಲಿತಾಂಶ

ಯಾರೆಲ್ಲಾ ಮುಖ್ಯಮಂತ್ರಿ ಅಭ್ಯರ್ಥಿಗಳು: ಪ್ರಸ್ತುತ ಇರುವ ಮಾಹಿತಿಯ ಪ್ರಕಾರ, ಭೂಪೇಂದ್ರ ಪಟೇಲ್‌ ಗುಜರಾತ್‌ನಲ್ಲಿ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್‌ ಪಾಟೀಲ್‌ ಕೂಡ ಈ ಬಾರಿ ಚುನಾವಣೆಯಲ್ಲಿ ಭೂಪೇಂದ್ರ ಪಟೇಲ್‌ ಅವರೇ ಸಿಎಂ ಅಭ್ಯರ್ಥಿ, ಸಿಎಂ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ ಎಂದಿದ್ದಾರೆ. ಬಿಜೆಪಿಯೊಂದಿಗೆ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಾರ್ಟಿ ಕೂಡ ರೇಸ್‌ನಲ್ಲಿದೆ. ಕಾಂಗ್ರೆಸ್‌ನಿಂದ ಭರತ್‌ ಸೋಳಂಕಿ, ಅರ್ಜುನ್‌ ಮೋಧ್‌ವಾಡಿಯಾ ಹಾಗೂ ಶಕ್ತಿಸಿನ್ಹ ಗೋಹಿಲ್‌ ಸಿಎಂ ಆಗುವ ರೇಸ್‌ನಲ್ಲಿದ್ದರೆ, ಆಮ್‌ ಆದ್ಮಿ ಪಕ್ಷದಿಂದ ಜನಮತದಲ್ಲಿ ಇಸುದನ್ ಗಢ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

Gujarat Elections 2022 ಪತ್ನಿ ರಿವಾಬ ಪರ ಪ್ರಚಾರ ಆರಂಭಿಸಿದ ರವೀಂದ್ರ ಜಡೇಜಾ; ಮೋದಿ ಭೇಟಿ ಮಾಡಿದ ತಾರಾ ಕ್ರಿಕೆಟಿಗ!

ಒಟ್ಟು 4.90 ಕೋಟಿ ಮತದಾರರು:  ಗುಜರಾತ್‌ನಲ್ಲಿ ಒಟ್ಟು 4.90 ಕೋಟಿ ಮತದಾರರಿದ್ದಾರೆ. ಇದಲ್ಲಿ ಮೊದಲ ಬಾರಿಗೆ ಮತ ಹಾಕುತ್ತಿರುವ ವ್ಯಜ್ತಿಗಳು 4.6 ಲಕ್ಷ. ಗುಜರಾತ್‌ನಲ್ಲಿ ಒಟ್ಟು  2.53 ಕೋಟಿ ಪುರುಷ ಮತದಾರರಿದ್ದರೆ, 2.37 ಕೋಟಿ ಮಹಿಳಾ ಮತದಾರರಿದ್ದಾರೆ. ಬಹುಮತಕ್ಕಾಗಿ 91 ಕ್ಷೇತ್ರಗಳಲ್ಲಿ ಪಕ್ಷಗಳು ಗೆಲ್ಲಬೇಕಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 99 ಸೀಟ್‌ಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್‌ 77 ಸೀಟ್‌ಗಳಲ್ಲಿ ಗೆದ್ದಿತ್ತು. ಇತರರು 6 ಸೀಟ್‌ ಗೆದ್ದಿದ್ದರು. 

click me!