ಟಿವಿ ವಿಚಾರಕ್ಕೆ ಗಲಾಟೆ: ಆಶ್ರಯ ನೀಡಿದ್ದ ಅತ್ತೆಯನ್ನೇ ಹೊಡೆದು ಕೊಂದ 15 ವರ್ಷದ ಸೋದರಳಿಯ

Published : Feb 18, 2026, 01:50 PM IST
woman murderd by minor relative

ಸಾರಾಂಶ

ಮಹಾರಾಷ್ಟ್ರದ ವಸಾಯಿಯಲ್ಲಿ, ಟಿವಿ ಲೋಡಿಂಗ್ ವಿಚಾರಕ್ಕೆ ನಡೆದ ಜಗಳದಲ್ಲಿ 15ರ ಬಾಲಕನೊಬ್ಬ ತನ್ನ ಅತ್ತೆಯನ್ನು ಬಿದಿರಿನ ಬಡಿಗೆಯಿಂದ ಹೊಡೆದು ಕೊಂದಿದ್ದಾನೆ. ನಂತರ ಸ್ನೇಹಿತನ ಸಹಾಯದಿಂದ ಶವವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು, ಪೊಲೀಸರ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.

ಅತ್ತೆಯನ್ನೇ ಕೊಂದ ಸೋದರಳಿಯ:

ಮಹಾರಾಷ್ಟ್ರ: ತನಗೆ ಮನೆಯಲ್ಲಿ ಆಶ್ರಯ ನೀಡಿದ ಅತ್ತೆಯನ್ನೇ 15ರ ಹರೆಯದ ಹುಡಗನೋರ್ವ ಸ್ನೇಹಿತನ ಜೊತೆ ಸೇರಿ ಬಿದಿರಿನ ಬಡಿಗೆಯಿಂದ ಹೊಡೆದು ಕೊಂದಂತಹ ಘಟನೆ ಮಹಾರಾಷ್ಟ್ರದ ವಸಾಯಿ ಪಟ್ಟಣದಲ್ಲಿ ನಡೆದಿದೆ. ಭಾನುವಾರ ರಾತ್ರಿ ಇಬ್ಬರ ಮಧ್ಯೆ ಟಿವಿ ಲೋಡಿಂಗ್ ಆಗ್ತಿರುವ ವಿಚಾರಕ್ಕೆ ಸಣ್ಣ ಜಗಳವಾಗಿದ್ದು, ಈ ಜಗಳದಿಂದ ಸಿಟ್ಟಿಗೆದ್ದ ಬಾಲಕ ಮನೆಯಲ್ಲಿದ್ದ ಬಿದಿರಿನ ಬಾಡಿಗೆಯಿಂದ ಹೊಡೆದು ಅತ್ತೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಕೃತ್ಯವನ್ನು ಮುಚ್ಚಿ ಹಾಕಲು ಸ್ನೇಹಿತನ ಸಹಾಯ ಪಡೆದು ಶವವನ್ನು ಮನೆಯಲ್ಲಿದ್ದ ಮಂಚವೊಂದರ ಕೆಳಗೆ ತಳ್ಳಿದ್ದಾನೆ. ಆರೋಪಿಯು ತನ್ನ ಚಿಕ್ಕಮ್ಮ 60 ವರ್ಷದ ದುರ್ಗಾ ಬನ್ಸೋದ್ ಅವರೊಂದಿಗೆ ವಸಾಯಿಯಲ್ಲಿರುವ ಅವರ ಮನೆಯಲ್ಲಿ ವಾಸಿಸುತ್ತಿದ್ದ.

ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?

ಬೋಯಿಸರ್ ಪಟ್ಟಣದಲ್ಲಿ ವಾಸಿಸುವ ಸಂತ್ರಸ್ತೆಯ ಮಗಳು ಪದೇ ಪದೇ ತನ್ನ ತಾಯಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸದೇ ಹೋದಾಗ ಅನುಮಾನಗೊಂಡ ಮಗಳು ಹತ್ತಿರದಲ್ಲೇ ವಾಸಿಸುವ ತನ್ನ ಸೋದರನಿಗೆ ಕರೆ ಮಾಡಿ ತಾಯಿಯ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಕೇಳಿದ್ದಾಳೆ. ನಂತರ ಆತ ಮನೆ ಸಮೀಪಕ್ಕೆ ಬಂದು ನೋಡಿದಾಗ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವುದು ಕಂಡು ಬಂತು. ಆತ ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕಿಟಕಿಯಿಂದ ಬಗ್ಗಿ ನೋಡಿದಾಗ ರಕ್ತದ ನಡುವೆ ತಾಯಿಯ ಪಾದಗಳು ಕಾಣಿಸಿವೆ. ಕೂಡಲೇ ಆಘಾತಗೊಂಡ ಆತ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಬ್ಬರು ಸಂತ್ರಸ್ತೆಯ ಎರಡೂ ಮೊಬೈಲ್ ಫೋನ್‌ಗಳನ್ನು ಮುರಿದು ಯಾರೂ ಆಕೆಯನ್ನು ಸಂಪರ್ಕಿಸದಂತೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದಾಗ ಮನೆ ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿದೆ. ಸುಮಾರು ಮೂರು ಗಂಟೆಗಳ ಪ್ರಯತ್ನದ ನಂತರ, ಪೊಲೀಸರು ಸ್ನಾನಗೃಹದ ಕಿಟಕಿಯ ಸ್ಲ್ಯಾಬ್‌ಗಳನ್ನು ತೆಗೆದು ಮನೆಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ತನಿಖೆಯಲ್ಲಿ ಬಾಗಿಲುಗಳನ್ನು ಉದ್ದೇಶಪೂರ್ವಕವಾಗಿ ಒಳಗಿನಿಂದ ಲಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮತ್ತು ಒಂದು ಬಾಗಿಲನ್ನು ಸ್ಕ್ರೂಡ್ರೈವರ್‌ನಿಂದ ಜಾಮ್ ಮಾಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಗೆ ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದ್ದು, ಆಕೆ ಕೆಳಗೆ ಬಿದ್ದ ಜಾಗದಲ್ಲಿ ರಕ್ತವಿತ್ತು.

ಇದನ್ನೂ ಓದಿ:  ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ: ಪಾನಿಯಲ್ಲಿ ಈಜಾಡಿ ಛಂಗನೇ ಹೊರಗೆ ಹಾರಿ ಪರಾರಿಯಾದ ಇಲಿ

ಶೀಘ್ರದಲ್ಲೇ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಅಪ್ರಾಪ್ತ ಸೋದರಳಿಯನ ಮೇಲೆ ಅನುಮಾನ ಬಂದಿದೆ. ಅವನು (ಸೋದರಳಿಯ) ತುಂಬಾ ಆತಂಕಗೊಂಡಿದ್ದ, ಮುಖವನ್ನು ಮುಚ್ಚಿಕೊಂಡಿದ್ದ, ಶವವನ್ನು ಎಸೆದ ಕೋಣೆಯ ಕಡೆಗೆ ಪದೇ ಪದೇ ನೋಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು, ತನ್ನ 15 ವರ್ಷದ ಅಪ್ರಾಪ್ತ ಸ್ನೇಹಿತ ಶವವನ್ನು ಮಂಚದಡಿ ತಳ್ಳುವುದಕ್ಕೆ ಸಹಾಯ ಮಾಡಿದ್ದಾಗಿ ಹೇಳಿದ್ದಾನೆ.

ಕೊಲೆಗೆ ಕ್ಷುಲ್ಲಕ ಕಾರಣ:

ಪೊಲೀಸರ ಪ್ರಕಾರ, ಕೊಲೆಗೆ ಕಾರಣ ಕ್ಷುಲ್ಲಕವಾಗಿತ್ತು. ಮನೆಯ ಸ್ಮಾರ್ಟ್ ಟಿವಿ ಬಫರಿಂಗ್‌ನಿಂದಾಗಿ ನಿಧಾನವಾಗಿ ಪ್ರಾರಂಭವಾಗುತ್ತಿದ್ದಾಗ ಇದುವೇ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯ್ತು ಟಿವಿ ಲೋಡಿಂಗ್ ಆಗುತ್ತಿರುವುದಕ್ಕೆ ಸಿಟ್ಟಾದ ವೃದ್ಧ ಮಹಿಳೆ ತನ್ನ ಸೋದರಳಿಯನನ್ನು ಗದರಿಸಿ, ವಸ್ತುಗಳನ್ನು ಕ್ರಮವಾಗಿ ಇಡದ ಮತ್ತು ಅಧ್ಯಯನದ ಮೇಲೆ ಗಮನಹರಿಸದ ಆತನನ್ನು ಗದರಿಸಿದ್ದಾರೆ. ಇದುವೇ ಅವರ ಜೀವಕ್ಕೆ ಮಾರಕವಾಗಿ ಪರಿಣಮಿಸಿದ್ದು, ತಾವು ಅನ್ನ ಹಾಕಿ ಸಾಕಿದ್ದ ಅಳಿಯನೇ ಅವವರ ಜೀವ ತೆಗೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪೈಜಾಮದ ದಾರ ಎಳೆಯುವುದು ಅತ್ಯಾ*ಚಾರಕ್ಕೆ ಸಿದ್ಧತೆ ಎಂದ ಅಲಹಾಬಾದ್ ಹೈಕೋರ್ಟ್: ಸುಪ್ರೀಂಕೋರ್ಟ್ ಹೇಳಿದ್ದೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ: ಪಾನಿಯಲ್ಲಿ ಈಜಾಡ್ತಿತ್ತು ಇಲಿ: ವಿಡಿಯೋ
ಕಂಕಣ ಸೂರ್ಯಗ್ರಹಣ ವೇಳೆ ಭೂಮಿಯಲ್ಲಿನ ಬದಲಾವಣೆಯ ಅದ್ಭುತ ದೃಶ್ಯ ಸೆರೆ ಹಿಡಿದ ಸ್ಯಾಟಲೈಟ್